ಹೊಸಗನ್ನಡ ಛಂದಸ್ಸು
ಹೊಸಗನ್ನಡ ಛಂದಸ್ಸು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಸಂಪರ್ಕದಿಂದ ಕನ್ನಡದಲ್ಲಿ ಹೊಸಗನ್ನಡ ಛಂದಸ್ಸು ಬೆಳೆದು ಬಂದಿತು. 1919 ರಲ್ಲಿ ಬಿ.ಎಂ.ಶ್ರೀ ಅವರು ಇಂಗ್ಲಿಷ್ ಗೀತೆಗಳು ಕವನ ಸಂಕಲನ ಪ್ರಕಟವಾಗಿ ಹೊಸಗನ್ನಡ ಛಂದಸ್ಸಿಗೆ ನಾಂದಿ ಹಾಡಿತು. ಮುಡಿ ಷಟ್ಪದಿಗಳ 3 ಮತ್ತು 6 ನೇ ಸಾಲಿನಲ್ಲಿ ಕೊನೆಗೊಂದು ಮಾತ್ರೆ ಉಳಿದಿರುತ್ತದೆ. ಅದು ಲಘು ಅಥವಾ ಗುರು ಏನೇ ಆಗಿದ್ದರೂ ಅದನ್ನು ಗುರುವೆಂದೇ ಎನ್ನುವರು. ಆದರೆ ಹೊಸಗನ್ನಡದಲ್ಲಿ ಷಟ್ಪದಿಗಳನ್ನು ಬಳಸಿಕೊಂಡು ಬರೆದ ಆಧುನಿಕ ಕವಿಗಳು ಸಾಲಿನ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಒಂದು ಲಘು ಅಥವಾ ಗುರು ಪ್ರತ್ಯೇಕವಾಗಿ ಬರುವಂತೆ ಮಾಡಿದರು. ಆ ಒಂದೇ ಲಘು/ಗುರುವನ್ನು ಒಂದು ಪ್ರತ್ಯೇಕ ಗಣವನ್ನಾಗಿ ಗುರ್ತಿಸಿದರು. ಹೀಗೆ ಒಂದೇ ಲಘು ಅಥವಾ ಗುರು ಇರುವ ಗಣವೇ ಮುಡಿ ಎನಿಸಿತು. ಇಲ್ಲಿ 3 ಮಾತ್ರೆಯ ಗಣಗಳು ಇರುವ ಪದ್ಯದ ಸಾಲಿನಲ್ಲಿ ಬಂದ ಮುಡಿಯು 3 ಮಾತ್ರೆಯ ಗಣ ಎನಿಸುವುದು. ಹಾಗೆಯೇ 4 ಮಾತ್ರೆಯ ಗಣಗಳ ಪದ್ಯದ ಸಾಲಿನಲ್ಲಿ ಬರುವ ಮುಡಿಯು 4 ಮಾತ್ರೆಯ ಗಣ ಎನಿಸುವುದು. ಇದೇ ರೀತಿ 5 , 6 ಹೀಗೆ ಎಷ್ಟೇ ಮಾತ್ರೆಯ ಗಣಗಳಿರುವ ಪದ್ಯವಾಗಿದ್ದರೂ ಅದರಲ್ಲಿ ಬಂದ ಮುಡಿಯು ಆ ಸಾಲಿನಲ್ಲಿ ಎಷ್ಟು ಮಾತ್ರೆಯ ಗಣಗಳು ಇವೆಯೋ ಅಷ್ಟು ಮಾತ್ರೆಯ ಗಣವೆಂದು ಪರಿಗಣಿಸಲ್ಪಡುತ್ತದೆ. “ ಸೇವೆಯಿಂ | ದುದ್ವೇಗ | ದಿಂ ಚೀರಿ | ದಳ್ ” ಈ ಸಾಲನ್ನು ಗಮನಿಸಿದಾಗ 5 ಮಾತ್ರೆಯ 3 ಗಣಗಳಿದ್ದು ಕೊನೆಗೆ ಒಂದು ಗುರು ಉಳಿದಿದೆ...