ನವೋದಯ ಭಾಗ 1
ನವೋದಯ ಬಾಗ 1 (1800-1889)
ಬಂಗಾಳದಲ್ಲಿ ಮೊದಲು ನವೋದಯ ಸಾಹಿತ್ಯ ಆರಂಭವಾಯಿತು. ಇಂಗ್ಲಿಷ್ ನ ರೊಮ್ಯಾಂಟಿಸಂ ಎಂಬ ಪದಕ್ಕೆ
ಸಂವಾದಿಯಾಗಿ ನವೋದಯವನ್ನು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಬಳಸಲಾಯಿತು.
ಕನ್ನಡದಲ್ಲಿ ಬಿ.ಎಂ ಶ್ರೀ ಅವರ ಇಂಗ್ಲಿಷ್ ಗೀತೆಗಳು ಕವನ ಸಂಕಲನದಿಂದ ನವೋದಯ ಪರಂಪರೆ ಪ್ರಾರಂಭಗೊಂಡಿತು.
ಭಾವಗೀತೆಯ ಸುನೀತ, ಶೋಕಗೀತೆ, ಪ್ರಗಾಥ, ಕಥನಕಾವ್ಯ, ಖಂಡಕಾವ್ಯ, ಮತ್ತು ಮಹಾಕಾವ್ಯಗಳು ಈ
ಕಾಲದ ಪ್ರಮುಖ ಸಾಹಿತ್ಯ ಪ್ರಕಾರಗಳಾದವು.
ಬಿ ಎಂ ಶ್ರೀ ಅವರ ಅಶ್ವತ್ಥಾಮನ್ ನಾಟಕದಿಂದ ಕನ್ನಡದಲ್ಲಿ ರುದ್ರನಾಟಕಗಳ ಪರಂಪರೆ ಆರಂಭವಾಯಿತು.
ಮುಂದೆ ಕಾರಂತರು ಗೀತನಾಟಕಗಳನ್ನು ಪರಿಚಯಿಸಿದರು. ಆದರೆ ಗೀತನಾಟಕಗಳನ್ನು ಪ್ರಮುಖ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡವರು
ಪು.ತಿ.ನ
ಗುಲ್ವಾಡಿ ವೆಂಕಟರಾಯರಿಂದ ಕನ್ನಡದಲ್ಲಿ ಕಾದಂಬರಿ ಸಾಹಿತ್ಯ ಪ್ರಾರಂಭವಾಯಿತು.
ಪಂಜೆ ಮಂಗೇಶರಾಯರು ಮೊದಲಬಾರಿಗೆ ಸಣ್ಣಕತೆಗಳನ್ನು ಕನ್ನಡದಲ್ಲಿ ಬರೆದರು. ಆದರೆ ಸಣ್ಣಕಥಾಸಾಹಿತ್ಯ
ಜನಪ್ರಿಯವಾಗಿದ್ದು ಮಾಸ್ತಿಯವರಿಂದ.
ರಾಷ್ಟ್ರಪ್ರೇಮ, ನಿಸರ್ಗಪ್ರೇಮ, ಪರಿಪೂರ್ಣತೆಯ ಹಂಬಲ, ಸ್ವಾತಂತ್ರ್ಯ ಹೋರಾಟ ಮುಂತಾದವು ನವೋದಯ
ಸಾಹಿತ್ಯ ಸಂದರ್ಭದ ಪ್ರಮುಖ ಪರಿಕಲ್ಪನೆಗಳಾಗಿದ್ದವು.
ಡೆಪ್ಯುಟಿ ಚೆನ್ನಬಸಪ್ಪನವರು (1834-1881)
ಪತ್ರಿಕೆ : ಜೀವನ ಶಿಕ್ಷಣ
ಅನುವಾದ : ಶೇಕ್ಸ್ಪಿಯರ್ ನ ಮ್ಯಾಕ್ಬೆತ್ (ಮೊದಲ ಬಾರಿಗೆ ಶೇಕ್ಸ್ಪಿಯರ್ ನನ್ನು ಕನ್ನಡಕ್ಕೆ
ಪರಿಚಯಿಸಿದ ಕೃತಿ) ಮತ್ತು ಕಾಮೆಡಿ ಆಫ್ ಎರರ್ಸ್ ನಾಟಕಗಳು.
ಸಂತ ಶಿಶುನಾಳ ಶರೀಫ (1835-1888)
ಶಿಶುನಾಳಾಧೀಶ ಎಂಬ ಅಂಕಿತನಾಮದಿಂದ ತತ್ವಪದಗಳನ್ನು ಬರೆದರು.
ಪ್ರಮುಖ ತತ್ವಪದಗಳು
ಲೋಕದ ಕಾಳಜಿ
ಸ್ನೇಹ ಮಾಡಬೇಕಿಂತವಳ
ಗುಡಿಯ ನೋಡಿರಣ್ಣ ದೇಹದ
ಅಳಬೇಡ ತಂಗಿ ಅಳಬೇಡ
ಕೋಡಗನ ಕೋಳಿ ನುಂಗಿತ್ತಾ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರದೆ ಬಾರಿಸದಿರು ತಂಬೂರಿ
ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗಿನ್ಯಾಕೋ?
ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ
ಸೋರುತಿಹುದು ಮನೆಯ ಮಾಳಿಗಿ, ಅಜ್ಙಾನದಿಂದ
ಎಲ್ಲರಂಥವನಲ್ಲ ನನ್ನ ಗಂಡ, ಬಲ್ಲಿದನು ಪುಂಡ
ಎಂಥಾ ಮೋಜಿನ ಕುದುರಿ, ಹತ್ತಿದಮ್ಯಾಗ ತಿರುಗುವುದು ಹನ್ನೊಂದು
ಬಸವಪ್ಪ ಶಾಸ್ತ್ರಿ (1843-1891)
ಅಭಿನವ ಕಾಳಿದಾಸನೆಂದು ಖ್ಯಾತರಾದವರು.
ಅನುವಾದ ನಾಟಕಗಳು : ಉತ್ತರ ರಾಮಚರಿತೆ, ಮಾಲತಿ ಮಾಧವ, ರತ್ನಾವಳೀ, ಕಾಳಿದಾಸನ ಶಾಕುಂತಲ ಮತ್ತು
ವಿಕ್ರಮೋರ್ವಶೀಯ.
ಶೂರಸೇನ ಚರಿತ್ರೆ (ಶೇಕ್ಸ್ಪಿಯರ್ ನ ಒಥೆಲೋ), ಚಂಡಕೌಶಿಕ (ಅಳಸಿಂಗಾರಾರ್ಯರು ಪೂರ್ಣಗೊಳಿಸಿದರು)
ಪ್ರಮುಖ ಕನ್ನಡ ಕೃತಿಗಳು : ಕೃಷ್ಣರಾಜಾಭ್ಯುದಯ (ಮುಮ್ಮಡಿ ಕೃಷ್ಣರಾಜ ಒಡೆಯರ್ ಕುರಿತು),
ದಮಯಂತೀ ಸ್ವಯಂವರ (ಚಂಪೂ), ನೀತಿಸಾರ ಸಂಗ್ರಹ (ಕಂದ), ಸಾವಿತ್ರಿ ಚರಿತ್ರೆ, ಭತೃಹರಿಯ ಶತಕಗಳು
ಪ್ರಮುಖ ಸಂಸ್ಕೃತ ಕೃತಿಗಳು : ಆರ್ಯ ಶತಕಮ್, ಶಿವಭಕ್ತಿಸುಧಾ ತರಂಗಿಣಿ, ಶಿವಾಷ್ಟಕಮ್, ಶಾರದಾ
ದಂಡಕಂ, ತ್ರಿಷಷ್ಠಿ ಪುರಾತನಸ್ತವ
ಗುಲ್ವಾಡಿ ವೆಂಕಟರಾಯರು (1844-1913)
ಕನ್ನಡದ ಮೊದಲ ಕಾದಂಬರಿಕಾರರೆಂದೇ ಖ್ಯಾತರಾದವರು.
ಪತ್ರಿಕೆ : ಮಿತ್ರೋದಯ
ಕಾದಂಬರಿಗಳು : ಸೀಮಂತಿನಿ, ಭಾಗೀರಥಿ, ಇಂದಿರಾಬಾಯಿ / ಸದ್ಧರ್ಮ ವಿಜಯ
(ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ 1898. ಕೌಚ್ ಮನ್ ಎಂಬಾತ ಇದನ್ನು ಆಂಗ್ಲ ಭಾಷೆಗೆ
ಅನುವಾದಿಸಿದನು)
ವಿಡಂಬನಾ ಕೃತಿ : ಲಾಡುಪ್ರಿಯಾಚಾರ್ಯ
ಎಂ ವೆಂಕಟಕೃಷ್ಣಯ್ಯ (1844-1934)
ಪತ್ರಿಕೆಗಳು : ಉದಯಚಿಂತಾಮಣಿ, ವೃತ್ತಾಂತ ಚಿಂತಾಮಣಿ, ವೆಲ್ತ್
ಆಫ್ ಮೈಸೂರು, ಮೈಸೂರು ಪೇಟ್ರಿಯಾಟ್ ಮುಂತಾದವು
ಇವರ ಚೋರಗ್ರಹಣ ತಂತ್ರ ಕನ್ನಡದ ಮೊದಲ ಪತ್ತೆದಾರಿ ಕಾದಂಬರಿಯಾಗಿದೆ
ಇತರ ಕೃತಿಗಳು : ವಿದ್ಯಾರ್ಥಿ ಕರಭೂಷಣ, ಪರಂತಪ ವಿಜಯ, ಅರ್ಥಸಾಧನ, ಟೆಲೆಮ್ಯಾಕಸ್ಸನ ಚರಿತ್ರೆ ಮುಂತಾದವು
1922 ರಲ್ಲಿ ದಾವಣಗೆರೆಯಲ್ಲಿ ನಡೆದ 8ನೇ ಅಖಿಲ ಭಾರತ ಕನ್ನಡ ಸಾಹಿತ್ಯ
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬಿ ವೆಂಕಟಾಚಾರ್ (1845-1914)
ಪತ್ರಿಕೆ : ಅವಕಾಶ ತೋಷಿಣಿ
ಈಶ್ವರಚಂದ್ರ ವಿದ್ಯಾಸಾಗರರ ಅನೇಕ ಕೃತಿಗಳನ್ನು ಬಂಗಾಳಿಯಿಂದ
ಕನ್ನಡಕ್ಕೆ ಅನುವಾದಿಸಿದರು.
ಅನುವಾದಿತ ಕಾದಂಬರಿಗಳು : ಕಪಾಲಕುಂಡಲ (ಸ್ವಾತಂತ್ರ್ಯ ಹೋರಾಟ), ಅನಂದಮಠ (ಸ್ವಾತಂತ್ರ್ಯ ಹೋರಾಟ- ಈ
ಕಾದಂಬರಿಯಲ್ಲಿನ ವಂದೇಮಾತರಂ ಗೀತೆಯನ್ನು ರಾಷ್ಟ್ರೀಯ ಹಾಡನ್ನಾಗಿ ಅಂಗೀಕರಿಸಲಾಯಿತು), ದೇವಿ ಚೌಧುರಾಣಿ (ಬಂಗಾಳದಲ್ಲಿ ಇಸ್ಲಾಂ ಆಳ್ವಿಕೆಯ ಕೊನೆಯ ದಿನಗಳ ಚಿತ್ರಣ)
ಭ್ರಾಂತಿವಿಲಾಸ, ಅಹಲ್ಯಾಬಾಯಿ, ವಿಷವೃಕ್ಷ, ಮೃಣ್ಮಯಿ, ಮೃಣಾಲಿನಿ, ಮಾಧವೀ ಲತಾ,
ವೆನಿಸ್ ನಗರದ ವಣಿಕ, ಉನ್ಮಾದಿನಿ, ಉಪವಾಸ, ಮನೋರಮಾ, ದುರ್ಗೇಶ ನಂದಿನಿ,
ಅತ್ತಿಗೆ, ಅಮೃತಪುಲಿನ, ಕಮಲಕಾಂತ,
ಕರ್ಮಕೆ ತಕ್ಕ ಫಲ, ಕೃಷ್ಣಕಾಂತನ ಉಯಿಲು, ರಾಜಹಂಸ, ಸೀತಾರಾಮ್, ರಜನೀ,
ಚಂದ್ರಶೇಖರ, ರಾಧಾರಾಣಿ ಮುಂತಾದವು.
ಇತರ ಪ್ರಮುಖ ಕೃತಿಗಳು : ಭಾರತ ಮಹಿಳಾ (ಸ್ತ್ರೀ ಪರ ಚಿಂತನೆ), ವೈಜ್ಞಾನಿಕ ಪ್ರಹಸನ, ಭರತಖಂಡದ ಪೂರ್ವವೃತ್ತ, ಪ್ರಾಚೀನ ಭಾರತ ಪುರುಷರು,
ಲೇಖನ : ಸೂರ್ಯಪೂಜೆ
ಪ್ರಬಂಧ : ದಾಡಿಯ ಹೇಳಿಕೆ (ಹೊಸಗನ್ನಡದ ಮೊದಲ ಪ್ರಬಂಧ)
ಬೋಳಾರ ಬಾಬುರಾಯರು (1848-1919)
ಇವರ ವಾಗ್ದೇವಿ ಕಾದಂಬರಿಯ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ಕಾದಂಬರಿ
ಪ್ರಕಾರದಲ್ಲಿ ಹಾಸ್ಯವು ಕಾಲಿರಿಸಿತು. (ಮಠಗಳ ಹೊಲಸು ಆಡಂಬರ ಜೀವನ).
ರೊದ್ದ ಶ್ರೀನಿವಾಸರಾಯರು (1850)
ಕೃತಿಗಳು : ನಂದಿನಿ (ಬುದ್ಧನ ಜೀವನ), ಸ್ತ್ರೀ ಶಿಕ್ಷಣ
1920 ರಲ್ಲಿ ಹೊಸಪೇಟೆಯಲ್ಲಿ ನಡೆದ 6 ನೇ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಹಣಮಂತ ಗೊವಿಂದ ಜೋಷಿ (1850)
ಸಾಮತಿ ಸಂಗ್ರಹ ಎಂಬ ಇಂಗ್ಲಿಷ್ ಪ್ರತ್ಯಾರ್ಥಗಳೊಂದಿಗಿನ ಕನ್ನಡ
ಗಾದೆಗಳ ಸಂಗ್ರಹದ ಕೃತಿಯನ್ನು ಬರೆದರು.
ಎಂ ಎ ಶ್ರೀನಿವಾಸ ಅಯ್ಯಂಗಾರ್ (1850)
ಜಯಸಿಂಹ ರಾಜ ಚರಿತೆ (ಶೇಕ್ಸ್ಪಿ ಯರ್ ನ ಸಿಂಬಲೈ ನಾಟಕ), ಹೇಮರಾಜ ವಿಲಾಸ.
ಪುಟ್ಟಣ್ಣನವರೊಂದಿಗೆ ನೀತಿಚಿಂತಾಮಣಿ ಕಥಾಸಂಕಲನವನ್ನು
ಪ್ರಕಟಿಸಿದ್ದಾರೆ.
ಶ್ರೀಕಂಠೇಶಗೌಡ ಎಂ ಎಲ್ (1852-1926)
ಅನುವಾದ : ಕನ್ಯಾವಿತಂತು (ಸರ್ ಹೆನ್ರಿ ಟೈಲರ್ ನ ಎ
ಸಿಸಿಲಿಯನ್ ಸಮ್ಮರ್), ಚಿಕ್ಕ ಬಣಜಿಗರು (ಮರಿಯಾ ಎಡ್ಗರ್ ವರ್ತ್ ನ ದ ಲಿಟಲ್ ಮರ್ಚೆಂಟ್ಸ್), ಪ್ರತಾಪರುದ್ರದೇವ (ಶೇಕ್ಸ್ಪಿಯರ್ ನ
ಮ್ಯಾಕ್ಬೆತ್ / ಒಥೆಲೊ ಎಂದಿದೆ), ರಾಮವರ್ಮ
ಲೀಲಾವತಿ (ರೋಮಿಯೊ ಜೂಲಿಯೆಟ್), ಪ್ರಮೀಳಾರ್ಜುನೀಯಂ (ಮಿಡ್ ಸಮ್ಮರ್
ನೈಟ್ ಡ್ರೀಮ್ಸ್)
ನಾಟಕಗಳು : ಸೀತಾ ಸ್ವಯಂವರ, ಘೋಷಯಾತ್ರೆ
ಕಾವ್ಯಗಳು : ಚಾಮನೃಪ ಚಂದ್ರಪ್ರಭೆ
ಕಾದಂಬರಿಗಳು : ಭವಾನಿ ಬಾಳು, ಪ್ರಿಯದರ್ಶಿಕೆ ಇತ್ಯಾದಿ
ಇತರ ಕೃತಿಗಳು : ಶಾರದಾ ಭೂಗೋಳ (ಮಕ್ಕಳ ಸಾಹಿತ್ಯ), ದಕ್ಷಿಣ ಭಾರತ ವ್ಯವಸಾಯ ಪದ್ಧತಿ
ಹ ಕ ರಾಜೇಗೌಡರು ಇವರ ಸಮಗ್ರ ಕೃತಿಗಳನ್ನು ಶ್ರೀ ಕಂಠೇಶಗೌಡರ ಕೃತಿಗಳು
ಎಂದು ಸಂಪಾದಿಸಿದ್ದಾರೆ.
ಎಂ ಎಸ್ ಪುಟ್ಟಣ್ಣ (1854-1930)
ಪತ್ರಿಕೆ : ಹಿತಬೋಧಿನಿ
ಕಾದಂಬರಿಗಳು : ಮಾಡಿದ್ದುಣ್ಣೋ ಮಹರಾಯ (ಮುಮ್ಮಡಿ ಕೃಷ್ಣರಾಜ ಒಡೆಯರ
ಕಾಲದ ಕೆಲವು ಘಟನೆಗಳು), ಮುಸುಗು ತೆಗೆಯೇ ಮಾಯಾಂಗನೇ (ಮೈಸೂರಿನ ಇತಿಹಾಸ ಒಳಗೊಂಡ ಪತ್ತೆದಾರಿ ಕಥೆ), ಅವರಿಲ್ಲದೂಟ (ಮುಮ್ಮಡಿ ಕೃಷ್ಣರಾಜರ ಕಾಲದ ಒಂದು ಘಟನೆಯಾಧಾರಿತ ಕತೆ), ಪೇಟೇ ಮಾತೇನಜ್ಜಿ
ಕಥೆಗಳ ಸಂಕಲನ : ನೀತಿಚಿಂತಾಮಣಿ, ಪುಟ್ಟಣ್ಣ ಹೇಳಿದ ಕಥೆಗಳು
ಜೀವನ ಚರಿತ್ರೆ :
ಕುಣಿಗಲ್ ರಾಮಶಾಸ್ತ್ರಿಗಳ ಚರಿತ್ರೆ,
(ಆಧುನಿಕ ಕನ್ನಡದ ಸಾಹಿತ್ಯದ ಮೊದಲ ಜೀವನ ಚರಿತ್ರೆ), ಸಾಲಾರ್
ಜಂಗ್, ಮಹ್ಮದ್ ಗವಾನ್, ಛತ್ರಪತಿ ಶಿವಾಜಿ
ಇತ್ಯಾದಿ
ಅನುವಾದ : ಜಯಸಿಂಹರಾಜ ಚರಿತ್ರೆ (ಷೇಕ್ಸ್ಪಿಯರನ ಸಿಂಬಲೈನ್ -
ಕಥನ ರೂಪ), ಹೇಮಚಂದ್ರ ವಿಲಾಸ (ಕಿಂಗ್ ಲಿಯರ್ -
ಗದ್ಯಪದ್ಯಮಿಶ್ರ ನಾಟಕ), ಹೇಮಲತ (ಹ್ಯಾಮ್ಲೆಟ್ - ಗದ್ಯಪದ್ಯಮಿಶ್ರ
ನಾಟಕ), ಸುಮತಿ ಮದನಕುಮಾರರ ಚರಿತ್ರೆ (ಥಾಮಸ್ ಡೇ ಬರೆದ ದಿ ಹಿಸ್ಟರಿ
ಆಫ್ ಸ್ಯಾಂಡ್ಫೋರ್ಡ್ ಆಂಡ್ ಮೆರ್ಟೋನ್), ಹಾತಿಂ ತಾಯ್ (ಮೂಲ
ಪರ್ಷಿಯನ್)
ಷೇಕ್ಸ್ಪಿಯರ್ ನ ನಾಟಕಗಳ ಅನುವಾದದಲ್ಲಿ ಪೂರ್ಣವಾಗಿ ಗದ್ಯವನ್ನು
ಉಪಯೋಗಿಸಿದ ಮೊದಲ ಬರಹಗಾರರು
ಇತರ ಕೃತಿಗಳು : ಚಿತ್ರದುರ್ಗದ ಪಾಳೆಯಗಾರರು, ಇಕ್ಕೇರಿ ಸಂಸ್ಥಾನದ ಚರಿತ್ರೆ,
ಹಿಂದೂ ಚರಿತ್ರ ದರ್ಪಣ, ಹಿಂದೂ ಚರಿತ್ರ ಸಂಗ್ರಹ, ಕನ್ನಡ ಲೇಖನ ಲಕ್ಷಣ.
ಕರ್ಕಿ ವೆಂಕಟರಮಣ ಶಾಸ್ತ್ರಿಗಳು (1855-1930)
ಪತ್ರಿಕೆ : ಹಿತೋಪದೇಶ
ಪ್ರಮುಖ ಕೃತಿಗಳು : ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ (ಕನ್ನಡದ ಮೊದಲ
ಸಾಮಾಜಿಕ ನಾಟಕ 1887), ದಕ್ಷಿಣ ಭಾರತ ಯಾತ್ರಾ ಚರಿತ್ರೆ (ಕನ್ನಡದ ಮೊದಲ ಪ್ರವಾಸ ಕೃತಿ), ಪ್ರಾಚೀನ ನಾಟ್ಯ ಕಥಾವರ್ಣನ, ಅನಾರ್ಯರ ವಿವರ ಸಂಶೋಧನೆ ಇತರ
ಕೃತಿಗಳು.
ಸಂಪಾದನೆ : ಪರಮದೇವಾಂಕನ ತುರಂಗ ಭಾರತ
ಶಾಂತಕವಿ (1856-1920)
ನಿಜನಾಮ ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ
ಮೊದಲ ಬಾರಿಗೆ ಸ್ವತಂತ್ರವಾಗಿ ಕನ್ನಡದಲ್ಲಿ ನಾಟಕಗಳನ್ನು ಬರೆದು ಪ್ರದರ್ಶಿಸಿದ
ಕಾರಣ ಕರ್ನಾಟಕ ನಾಟಕ ಪ್ರಥಮ ಗುರು ಎಂಬ ಅನ್ವರ್ಥನಾಮ ಸೇರಿಕೊಂಡಿತು.
ಇವರು ಬೇಡಲು ಬಂದಿಹೆನು ಕನ್ನಡದ ದಾಸಯ್ಯ ಎಂಬ ಹಾಡಿನಿಂದ
ಪ್ರಸಿದ್ಧರಾದವರು.
ಕೀರ್ತನೆ : ಮುಕುಂದ ದಾನಾಮೃತ
ಕಾವ್ಯ ಸಂಕಲನ : ಆನಂದ ಲಹರಿ, ಪುಷ್ಪಬಾಣ ವಿಲಾಸ, ವಿಷಕಂಡ
ಖಡ್ಗ
ಅನುವಾದ : ಋತುಸಂಹಾರ, ಮೇಘದೂತ, ರಘುವಂಶ (ಎರಡನೆಯ
ಸರ್ಗ), ವಿರಹ ತರಂಗ.
ಮೀಮಾಂಸೆ : ಅಲಂಕಾರ ಶಾಸ್ತ್ರ , ಲಘು ಕವಿತಾ ಪದ್ಧತಿ (ಟಿಪ್ಪಣಿ),
ರಸಿಕಾರಸಿಕ ವಿಚಾರ.
ನಾಟಕಗಳು : ಉಷಾಪಹರಣ (ರಂಗದ ಮೇಲೆ ಪ್ರದರ್ಶನಗೊಂಡ ಕನ್ನಡದ್ದೇ
ಆದ ಮೊದಲ ನಾಟಕ ಮತ್ತು ಸಂಗೀತ ನಾಟಕ), ಕಾಳಿದಾಸ, ನಾಗಾನಂದ, ವತ್ಸಲಾಹರಣ,
ಶ್ರೀಯಾಳ ಸತ್ವ ಪರೀಕ್ಷಾ, ಸೀತಾರಣ್ಯ ಪ್ರವೇಶ,
ಚಂದ್ರಾವಳಿ ಚರಿತ್ರೆ, ಕೀಚಕ ವಧೆ, ಸುಧನ್ವ ವಧೆ, ಸುಂದೋಪಸುಂದ ವದೆ, ಪಾರ್ವತಿ
ಪರಿಣಯ, ಮೇಘದೂತ, ಶಕುಂತಲೋತ್ಪತ್ತಿ,
ಚಂದ್ರಾವಳಿ ಚರಿತ್ರೆ.
ಹಾಸ್ಯ ಪ್ರಬಂಧಗಳು : ಕಾಲ ಮಹಿಮೆ, ದಾಸಪ್ಪನಯಕನ ಪರ್ಸು, ಕಾಳಾಸುರ.
ಇತರ ಪ್ರಮುಖ ಕೃತಿಗಳು : ವೇಶ್ಯಾವಾಟಿಕಾ ಸಂಚಾರ, ಶೃಂಗಾರ ವಚನ ಸಂಗ್ರಹ, ಶೃಂಗಾರಸಾಗರ, ಅಡ್ಡ
ಕತೆಗಳು ಬುಕ್ಕು, ಅಲಾದಿ ಜಮಗು, ಬರಗಾಲ ರಸು
ಎಚ್ ವಿ ನಂಜುಂಡಯ್ಯ (1860-1920)
ಪ್ರಮುಖ ಕೃತಿಗಳು : ಎತ್ನೋಗ್ರಾಫಿಕ್ ಸರ್ವೇ ಆರ್ಫ ಮೈಸೂರು ಸ್ಟೇಟ್, ಲೇಖ್ಯ ಬೋಧೀನಿ, ವ್ಯವಹಾರ ದೀಪಿಕೆ, ವ್ಯವಹಾರ ಧರ್ಮಶಾಸ್ತ್ರ, ರಾತ್ರಿಯಲ್ಲಿ ಕಂಬನಿ, ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್,
ಟಿಯರ್ ಇನ್ ದ ನೈಟ್
1915 ಮತ್ತು 1916 ರಲ್ಲಿ ಬೆಂಗಳೂರಿನಲ್ಲಿ
ನಡೆದ 1 ಮತ್ತು 2 ನೇ ಹಾಗೂ 1917 ರಲ್ಲಿ ಮೈಸೂರಿನಲ್ಲಿ ನಡೆದ 3 ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು.
ರಾಮರಾವ್ ಅನವಟ್ಟಿ (1860)
ಪ್ರಮುಖ ಕೃತಿ : ಕರ್ನಾಟಕಾ ಕವಿರತ್ನಮಾಲಾ
ಹಟ್ಟಿಯಂಗಡಿ ನಾರಾಯಣರಾವ್ (1863-1921)
ಕವನ ಸಂಕಲನಗಳು : ಆಂಗ್ಲಕವಿತಾವಳಿ (1919ರಲ್ಲಿ ಇಂಗ್ಲಿಷ್ ನಿಂದ
ಕನ್ನಡಕ್ಕೆ ಅನುವಾದವಾದ ಮೊದಲ ಕವನ ಸಂಕಲನ).
ಇತರ ಕೃತಿಗಳು : ಕನ್ನಡ ಕಥಾನಕ, ಇಂಗ್ಲಿಷ್-ಕನ್ನಡ ನಿಘಂಟು,
ಕನ್ನಡ ಕವಿತೆಯ ಭವಿತವ್ಯ ಎಂಬ ಇವರ ಭಾಷಣದಲ್ಲಿ ಕನ್ನಡಕ್ಕೆ ಇಂಗ್ಲಿಷ್
ನ ಪ್ರೇರಣೆಯ ಕುರಿತು ಹೇಳಿದ್ದಾರೆ.
ಕೃಷ್ಣಪ್ಪ ಬಿ ( 1865)
ನಾಟಕ :
ಅಭಿಜ್ಞಾನ ಶಾಕುಂತಲ
ವಿಮರ್ಶೆ : ಶಾಕುಂತಲ ಕೃತಿ
ಕೆರೂರು ವಾಸುದೇವಾಚಾರ್ಯರು (1866-1921)
ಪತ್ರಿಕೆಗಳು : ಸುಭೋದಯ
ಕಾದಂಬರಿಗಳು : ಇಂದಿರೆ/ಇಂದಿರಾ (ಕನ್ನಡದ ಮೊದಲ ಸಾಮಾಜಿಕ ಕಾದಂಬರಿ
- 1908, ಮೌಢ್ಯ ಸಂಪ್ರದಾಯ ವಿರೋಧಿ ಮನೋಭಾವ,
ಸ್ತ್ರೀ ಸ್ವಾತಂತ್ರ್ಯ-ಸಮಾನತೆ, ವಿಧವಾವಿವಾಹ,
ಸ್ತ್ರೀ ಶಿಕ್ಷಣ ಇದರ ವಿಷಯಗಳು ಮತ್ತು ಉತ್ತರ ಕರ್ನಾಟಕ ಭಾಷೆಯಲ್ಲಿ ರಚನೆಯಾದ
ಮೊದಲ ಕೃತಿಯಾಗಿದೆ), ಯದು ಮಹಾರಾಜ (ಮೈಸೂರು ರಾಜ್ಯದ ಇತಿಹಾಸ),
ಭಾತೃಘಾತಕ ಔರಂಗಜೇಬ, ವಾಲ್ಮೀಕಿ ವಿಜಯ, ಯವನ ಸೈರಂದ್ರಿ.
ಕಥಾ ಸಂಕಲನಗಳು : ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ
ದೀಪಗಳು
ನಾಟಕಗಳು : ನಳದಮಯಂತಿ, ರುಕ್ಮಿಣೀ ಸ್ವಯಂವರ, ಪುರಂದರದಾಸರು
ಅನುವಾದ : ವಸಂತ ಯಾಮಿನಿ (ನಾಟಕ - ಶೇಕ್ಸ್ಪಿಯರನ ಮಿಡ್ ಸಮರ್
ನೈಟ್ಸ್ ಡ್ರೀಮ್), ಸುರತ ನಗರದ ಶ್ರೇಷ್ಠಿ (ನಾಟಕ - ಮರ್ಚೆಂಟ್ ಆಫ್ ವೆನಿಸ್), ಸ್ವಪ್ನ
ಚಮತ್ಕಾರ (ನಾಟಕ) ಮತ್ತು ಪತಿ ವಶೀಕರಣ (ನಾಟಕ - ಆಲಿವರ್ ಗೋಲ್ಡ್ ಸ್ಮಿತ್‌ನ ಷಿ ಸ್ಟೂಪ್ಸ್ ಟು
ಕಾಂಕರ್).
ಗಳಗನಾಥ (1869-1942)
ವೆಂಕಟೇಶ ತಿರಕೊ ಕುಲಕರ್ಣಿ ಇವರ ನಿಜನಾಮ
ಕನ್ನಡ ಕಾದಂಬರಿಗಳ ಪಿತಾಮಹ ಎಂದು ಜನಪ್ರಿಯರಾದವರು
ಪತ್ರಿಕೆಗಳು :
ಸದ್ಬೋಧ ಚಂದ್ರಿಕೆ, ಸದ್ಗುರು
ಕಾದಂಬರಿಗಳು : ಈಶ್ವರಿ ಸೂತ್ರ (ಶಿವಾಜಿಯ ಜೀವನ ಮತ್ತು ಸಾಧನೆ), ಕಮಲಕುಮಾರಿ, ಶಿವಪ್ರಭುವಿನ ಪುಣ್ಯ ಮತ್ತು ಮರಾಠರ ಅಭ್ಯುದಯ ಕಾದಂಬರಿಗಳು ಮರಾಠ ಇತಿಹಾಸವನ್ನು
ಒಳಗೊಂಡಿವೆ.
ರಜಪೂತ ಇತಿಹಾಸವನ್ನು ಕುರಿತಂತೆ ಕುರುಕ್ಷೇತ್ರ, ಕ್ಷಾತ್ರತೇಜ, ಸಂಸಾರ ಸುಖ, ಸತ್ವಸಾರ, ಕಾದಂಬರಿಗಳನ್ನು
ಬರೆದಿದ್ದಾರೆ.
ರಾಣಿ ಮೃಣಾಲಿನಿ (ಬಂಕಿಮಚಂದ್ರರ ಮೃಣಾಲಿನಿ ಕೃತಿಯ ಮರಾಠಿ ಅನುವಾದ)
ಚಾಣಕ್ಯನ ಕಾರಸ್ಥಾನ ಮತ್ತು ವೈಭವ ಈ ಕೃತಿಗಳು ಮೌರ್ಯರ ಇತಿಹಾಸವನ್ನು
ಒಳಗೊಂಡಿವೆ
ಮಾಧವ ಕರುಣಾ ವಿಲಾಸ, ಕನ್ನಡಿಗರ ಕರ್ಮಕಥೆ
ಮತ್ತು ಕುಮುದಿನಿ ಅಥವಾ ಬಾಲಕ್ಕೆ ಬಡಿದಾಟ ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಕುರಿತು ರಚನೆಯಾಗಿವೆ.
ಪ್ರಬುದ್ಧ ಪದ್ಮನಯನೆ, ಸಾಮ್ರಾಟ ಅಶೋಕ, ದುರ್ಗದ ಬಿಚ್ಚುಗತ್ತಿ,
ಭಗವತೀ ಕಾತ್ಯಾಯಿನಿ, ಧಾರ್ಮಿಕ ತೇಜ, ಶೌರ್ಯ ಸಂಜೀವನ, ಪರಹಿತಾ ದಕ್ಷತಾ, ತಿಲೋತ್ತಮೆ
ಇತ್ಯಾದಿ.
ನಿಬಂಧಗಳು : ದಾಂಪತ್ಯ, ಕುಟುಂಬ, ಸುಂದರಲೇಖ ಸಮುಚ್ಚಯ, ನಿಬಂಧ ಶಿಕ್ಷಣ, ಕನ್ಯಾಶಿಕ್ಷಣ, ರಾಜನಿಷ್ಠೆ,
ಶ್ರೇಷ್ಠ ಸದುಪದೇಶ ಹಾಗೂ, ಬ್ರಾಹ್ಮಣ ಪ್ರಾಪ್ತಿ
ಸಾಧನೆ, ಗೀತೆಯ ಶ್ರವಣಾಧಿಕಾರ.
ಮುದ್ದಣ (ನಂದಳಿಕೆ ಲಕ್ಷ್ಮೀನಾರಣಪ್ಪ) (1869-1901)
ಹೊಸಗನ್ನಡದ ಅರುಣೋದಯದ ಮುಂಗೋಳಿ ಎಂದು ಪ್ರಸಿದ್ಧನಾದವನು
ಪ್ರಮುಖ ಕೃತಿಗಳು : ರತ್ನಾವತಿ ಕಲ್ಯಾಣ, ಕುಮಾರ ವಿಜಯ (ಯಕ್ಷಗಾನ ಪ್ರಸಂಗ),
ಶ್ರೀರಾಮ ಪಟ್ಟಾಭಿಷೇಕಂ (ವಾರ್ಧಕ ಷಟ್ಪದಿ ಕಾವ್ಯ), ಅದ್ಭುತ
ರಾಮಾಯಣಂ (ಗದ್ಯ), ಶ್ರೀರಾಮಾಶ್ವಮೇಧಂ (ಗದ್ಯರೂಪದಲ್ಲರುವ ಈ ಕೃತಿ
ಗಂಡು ಹೆಣ್ಣಿನ ಸಂವಾದದಲ್ಲಿರುವ ಮೊದಲ ಕೃತಿಯಾಗಿದೆ.), ಗೋದಾವರಿ
(ಅಪೂರ್ಣ ಕಾದಂಬರಿ)
ಆನಂದರಾವ್ (1870)
ಅನುವಾದ ಕೃತಿಗಳು : ಪಾಂಚಾಲಿ ಪರಿಣಯಂ (ಶೇಕ್ಸ್ಪಿಯರ್ ನ ಮರ್ಚೆಂಟ್ ಆಫ್
ವೆನಿಸ್), ಹ್ಯಾಮ್ಲೆಟ್
ಪಂಜೆ ಮಂಗೇಶರಾಯರು (1874-1937)
ಇವರ ಕಾವ್ಯನಾಮ ಕವಿಶಿಷ್ಯ. ಮಕ್ಕಳ ಸಾಹಿತ್ಯದ ಪಿತಾಮಹಾ ಎಂದು ಹೆಸರಾದವರು
ಮಂಗಳೂರಿನಲ್ಲಿ ಬಾಲ ಸಾಹಿತ್ಯ ಮಂಡಳಿ ಸ್ಥಾಪನೆ ಮಾಡಿದರು
ಕಥನ ಕವನಗಳು : ಡೊಂಬರ ಚೆನ್ನ, ರಂಗಸೆಟ್ಟಿ, ನಾಗಣ್ಣನ
ಕನ್ನಡಕ
ಇವರ ಅಣ್ಣನ ವಿಲಾಪ ಹೊಸಗನ್ನಡದ ಮೊಟ್ಟಮೊದಲ ಶೋಕಗೀತೆಯಾಗಿದೆ
ಅನುವಾದ : ಕಡೆಕಂಜಿ (ದ ಲಾಸ್ಟ್ ಆಫ್ ದ ಫ್ಲೋಕ್)
ಪಂಚಕಜ್ಜಾಯ (ಸಂಶೋಧನಾ ಲೇಖನಗಳ ಸಂಗ್ರಹ)
ಕವನಗಳು : ಹುತ್ತರಿಹಾಡು ( ಕೊಡವರ ಶೌರ್ಯ ಗುಣ), ನಾಗರಹಾವೆ ಹಾವೊಳು ಹೂವೆ, ತೆಂಕಣ ಗಾಳಿಯಾಟ (ದ ಫ್ರೋಲಿಕ್
ಇನ್ ದ ವಿಂಡ್), ಹೊಲೆಯನ ಹಾಡು (ದಲಿತರ ಬಗೆಗೆ ಕನ್ನಡದಲ್ಲಿ ಬಂದ ಮೊದಲ
ಕವನ).
ಕತೆಗಳು : ಕಮಲಾಪುರದ ಹೊಟೇಲಿನಲ್ಲಿ (ಆಧುನಿಕ ಕನ್ನಡ
ಸಾಹಿತ್ಯದ ಮೊದಲ ಕತೆ) ಅಜ್ಜಿ ಸಾಕಿದ ಮಗ, ಇಲಿಗಳ ಥಕಥೈ, ಕೊಕ್ಕಕೊ ಕೋಳಿ, ಗುಡುಗುಡು ಗುಮ್ಮಟ ದೇವ, ಬೊಕ್ಕಬಾಯಿ ಕೊಕ್ಕೆರಾಜ, ಮಾತಾಡೋ ರಾಮಪ್ಪ, ಮೂರು ಕರಡಿಗಳು, ನನ್ನ
ಚಿಕ್ಕ ತಾಯಿ, ನನ್ನ ಚಿಕ್ಕ ತಂದೆ, ನನ್ನ
ಹೆಂಡತಿ, ಅರ್ಗಣೆ ಮುದ್ದೆ, ಮೆಣಸಿನ ಕಾಳಪ್ಪ,
ಸೀಗಡೆ ಯಾಕೆ ಒಣಗಲಿಲ್ಲ? ಭರತ ಶ್ರಮಣ, ಕೋಟಿ ಚನ್ನಯ (ತುಳುನಾಡಿನ ಜಾನಪದ ಕತೆ ), ವೀರಮತಿ, ಹೇನು ಸತ್ತು ಕಾಗೆ ಬಡವಾಯಿತು. ಒಡ್ಡನ ಓಟ, ಅಗೋಳಿ ಮಂಜಣ್ಣ,
ಹಳೆಯ ಸಬ್ ಅಸಿಸ್ಟಂಟ್ ನ ಸುಳ್ಳು ಡೈರಿ
ನೀಳ್ಗತೆಗಳು - ದುರ್ಗಾವತಿ, ಪೃಥುಲಾ, ಶೈಲಿನಿ.
ಇತರ ಕೃತಿಗಳು : ಮೂಲ ವ್ಯಾಕರಣ, ಕನ್ನಡದಲ್ಲಿ ಸುಧಾರಣೆಗಳು, ಸ್ಥಳನಾಮ, ಐತಿಹಾಸಿಕ ಕಥಾವಳಿ, ಮೂಲ
ವ್ಯಾಕರಣ
1934 ರಲ್ಲಿ ರಾಯಚೂರಿನಲ್ಲಿ ನಡೆದ 20 ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಆಲೂರು ವೆಂಕಟರಾಯರು (1880-1964)
ಕನ್ನಡ ಕುಲಪುರೋಹಿತ ಎಂದೇ ಪ್ರಸಿದ್ಧಿಯಾದವರು
ಪತ್ರಿಕೆ : ವಾಗ್ಭೂಷಣ, ಪ್ರಾಚೀನ ಕರ್ನಾಟಕ, ಜಯ
ಕರ್ನಾಟಕ
ಕರ್ನಾಟಕದ ಏಕೀಕರಣಕ್ಕಾಗಿ ಕರ್ನಾಟಕ ಸಭೆಯನ್ನು ಸ್ಥಾಪಿಸಿದರು.
ಪ್ರಮುಖ ರಚನೆಗಳು : ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ನಾವು ಈಗ ಬೇಡುವ ಸ್ವರಾಜ್ಯ,
ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ,
ಶಿಕ್ಷಣ ಮೀಮಾಂಸೆ, ರಾಷ್ಟ್ರೀಯತ್ವದ ಮೀಮಾಂಸೆ,
ಸ್ವರಾಜ್ಯವೆಂದರೇನು?, ಸ್ವರಾಜ್ಯವನ್ನೇ ಏಕೆ
ಬೇಡುತ್ತೇವೆ?
ಅನುವಾದ : ಗೀತಾರಹಸ್ಯ (ಮೂಲ ತಿಲಕರು)
ಮೈಸೂರಿನಲ್ಲಿ 1930 ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ
ಸ್ಮಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಂ ಎನ್ ಕಾಮತ್ (1883-1940)
ಅನುವಾದ : ಅಂಚೆಮನೆ, ಚಂಡಕೌಶಿಕ, ಅಂದಿನ ಆ ಊರು, ಮಧ್ಯಮ ವ್ಯಾಯೋಗ, ನಮ್ಮ ನಾಟ್ಯಾಭಿನಯ
ಗೋವಿಂದ ಪೈ (1883-1963)
ಕನ್ನಡದ ಮೊದಲ ರಾಷ್ಟಕವಿ.
ಮೊದಲ ಬಾರಿಗೆ ಪ್ರಾಸ ಬಳಸದೇ ಹೊಲೆಯನು ಯಾರು ಎಂಬ ಪದ್ಯವನ್ನು
ಬರೆದರು. ತಮ್ಮ ಈ ಪ್ರಯತ್ನವನ್ನು ಕುರಿತು ಪೈಗಳು ಇಂದು ಒಬ್ಬನೇ ನಡೆವ ಮೇಕೆ ದಾರಿಯೇ ಮುಂದೆ
ತೇರೆಳೆವ ಹೆದ್ದಾರಿ ಎಂದಿದ್ದರು.
ನಾಟಕಗಳು : ಹೆಬ್ಬೆರೆಳು (ಪದ್ಯಾತ್ಮಕ ಏಕಾಂತ ನಾಟಕ), ಚಿತ್ರಭಾನು (1942 ರ ಚಳುವಳಿ),
ತಾಯಿ (ಸಾಮಾಜಿಕ ಏಕಾಂಕ ನಾಟಕ
ಕವನ ಸಂಕಲನಗಳು : ಗಿಳಿವಿಂಡು, ನಂದಾದೀಪ, ಹೃದಯರಂಗ,
ವಿಟಂಕ, ಇಂಗಡಲು.
ನೀಳ್ಗವನಗಳು : ಗೋಲ್ಗೋಥಾ (ಯೇಸುವಿನ ಜೀವನದ ಕೊನೆಯ
ಚಿತ್ರಣ), ವೈಶಾಖಿ (ಬುದ್ಧನ ಜೀವನದ
ಜೀವನದ ಕೊನೆಯ ದಿನಗಳು)
ಕಥನ ಕವನಗಳು : ಪ್ರಭಾಸ, ಮಾತಂಗಿ
ವ್ಯಕ್ತಿಚಿತ್ರ : ಕನಸಾದ ನನಸು
ಅನುವಾದ : ಬಾನಕ್ಕಿ (ಶೆಲ್ಲಿಯ Skylark ode), ನೋ ನಾಟಕಗಳು (ಜಪಾನಿ
ಮೂಲ), ಶ್ರೀ ಕೃಷ್ಣ ಚರಿತ (ಗದ್ಯಾನುವಾದ)
ಕನ್ನಡದ ಮೊರೆ ಮತ್ತು ಬರಹಗಾರನ ಹಣೆಬರಹ ಎಂಬ ಕೃತಿಗಳಲ್ಲಿ ಪೈ ಅವರ
ಜೀವನದ ಹಲವು ತುಣುಕುಗಳು, ಭಾಷಣಗಳು, ಲೇಖನಗಳು ಬಿತ್ತರಗೊಂಡಿವೆ.
ಗೌರವ ಗ್ರಂಥಗಳು : ಗೋವಿಂದ ಪೈ (ವಿ ಎಂ ಇನಾಂದಾರ್, ಕನ್ನಡ ಅಧ್ಯಯನ ಸಂಸ್ಥೆ), ಗೋವಿಂದ ಪೈ ಶತಮಾನ ಸ್ಮರಣೆ (ಕನ್ನಡ ಸಾಹಿತ್ಯ ಅಕಾಡೆಮಿ)
“ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ” ಎಂಬ
ಸಾಲಿನಲ್ಲಿ ಕನ್ನಡದ ಬಗೆಗಿನ ಇವರ ಅಪಾರ ಒಲವು ಕಾಣುತ್ತದೆ.
1950 ರಲ್ಲಿ ಮುಂಬೈನಲ್ಲಿ ನಡೆದ 34 ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಹುಯಿಲಗೊಳ ನಾರಾಯಣರಾವ್ (1884-1971)
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡಿನ ಮೂಲಕ ಕರ್ನಾಟಕದ ಏಕೀಕರಣಕ್ಕೆ
ಕಾರಣರಾದವರಲ್ಲಿ ಇವರೂ ಒಬ್ಬರು
ಪ್ರಮುಖ ಗ್ರಂಥಗಳು : ಧರ್ಮರಹಸ್ಯ, ಪತಿತೋದ್ದಾರ, ಶಿಕ್ಷಣ
ಸಂಭ್ರಮ
ಬಿ ಎಂ ಶ್ರೀಕಂಠಯ್ಯ (1884-1946)
ನವೋದಯದ ಆದ್ಯ ಪುರುಷರು, ಕನ್ನಡದ ಕಣ್ವ ಎಂದೇ ಖ್ಯಾತರಾದ ಇವರ ಕಾವ್ಯನಾಮ ಶ್ರೀ
ಧಾರವಾಡದಲ್ಲಿ 1911 ರಲ್ಲಿ ಶ್ರೀ ಯವರು ಕನ್ನಡ ಮಾತು ತಲೆಯೆತ್ತುವ
ಬಗ್ಗೆ ಎಂಬ ಭಾಷಣವನ್ನು ಮಾಡಿದರು. ಕನ್ನಡದ ಏಳಿಗೆ ಎಂಬುದು ಇವರ ಮತ್ತೊಂದು ಪ್ರಸಿದ್ಧ ಭಾಷಣ.
ಕವನ ಸಂಕಲನ : ಕನ್ನಡ ತಾಯ ನೋಟ, ಶುಕ್ರಗೀತ, ಕನ್ನಡ
ಬಾವುಟ (ಸಂಪಾದಿತ).
ಅನುವಾದ ಕಾವ್ಯ : ಇಂಗ್ಲಿಷ್ ಗೀತೆಗಳು (ಈ ಕವನ ಸಂಕಲನದಿಂದ
ಕನ್ನಡದಲ್ಲಿ ನವೋದಯ ಯುಗ ಆರಂಭವಾಯಿತೆನ್ನಬಹುದು. ಮತ್ತು ಈ ಕವನ ಸಂಕಲನದಲ್ಲಿನ ಕಾರಿ ಹೆಗ್ಗಡೆಯ
ಮಗಳು ಕಥನ ಕವನದಿಂದ ಕನ್ನಡ ಸಾಹಿತ್ಯದಲ್ಲಿ ಕಥನ ಕವನಗಳ ಪರಂಪರೆ ಹುಟ್ಟಿಕೊಂಡಿತು).
ಅನುವಾದ ನಾಟಕ : ಗ್ರೀಕ್ ರುದ್ರನಾಟಕಗಳನ್ನು
ಕನ್ನಡಕ್ಕೆ ಅನುವಾದಿಸುವ ಪರಂಪರೆಗೆ ನಾಂದಿ ಹಾಡಿದರು
ಗದಾಯುದ್ಧ (ರನ್ನನ ಗದಾಯುದ್ದ ಆಧಾರಿತ), ಅಶ್ವತ್ಥಾಮನ್ ( ಸಾಫೋಕ್ಲೀಸ್ ನ
ಏಜಾಕ್ಸ್ ನಾಟಕ, ಇಲ್ಲಿ ಕಾಲೈಕ್ಯ ಸ್ಥಳೈಕ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ),
ಪಾರಸಿಕರು (ಪರ್ಷಿಯನ್ಸ್ ಕೃತಿ ಆಧಾರಿತ)
ಪ್ರಮುಖ ಕೃತಿಗಳು : ದ ಹ್ಯಾಂಡ್ಬುಕ್ ಆಫ್ ರ್ಹೆಟಾರಿಕ್, ಇಸ್ಲಾಂ ಸಂಸ್ಕೃತಿ (ಅನುವಾದ),
ಕನ್ನಡ ನಾಡಿನ ಚರಿತ್ರೆ, ಕಾವ್ಯ ಸಂಗ್ರಹಗಳು,
ಕನ್ನಡ ಕೈಪಿಡಿ, ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ,
ಹೊಂಗನಸುಗಳು, ರಜತ ಮಹೋತ್ಸವ ಪ್ರಗಾಥ.
ಅಭಿನಂದನಾ ಗ್ರಂಥ : ಸಂಭಾವನೆ (ಕನ್ನಡದ ಮೊದಲ ಅಭಿನಂದನಾ ಗ್ರಂಥ).
ಶ್ರೀ ಅವರ ಸಮಗ್ರ ಸಾಹಿತ್ಯವನ್ನು ಕುವೆಂಪು ಅಧ್ಯಯನ ಸಂಸ್ಥೆ ಶ್ರೀ ಸಾಹಿತ್ಯ ಎಂಬ ಹೆಸರಿನಿಂದ
ಪ್ರಕಟಿಸಿದೆ.
1928 ರಲ್ಲಿ ಕಲುಬುರ್ಗಿಯಲ್ಲಿ ನಡೆದ 14 ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು
ಟಿ ಪಿ ಕೈಲಾಸಂ (1884-1946)
ಕನ್ನಡದಲ್ಲಿ ಆಡುಭಾಷೆಯಲ್ಲಿ ನಾಟಕಗಳ ಪ್ರಯೋಗ ಮಾಡುವಲ್ಲಿ
ಮೊದಲಿಗರಾಗಿ ಕರ್ನಾಟಕ ಪ್ರಹಸನ ಪಿತಾಮಹ, ಆಧುನಿಕ ರಂಗಭೂಮಿಯ ಹರಿಕಾರ ಎನಿಸಿದರು.
ನಾಟಕಗಳು : ಹೋಂರೂಲು, ಗಂಡಸ್ಕತ್ರಿ, ನಮ್ ಬ್ರಾಹ್ಮಣ್ಕೆ,
ಬಂಡ್ವಾಳಿಲ್ಲದ ಬಡಾಯಿ, ನಮ್ ಕ್ಲಬ್ಬು, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ,
ಸೀಕರ್ಣೆ ಸಾವಿತ್ರಿ, ಶೂರ್ಪನಖಾ ಕುಲವೈಭವ (ನಂ ಕಂಪ್ನಿ),
ತಾಳಿ ಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ವೈದ್ಯನ ವ್ಯಾಧಿ, ಸೂಳೆ, ಟೊಳ್ಳುಗಟ್ಟಿ,
ಶಂಬರನ ಶೃಂಗಾರ, ವಿವಿಧ ವಿನೋದ ದಾಳಿ, ಅಧ್ವಾನವ್ಹನ, ಮಕ್ಕಳಸ್ಕೂಲ್ ಮನೇಲಲ್ವೇ!, ಹುತ್ತದಲ್ಲಿ ಹುತ್ತ, ಏಕಲವ್ಯ ಮತ್ತು ಕರ್ಣ, ಬಹಿಷ್ಕಾರ ಮುಂತಾದವು.
ಸಂಗೀತ ನಾಟಕಗಳು - ಕೇರಳಯಾತ್ರೆ, ಕಾಳಮ್ಮನೈಕ್ಳು, ಅಹೋಬ್ಲುಸ್
ಆಟೋಕಾರು
ಮೃಕಂಡು (ಸಂಸ್ಕೃತ), ಹರಿಶ್ಚಂದ್ರ (ಇಂಗ್ಲಿಷ್), ಹೌಸ್ ಆಫ್
ವೊಡೆಯರ್ಸ್ (ಇಂಗ್ಲಿಷ್)
ಕಥಾಸಂಕಲನಗಳು : ತಾವರೆಕೆರೆ
ಕವನಗಳು : ತಿಪ್ಪಾರ್ ಹಳ್ಳಿ, ಕೋಳಿಕೆ ರಂಗ, ನಂಜಿ ನನ್ ಅಪರಂಜಿ, ಕಾಶಿಗೆ ಹೋದ ನಮ ಬಾವ, ಬೋರನ ಭಾರ, ಅಲ್ಪಜ್ಞನ ಪದ
ಇಂಗ್ಲಿಷ್ ಸಾಹಿತ್ಯ : ಲಿಟ್ಲ್ ಲೇಸ್ ಅಂಡ್ ಪ್ಲೇಸ್ (ಕವನ ಸಂಕಲನ)
ಇಂಗ್ಲಿಷ್ ನಾಟಕಗಳು : ದ ಪರ್ಪಸ್ (ಏಕಲವ್ಯನ ಕುರಿತು), ದ ಕರ್ಸ್ (ಕರ್ಣನ ಕುರಿತು), ದ
ಬರ್ಡನ್, ದ ಫುಲ್ ಫಿಲ್ ಮೆಂಟ್
ಮೈಸೂರು ವಿವಿಯು ಇವರ ಸಮಗ್ರ ಸಾಹಿತ್ಯವನ್ನು ಕೈಲಾಸಂ ಕೃತಿಗಳು ಎಂಬ
ಹೆಸರಿನಲ್ಲಿ ಪ್ರಕಟಿಸಿದೆ.
1945 ರಲ್ಲಿ ಮದರಾಸಿನಲ್ಲಿ ನಡೆದ 25 ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ತಿರುಮಲಾಂಬ (1887-1982)
ಪತ್ರಿಕೆ : ಕರ್ನಾಟಕ ನಂದಿನಿ
ಕಾದಂಬರಿಗಳು : ಸುಶೀಲ, ನಭಾ, ವಿದ್ಯುಲ್ಲತಾ, ವಿರಾಗಿಣಿ, ದಕ್ಷಕನ್ಯೆ (ಪತ್ತೇದಾರಿ)
ನಾಟಕಗಳು : ಮಣಿಮಾಲ, ಸಾವಿತ್ರಿ ಚರಿತ್ರೆ, ಜಾನಕೀ ಕಲ್ಯಾಣ,
ಚಂದ್ರವದನಾ, ರಮಾನಂದ
ಲೇಖನಗಳು : ಅಬಲಾ ಚೈತನ್ಯ, ವಿಧವಾ ತತ್ವ, ಸೇವಾವಿಚಾರ,
ವಿದ್ಯಾವಿಚಾರ ಇತ್ಯಾದಿ
ಡಿ ವಿ ಗುಂಡಪ್ಪ (1887-1975)
ಆಧುನಿಕ ಸರ್ವಜ್ಞ ಎಂಬುದು ಇವರಿಗಿದ್ದ ಜನಪ್ರಿಯ ಬಿರುದು.
ಪತ್ರಿಕೆಗಳು : ಭಾರತಿ, ಕರ್ನಾಟಕ ಜನಜೀವನ, ಅರ್ಥಸಾಧಕ, ಇಂಡಿಯನ್ ರೀವ್ಯೂ ಆಫ್ ರೀವ್ಯೂಸ್
ಅನುವಾದ : ಕನಕಾಲುಕ / ಕಮಲಿನಿ ಚರಿತಂ ( ಲಾರ್ಡ್ ಟೆನ್ನಿಸನ್ ನ
ದ ಕಪ್), ಮ್ಯಾಕ್ಬೆತ್, ಉಮರನ ಒಸಗೆ
ಪ್ರಬಂಧ/ವಿಚಾರ : ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ, ಬಾಳಿಗೊಂದು ನಂಬಿಕೆ, ಸಂಸ್ಕೃತಿ, ದೇವರು,
ಕಾವ್ಯ ಸ್ವಾರಸ್ಯ.
ನಾಟಕ :
ಶ್ರೀ ರಾಮ ಪರೀಕ್ಷಣಂ
ಕವನ ಸಂಕಲನಗಳು : ವಸಂತ ಕುಸುಮಾಂಜಲಿ, ನಿವೇದನೆ, ಕೇತಕೀವನ.
ಕಾವ್ಯಗಳು - ಅಂತಃಪುರ ಗೀತೆ, ಗೀತ ಶಾಕುಂತಲ, ಮಂಕುತಿಮ್ಮನ
ಕಗ್ಗ, ಬೇಲೂರು ಶಿಲಾಬಾಲಿಕೆಯರು (ಪ್ರಗಾಥ)
ಜೀವನ ಚರಿತ್ರೆಗಳು : ದಿವಾನ್ ರಂಗಾಚಾರ್ಲು, ಗೋಪಾಲ ಕೃಷ್ಣ ಗೋಖಲೆ
ಇಂಗ್ಲಿಷ್ : ದ ಕರ್ನಾಟಕ ಇಯರ್ ಬುಕ್
ಇತರ ಪ್ರಮುಖ ಕೃತಿಗಳು : ವೃತ್ತಪತ್ರಿಕೆ (ಪತ್ರಿಕೋದ್ಯಮದ ಅನುಭವಗಳು), ಶ್ರೀಮದ್ ಭಗವದ್ಗೀತಾ ತಾತ್ಪರ್ಯ
(ಕೇಂದ್ರಸಾಹಿತ್ಯ ಅಕಾಡೆಮಿ), ಜ್ಞಾಪಕ ಚಿತ್ರಶಾಲೆ (ವ್ಯಕ್ತಿವಿವರಗಳ
ಸಂಗ್ರಹ).
1932 ರಲ್ಲಿ ಮಡಿಕೇರಿಯಲ್ಲಿ ನಡೆದ 18 ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮುಳಿಯ ತಿಮ್ಮಪ್ಪಯ್ಯ (1888-1950)
ಕನ್ನಡನಾಡೂ ದೇಸಿ ಸಾಹಿತ್ಯವೂ ಎಂಬ ಸಂಶೊಧನೆಯ ಕುರಿತು ಮಹತ್ವದ
ಉಪನ್ಯಾಸ ನೀಡಿದರು.
ಪತ್ರಿಕೆ : ಕನ್ನಡ ಕೋಗಿಲೆ
ಲೇಖನಗಳು : ಕನ್ನಡ ಸಾಹಿತ್ಯ, ಪಂಪ ಮಹಾಕವಿ, ಮುದ್ದಣನ ಜಾಣ್ಮೆ, ಕವಿಸಮಯದಲ್ಲಿ ಸಾಹಿತ್ಯದ ಸ್ಥಾನ,
ನೆತ್ತಮನಾಡಿ ಭಾನುಮತಿ ಸೋಲ್ತೊಡೆ, ಶಿಶುಮಾಯಣ,
ಕನ್ನಡ ಅಕ್ಷರಮಾಲೆ, ಅಚ್ಚಗನ್ನಡ, ಹೊನ್ನಮ್ಮ, ಭಾಸಕವಿ, ತುಳುವೂ
ಕನ್ನಡವೂ, ಸಾಹಿತ್ಯ, ಯಕ್ಷಗಾನವೂ ಬಯಲಾಟವೂ,
ಅವಿನಯದ ಪರಮಾವಧಿ, ಒಂದು ಪತ್ರ ಇತ್ಯಾದಿ.
ಕವನಗಳು : ಬಡಹುಡುಗಿ, ಸೊಬಗಿನ ಬಳ್ಳಿ, ಪ್ರೇಮಸಾರ,
ನವನೀತ, ರಾಮಾಯಣ, ಇವಳ್ಯಾರು?,
ನವನೀತ (ರಗಳೆ), ಸೊಬಗಿನ ಬಳ್ಳಿ (ಪುರಾಣ ಕಾವ್ಯ)
ನಾಟಕ : ಚಂದ್ರಾವಳಿ ವಿಲಾಸಂ (ಮುದ್ದಣ ಮನೋರಮೆಯರ ಸಂವಾದ), ನಡತೆಯ ನಾಡು (ಕರ್ಣನ ಕುರಿತಾದ ನಾಟಕ), ರಾವುತ ರಂಗಪ್ಪ (ಗೀತ ನಾಟಕ),
ಹಗಲಿರುಳು.
ಕಾದಂಬರಿ : ವೀರ ಬಂಕೇಯ, ಪಶ್ಚಾತ್ತಾಪ, ಪ್ರೇಮಪಾಶ
ಗದ್ಯಾನುವಾದ : ಪಂಪನ ಆದಿಪುರಾಣ, ಸಮಸ್ತಭಾರತ ಸಾರ, ತ್ರಿಪುರದಾಹ (ಶಿಶುಮಾಯಣನ ತ್ರಿಪುರದಹನ ಕೃತಿಯ ಅನುವಾದ).
ಯಕ್ಷಗಾನ : ಸೂರ್ಯಕಾಂತಿ ಕಲ್ಯಾಣ
ವಿಮರ್ಶೆ : ಕವಿಮಾರ್ಗ ವಿವೇಕ, ಕನ್ನಡ ಸಾಹಿತ್ಯ ಮತ್ತು ಇತರ
ಉಪನ್ಯಾಸಗಳು, ಸಂಸ್ಕೃತಿ, ಆಂಡಯ್ಯನೂ
ಕನ್ನಡಮೆನಿಪ್ಪನಾಡೂ, ಪಾರ್ತಿಸುಬ್ಬ (ಯಕ್ಷಗಾನ ಕವಿ ಪಾರ್ತಿಸುಬ್ಬರ
ಜೀವನ ಮತ್ತು ಸಾಧನೆ), ನಾಡೋಜ ಪಂಪ, ಹಾರುವ
ಹಕ್ಕಿ ಮತ್ತು ಇತರ ವಿಶಿಷ್ಟ ಬರಹಗಳು, ಕನ್ನಡ ನಾಡೂ ದೇಶೀ ಸಾಹಿತ್ಯವೂ.
ಸಂಪಾದನೆ : ಶಿವರಾಮ ಚರಿತ
ಸ್ಮರಣ ಗ್ರಂಥ : ಶ್ರದ್ಧಾಂಜಲಿ
1931 ರಲ್ಲಿ ಕಾರವಾರದಲ್ಲಿ ನಡೆದ 17 ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (1891-1986)
ಕಾವ್ಯನಾಮ ಶ್ರೀನಿವಾಸ
ಕವನ ಸಂಕಲನ: ಬಿನ್ನಹ, ಅರುಣ, ತಾವರೆ,
ಮಲಾರ, ಸಂಕ್ರಾಂತಿ, ಶ್ರೀರಾಮ ಪಟ್ಟಾಭಿಷೇಕ (ಮಹಾಕಾವ್ಯ - ಸರಳ ರಗಳೆ)
ಕಥಾಸಂಕಲನ :
ಕೆಲವು ಸಣ್ಣ ಕಥೆಗಳು, ತಾಳೀಕೋಟೆ, ತಿರುಪಾಣಿ, ಮನವಿ, ಸುನೀತ
ಕಾದಂಬರಿಗಳು :
ಚೆನ್ನಬಸವನಾಯಕ (ಬಿದನೂರಿನ ರಾಜಮನೆತನ ಆಧಾರಿತ), ಚಿಕ್ಕವೀರ
ರಾಜೇಂದ್ರ (ಕೊಡಗಿನ ಕೊನೆಯ ರಾಜನ ದುರಂತ ಅಂತ್ಯ - ಜ್ಞಾನಪೀಠ ಪ್ರಶಸ್ತಿ), ಶೇಷಮ್ಮ
ನೀಳ್ಗತೆ/ಕಿರುಕಾದಂಬರಿ : ಸುಬ್ಬಣ್ಣ (ಸಂಗೀತಗಾರನ ಜೀವನ)
ಕಥನ ಕವನಗಳು : ಗೌಡರ
ಮಲ್ಲಿ, ನವರಾತ್ರಿ, ಮೂಕನ ಮಕ್ಕಳು, ರಾಮನವಮಿ, ಮದಲಿಂಗನ ಕಣಿವೆ, ಸೋಜಿಗದ ಹೊಳಲು, ದೇಶಾಚಾರ,
ಗುಂಡುಸೂಜಿ ಮುಂತಾದವು
ಕವನಗಳು :
ಬಿನ್ನಹ, ಅರುಣ, ತಾವರೆ, ಮಲಾರ, ಸಂಕ್ರಾಂತಿ
ನಾಟಕಗಳು :
ಶಾಂತ, ಮಂಜುಳಾ, ಕಾಕನಕೋಟೆ
(ಕಾಡುಕುರುಬರ ಜೀವನ),
ಅನುವಾದಿತ ನಾಟಕಗಳು : ಯಶೋಧರಾ, ಕಾಳಿದಾಸ, ಚಂಡಮಾರುತ (ಶೇಕ್ಸ್ಪಿಯರ್ ನ ಟೆಂಪೆಸ್ಟ್) ದ್ವಾದಶ
ರಾತ್ರಿ (ಟ್ವೆಲ್ತ್ ನೈಟ್), ಲಿಯರ್ ಮಹಾರಾಜ (ಕಿಂಗ್ ಲಿಯರ್)
ವಿಮರ್ಶೆ : ಅಂತರಗಂಗೆ,
ಆದಿಕವಿ ವಾಲ್ಮೀಕಿ, ನಮ್ಮ ಹೊಸ ಸಾಹಿತ್ಯದ ಆರಂಭ, ಭಾರತ ತೀರ್ಥ, ಕರ್ನಾಟಕ ಜನತೆಯ ಸಂಸ್ಕೃತಿ,
ಕರ್ನಾಟಕದ ಜನಪದ ಸಾಹಿತ್ಯ, ಕನ್ನಡ ಸೇವೆ, ಸಾಹಿತ್ಯ ವಿಮರ್ಶೆ.
ಸಂಪಾದಿತ :
ಕರ್ನಾಟಕ ಭಾರತ ಕಥಾ ಮಂಜರಿ , ರವೀಂದ್ರ ಪ್ರಶಸ್ತಿ, ಸಂಭಾವನೆ
ಆತ್ಮಕತೆ :
ಭಾವ
ಅಭಿನಂದನಾ ಗ್ರಂಥ : ಶ್ರೀನಿವಾಸ
ಮಾವಿನಕೆರೆ ರಂಗನಾಥ್ ಅವರು ಮಾಸ್ತಿಯವರ ಸಮಗ್ರ ಕತೆಗಳನ್ನು ೨ ಸಂಪುಟಗಳಲ್ಲಿ
ಸಂಗ್ರಹಿಸಿದ್ದಾರೆ
1929 ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಆರ್ ಕಲ್ಯಾಣಮ್ಮ (1891-1965)
ನಾಟಕಗಳು :
ಸತೀ ಪದ್ಮಿನಿ, ಹಿಂದೂ ಭಾಗ್ಯೋದಯ, ಬಲಿ ಪೀಠದಲ್ಲಿ, ಸ್ನೇಹಲತೆ, ನಿರ್ಮಲೆ, 20 ನೇ ಶತಮಾನದ ಅಳಿಯ, ಮಾಧುವಿನ ಪ್ರಜ್ಞೆ, ವರುಣನ ರಾಜೀನಾಮೆ, ದರಿದ್ರ ಜಾತಕ / ಲೇಖಕನ ದುರಾದೃಷ್ಟ, ಪರೀಕ್ಷೆಯ ಕೊನೆ
ಅದೃಷ್ಟ ಜಂಖಾನ, ಯುದ್ಧಕಾಂಡ, ಚಾಣಕ್ಯ ತಂತ್ರ, ಮಾತಾಡು ಮುದ್ದು ಗಿಳಿ ಮಾತಾಡು, ಯಾರ ಮುಖ ನೋಡಿ ಎದ್ದರೋ?, ಸಮಾಗಮ, ಅತಿಶಯ ಅಜ್ಜ, ಪುಟ್ಟನಾಟಕ, ಹೆಸರಿಲ್ಲದ ನಾಟಕ, ಉಚಿತ ವಾಚನಾಲಯ
ಕಾದಂಬರಿಗಳು :
ಇಂದಿರೆ, ಪ್ರಿಯಂವಧಾ, ಮಾಧವಿ, ವಸುಂಧರಾ
ಮಕ್ಕಳ ಸಾಹಿತ್ಯ : ಮೃಗಪ್ರದರ್ಶನ, ಶಾಲೆ, ತುಂಬೆ ಹೂ,
ಬೇವಿನ ತಪಸ್ಸು, ಎಲ್ಲಾ ಬರಿ ಮೋಸವೇ, ಬಿಳೇ ಮಗು, ಸ್ವಾತಂತ್ರ್ಯೋತ್ಸವ, ದುರಾಸೆಯ
ಫಲ
ದತ್ತಾತ್ರೇಯ ಭಾರದ್ವಾಜ (1891-1953)
ಕರ್ನಾಟಕ ಕೈಪಿಡಿ, ಮತ್ತು ಸಚಿತ್ರ ಭಾರತ ಯಾತ್ರೆ ಕೃತಿಗಳನ್ನು ಬರೆದರು.
ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ (1892-1997)
ಪ್ರಮುಖ ಕೃತಿಗಳು : ಬಸವತತ್ವ ರತ್ನಾಕರ, ಕಾಡಸಿದ್ಧೇಶ್ವರ ವಚನ, ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ.
ಪ್ರಮುಖ ಲೇಖನಗಳು : ನಾಟಕಗಳ ಮಹತ್ವ ಮತ್ತು ಪ್ರಾಚೀನತ್ವ, ಕನ್ನಡ
ಸಾಹಿತ್ಯದಲ್ಲಿ ವಚನಗಳ ಸ್ಥಾನ, ಕಾಳಿದಾಸನ ಶೈವಭಕ್ತಿ ಮುಂತಾದವು.
1940 ರಲ್ಲಿ ದಾರವಾಡದಲ್ಲಿ ನಡೆದ 25 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಎಂ ಆರ್ ಶ್ರೀನಿವಾಸಮೂರ್ತಿ (1892-1953)
ಪತ್ರಿಕೆ :
ಕನ್ನಡ ನುಡಿ ಮತ್ತು ಪರಿಷತ್ಪತ್ರಿಕೆ
ಕಾದಂಬರಿಗಳು :
ರಂಗಣ್ಣನ ಕನಸಿನ ದಿನಗಳು (ಸ್ವಾನುಭವದ ಶೈಕ್ಷಣಿಕ ವಿಚಾರಗಳು, ಕುವೆಂಪು
ಇದನ್ನು ಚಿತ್ರ ಕಾದಂಬರಿ ಎಂದಿದ್ದಾರೆ), ಸಾವಿತ್ರಿ, ಮಹಾತ್ಯಾಗ
ನಾಟಕಗಳು : ಕಂಠೀರವ
ವಿಜಯ, ಧರ್ಮ ದುರಂತ (ಟಿಪ್ಪುವಿನ ಕಾಲದ ಘಟನೆ), ರೂಲ್ಸ್ ಮೇಷ್ಟ್ರು, ನಾಗರಿಕ (ವಿಜಯನಗರದ
ಇತಿಹಾಸ), ಯದುವಿಜಯ, ಕವಿಯ ಸೋಲು (ಸರಳ ರಗಳೆಯ ಕಾವ್ಯ ನಾಟಕ)
ಶಬ್ಧಕೋಶ :
ಇಂಗ್ಲಿಷ್-ಕನ್ನಡ ನಿಘಂಟು
ಸಂಶೋಧನಾ ಗ್ರಂಥಗಳು : ಭಕ್ತಿಭಾಂಡಾರಿ ಬಸವಣ್ಣನವರು, ವಚನಧರ್ಮಸಾರ
ಸಂಪಾದನೆ : ಪ್ರಭುಲಿಂಗಲೀಲೆ
ಲೇಖನಗಳು : ಶೂನ್ಯ
ಸಂಪಾದನೆಗಳು, ಸಿದ್ಧರಾಮ ಚಾರಿತ್ರದ ಅಲ್ಲಮಪ್ರಭು, ವೀರಶೈವಾಮೃತ ಮಹಾಪುರಾಣ, ಚೆನ್ನಬಸವಾಂಕನ ಮಹಾದೇವಿಯಕ್ಕನ
ಪುರಾಣ, ಷಡಕ್ಷರಿಯ ರಾಜಶೇಖರ ವಿಳಾಸ, ವೃಷಭೇಂದ್ರ
ವಿಜಯ, ಹರಿಹರನ ಗಿರಿಜಾ ಕಲ್ಯಾಣ- ವಸ್ತು ರಚನೆ, ಹರಿಹರನ ಗಿರಿಜಾ ಕಲ್ಯಾಣ- ಶೈಲಿ, ಹರಿಹರನ ಸ್ಥಾನ ನಿರ್ದೇಶನ
ಸಾಹಿತ್ಯ ಲೋಕ ಎಂಬ ಗ್ರಂಥದಲ್ಲಿ ಮೈಸೂರು ವಿ ವಿ ಇವರ ಸಮಗ್ರ ಲೇಖನಗಳನ್ನು
ಪ್ರಕಟಿಸಿದೆ
1950 ರಲ್ಲಿ ಸೊಲ್ಲಾಪುರದಲ್ಲಿ ನಡೆದ 33 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು
ದೇವುಡು ನರಸಿಂಹಶಾಸ್ತ್ರಿ (1895-1962)
ಮಕ್ಕಳಿಗಾಗಿ ನಮ ಪುಸ್ತಕ ಎಂಬ ಶಿಶು ಮಾಸಪತ್ರಿಕೆಯನ್ನು ಹೊರಡಿಸಿದರು.
ಕಾದಂಬರಿಗಳು :
ಮಹಾಬ್ರಾಹ್ಮಣ, ಮಹಾಕ್ಷತ್ರಿಯ (ಮಾನವನಾದ ನಹುಷ ಇಂದ್ರಪದವಿ
ತ್ಯಾಗ ಮಾಡಿ ಶ್ರೇಷ್ಠನಾದ ಕತೆ - ಕೇಂದ್ರ ಸಾಹಿತ್ಯ ಅಕಾಡೆಮಿ), ಅಂತರಂಗ
(ಕನ್ನಡದ ಮೊದಲ ಮನೋವೈಜ್ಞಾನಿಕ ಕಾದಂಬರಿ), ಅವಳ ಕತೆ (ವಿಜಯನಗರದ
ಕಾಲದ ಶೃಂಗಾರಾಧಾರಿತ ಕತೆ), ಮಯೂರ (ಕದಂಬರ ಇತಿಹಾಸ),
ಮಹಾದರ್ಶನ, ಸಾಹಸವರ್ಮ, ಎರಡನೇ ಜನ್ಮ, ಮಲ್ಲಿ, ಚಿನ್ನ, ಡಾ. ವೀಣಾ
ಅನುವಾದ : ಕಳ್ಳರಕೂಟ (ಗಯಟೆಯ ಫೆಲ್ಲೋ ಕಲ್ಫ್ರಿಟ್ಸ್ ನಾಟಕ)
ಕಥಾಸಂಕಲನಗಳು : ಹೊಸಗನ್ನಡ ಪಂಚತಂತ್ರ, ಮೂರು ಕನಸು, ಬುದ್ಧಿಯ ಕಥೆಗಳು, ಮೇಘ ಸಂದೇಶ,
ಕಥಾಸರಿತ್ಸಾಗರ, ಕ್ರಿಸ್ತನ ವಿಚಾರಣೆ, ವೈಣಿಕ
ನಾಟಕಗಳು :
ಸಾವಿತ್ರಿ
ಆತ್ಮಕತೆ :
ಕಂನಾಡ ಸಾಹಿತ್ಯಜ್ಞನ ಆತ್ಮಕಥನ
ಜೀವನಚರಿತ್ರೆ : ಮಹಾಸನ್ಯಾಸಿ (ಶಂಕರಚಾರ್ಯರು)
ಇತರ ಪ್ರಮುಖ ಕೃತಿಗಳು : ಮೀಮಾಂಸಾ ದರ್ಪಣ, ಮಹಾಭಾರತ
ಸಂಗ್ರಹ, ಉಪನಿಷತ್ತು, ರಾಮಾಯಣವೋ
ಭಗವದ್ಗೀತೆಯೋ, ಭಾರತದ ಮಹಾಪುರುಷರು, ಸಂಗ್ರಹ
ರಾಮಾಯಣ, ಯೋಗವಾಸಿಷ್ಟ, ಮೂಲಸಂಸ್ಕೃತ
ಉಪನ್ಯಾಸಗಳ ಸಂಕಲನ : ಕರ್ನಾಟಕ ಸಂಸ್ಕೃತಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ