ಪೋಸ್ಟ್‌ಗಳು

ಅಲಂಕಾರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಲಂಕಾರಗಳು

  ಅಲಂಕಾರಗಳು ಭಾಮಹನು ತನ್ನ ಕಾವ್ಯಾಲಂಕಾರ ಕೃತಿಯ 3ನೇ ಪರಿಚ್ಛೇದದಲ್ಲಿ ಅಲಂಕಾರಗಳ ಕುರಿತು ವಿವರಿಸಿದ್ದಾನೆ. ದಂಡಿ ಕವಿಯು ತನ್ನ ಕಾವ್ಯಾದರ್ಶ ಕೃತಿಯ 2ನೇ ಪರಿಚ್ಛೇದದಲ್ಲಿ ಅರ್ಥಾಲಂಕಾರಗಳ ಬಗ್ಗೆ ಮತ್ತು 3ನೇ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ಬಗ್ಗೆ ವಿವರಿಸಿದ್ದಾನೆ. ಅಲಂಕಾರದ ಕುರಿತು ದಂಡಿಯು ಕಾವ್ಯಶೋಭಾಕರನ್ ಧರ್ಮಾನಲಂಕಾರಾನ್ ಪ್ರಚಕ್ಷತೇ ಎಂದಿದ್ದಾನೆ. ಅರ್ಥಾಲಂಕಾರಗಳು ಉಪಮಾಲಂಕಾರ ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ ಉದಾಹರಣೆ : ಮಗುವಿನ ಮುಖವು ಚಂದ್ರನಂತೆ ಮನೋಹರವಾಗಿದೆ. ಉಪಮೇಯ : ಮಗುವಿನ ಮುಖ ಉಪಮಾನ : ಚಂದ್ರ ಸಮಾನಧರ್ಮ (ಸಾಧಾರಣಧರ್ಮ) : ಮಗುವಿನ ಮುಖ ಮತ್ತು ಚಂದ್ರನಲ್ಲಿರುವ ಆಹ್ಲಾದಕತ್ವ ಉಪಮಾವಾಚಕ : ಚಂದ್ರನ ಮುಖದಂತೆ ಎಂಬಲ್ಲಿರುವ ಅಂತೆ ಎಂಬ ಶಬ್ದವೇ    ಉಪಮಾಲಂಕಾರದಲ್ಲಿ ಪೂರ್ಣೋಪಮಾಲಂಕಾರ ಮತ್ತು ಲುಪ್ತೋಪಮಾಲಂಕಾರ ಎಂಬ ಎರಡು ವಿಧಗಳಿವೆ , ಪೂರ್ಣೋಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಮತ್ತು ಉಪಮಾವಾಚಕ ಶಬ್ದಗಳಿರುತ್ತವೆ ಆದ್ದರಿಂದ ಇದನ್ನು ಪೂರ್ಣೋಪಮಾಲಂಕಾರ ಎನ್ನುವರು. ಉದಾಹರಣೆ : ಸೀತೆಯ ಮುಖ ಕಮಲದಂತೆ ಅರಳಿತು ಉಪಮೇಯ : ಸೀತೆಯ ಮುಖ ಉಪಮಾನ : ಚಂದ್ರ ಸಮಾನ ಧರ್ಮ : ಅರಳುವಿಕೆ ಉಪಮಾವಾಚಕ ಶಬ್ದ : ಅಂತೆ ಲುಪ್ತೋಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಅಥವಾ ಉಪಮಾವಾಚಕ ಶಬ್ದ ಇವುಗಳಲ್ಲಿ ಯಾವುದಾದರೊಂದು ಲುಪ್ತವಾಗಿರುತ್ತದೆ (ಇರುವುದಿಲ್...