ಪೋಸ್ಟ್‌ಗಳು

ಛಂದಸ್ಸು (ಪ್ರಾಸ - ಯತಿ - ಲಯ - ವಡಿ) ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪ್ರಾಸ, ಯತಿ, ಲಯ, ವಡಿ

  ಪ್ರಾಸ ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಮೊದಲಲ್ಲಿ ,  ಮಧ್ಯದಲ್ಲಿ ,  ಅಥವಾ ಕೊನೆಯಲ್ಲಿ ನಿಯತವಾಗಿ ಬರುವುದೇ ಪ್ರಾಸ. ಪದ್ಯದ ಪ್ರತಿಸಾಲಿನ ಮೊದಲ ಮತ್ತು ಎರಡನೆಯ ಸ್ವರಗಳ ನಡುವೆ ಬರುವುದು ಆದಿ ಪ್ರಾಸ. ಪ್ರತಿಸಾಲಿನ ಮಧ್ಯದಲ್ಲಿ ಬರುವುದು ಮಧ್ಯ ಪ್ರಾಸ. ಪ್ರತಿಸಾಲಿನ ಅಂತ್ಯದಲ್ಲಿ ಬರುವುದು ಅಂತ್ಯ ಪ್ರಾಸ. ಶ್ರೀ ವಿಜಯನು ಶಬ್ದಾಲಂಕಾರದೊಳ್ ಅತಿಶಯಮೀ ಕನ್ನಡಕ್ಕೆ ಸತತಂ ಪ್ರಾಸಂ ಎಂದು ಹೇಳಿದ್ದಾನಲ್ಲದೆ, ವಿನುತಪ್ರಾಸ, ಶಾಂತೋಪನತಪ್ರಾಸ, ವರ್ಗೋದಿತಪ್ರಾಸ, ಸಮೀಪಗತಪ್ರಾಸ, ಅನುಗತಪ್ರಾಸ, ಅಂತರ್ಗತಪ್ರಾಸ ಎಂಬ ಆರು ಬಗೆಯ ಪ್ರಾಸಗಳಾಗಿ ವಿಂಗಡಿಸಿದ್ದಾನೆ. ಇದೇ ಕವಿರಾಜಮಾರ್ಗದಲ್ಲಿ ಮುಂದುವರೆದದು ಅಲ್ಪಪ್ರಾಣಪ್ರಾಸ, ಮಹಾಪ್ರಾಣಾಪ್ರಾಸ ಮತ್ತು ಮಿತಾಕ್ಷರಪ್ರಾಸ ಎಂಬ ಮೂರು ಬಗೆಯ ಪ್ರಾಸಗಳನ್ನು ಮತ್ತು ಯುಗ್ಮವರ್ಣಪ್ರಾಸ, ತ್ರ್ಯಕ್ಷರಪ್ರಾಸ, ಅನುಪ್ರಾಸ ಮತ್ತು ಅಂತ್ಯಪ್ರಾಸಗಳೆಂಬ ನಾಲ್ಕು ರೀತಿಯ ಪ್ರಾಸಗಳನ್ನು ಸಹ ಹೆಸರಿಸಿದ್ದಾನೆ. ಕವಿರಾಜಮಾರ್ಗ - ಎರಡನೆಯ ಪರಿಚ್ಛೇದ ಪಾದದೊಳ್ ಎರಡನೆಯ ಅಕ್ಕರಮ್  ಆದರದಿಂದ ಆದುದಾವುದು ಅದನರಿದನಿತುಂ ಪಾದದೊಳ್ ಇಡುವುದು ಅದಕ್ಕುಂ ಭೇದೋಕ್ತಿಕ್ರಮ ವಿಚಾರಿತೋರುಪ್ರಾಸಂ ಪ್ರಾಸ ಪ್ರಕಾರಗಳು  ಈಶ್ವರ ಕವಿಯು ತನ್ನ ಕವಿಜಿಹ್ವಾಬಂಧನ ಕೃತಿಯಲ್ಲಿ 13 ಬಗೆಯ ಪ್ರಾಸಗಳನ್ನು ಕುರಿಯು ಹೇಳಿದ್ದಾನೆ, ಪ್ರಾಸದ ಕುರಿತು ಅವನು ಹೇಳಿರುವ ಸೂತ್ರ ಮೊದಲಕ್ಕರದಿಂ ಮುಂತಣದದು ನೋ...