ದಾಸ ಸಾಹಿತ್ಯ
ದಾಸ ಸಾಹಿತ್ಯ ಪ್ರಮುಖ ಕೀರ್ತನಕಾರರ ಕೃತಿಗಳು , ಕೀರ್ತನೆಗಳು ಮತ್ತು ಅಂಕಿತನಾಮಗಳು ನರಹರಿ ತೀರ್ಥರು - (ಕಾಲ ಸು. 1280 -1333) ಅಂಕಿತನಾಮ : ಶ್ರೀ ರಘುಪತಿ , ನರಹರಿಪೂರ್ಣ ಮೂಲನಾಮ ಸ್ವಾಮಿಶಾಸ್ತ್ರಿ ದಾಸಸಾಹಿತ್ಯ ಪಿತಾಮಹಾ ಎಂದೇ ಖ್ಯಾತಿವೆತ್ತರು ಪ್ರಮುಖ ಕೀರ್ತನೆಗಳು " ಎಂತು ಮರುಳಾದೆ ನಾನೆಂತು ಮರುಳಾದೆ" " ಹರಿಯೇ ಇದು ಸರಿಯೇ ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ" ಶ್ರೀ ಪಾದರಾಯ - (ಕಾಲ ಸು. 1404 -1502) ಅಂಕಿತನಾಮ : ರಂಗವಿಠಲ ನಿಜನಾಮ ಲಕ್ಷ್ಮೀನಾರಾಯಣ ಮುನಿ ಕೃತಿಗಳು : ಭ್ರಮರಗೀತೆ , ವೇಣುಗೀತೆ ಮತ್ತು ಗೋಪಿಗೀತೆ ಪ್ರಮುಖ ಕೀರ್ತನೆಗಳು " ಭಕ್ತಿಬೇಕು , ವಿರಕ್ತಿಬೇಕು , ಶಕ್ತಿಬೇಕು ಮುಂದೆ ಮುಕ್ತಿ ಬಯಸುವವಗೆ" " ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ ಎತ್ತದೆ ನೆಲಕೆ ಬಿಸುಡುವರೆ" " ಯಾಕೆ ಪುಟ್ಟಿಸಿದೆ ನೀ ಸಾಕಲಾರದೆ" " ನಾ ನಿನಗೇನು ಬೇಡುವುದಿಲ್ಲ , ಎನ್ನ ಹೃದಯ ಮಂಟಪದೊಳು" " ಶಿರ ನಿನ್ನ ಚರಣದಲ್ಲೆರಗಲಿ" ವ್ಯಾಸರಾಯರು - (ಕಾಲ ಸು. 1447 - 1539) ಅಂಕಿತನಾಮ : ಶ್ರೀ ಕೃಷ್ಣ ಮೂಲನಾಮ ಯತಿರಾಜ ಪ್ರಮುಖ ಕೀರ್ತನೆಗಳು " ದಾವಾನಲನ ತಪ್ಪಿಸಿ ಕಾಡಾನೆಯ ದೇವಗಂಗೆಗೆ ತಂದು ಹೊಗಿಸಿದಂತೆ" " ಗಾತ್ರವೇ ಮಂದಿರ , ಹರಿದಯವೇ ಮಂಟಪ ,...