ಪೋಸ್ಟ್‌ಗಳು

ಹೊಸಗನ್ನಡ - ಪ್ರಗತಿಶೀಲ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪ್ರಗತಿಶೀಲ ಸಾಹಿತ್ಯ

ಪ್ರಗತಿಶೀಲ   ಸಾಹಿತ್ಯ 1935 ರಲ್ಲಿ ಲಂಡನ್ ನಲ್ಲಿ ಸಜ್ಜಾದ್ ಜಾಹಿರ್ ಅವರ ನೇತೃತ್ವದಲ್ಲಿ ಫ್ಯಾಸಿಸ್ಟ್‍ಗಳ ವಿರುದ್ಧ ಸಮ್ಮೇಳನವೊಂದು ನಡೆಯಿತು. 1936 ರಲ್ಲಿ ಲಖ್ನೌನಲ್ಲಿ ಪ್ರೇಮಚಂದ್ ರ ಅಧ್ಯಕ್ಷತೆಯಲ್ಲಿ “ ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಂಘ ” ದ ಮೊದಲ ಅಧೀವೇಶನ ನಡೆಯಿತು. ಈ ಅಧಿವೇಶನಕ್ಕೆ ಕರ್ನಾಟಕದಿಂದ ಶ್ರೀರಂಗ , ನಿರಂಜನ , ವಿ ಎಂ ಇನಾಂದಾರ್ , ಕೃಷ್ಣಕುಮಾರ ಕಲ್ಲೂರ ಮುಂತಾದವರು ಭಾಗವಹಿಸಿದ್ದರು. 1943 ರಲ್ಲಿ ಬೆಂಗಳೂರಿನಲ್ಲಿ ಅ ನ ಕೃ ಅವರ ಅಧ್ಯಕ್ಷತೆಯಲ್ಲಿ ಪ್ರಗತಿಶೀಲರ ಒಂದು ಸಮ್ಮೇಳನ ನಡೆಯಿತು. ಕಥೆ ಮತ್ತು ಕಾದಂಬರಿಗಳು ಪ್ರಗತಿಶೀಲ ಸಾಹಿತಿಗಳ ಪ್ರಮುಖ ಅಭಿವ್ಯಕ್ತಿ ಮಾಧ್ಯಮಗಳಾಗಿದ್ದವು. ನಾಟಕ ಸಾಹಿತ್ಯವನ್ನು ಶ್ರೀರಂಗ , ನಿರಂಜನರು ಸ್ವಲ್ಪಮಟ್ಟಿಗೆ ಬಳಸಿಕೊಂಡರು. ಸಾಹಿತ್ಯವೆಂಬುದು ಸಮಾಜದಲ್ಲಿನ ಶ್ರೀಸಾಮಾನ್ಯನ ನೋವು , ಕಷ್ಟ , ಬದುಕು , ಶೊಷಣೆ ಇವುಗಳನ್ನು ಕುರಿತು ರಚನೆಯಾಗಬೇಕು. ಸಮಾಜದಲ್ಲಿನ ವಾಸ್ತವ ಸಂಗತಿಗಳು ಚಿತ್ರಿತವಾಗಬೇಕು ಎಂದು ಪ್ರಗತಿಶೀಲ ಸಾಹಿತ್ಯ ಪ್ರತಿಪಾದಿಸಿತು. ಶ್ರೀರಂಗ ( 1904-1984) ಇವರ ನಿಜನಾಮ ಆದ್ಯರಂಗಾಚಾರ್ಯ ನಾಟಕಗಳು :  ಮುಕ್ಕಣ್ಣ , ವಿರಾಟಪುರುಷ , ಜರಾಸಂಧ , ನರಕದಲ್ಲಿ ನರಸಿಂಹ , ಸರ್ಕಸ್ಸಿನ ಸರಸ್ವತಿ , ಪ್ರಪಂಚ ಪಾಣಿಪತ್ತು ನಾಟಕಗಳ ವಸ್ತು ನಿರುದ್ಯೋಗ ಮತ್ತು ಸಂಪ್ರದಾಯ ಮನೋಭಾವ-ಪ್ರಗತಿಪರ ಧೋರಣೆಗಳ ನಡುವಿನ ಸಂಘರ್ಷ ಕುರಿತಾದುದಾಗಿವೆ. ಸ್ವಾ...