ಶಾಸನ ಸಾಹಿತ್ಯ
ಶಾಸನ ಸಾಹಿತ್ಯ ಶಾಸನ ಪದದ ಮೂಲಪದ ಸಂಸ್ಕೃತದ ʼಶಾಸ್ʼ. ಶಾಸ್ ಎಂದರೆ ಆಜ್ಞೆ, ಶಿಕ್ಷೆ ಎಂಬರ್ಥಗಳಿವೆ. ಕರ್ನಾಟಕದಲ್ಲಿ ದೊರೆತ ಶಾಸನಗಳಲ್ಲಿ ದಾನ ಶಾಸನಗಳೇ ಹೆಚ್ಚಿನವು. ಶಾಸನಗಳನ್ನು ಕೊರೆಯುತ್ತಿದ್ದ ಶಿಲ್ಪಿಗಳನ್ನು ರೂವಾರಿಗಳು (ರೂಪಕಾರಿ) ಎನ್ನುತ್ತಿದ್ದರು. ಈ ಶಾಸನ ಬರಹಗಾರರು ತಮ್ಮನ್ನು ತಾವು ಸರಸ್ವತಿ ಗಣದಾಸಿಗಳೆಂದು ಕರೆದುಕೊಳ್ಳುತ್ತಿದ್ದರು. ಸರ್ ವಿಲಿಯಂ ಜೋನ್ಸ್ ಅವರು ವಿಜಯನಗರ ಸಾಮ್ರಾಜ್ಯದ ಅರಸರು ಕಂಚಿಯ ದೇವಾಲಯಕ್ಕೆ ದಾನ ನೀಡಿದ ವಿವರವಿದ್ದ ಸಂಸ್ಕೃತ ಶಾಸನವೊಂದನ್ನು ಶೋಧಿಸಿ A Royal Grant of Land in Carnata ಎಂಬ ಲೇಖನದಡಿಯಲ್ಲಿ ಪ್ರಕಟಿಸಿದರು. ಎಂ ಎಂ ಕಲ್ಬುರ್ಗಿಯವರ ಪ್ರಕಾರ ಇದು ಕರ್ನಾಟಕದ ಶಾಸನಗಳನ್ನು ಕುರಿತು ಪ್ರಕಟಿಸಲಾದ ಮೊದಲ ಲೇಖನವಾಗಿದೆ. ಡಾ ಪಿ ಬಿ ದೇಸಾಯಿ ಅವರು ಶಾಸನಗಳ ಅಧ್ಯಯನದ ಇತಿಹಾಸವನ್ನು ತಿಳಿವಿನ ಯುಗ, ಕತ್ತಲೆಯ ಯುಗ ಮತ್ತು ಸಂಶೋಧನೆಯ ಯುಗ ಎಂದು ವಿಂಗಡಿಸಿದ್ದಾರೆ. ಡಾ ಎಂ ಎಂ ಕಲ್ಬುರ್ಗಿ ಅವರು ಶಾಸನಾಧ್ಯಯನದ ಕಾಲವನ್ನು 3 ಹಂತಗಳಲ್ಲಿ ವಿಂಗಡಿಸಿದ್ದಾರೆ. 1 ಕರ್ನಲ್ ಮೆಕೆಂಜಿ ಯುಗ (1791 – 1837) ಕರ್ನಾಟಕದಲ್ಲಿ ಮೊದಲು ಶಾಸನಗಳ ಸಂಗ್ರಹಣೆಗೆ ತೊಡಗಿದವರು ಕರ್ನಲ್ ಮೆಕೆಂಜಿ. ಇವರು ಕರ್ನಾಟಕದಲ್ಲಿ ಸು 8026 ಶಾಸನಗಳನ್ನು ಶೋಧಿಸಿ ಸಂಗ್ರಹಿಸಿದ್ದಾರೆ 1807 ರಲ್ಲಿ ಏಷಿಯಾಟಿಕ್ ರಿಸರ್ಚ್ ಪತ್ರಿಕೆಯ 9ನೇ ಸಂಪುಟದಲ್ಲಿ ಬುಕ್ಕರಾಯನ ಶಾಸನವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರ...