ಅಂಶಗಣದ ಛಂದೋರೂಪಗಳು
ಅಂಶಗಣದ ಛಂದೋರೂಪಗಳು ಸಾಂಗತ್ಯ ಕುಮುದೇಂದುವಿನ ಸಿರಿಭೂವಲಯ ಕೃತಿಯಲ್ಲಿ ಸಾಂಗತ್ಯದ ಕುರಿತಾದ ಪದ್ಯಗಳು ಮೊದಲ ಬಾರಿಗೆ ಕಂಡುಬರುತ್ತವೆ. 1410 ರಲ್ಲಿದ್ದ ದೇಪರಾಜನ ಸೊಬಗಿನ ಸೋನೆ ಕೃತಿಯು ಸಾಂಗತ್ಯದಲ್ಲಿ ರಚಿತವಾಗಿದ್ದು , ಮೊದಲ ಉಪಲಬ್ದ ಸಾಂಗತ್ಯ ಕೃತಿ ಎನಿಸಿದೆ. ಪದ್ಯದಲ್ಲಿ ನಾಲ್ಕು ಸಾಲುಗಳಿರುತ್ತವೆ. ಮೊದಲ ಸಾಲು ಹಾಗೂ ಮೂರನೇ ಸಾಲು ಸಮವಾಗಿರುತ್ತವೆ. ಹಾಗೇ ಎರಡನೇ ಸಾಲು ಹಾಗೂ ನಾಲ್ಕನೇ ಸಾಲು ಸಮವಾಗಿರುತ್ತವೆ. ಮೊದಲ ಸಾಲು ನಾಲ್ಕು ವಿಷ್ಣು ಗಣಗಳಿರುತ್ತವೆ. ಎರಡನೇ ಸಾಲಿನಲ್ಲಿ ಎರಡು ವಿಷ್ಣು ಹಾಗೂ ಒಂದು ಬ್ರಹ್ಮಗಣವಿರುತ್ತದೆ. ಇದೊಂದು ಅರ್ಧ ಸಮವೃತ್ತ ಎನಿಸಿದೆ. ಕೆಲವೊಮ್ಮೆ ವಿಷ್ಣುಗಣಗಳ ಸ್ಥಾನದಲ್ಲಿ ಬ್ರಹ್ಮಗಣಗಳು ಸಹ ಬರಬಹುದು U U UU|_ UU| _U U| UU _ U ಅಡಿಗಡಿ | ಗಗ್ರಜ | ರೆಲ್ಲರ | ಬೆಸಗೊಂಡು U U UU| _ UU| _ U ಮೃಡರಿಪು | ವಾಪುರ | ದಿಂದ U U _ U| _ UU| UU UU| _ UU ಕಡುವೇಗ | ದಿಂದವೆ | ತೆರಳಿದ | ನಾರದ U UU U| _ UU| _ U ನೊಡನೆ ವಿ | ಮಾನವ | ನೇರಿ ಪ್ರಮುಖ ಸಾಂಗತ್ಯಕೃತಿಗಳು ಸೊಬಗಿನ ಸೋನೆ (1410 ದೇಪರಾಜ) ತ್ರಿಪುರದಹನಾ ಸಾಂಗತ್ಯ , ಅಂಜನಾ ಚರಿತ್ರೆ (1472 ಶಿಶುಮಾಯಣ) ಪರಮಾನುಭವ ಭೋದೆ (1500 ನಿಜಗುಣ ಶಿವಯ...