ದಲಿತ ಮತ್ತು ಬಂಡಾಯ
ದಲಿತ ಮತ್ತು ಬಂಡಾಯ 1973 ರಲ್ಲಿ ಪ್ರಕಟವಾದ ದೇವನೂರು ಮಹಾದೇವರ ದ್ಯಾವನೂರು ಕಥಾಸಂಕಲನದ ಮೂಲಕ ಕನ್ನಡದಲ್ಲಿ ದಲಿತ ಸಾಹಿತ್ಯ ಪರಂಪರೆ ಆರಂಭವಾಯಿತು. ಅವರ ಪಂಚಮ ಪತ್ರಿಕೆ ಈ ನಿಟ್ಟಿನಲ್ಲಿ ದಲಿತ ಮನೋಭಾವವನ್ನು ಜಾಗೃತಿಗೊಳಿಸುವ ಪ್ರಯತ್ನ ಮಾಡಿತು. ನಂತರ 1975 ರಲ್ಲಿ ಸಿದ್ದಲಿಂಗಯ್ಯನವರ ಹೊಲೆ ಮಾದಿಗರ ಹಾಡು ಕವನ ಸಂಕಲನದಿಂದ ದಲಿತ ಸಾಹಿತ್ಯವು ಮತ್ತಷ್ಟು ತೀವ್ರ ಧೋರಣೆಯನ್ನು ತಾಳಿತು. ದೇವನೂರು ಮಹಾದೇವ ಮತ್ತು ಸಿದ್ದಲಿಂಗಯ್ಯನವರು ಹೊಸ ಸಾಹಿತ್ಯಿಕ ಭಾಷೆ ಮತ್ತು ಧೋರಣೆಗಳ ಮೂಲಕ ಹೊಸದೊಂದು ಪರಂಪರೆಗೆ ನಾಂದಿ ಹಾಡಿದರು. ದಲಿತ ಸಾಹಿತ್ಯದ ಮುಂದುವರೆದ ಭಾಗವಾಗಿ ಬಂಡಾಯ ಸಾಹಿತ್ಯ ಬಂದಿತು. ಇದರಲ್ಲಿ ಮುಖ್ಯವಾಗಿ ದಲಿತ ಸಂವೇದನೆ , ಸ್ತ್ರೀ ಸಂವೇದನೆ ಮತ್ತು ಮುಸ್ಲಿಂ ಸಂವೇದನೆ ಎಂಬ 3 ಪ್ರಕಾರದ ಸಂವೇದನೆಗಳನ್ನು ಕಾಣುತ್ತೇವೆ. ಬೆಸಗರಹಳ್ಳಿ ರಾಮಣ್ಣ (1938- ) ಕಥಾ ಸಂಕಲನಗಳು : ಕನ್ನಂಬಾಡಿ , ಕಣಜ , ಒಂದು ಹುಡುಗನಿಗೆ ಬಿದ್ದ ಕನಸು , ಗರ್ಜನೆ , ನೆಲದ ಒಡಲು , ಹರಕೆಯ ಹಣ , ಕೊಳಲು ಮತ್ತು ಖಡ್ಗ ಕಾದಂಬರಿಗಳು : ತೋಳಗಳ ನಡುವೆ , ರಕ್ತಕಣ್ಣೀರು ಕವನ ಸಂಕಲನ : ಶೋಕಗೀತೆ ಚಂದ್ರಶೇಖರ ಪಾಟೀಲ ( 1939- ) ಪತ್ರಿಕೆ : ಸಂಕ್ರಮಣ ಕವನ ಸಂಕಲನಗಳು : ಹಡಗು , ನಾಳಿ...