ನವೋದಯ ಭಾಗ 2

ನವೋದಯ  ಭಾಗ 2

ದ ರಾ ಬೇಂದ್ರೆ (1896-1981)

ಅಂಬಿಕಾತನಯದತ್ತ ಇವರ ಕಾವ್ಯನಾಮ. ವರಕವಿಶಬ್ದ ಗಾರುಡಿಗಕನ್ನಡದ ಠಾಗೂರ್ ಎಂದು ಹೆಸರಾದವರು. ಧಾರವಾಡದಲ್ಲಿ ಗೆಳೆಯರ ಗುಂಪು ಎಂಬ ಸಾಹಿತ್ಯಿಕ ಸಂಘವನ್ನು ಕಟ್ಟಿದರು

ಪತ್ರಿಕೆ : ಜಯ ಕರ್ನಾಟಕ

ಕವನ ಸಂಕಲನ : ಅರಳು ಮರಳು (ಕೇಂದ್ರ ಸಾಹಿತ್ಯ ಅಕಾಡೆಮಿ)ನಾಕುತಂತಿ (ಜ್ಞಾನಪೀಠ), ಗರಿ, ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಹಾಡುಪಾಡು, ಗಂಗಾವತರಣ, ಇದು ನಭೋವಾಣಿ, ಮತ್ತೆ ಶ್ರಾವಣಾ ಬಂತು, ಮೂರ್ತಿ ಮತ್ತು ಕಾಮಕಸ್ತೂರಿ, ಸೂರ್ಯಪಾನ, ಉತ್ತರಾಯಣ, ಮುಗಿಲಮಲ್ಲಿಗೆ ತಾ ಲೆಕ್ಕಣಕಿ ತಾ ದೌತಿ, ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ, ನಮನ, ಸಂಚಯ, ಯಕ್ಷ ಯಕ್ಷಿ, ಮರ್ಯಾದೆ, ಶ್ರೀಮಾತಾ, ಬಾ ಹತ್ತರ, ವಿನಯ, ಒಲವೇ ನಮ್ಮ ಬದುಕು, ಚತುರೋಕ್ತಿ ಮತ್ತು ಇತರ ಕವಿತೆಗಳು, ಪರಾಕಿ, ಕಾವ್ಯ ವೈಖರಿ, ಬಾಲಬೋಧೆ, ಚೈತನ್ಯದ ಪೂಜೆ, ಪ್ರತಿಬಿಂಬಗಳು

ಅವರ ನರಬಲಿ ಕವನದಲ್ಲಿ ಬಂಗಾಳದಲ್ಲಿ ನಡೆದ ಮಾರಣಹೋಮದ ಚಿತ್ರಣವಿದೆ.

ಕಥಾಸಂಕಲನ : ನಿರಾಭರಣ ಸುಂದರಿ

ಅನುವಾದ: ಮೇಘದೂತ (ಕಾಳಿದಾಸನ ಮೇಘದೂತದ ಕನ್ನಡ)

ವಿಮರ್ಶೆ : ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಕವಿ ಲಕ್ಷ್ಮೀಶನ ಜೈಮಿನಿ ಭಾರತಕ್ಕೆ ಮುನ್ನುಡಿ, ಮಹಾರಾಷ್ಟ್ರ ಸಾಹಿತ್ಯ, ಕಾವ್ಯೋದ್ಯೋಗ, ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು, ಕುಮಾರವ್ಯಾಸ ಪುಸ್ತಿಕೆ

ಸಾಹಿತ್ಯದ ವಿರಾಟ್ ಸ್ವರೂಪ ಕೃತಿಯು ಬೇಂದ್ರೆಯವರ ಸಮಗ್ರ ಲೇಖನಗಳ ಸಂಗ್ರಹವಾಗಿದೆ (ಸಂಪಾದನೆ - ವಾಮನ ಬೇಂದ್ರೆ).

ಅಸಂಗತ ನಾಟಕಗಳು : ಉದ್ಧಾರ (ಹರಿಜನರ ಸಮಸ್ಯೆಯನ್ನು ಕುರಿತಾದುದು), ಹೊಸ ಸಂಸಾರದೆವ್ವದ ಮನೆ, ಸಾಯೋ ಆಟನಗೆಯ ಹೊಗೆ ಮುಂತಾದವು.

1943 ರಲ್ಲಿ ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಬಿ ಪುಟ್ಟಸ್ವಾಮಯ್ಯ (1897-1984)

ಪತ್ರಿಕೆ : ಪ್ರತಿಭಾ

ನಾಟಕಗಳು : ಕುರುಕ್ಷೇತ್ರ, ದಶಾವತಾರ, ಸಂಪೂರ್ಣ ರಾಮಾಯಣ, ಅಕ್ಕಮಹಾದೇವಿ, ಷಾಜಹಾನ್, ಗೌತಮಬುದ್ಧ, ಚಿರಕುಮಾರ ಸಭಾ, ಯಜ್ಞಸೇನಿ, ಸತೀ ತುಳಸಿ, ಪ್ರಚಂಡ ಚಾಣಕ್ಯ, ಜಯದೇವ, ಅಭಿನೇತ್ರಿ, ಬಭ್ರುವಾಹನ, ಬಿಡುಗಡೆಯ ಬಿಚ್ಚುಗತ್ತಿ, ರಾಣಿ, ತಾರಕವಧೆ, ಶಾಂತಿದೂತ, ಬಾಹುಬಲಿ, ಹಿಟ್ಟಿನ ಕೋಳಿ, ಮೋಹಮುಕ್ತಿ  ಮತ್ತು ಇವನಲ್ಲ

ಕಾದಂಬರಿಗಳು : ರೂಪಲೇಖಾ, ಅಭಿಸಾರಿಕೆ, ಸುಧಾಮಯೀ, ರತ್ನಹಾರ, ಚಾಲುಕ್ಯ ತೈಲಪ, ತೇಜಸ್ವಿನಿ, ನಾಟ್ಯ ಮೋಹಿನಿ, ಪ್ರಭುದೇವ, ಉದಯರವಿ, ರಾಜ್ಯಪಾಲ, ಕಲ್ಯಾಣೇಶ್ವರ, ನಾಗಬಂಧ, ಮುಗಿಯದ ಕನಸು, ಕ್ರಾಂತಿ ಕಲ್ಯಾಣ (ಬಸವಣ್ಣನವರ ಜೀವನ ಮತ್ತು ಸಾಧನೆ-ಕೇಂದ್ರ ಸಾಹಿತ್ಯ ಅಕಾಡೆಮಿ), ಹೂವು ಕಾವು, ಪ್ರಿಯದರ್ಶಿ ರಾಜ, ಅರ್ಧಾಂಗಿ

ಕಥಾಸಂಕಲನಗಳು : ಧೃವ ಸ್ವಾಮಿನಿಇತಿಹಾಸದ ಪುಟಗಳಿಂದ

ಮಕ್ಕಳ ಸಾಹಿತ್ಯ (ನಾಟಕ) : ಚಂಗಲಿಯ ಬಲಿದಾನಶ್ರೀ ದುರ್ಗಾ

 

ನಾ ಕಸ್ತೂರಿ (1897-1987)

ನಾರಾಯಣ ಕಸ್ತೂರಿ ರಂಗನಾಥ ಶರ್ಮ ಎಂಬುದು ಇವರ ನಿಜನಾಮ

ಅನುವಾದ : ಪಾತಾಳದಲ್ಲಿ ಪಾಪಚ್ಚಿ (ಚಾರ್ಲ್ಸ್ ಲುಟ್ವಿಡ್ಜ್ ಡಾಡ್ಜ್ ಸನ್ ರ ಆ್ಯಲಿಸ್ ಇನ್ ವಂಡರ್ ಲ್ಯಾಂಡ್ ಕೃತಿಯ ಅನುವಾದ)ಮತ್ತು ವಿಕ್ಟರ್ ಹ್ಯುಗೊನ ಲೆ ಮಿಸರಬಲ್ ಕೃತಿಯನ್ನು ಫ್ರೆಂಚ್ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ

ನಾಟಕಗಳು : ಕಾಡಾನೆ, ಗಗ್ಗಯ್ಯನ ಗಡಿಬಿಡಿ, ವರಪರೀಕ್ಷೆ, ಹೆಡ್ ಮಾಸ್ತರ ಮಗಳು, ತಾಪತ್ರಯ ತಪ್ಪಿತ್ತು, ಬ್ಯಾಂಕಿನ ದಿವಾಳಿ, ರಾಮಕೃಷ್ಣಯ್ಯನ ದರ್ಬಾರು, ಷಹಜಹಾನ್

ಹಾಸ್ಯ ಬರಹಗಳು : ಗಾಳಿಗೋಪುರ, ಅನರ್ಥಕೋಶ, ರಂಗನಾಯಕಿ, ಕೆಂಪ ಮೈಸೂರಿಗೆ ಹೋದದ್ದು, ಅಲ್ಲೋಲ-ಕಲ್ಲೋಲ, ಉಪಾಯವೇದಾಂತ, ಶಂಖವಾದ್ಯ

ಕಾದಂಬರಿಗಳು : ಸಂಪತ್ತುಚೆಂಗೂಲಿ ಚೆಲುವಚಕ್ರದೃಷ್ಟಿಡೊಂಕುಬಾಲ

ಅನುವಾದ : ನೊಂದಜೀವಿ

ಇತರ ಪ್ರಮುಖ ಕೃತಿಗಳು : ಅಶೋಕಗೃಹದಾರಣ್ಯಕಮದುವೆದಿಲ್ಲೀಶ್ವರನ ಚರಿತೆ

 

ಎಸ್ ವಿ ರಂಗಣ್ಣ (1898-1987)

ಹೊಸಗನ್ನಡದಲ್ಲಿ ನೂತನ ವಿಮರ್ಶಾಮಾರ್ಗಕ್ಕೆ ನಾಂದಿ ಹಾಡಿದರ. ಇವರು ದುರಂತ ನಾಟಕಗಳನ್ನು ಗಂಭೀರ ನಾಟಕಗಳೆಂದು ಕರೆದರು.

ಪ್ರಮುಖ ಲೇಖನಗಳು : ಕನ್ನಡ ಸಾಹಿತ್ಯದ ಗುಣದೋಷಗಳುಪ್ರಬುದ್ಧ ಕರ್ನಾಟಕದ ಶೈಲಿಸಾಹಿತ್ಯದ ಅವಶ್ಯಕತೆ ಮುಂತಾದವು

ವಿಮರ್ಶಾಪ್ರಬಂಧ ಕೃತಿಗಳು : ರನ್ನಕವಿ ಪ್ರಶಸ್ತಿ (ಪ್ರಾಚೀನ ಹಿರಿಯ ಕವಿಗಳ ಶೈಲಿಯ ವಿಶ್ಲೇಷಣೆ), ಹೊನ್ನಶೂಲ (ಮುದ್ದಣನ ರಾಮಾಶ್ವಮೇಧದ ವಿಮರ್ಶೆ ಕುರಿತ ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂಬುದು ಈ ಕೃತಿಯಲ್ಲಿನ ಪ್ರಸಿದ್ಧ ಲೇಖನ), ಕಾಳಿದಾಸನ ನಾಟಕ ವಿಮರ್ಶೆ (ಮಾಳವಿಕಾಗ್ನಿಮಿತ್ರ, ಶಾಕುಂತಲ, ವಿಕ್ರಮೋರ್ವಶಿಯ), ಕೋಲ್ ಕೋಲ್ ಕೂಡಿ ಬರಲಿ (ಜನಪದ ಸಾಹಿತ್ಯ ವಿಮರ್ಶೆ), ಕವಿಕಥಾಮೃತ (ಪಾಶ್ಚಾತ್ಯ ಕವಿಗಳ ವಿವರ), ಕುಮಾರವ್ಯಾಸ, ಕನ್ನಡ ಸಾಹಿತ್ಯದಲ್ಲಿ ಹಾಸ್ಯ, ಪಾಶ್ಚಾತ್ಯ ಗಂಭೀರ ನಾಟಕಗಳು, ನಾಡು-ನುಡಿ, ಶೈಲಿ, ನಾಟುನುಡಿ

ರಂಗಬಿನ್ನಪ (ವಚನ ಮತ್ತು ಮುಕ್ತಕಗಳ ಸಂಕಲನ ಕೃತಿ - ಕೇಂದ್ರ ಸಾಹಿತ್ಯ ಅಕಾಡೆಮಿ) ಈ ಕೃತಿಯ ಮುನ್ನುಡಿಯಲ್ಲಿ ಲೇಖಕರು ತನ್ನನ್ನು ತಾನು ವಚನದಾಸ ಎಂದು ಹೇಳಿಕೊಂಡಿದ್ದಾರೆ

ನಾಟಕಗಳು : ಹರಿಶ್ಚಂದ್ರ, ಉತ್ತರಕುಮಾರ

ಇಂಗ್ಲಿಷ್ ಕೃತಿಗಳು : ಬಿ ಎಂ ಶ್ರೀಕಂಠಯ್ಯಓಲ್ಡ್ ಟೇಲ್ಸ್ ರಿಟೋಲ್ಡ್ಆನ್ ದಿ ಸೆಲ್ಫ್ದಿ ಲೇಡಿ ಅಂಡ್ ದಿ ರಿಂಗ್

ಅಭಿನಂದನಾ ಗ್ರಂಥ : ಬಾಗಿನ

1976 ರಲ್ಲಿ ಶಿವಮೊಗ್ಗದಲ್ಲಿ ನಡೆದ 49 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಕೆ ವಿ ಅಯ್ಯರ್ (1898-1980)

ಅನುವಾದ : ಪ್ರಜಾಪ್ರಗತಿ (ಆ್ಯನ್ ಎನಿಮಿ ಆಫ್ ದ ಪೀಪಲ್)ಪತಿಯ ಕೈಗೊಂಬೆ (ಡಾಲ್ಸ್ ಹೌಸ್)ಮಹಾಶಿಲ್ಪಿ (ಮಾಸ್ಟರ್ ಬಿಲ್ಡರ್) ಇವು ಮೂರು ಇಬ್ಸನ್ ಕವಿಯ ಕೃತಿಗಳು. ವರಪರೀಕ್ಷೆ (ಆಲಿವರ್ ಗೋಲ್ಡ್ ಸ್ಮಿತ್ ಕವಿಯ ಷಿ ಸ್ಟೂಪ್ಸ್ ಟು ಕಾಂಕರ್)

ಕಾದಂಬರಿಗಳು : ಶಾಂತಲಾ (ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲಾ)ರೂಪದರ್ಶಿ (ಇಟಲಿಯ ಪ್ರಸಿದ್ಧ ಕಲಾವಿದ ಮೈಖೆಲೇಂಜಲೋನನ್ನು ಆಧರಿಸಿದ)ಲೀನಾ (ರೂಪದರ್ಶಿಯ ಮುಂದುವರೆದ ಭಾಗ)

ಕಥಾಸಂಕಲನಗಳು : ಸಮುದ್ಯತಾಮಹಾಶಿಲ್ಪವರಪರೀಕ್ಷೆ

ಜೀವನ ಚರಿತ್ರೆ : ಕೈಲಾಸಂ ಸ್ಮರಣೆ

 

ಸಂಸ (1898-1939)

ಎ ಎನ್ ಸ್ವಾಮಿ ವೆಂಕಟಾದ್ರಿ ಐಯ್ಯರ್ ಎಂಬುದು ಇವರ ನಿಜನಾಮ

ಕಾದಂಬರಿಗಳು : ಕೌಶಲಶೆರ್ಲಾಕ್ ಹೋಮ್ಸ್ ಇನ್ ಜೈಲ್

ಕವನ ಸಂಕಲನಗಳು : ಶ್ರೀಮಂತೋದ್ಯಾನವರ್ಣನಂ, ಸಂಸ ಪದಮ್, ಈಶ ಪ್ರಕೋಪನ, ಅಚ್ಚುಂಬ ಶತಕ, ನರಕ ದುರ್ಯೋಧನೀಯಮ್

ನಾಟಕಗಳು : ಸುಗುಣ ಗಂಭೀರ, ವಿಗಡ ವಿಕ್ರಮರಾಯ, ವಿಜಯ ನಾರಸಿಂಹ, ಬಿರುದೆಂತಂಬರ ಗಂಡ, ಬೆಟ್ಟದ ಅರಸು, ಮಂತ್ರಶಕ್ತಿ ನಾಟಕಗಳು  ಮೈಸೂರು ಅರಸರ ಕಾಲದಲ್ಲಿ ನಡೆದ ಘಟನೆಯ ಆಧಾರಿತವಾದವುಗಳು

ಮಹಾಪ್ರಭು, ದೃಷ್ಟಿದಾನ, ಶರಣಾಗತ ಪರಿಪಾಲಕ, ರತ್ನಸಿಂಹಾಸನಾರೋಹಣ, ಮುತ್ತಿನ ಮೂಗುತಿ, ರಾಜವಿಭವೋತ್ಸವ, ತೆರಕಣಾಂಬಿ, ಅಮಂಗಳಾವಾಪ, ಬೊಕ್ಕಳಿಕ, ಜಗಜಟ್ಟಿ, ಚಲಗಾರ ಚನ್ನಯ್ಯ, ಮುಸ್ತಫ ವಿಜಯ, ತುಂಗ ನಿರ್ಯಾತನ, ನಂಜುಂಡ ನರಿ, ಶಪಥ ಮಂಗಳ, ಹಂಗಳ, ಸಂಚಿಯ ಹೊನ್ನಿ ಇತರ ನಾಟಕಗಳು

 

ವಿ ಸೀತಾರಾಮಯ್ಯ (1899-1983)

ಕವನ ಸಂಕಲನಗಳು : ಗೀತಗಳು, ದೀಪಗಳು, ನೆಳಲು-ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆ-ಪಾಡು, ಕದಂಬ, ಅರಲು-ಬರಲು (ಕೇಂದ್ರ ಸಾಹಿತ್ಯ ಅಕಾಡೆಮಿ), ಅದಲು-ಬದಲು, ಹಗಲು-ಇರುಳು

ಕಾದಂಬರಿಗಳು : ಮಾದನ ಮಗಳು (ಅಸ್ಪೃ ಶ್ಯತಾ ಸಮಸ್ಯೆ)

ಲಲಿತ ಪ್ರಬಂಧ : ಬೆಳದಿಂಗಳುಸೀಕರಣೆಮಹನೀಯರುಕಾಲೇಜ್ ದಿನಗಳು

ನಾಟಕಗಳು : ಆಗ್ರಹಶ್ರೀಶೈಲ ಶಿಖರಸೊಹ್ರಾಬ್ ರುಸ್ತುಮ್ (ಮ್ಯಾಥ್ಯೂ ಆರ್ನಾಲ್ಡ್ ನ ಕಥನ ಕವನ ನಾಟಕದ ಅನುವಾದ) ಚ್ಯವನ (ಆಧುನಿಕತೆಯ ದುಷ್ಪರಿಣಾಮ)ಆಗ್ರಹ

ವ್ಯಕ್ತಿಚಿತ್ರ : ಹಿರಿಯರು-ಗೆಳೆಯರು

ವಿಮರ್ಶೆ : ಅಶ್ವತ್ಥಾಮನ್, ಅಭಿಜ್ಞಾನ ಶಾಕುಂತಲ ನಾಟಕ ವಿಮರ್ಶೆ, ಕವಿ ಕಾವ್ಯ ದೃಷ್ಟಿ, ಸಾಹಿತ್ಯ : ಸಂಪ್ರದಾಯ ಮತ್ತು ಹೊಸಮಾರ್ಗ, ಕರ್ನಾಟಕ ಕಾದಂಬರಿ, ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ (ಐ ಎ ರಿಚರ್ಡ್ಸನ ಕೃತಿ), ವಾಲ್ಮೀಕಿ ರಾಮಾಯಣ

ಉಪನ್ಯಾಸಗಳ ಸಂಗ್ರಹ : ಕಲಾನುಭವ

ಅನುವಾದ : ಪಿಗ್ಮಿಲಿಯನ್ಮೇಜರ್ ಬಾರ್ಬರ್ಬಂಗಾಳಿ ಸಾಹಿತ್ಯ ಚರಿತ್ರೆಮಾಬಿಡಿಕ್ ಇತ್ಯಾದಿ

ಸಂಪಾದನೆ : ಕವಿರಾಜಮಾರ್ಗ, ವಡ್ಡಾರಾಧನೆ, ವ್ಯಾಕರಣಗಳು, ಯಕ್ಷಗಾನ, ಕರ್ನಾಟಕ ಕಾದಂಬರಿ, ಜನಪದ ಸಾಹಿತ್ಯ

ಪ್ರವಾಸ ಕಥನ : ಪಂಪಾಯಾತ್ರೆ

ಇತರ ಪ್ರಮುಖ ಕೃತಿಗಳು : ಹಣಪ್ರಪಂಚ ಸಾಹಿತ್ಯಾವಲೋಕನ, ಸತ್ಯ ಮತ್ತು ಮೌಲ್ಯ

ಅಭಿನಂದನ ಗ್ರಂಥ : ರೂಪಾರಾಧಕಸಾರ್ಥಕ ಬದುಕುವಿ ಸಿ ೭೫

ಸ್ನೇಹ ವಿಶ್ವಾಸ ಎಂಬ ಕೃತಿಯಲ್ಲಿ ಇವರ ಸಮಗ್ರ ಕವನಗಳ ಸಂಗ್ರಹವಿದೆ

1954 ರಲ್ಲಿ ಕುಮಟಾದಲ್ಲಿ ನಡೆದ 36 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಎ ಎನ್ ಮೂರ್ತಿರಾವ್ (1900-2003)

ಪ್ರಬಂಧ ಸಂಕಲನ : ಹಗಲುಕನಸುಗಳುಅಲೆಯುವ ಮನಮಿನುಗು ಮಿಂಚು

ವಿಮರ್ಶಾ ಕೃತಿ : ಬಿ.ಎಂ.ಶ್ರೀ, ಪೂರ್ವಸೂರಿಗಳೊಡನೆ, ಶೇಕ್ಸ್ಪಿಯರ್, ಮಾಸ್ತಿಯವರ ಕಥೆಗಳು, ಸಾಹಿತ್ಯ ಮತ್ತು ಸತ್ಯ, ವಿಮರ್ಶಾತ್ಮಕ ಪ್ರಬಂಧಗಳು, ದೇವರು (ಪಂಪ ಪ್ರಶಸ್ತಿ)

ವ್ಯಕ್ತಿಚಿತ್ರ ಪತ್ರಸಾಹಿತ್ಯ : ಚಿತ್ರಗಳು ಪತ್ರಗಳು (ಕೇಂದ್ರ ಸಾಹಿತ್ಯ ಅಕಾಡೆಮಿ)

ಅನುವಾದ : ಆಷಾಢಭೂತಿ, ಚಂಡಮಾರುತ, ಪಾಶ್ಚಾತ್ಯ ಸಣ್ಣ ಕಥೆಗಳು, ಸಾಕ್ರೆಟಿಸನ ಕೊನೆಯ ದಿನಗಳು, ಯೋಧನ ಪುನರಾಗಮನ, ಅಮೇರಿಕನ್ ಸಾಹಿತ್ಯ, ದಿ ರಿಟರ್ನ್ ಟು ದಿ ಸಾಯಲ್ (ಕಾರಂತರ ಮರಳಿ ಮಣ್ಣಿಗೆ), ಮೋಲಿಯೇರನ 2 ನಾಟಕಗಳು

ಪ್ರವಾಸ ಕಥನ : ಅಪರ ವಯಸ್ಕನ ಅಮೇರಿಕ ಯಾತ್ರೆ

ಆತ್ಮಕತೆ : ಸಂಜೆಗಣ್ಣಿನ ಹಿನ್ನೋಟ

1984 ರಲ್ಲಿ ಕೈವಾರದಲ್ಲಿ ನಡೆದ 56 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಬೆಟಗೇರಿ ಕೃಷ್ಣಶರ್ಮ  (1900-1982)

ಆನಂದಕಂದ ಇವರ ಕಾವ್ಯನಾಮ

ಪತ್ರಿಕೆ : ಜಯಂತಿ

ಕವನ ಸಂಕಲನ : ಮುದ್ದನ ಮಾತು, ಅರುಣೋದಯ, ವಿರಹಿಣಿ, ಒಡನಾಡಿ, ಕಾರಹುಣ್ಣಿವೆ, ನಲ್ವಾಡುಗಳು (ಜನಪದ ಕವನಗಳು), ಉತ್ಸಾಹಗಾಥಾ, ಸಾಮಾಜಿಕ ಸಂವಹನಗಳು, ಬೆಳುವಲದ ಸುಗ್ಗಿ, ರಾಷ್ಟ್ರೀಯ ಪದ್ಯಾವಲಿ, ರಾಷ್ಟ್ರೀಯ ಪದ್ಯಮಾಲೆ, ಗಾಂಧೀ ಗೀತ ಸಪ್ತಕ, ರಮೆಯುಮೆಯರ ಸಂವಾದ, ಸೀಮೆಯ ಕಲ್ಲು

ಕಥಾ ಸಂಕಲನ : ಸಂಸಾರ ಚಿತ್ರಗಳು, ನಮ್ಮ ಬದುಕು, ಜನಪದ ಜೀವನ, ಕಳ್ಳರ ಗುರು ಮತ್ತು ಇತರ ಕಥೆಗಳು, ದಶಮಂಜರಿ

ಕಾದಂಬರಿ : ರಾಜಯೋಗಿಅಶಾಂತಿಪರ್ವಮಲ್ಲಿಕಾರ್ಜುನಕನ್ನಡ ರಾಜ್ಯ ರಮಾರಮಣ ಕೃತಿಗಳು ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿವೆ. ಮಗಳ ಮದುವೆ (ಸ್ವಾತಂತ್ರ್ಯ ಚಳುವಳಿಯ ಕಾಲದ ಜನಜೀವನ)ಸುದರ್ಶನ

ರೇಡಿಯೋ ನಾಟಕ : ಬೆಳವಡಿ ಮಲ್ಲಮ್ಮಬೆಂದ ಹೃದಯಮುಂಡರಗಿಯ ಗಂಡುಗಲಿಪಂಚಗಂಗಾ

ಜನಪದ ಸಾಹಿತ್ಯ : ಬೀಸುಕಲ್ಲಿನ ಹಾಡುಗಳು, ಕನ್ನಡ ಜನಪದ ಸಾಹಿತ್ಯ, ಕೆರೆಗೆ ಹಾರ (ಜನಪದ ಹಾಡು), ಜಾನಪದ ಜೀವನ, ಬಡತನದ ಬಾಳು (ಜನಪದ ಕತೆಗಳು), ಮಾತನಾಡುವ ಕಲ್ಲು (ಜನಪದ ಕತೆಗಳು)

ಸಂಪಾದನೆ : ಮೃಚ್ಚಕಟಿಕಪುರಂದರದಾಸರ ಸಮಗ್ರ ಕೀರ್ತನೆಗಳುಹರಿದಾಸರ ಭಕ್ತಿ ಸಾಧನೆಅಕ್ರೂರ ಚರಿತ್ರೆ ಕನಕದಾಸರ ಭಕ್ತಿ ಗೀತೆಗಳು ಪ್ರಸನ್ನ ವೆಂಕಟದಾಸರ ಭಾಗವತಭಾವಗೀತ (ಕವನ ಸಂಕಲನ),

ಅನುವಾದ : ಮಧ್ಯಮ ವ್ಯಾಯೋಗ

ಮಕ್ಕಳ ಸಾಹಿತ್ಯ : ಬಸವಣ್ಣನವರುಚಂದ್ರಹಾಸಭೀಷ್ಮಲವಕುಶ

ಲೇಖನ ಸಂಗ್ರಹ : ಸಾಮಾಜಿಕ ಸಂವಚನಗಳು

ಪ್ರಬಂಧ ಸಾಹಿತ್ಯ : ಕರ್ನಾಟಕ ಜನಜೀವನ, ಸಾಹಿತ್ಯವು ಸಾಗಿರುವ ದಾರಿ (ಜನಪದ), ನಮ್ಮ ಸಂಸ್ಕೃತಿ ಪರಂಪರೆ, ಸಾಹಿತ್ಯ ವಿಹಾರ (ಜನಪದ).

ಆತ್ಮಚರಿತ್ರೆ : ನನ್ನ ನೆನಪುಗಳು

ಅಭಿನಂದನಾ ಗ್ರಂಥಬೆಳುವಲಕವಿಭೂಷಣ

1937 ರಲ್ಲಿ ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ತಿರುಮಲೆ ರಾಜಮ್ಮ (1900-1984)

ಕಾವ್ಯನಾಮ ಭಾರತಿ

ಕವನಸಂಕಲನ : ರಾಷ್ಟ್ರಶಕ್ತಿರಾಷ್ಟ್ರಭಕ್ತಿ. ನೀಳ್ಗವನಗಳು - ಜ್ವಾಲಾಮುಖಿವೇದನ-ನಿವೇದನ

ಜೀವನ ಚಿತ್ರಗಳು : ಆರ್ಯ ಕೈಲಾಸಂವೀಣೆ ಶೇಷಣ್ಣ

ನಾಟಕಗಳು : ತಪಸ್ವಿನಿ, ಮಹಾಸತಿ (ಚೋಳನಾಡಿನ ಏಚನ ಹೆಂಡತಿ ದೇಕಬ್ಬೆಯ ಸತಿಸಹಗಮನದ ಕತೆ), ವಾತಲ್ಯ ತರಂಗ ಲೀಲಾ, ಸುಖಮಾರ್ಗ, ದೃಢಪ್ರತಿಜ್ಞೆ (ಅನುವಾದ), ಉನ್ಮತ್ತ ಭಾಮಿನಿ, ದುಂದುಭಿ, ಅಂತರ್ಜ್ಯೋತಿ, ಸ್ವರ್ಗ ನಿರಸನ

 

ಶಿವರಾಮ ಕಾರಂತ (1902-1997)

ಕಡಲತೀರದ ಭಾರ್ಗವನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದವರು

ಪತ್ರಿಕೆ : ವಸಂತವಿಚಾರವಾಣಿ

ಕವನ ಸಂಕಲನಗಳು : ರಾಷ್ಟ್ರಗೀತ ಸುಧಾಕರಸೀಳ್ಗವನಗಳು

ಕಾದಂಬರಿಗಳು : ಚೋಮನ  ದುಡಿ (ದಲಿತ ಜೀವನ)ಮರಳಿ ಮಣ್ಣಿಗೆ (ಮೂರು ತಲೆಮಾರುಗಳ ಗ್ರಾಮೀಣ ಚಿತ್ರಣ)ಮೂಕಜ್ಜಿಯ ಕನಸುಗಳು (ನಾಡಿನ ಧಾರ್ಮಿಕ ಇತಿಹಾಸದ ಕತೆ - ಜ್ಞಾನಪೀಠ ಪ್ರಶಸ್ತಿ)ಮೈ ಮನಗಳ ಸುಳಿಯಲ್ಲಿ (ಪಂಪ ಪ್ರಶಸ್ತಿ)ಔದಾರ್ಯದ ಉರುಳಲ್ಲಿ (ಭಾರತದ ರಾಜಕೀಯ ಹಾಗೂ ಶೈಕ್ಷಣಿಕ ರಂಗದಲ್ಲಿ ನಡೆದ ಪ್ರಯೋಗಗಳ ಸೋಲುಗೆಲುವುಗಳ ಮಾರ್ಮಿಕ ಚಿತ್ರಣ)ಗೆದ್ದ ದೊಡ್ಡಸ್ತಿಕೆ (ಕೃಷಿಯ ಮಹತ್ವ)ನಾವು ಕಟ್ಟಿದ ಸ್ವರ್ಗ (ಸ್ವಾತಂತ್ರ್ಯೋತ್ತರ ಭಾರತದ ಭ್ರಮನಿರಸನ ಭಾವ)

ಗೊಂಡಾರಣ್ಯಮುಗಿದ ಯುದ್ಧಮೂಜನ್ಮ ಕಾದಂಬರಿಗಳ ವಸ್ತು ರಾಜಕೀಯ ಭ್ರಷ್ಟಾಚಾರ. ಜಗದೋದ್ಧಾರ ನಾ, ಕಣ್ಣಿದ್ದೂ ಕಾಣರು, ಕನ್ಯಾಬಲಿ, ಕೇವಲ ಮನುಷ್ಯರು ಕಾದಂಬರಿಗಳು ಸಾಮಾಜಿಕ ಹುಳುಕು, ಧರ್ಮದ ಹೆಸರಿನಲ್ಲಾಗುವ ಮೋಸ ಕುರಿತಾದುದಾಗಿವೆ

ಅದೇ ಊರು ಅದೆ ಮರ, ಅಳಿದ ಮೇಲೆ, ಆಳ ನಿರಾಳ, ಇದ್ದರೂ ಚಿಂತೆ, ಇನ್ನೊಂದೇ ದಾರಿ, ಇಳೆಯೆಂಬ, ಉಕ್ಕಿದ ನೊರೆ, ಒಡಹುಟ್ಟಿದವರು, ಒಂಟಿ ದನಿ, ಕನ್ನಡಿಯಲ್ಲಿ ಕಂಡಾತ, ಕರುಳಿನ ಕರೆ, ಜಾರುವ ದಾರಿಯಲ್ಲಿ, ದೇವದೂತರು, ಧರ್ಮರಾಯನ ಸಂಸಾರ, ನಷ್ಟ ದಿಗ್ಗಜಗಳು, ನಂಬಿದವರ ನಾಕ - ನರಕ, ನಿರ್ಭಾಗ್ಯ ಜನ್ಮ, ಬತ್ತದ ತೊರೆ, ಭೂತ, ಮೊಗ ಪಡೆದ ಮನ, ವಿಚಿತ್ರ ಕೂಟ, ಶನೀಶ್ವರನ ನೆರಳಿನಲ್ಲಿ, ಸನ್ಯಾಸಿಯ ಬದುಕು, ಸಮೀಕ್ಷೆ, ಸರಸಮ್ಮನ ಸಮಾಧಿ, ಸ್ವಪ್ನದ ಹೊಳೆ, ಹೆತ್ತಳಾ ತಾಯಿ, ಅಂಟಿದ ಅಪರಂಜಿ, ಚಿಗುರಿದ ಕನಸು, ಕುಡಿಯರ ಕೂಸು

ನಾಟಕ : ಕಠಾರಿ ಭೈರವ, ಕರ್ಣಾರ್ಜುನ, ಕೀಚಕ ಸೈರಂಧ್ರಿ, ಗರ್ಭಗುಡಿ, ಜಂಬದ ಜಾನಕಿ, ಜ್ಯೂಲಿಯಸ್ ಸೀಸರ್, ಡೊಮಿಂಗೊ, ದೃಷ್ಟಿ ಸಂಗಮ, ನಾರದ ಗರ್ವಭಂಗ, ಕಟ್ಟೆ ಪುರಾಣ, ಬೌದ್ಧ ಯಾತ್ರಾ, ಮಂಗಳಾರತಿ, ಮುಕ್ತದ್ವಾರ, ಯಾರೊ ಅಂದರು, ವಿಜಯ ದಶಮಿ, ಸರಳ ವಿರಳ ನಾಟಕಗಳು, ಸಾವಿರ ಮಿಲಿಯ, ಹಣೆ ಬರಹ, ಹಿರಿಯಕ್ಕನ ಚಾಳಿ, ಬೆವರಿಗೆ ಜಯವಾಗಲಿ, ಹೇಗಾದರೇನು, ಹೇಮಂತ, ಗೆದ್ದವರ ಸತ್ಯ, ಕಿಸಾ ಗೌತಮಿ, ಬುದ್ಧೋದಯ, ಮುಕ್ತದ್ವಾರ, ಗೊಂಬೆಯ ಮನೆ, ದೆವ್ವದ ಜಾಲ, ವಿನಾಶದ ಒಸಗೆ, ಬಿತ್ತಿದ ಬೆಳೆ, ನಿಮ್ಮ ಓಟು ಯಾರಿಗೆ?

ಸಣ್ಣ ಕತೆ : ಕವಿಕರ್ಮತೆರೆಯ ಮರೆಯಲ್ಲಿಹಸಿವುಹಾವು

ಹರಟೆ/ವಿಡಂಬನೆ : ಮೈಗಳ್ಳನ ದಿನಚರಿಯಿಂದ, ಮೈಲಿಕಲ್ಲಿನೊಡನೆ ಮಾತುಕತೆಗಳು, ಹಳ್ಳಿಯ ಹತ್ತು ಸಮಸ್ತರು, ಗ್ನಾನ, ಚಿಕ್ಕ ದೊಡ್ಡವರು, ದೇಹ ಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು

ಪ್ರವಾಸ ಕಥನ : ಅರಸಿಕರಲ್ಲ, ಅಬೂವಿನಿಂದ ಬರಾಮಕ್ಕೆ, ಪಾತಾಳಕ್ಕೆ ಪಯಣ, ದಕ್ಷಿಣ ದೇವ ಒಲಿದ ಊರು, ಯಕ್ಷರಂಗಕ್ಕಾಗಿ ಪ್ರವಾಸ, ಪೂರ್ವದಿಂದ ಅಂತ್ಯಪೂರ್ವಕೆ, ಜೋಗಿ ಕಂಡ ಊರು, ಹಿಂದುಸ್ತಾನದ ನದಿಗಳು, ಅಪೂರ್ವ ಪಶ್ಚಿಮ

ಆತ್ಮಕಥನ : ಸ್ಮೃತಿಪಟಲದಿಂದಹುಚ್ಚು ಮನಸ್ಸಿನ ಹತ್ತು ಮುಖಗಳುಅಳಿದುಳಿದ ನೆನಪುಗಳು 

ಕಲಾ ಸಾಹಿತ್ಯ : ಯಕ್ಷಗಾನ ಬಯಲಾಟ (ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಸ್ವೀಡಿಷ್ ಅಕಾಡೆಮಿ ಪಾರಿತೋಷಕ), ಚಿತ್ರಮಯ ದಕ್ಷಿಣ ಹಿಂದುಸ್ತಾನ, ಕಲೆಯ ದರ್ಶನ, ಕರ್ನಾಟಕದಲ್ಲಿ ಚಿತ್ರಕಲೆ, ಚಾಲುಕ್ಯ ವಾಸ್ತುಶಿಲ್ಪ, ಚಿತ್ರಶಿಲ್ಪ, ವಾಸ್ತುಕಲೆಗಳು, ಭಾರತೀಯ ಚಿತ್ರಕಲೆ, ಭಾರತೀಯ ಶಿಲ್ಪ, ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು, ಚಿತ್ರಮಯ ದಕ್ಷಿಣ ಕನ್ನಡ, ಚಿತ್ರಮಯ ದಕ್ಷಿಣ ಕನ್ನಡ; ಅಂದು-ಇಂದು

ಜಾನಪದ : ಕರ್ನಾಟಕದ ಜಾನಪದ ಕಲೆಗಳು, ಜಾನಪದ ಗೀತೆಗಳು,

ವೈಜ್ಞಾನಿಕ : ಅದ್ಭುತ ಜಗತ್ತು (ವಿಚಿತ್ರ ಖಗೋಲ, ನಮ್ಮ ಭೂಖಂಡಗಳು), ಉಷ್ಣವಲಯದ ಆಗ್ನೇಷ್ಯಾ, ಪ್ರಾಣಿ ಪ್ರಪಂಚದ ವಿಸ್ಮಯಗಳು, ವಿಜ್ಞಾನ ಮತ್ತು ಅಂಧಶೃದ್ಧೆ, ವಿಶಾಲ ಸಾಗರಗಳು, ಹಿರಿಯ ಕಿರಿಯ ಹಕ್ಕಿಗಳು, ಸಾಮಾನ್ಯ ವಿಜ್ಞಾನ, ಗೃಹ ವಿಜ್ಞಾನ, ನಮ್ಮ ಸುತ್ತಲಿನ ಕಡಲು, ನಮ್ಮೆಲ್ಲರಿಗೂ ಒಂದೇ ಭವಿಷ್ಯ, ಪರಮಾಣು - ಇಂದು ನಾಳೆ, ಜನತೆಯೂ ಅರಣ್ಯಗಳೂ, ಭಾರತ ಪರಿಸರದ ಸ್ಥಿತಿಗತಿ, ಕೀಟನಾಶಕಗಳ ಪಿಡುಗುಗಳು

ಸಂಪಾದನೆ : ಪಂಜೆಯವರ ನೆನಪಿಗಾಗಿ, ಕೌಶಿಕ ರಾಮಾಯಣ, ಐರೋಡಿ ಶಿವರಾಮಯ್ಯ ಬದುಕು-ಬರಹ, ನಿಕ್ಷಾ ಮಹಿಮೆ

ವಿಶ್ವಕೋಶ : ಕಲಾ ಪ್ರಪಂಚಪ್ರಾಣಿ ಪ್ರಪಂಚಬಾಲ ಪ್ರಪಂಚವಿಜ್ಞಾನ ಪ್ರಪಂಚ

ನಿಘಂಟು : ಸಿರಿಗನ್ನಡ ಅರ್ಥಕೋಶ

ಅನುವಾದ : ಕೋಟಿ ಮಹಾಜಗತ್ತು, ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ-ಭವಿಷ್ಯವೂ, ಭಾರತ ವರ್ಷದಲ್ಲಿ, ಪಂಚ ಋತು, ಬ್ರಿಟಿಷರು, ಜಾತಕ ಕತೆಗಳು, ಯಾರು ಲಕ್ಷಿಸುವರು?

ಜೀವನ ಚರಿತ್ರೆ : ಶ್ರೀ ರಾಮಕೃಷ್ಣರ ಜೀವನ ಚರಿತೆ

ಮಕ್ಕಳ ಪುಸ್ತಕಗಳು : ಅನಾದಿ ಕಾಲದ ಮನುಷ್ಯ, ಒಂದೇ ರಾತ್ರಿ ಒಂದೇ ಹಗಲು, ಗಜರಾಜ, ಢಂ ಢಂ ಢೋಲು, ನರನೋ ವಾನರನೋ, ಮರಿಯಪ್ಪನ ಸಾಹಸಗಳು, ಮಂಗನ ಮದುವೆ, ಸೂರ್ಯ ಚಂದ್ರ, ಹುಲಿರಾಯ, ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ, ಅಮರಚಿತ್ರಕತೆ 

ತಾತ್ವಿಕ  : ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ, ಮನೋದೇಹಿಯಾದ ಮಾನವ, ವಿಚಾರಶೀಲತೆ, ವಿಚಾರ ಸಾಹಿತ್ಯ ನಿರ್ಮಾಣ, ಸ್ವಾರ್ಥಿ ಮಾನವ, ನಾಗರಿಕತೆಯ ಹೊಸ್ತಿಲಲ್ಲಿ, ರಮಣ ತಾತ, ಅಳಿಲ ಭಕ್ತಿ ಮಳಲ ಸೇವೆ

ಇತರೆ : ಓದುವ ಆಟ, ಸ್ನೀತಿ, ಸಿರಿಗನ್ನಡ ಪಾಠಮಾಲೆ, ಹೊಸಗನ್ನಡ ಪಾಠಮಾಲೆ, ಬೇರೆಯವರೂ ಸರಿ ಇರಬಹುದು, ಹುಟ್ಟು ಸಾವು ಒಟ್ಟು ಒಟ್ಟು, ಮಾತಿನ ಸೇತುವೆ

ಇಂಗ್ಲಿಷ್ ಸಾಹಿತ್ಯ : ಫೋಕ್ ಆರ್ಟ್ ಆಫ್ ಕರ್ನಾಟಕ, ಕರ್ನಾಟಕ ಪೇಂಟಿಂಗ್ಸ್, ಮೈ ಕನ್ಸರ್ನ್ ಫರ್ ಲೈಫ್, ಲಿಟರೇಚರ್ ಅಂಡ್ ಆರ್ಟ್, ಪಿಕ್ಚರ್ಸ್ಕ್ಯೂ ಕೆನರಾ, ಯಕ್ಷಗಾನ

ಅಭಿನಂದನಾ ಗ್ರಂಥ : ಕಾರಂತ ಪ್ರಪಂಚ

1955 ರಲ್ಲಿ ಮೈಸೂರಿನಲ್ಲಿ ನಡೆದ 37 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಸೇಡಿಯಾಪು ಕೃಷ್ಣಭಟ್ಟ (1902-1996)

ಕವನ ಸಂಕಲನ : ಚಂದ್ರಖಂಡ ಮತ್ತು ಇತರ ಕಾವ್ಯಗಳು, ಕರ್ನಾಟಕ ಕವಿತಾ ಪ್ರಪಂಚ

ಕಥನಕವನಗಳು - ತರುಣ ಧಮನಿ (ವಿಜಯನಗರದ ಕೊನೆಯ ಅರಸ ರಾಮರಾಯನ ಕುರಿತ ಕತೆ), ಅಶ್ವಮೇಧ, ಕೃಷ್ಣಕುಮಾರಿ, ಪುಣ್ಯಲಹರಿ

ಕಥಾ ಸಂಕಲನ : ಪಳಮೆಗಳು

ಛಂದಸ್ಸು : ಕನ್ನಡ ಛಂದಸ್ಸುಗಳುಛಂದೋಗತಿ

ಇತರ ಪ್ರಮುಖ ಕೃತಿಗಳು : ವಿಚಾರ ಪ್ರಪಂಚ (ಪಂಪ ಪ್ರಶಸ್ತಿ)ಕೆಲವು ದೇಶನಾಮೆಗಳು, ತಥ್ಯದರ್ಶನ, ವಿಚಾರ ಪ್ರಪಂಚ, ಕನ್ನಡ ಗೀತಿಕೆಯ ಲಕ್ಷಣ ಮತ್ತು ಧಾಟಿ, ಪತ್ರಾವಳಿ, ಕನ್ನಡ ವರ್ಣಗಳು

ನಿಘಂಟು : ಕನ್ನಡ ನಿಘಂಟು (ಕಿಟೆಲ್ ಕೋಶದ ತರುವಾಯ ಮುದ್ರಿತಗೊಂಡ ಮೊದಲ ನಿಘಂಟು), ಶಬ್ಧಕೋಶ, ಈಶ್ವರ ಸಂಕಲ್ಪ ಅಥವಾ ದೈವಲೀಲೆ ಎಂಬ ಕೃತಿ ಅವರ ಜೀವನಾನುಭವಗಳ ಸಂಗ್ರಹವಾಗಿದೆ

 

ಅಜ್ಜಂಪುರ ಸೀತಾರಾಮ್  (1902-1963)

ಆನಂದ ಇವರ ಕಾವ್ಯನಾಮ

ಕಥಾಸಂಕಲನ : ಕೆಲವು ಕಥೆಗಳು, ಮಾಟಗಾತಿ ಮತ್ತು ಇತರ ಕತೆಗಳು, ಅಶ್ರು ಭಾಷ್ಪ, ಚಂದ್ರಗ್ರಹಣ ಮತ್ತು ಇತರ ಕತೆಗಳು, ಸ್ವಪ್ನಜೀವಿ ಮತ್ತು ಇತರ ಕತೆಗಳು, ಜೋಯಿಸರ ಚೌಡಿ ಮತ್ತು ಇತರ ಕತೆಗಳು, ಗ್ಯಾಸ್ಕೋಯಿನ್, ಸಂಸಾರಶಿಲ್ಪಿ ಮತ್ತು ಶಿಲ್ಪಿ ಸಂಕುಲ, ಬೇವು ಬೆಲ್ಲ

ಹರಟೆಗಳ ಸಂಕಲನ : ಆನಂದ ಲಹರಿ

ವಚನಚಿತ್ರ : ಪಕ್ಷಿಗಾನ

ಅನುವಾದ : ದಹನಚಿತ್ರ, ವೀರಯೋಧ, ಸುಶೀಲ ವಿಜಯ ಇವು ನಾಟಕಗಳು, ಈಸೋಪನ ನೀತಿಕತೆಗಳು (ಕಥಾಸಂಕಲನ)

ಸಿರಿದ್ವೀಪ (ರಾಬರ್ಟ್ ಲೂಯಿ ಸ್ಟೀವನ್ಸನ್ - ಟ್ರೆಸರ್ ಐಲ್ಯಾಂಡ್)ಉಗ್ರಪರೀಕ್ಷೆ (ಟಾಲ್ಸ್ಟಾಯ್ರ ಆರ್ಡಿಯಲ್ ಕಾದಂಬರಿ), ಪುರುಷಾಮೃಗ (ರಾಬರ್ಟ ಲೂಯಿ ಸ್ಟಿವನ್ಸನ್ - ದಿ ಸ್ಟ್ರೇಂಜ್ ಕೇಸ್ ಅಫ್ ಡಾ. ಜೆಕಿಲ್ ಅ್ಯಂಡ್ ಮಿಸ್ಟರ್ ಹೈಡ್), ಶಾಲಾ ಉಪಾಧ್ಯಾಯಿನಿಯೊಬ್ಬಳ ದಿನಚರಿ  (ಎಫ್ ವಿಗ್ದೊರೊವಾ ಅವರ ರಶಿಯನ್ ಭಾಷೆಯ ಇಂಗ್ಲಿಷ್ ಅನುವಾದ - ಡೈರಿ ಆಫ್ ಎ ಸ್ಕೂಲ್ ಟೀಚರ್), ರಕ್ಷಾಕವಚ (ಸರ್ ವಾಲ್ಟರ್ ಸ್ಕಾಟ್ರ ಕಾದಂಬರಿ - ದ ಟಾಲಿಸ್ಮಾನ್), ಐವಾನ್ ಹೊ (ಸರ್ ವಾಲ್ಟರ್ ಸ್ಕಾಟ್ರ ಕಾದಂಬರಿ - ಐವಾನ್ ಹೊ)

ರಾಬಿನ್ಸನ್ ಕ್ರೂಸೋ ಕತೆಲಿಯೊ ಟಾಲ್ಸ್ಟಾಯ್ ಇವು ಇತರ ಪ್ರಮುಖ ಕೃತಿಗಳು

ಗದ್ಯಕವನ : ಪಕ್ಷಿಗಾನ

 

ಅಶ್ವತ್ಥ (1902-1963)

ಇವರ ನಿಜನಾಮ ಅಶ್ವತ್ಥ ನಾರಾಯಣ

ಖಂಡಕಾವ್ಯ : ಮಹಾಯುದ್ಧ

ಕಥಾ ಸಂಕಲನ : ದೂರದ ಕಾಶಿಯಲ್ಲಿ, ಅಭಿನಯ ಜಗತ್ತು, ಸೊಸೆಗೊಂದು ಉಡುಗೊರೆ, ದೀಪಾವಳಿಗೆ, ಬಾಳಹೊಳೆ, ಅಗ್ನಿಸಾಕ್ಷಿ, ಹುಚ್ಚನ ಹೆಂಡತಿ, ಕಲ್ಯಾಣಮಸ್ತು, ರಾಧಾಕೃಷ್ಣ, ವಾಸವಪಾಲಿತಪಗುಪ್ತ, ಮಹಾವಿಜಯ, ಯದಾಯದಾಯಿಧರ್ಮಸ್ಯ

ಕಾದಂಬರಿ : ಮುನಿಯನ ಮಾದರಿ, ಮರ್ಯಾದೆ ಮಹಲು, ರಂಗನಾಯಕಿ, ಹಂಬಲ, ಬರದ ಸಿರಿ, ಭ್ರಮ, ನಂಜುಂಡಾಯಣ, ಬಜಾರಿ, ಕುಳಿಗೂಡಿ

ನಾಟಕ : ಮಗು, ಹುಚ್ಚ, ಅತಿಥಿದೇವೋಭವ, ಕ್ರಾಂತಿಕಾರ, ಕಣ್ತೆರೆ, ನ್ಯಾಯಾಧೀಶ, ನಿರ್ಮಲಾ, ಹಂಚಿಕೆ, ದ್ರೋಹ, ಬಹುಮಾನ, ದಿವ್ಯದರ್ಶನ, ಹೆಣ್ಣು, ಕೃಷ್ಣಲೀಲಾ, ಬಲಿ, ಮರುಭೇಟೆ, ಕತೆಗಾರ

ಪ್ರಬಂಧ ಸಂಕಲನ : ಮೂಗಿನ ಮೇಲೆ

 

ಮಧುರ ಚೆನ್ನ (1903-1953)

ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ

ಕವನ ಸಂಕಲನ : ಮಧುರ ಗೀತ, ನನ್ನ ನಲ್ಲ, ಸಲಿಗೆಯ ಸಲ್ಲಾಪ, ನೋಂಪಿ, ಕೆಸರೊಳಗಿನ ಕಮಲ, ದೇವತಾ ಪೃಥಿವಿ, ಸುಖದುಃಖ, ಸುಖಜೀವನ, ಧೃವ, ಉಷಾದೇವಿ, ರೋಹಿಣಿ, ಮಾವಿನಗೊಲ್ಲೆ

ಕಾವ್ಯರೂಪಕ : ವಿನೋದ ಕುಸುಮಾವಳಿ

ಅದ್ಯಾತ್ಮ ಕವನ ಸಂಕಲನ : ಪೂರ್ವರಂಗಕಾಳರಾತ್ರಿಬೆಳಗು

ವಿಚಾರ ಸಾಹಿತ್ಯ : ಶಬ್ದ ಸಾಮ್ರಾಜ್ಯದಲ್ಲಿಯ ಮಂತ್ರಶಕ್ತಿಯ ಪುನರುಜ್ಜೀವನ, ಸತ್ಯ, ಹಲಸಂಗಿಯ ಲಾವಣೀಕಾರ ಖಾಜಾಬಾಯಿ, ಇತಿಹಾಸದ ಕವಿಗಳು, ಬಸವಣ್ಣನವರ ಭೋಜನ ಶಾಲೆ, ವಿಜಯಪುರದ ಶಿಲಾಶಾಸನ, ಪಂಪ ಮಹಾಕವಿಯ ವಿಜಾಪುರ ಶಿಲಾಲಿಪಿ, ಅರ್ಜುನವಾಡ ಶಾಸನ, ಆತ್ಮ ಸಂಶೋಧನೆ, ಪೂರ್ವಯೋಗದ ಪಥದಲ್ಲಿ ಅರವಿಂದರ ತತ್ತ್ವವಿಚಾರ ಮುಂತಾದವು

ಅನುವಾದ : ಪೂರ್ವಯೋಗ, ಮಾತೃವಾಣಿ, ರಾಕ್ಷಸಿ ಮಹತ್ವಾಕಾಂಕ್ಷೆ, ವಿಸರ್ಜನ (ಠಾಕೂರ್ ರ ನಾಟಕ), ಬಾಳಿನಲ್ಲಿ ಬೆಳಕು (ಟಾಲ್ಸ್ಟಾಯ್ ಅವರ ಆತ್ಮಕಥೆಯ ಅನುವಾದ), ಧರ್ಮಕ್ಷೇತ್ರೆ ಕುರುಕ್ಷೇತ್ರೇ

ಜನಪದ ಸಾಹಿತ್ಯ ಸಂಗ್ರಹ : ಗರತಿಯ ಹಾಡುಮಲ್ಲಿಗೆ ದಂಡೆಜೀವನ ಸಂಗೀತ

ಜಾನಪದ ಪ್ರಬಂಧ :  ಬೀಸುಕಲ್ಲು ಹಾಡುಗಳು, ಹಳ್ಳಿಯ ಸಾಹಿತ್ಯ, ಹಳ್ಳಿಯ ಹಾಡುಗಳು

 

ಕುವೆಂಪು (1904-1994)

ಕನ್ನಡದ ಎರಡನೇ ರಾಷ್ಟ್ರಕವಿ. ಕನ್ನಡದ ವರ್ಡ್ಸ್ವರ್ತ್ ಎಂದೇ ಖ್ಯಾತರಾದವರು

ವಿನೋಬಾ ಭಾವೆ ಇವರನ್ನು ಅಭಿನವ ವಾಲ್ಮೀಕಿ ಎಂದು ಕರೆದಿದ್ದಾರೆ

ತಮ್ಮ ಮೊದಲ ಇಂಗ್ಲಿಷ್ ಕವನ ಸಂಕಲನ ಬಿಗಿನರ್ಸ್ ಮೂವ್ಸ್ ಅನ್ನು ಬರೆದಾಗ ಅವರ ಕಾವ್ಯನಾಮ ಕಿಶೋರ ಚಂದ್ರವಾಣಿ.

ಐರಿಷ್ ಕವಿ ಜೇಮ್ಸ್ ಕಸಿನ್ಸ್ ಅವರ ಪ್ರೇರಣೆಯಿಂದ ಕನ್ನಡದಲ್ಲಿ ಸಾಹಿತ್ಯ ರಚಿಸಲು ಪ್ರಾರಂಭಿಸಿದರು.

ಕವನ ಸಂಕಲನಗಳು : ಕೊಳಲು, ಪಾಂಚಜನ್ಯ, ನವಿಲು, ಕಲಾಸುಂದರಿ, ಕೋಗಿಲೆ ಮತ್ತು ಸೋವಿಯತ್ ರಷ್ಯಾ, ಪ್ರೇಮ ಕಾಶ್ಮೀರ, ಅಗ್ನಿಹಂಸ, ಕೃತ್ತಿಕೆ, ಪಕ್ಷಿಕಾಶಿ (ಕೊಲ್ವ ಬಿಲ್ಲು ಬತ್ತಳಿಕೆಯನು ಬಿಟ್ಟು ಬಾ ಎಂಬ ಪ್ರಸಿದ್ಧ ಸಾಲು ಈ ಕವನಸಂಕಲದಲ್ಲಿದೆ), ಷೋಡಶಿ, ಚಂದ್ರಮಂಚಕೆ ಬಾ ಚಕೋರಿ, ಇಕ್ಷುಗಂಗೋತ್ರಿ, ಅನಿಕೇತನ, ಜೇನಾಗುವ, ಅನುತ್ತರಾ, ಮಂತ್ರಾಕ್ಷತೆ, ಕದರಡಕೆ, ಪ್ರೇತಕ್ಯೂ, ಕುಟೀಚಕ, ಹೊನ್ನ ಹೊತ್ತಾರೆ, ಕನ್ನಡ ಡಿಂಡಿಮ, ಕಬ್ಬಿಗನ ಕೈಬುಟ್ಟಿ, ಪ್ರಾರ್ಥನಾ ಗೀತಾಂಜಲಿ

ಕಿಂಕಿಣಿ (ವಚನ ಸಂಕಲನ)ಚಿತ್ರಾಂಗದಾ (ಕನ್ನಡದ ಮೊದಲ ಖಂಡಕಾವ್ಯ)

ಶ್ರೀ ರಾಮಾಯಣ ದರ್ಶನಂ  (ಮಹಾಕಾವ್ಯ - ಜ್ಞಾನಪೀಠ ಪ್ರಶಸ್ತಿಪಂಪ ಪ್ರಶಸ್ತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ)

ಪ್ರಗಾಥಗಳು - ಸ್ವಾತಂತ್ರ್ಯೋದಯ ಮಹಾಪ್ರಗಾಥ ಮತ್ತು ಗೊಮಟೇಶ್ವರ

ಕಥಾ ಸಂಕಲನ : ಸಂನ್ಯಾಸಿ ಮತ್ತು ಇತರ ಕಥೆಗಳುನನ್ನ ದೇವರು ಮತ್ತು ಇತರ ಕಥೆಗಳು

ಕಾದಂಬರಿಗಳು : ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು (ಶೃಂಗಾರವೇ ಪ್ರಧಾನ ವಸ್ತು, ಕೃತಿಕಾರರೇ ಹೇಳುವಂತೆ ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾರೂ ಯಕಃಶ್ಚಿತರಲ್ಲ)

ಖಂಡಕಾವ್ಯ ನಾಟಕಗಳು : ಯಮನ ಸೋಲು, ಜಲಗಾರ, ಬಿರುಗಾಳಿ (ಷೇಕ್ಸ್ಪಿಯರ್ ನ ಟೆಂಪೆಸ್ಟ್), ವಾಲ್ಮೀಕಿಯ ಭಾಗ್ಯ, ಮಹಾರಾತ್ರಿ, ಸ್ಮಶಾನ ಕುರುಕ್ಷೇತ್ರಂ, ರಕ್ತಾಕ್ಷಿ (ಷೇಕ್ಸ್ಪಿಯರ್ ನ ಹ್ಯಾಮ್ಲೆಟ್), ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಬಲಿದಾನ, ಚಂದ್ರಹಾಸ, ಕಾನೀನ, ಚಿತ್ರಾಂಗದ

ಪ್ರಬಂಧ : ಮಲೆನಾಡಿನ ಚಿತ್ರಗಳು

ವಿಮರ್ಶೆ : ಕಾವ್ಯವಿಹಾರ, ತಪೋನಂದನ, ವಿಭೂತಿಪೂಜೆ, ದ್ರೌಪದಿಯ ಶ್ರೀಮುಡಿ, ರಸೋ ವೈಸಃ

ಆತ್ಮಕಥೆ : ನೆನಪಿನ ದೋಣಿಯಲ್ಲಿ

ನೆನಪು ಬರಹ : ಕುವೆಂಪು ಮದುವೆ ಪ್ರಸಂಗಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ

ಜೀವನ ಚರಿತ್ರೆಗಳು : ಸ್ವಾಮಿ ವಿವೇಕಾನಂದರಾಮಕೃಷ್ಣ ಪರಮಹಂಸ

ಭಾಷಣ-ಲೇಖನ : ಸಾಹಿತ್ಯ ಪ್ರಚಾರ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಷಷ್ಠಿನಮನ, ಮನುಜಮತ ವಿಶ್ವಪಥ, ವಿಚಾರ ಕ್ರಾಂತಿಗೆ ಆಹ್ವಾನ

ಶಿಶು ಸಾಹಿತ್ಯ : ಮೋಡಣ್ಣನ ತಮ್ಮ (ನಾಟಕ), ಬೊಮ್ಮನಹಳ್ಳಿಯ ಕಿಂದರಿಜೋಗಿ (ಕಥನ ಕವನ), ನನ್ನ ಗೋಪಾಲ (ನಾಟಕ), ನನ್ನ ಮನೆ, ಮೇಘಪುರ, ಮರಿವಿಜ್ಞಾನಿ, ನರಿಗಳಿಗೇಕೆ ಕೋಡಿಲ್ಲ, ಅಮಲನ ಕಥೆ, ಹಾಳೂರು

ಅನುವಾದ : ಜನಪ್ರಿಯ ವಾಲ್ಮೀಕಿ ರಾಮಾಯಣಗುರುವಿನಿಂದ ದೇವರೆಡೆಗೆ, ಕೊಲಂಬೋ ಇಂದ ಅಲ್ಮೋರಕೆ

ಅಭಿನಂದನಾ ಗ್ರಂಥ : ಸಹ್ಯಾದ್ರಿ-ಗಂಗೋತ್ರಿ, ಉಡುಗೊರೆ.

1957 ರಲ್ಲಿ ಧಾರವಾಡದಲ್ಲಿ ನಡೆದ 39 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಕಡೆಂಗೊಡ್ಲು ಶಂಕರಭಟ್ಟ (1904-1968)

ಪತ್ರಿಕೆ : ರಾಷ್ಟ್ರಮತ

ಕವನ ಸಂಕಲನ : ಕಾಣಿಕೆ, ಹಣ್ಣುಕಾಯಿ, ಘೋಷಯಾತ್ರೆ, ಗಾಂಧಿ ಸಂದೇಶ, ವಸ್ತ್ರಾಪಹರಣ, ನಲ್ಮೆ, ಪತ್ರಪುಷ್ಪ, ಹೊನ್ನಿಯ ಮದುವೆ (ಕಥನ ಕವನ)

ಕಥಾಸಂಕಲನ : ಗಾಜಿನ ಬಳೆದುಡಿಯುವ ಮಕ್ಕಳುಹಿಂದಿನ ಕತೆಗಳು

ನಾಟಕಗಳು : ಹಿಡಿಂಬೆಮಹಾಯೋಗಿಗುರುದಕ್ಷಿಣೆಅಜಾತಶತ್ರುಉಷೆವಿರಾಮಯಜ್ಞಕುಂಡ.

ಕಾದಂಬರಿ : ಧೂಮಕೇತು, ದೇವತಾ ಮನುಷ್ಯ (ಗ್ರಾಮೀಣ ಜೀವನದಲ್ಲಿ ಹಣ ಮತ್ತು ಸಾಮಾಜಿಕ ಸಂಬಂಧಗಳು), ಲೋಕದ ಕಣ್ಣು (ಪತ್ರಿಕೋದ್ಯಮ ವೃತ್ತಿಯ ಅನುಭವಗಳು ಮತ್ತು ವಿಚಾರಗಳು)

ಅನುವಾದ : ಸ್ವರಾಜ್ಯ ಯುದ್ಧ (ಮೋತಿಲಾಲ್ ನೆಹರು ಭಾಷಣಗಳ ಸಂಗ್ರಹ)

ವಿಮರ್ಶಾ ಲೇಖನಗಳುವಾಙ್ಮಯ ತಪಸ್ಸು

ಅಭಿನಂದನ ಗ್ರಂಥ : ಸಾಹಿತ್ಯ ಯೋಗಿ

1965 ರಲ್ಲಿ ನಡೆದ 45 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಗೊರೂರು ರಾಮಸ್ವಾಮಿ ಅಯ್ಯಂಗಾರ್ (1904-1991)

ಕಾದಂಬರಿಗಳು : ಹೇಮಾವತಿ (ವೈಚಾರಿಕತೆಯತ್ತ ಸಾಗುವ ಗ್ರಾಮೀಣ ಜನತೆ), ಮೆರವಣಿಗೆ (ಮಠಗಳ ಧಾರ್ಮಿಕ ವಿಡಂಬನೆ ಮತ್ತು ಸ್ವಾತಂತ್ರ್ಯ ಹೋರಾಟ), ಪುನರ್ಜನ್ಮ (ಸ್ವಾತಂತ್ರ್ಯ ಹೋರಾಟ), ಊರ್ವಶಿ (ವೇಶ್ಯಾ ಸ್ತ್ರೀಯೊಬ್ಬಳ ಆತ್ಮೋದ್ಧಾರದ ಕಥೆ)

ಕಥಾಸಂಕಲನಗಳು : ಬೂತಯ್ಯನ ಮಗ ಅಯ್ಯು, ಕೋರ್ಟಿನಲ್ಲಿ ಗೆದ್ದ ಎತ್ತು, ಕನ್ಯಾಕುಮಾರಿ ಮತ್ತು ಇತರ ಕತೆಗಳು, ರಾಜನರ್ತಕಿ, ವೈಯಾರಿ, ಶಿವರಾತ್ರಿ, ಗೋಪುರದ ಬಾಗಿಲು, ಕಮ್ಮಾರ ವೀರ ಭದ್ರಾಚಾರಿ, ಪಾಶ್ಚ್ಯಾತ್ಯ ಪುರಾತನರ ಕತೆಗಳು

ಅನುವಾದಗಳು : ಮಲೆನಾಡಿನವರುಭಕ್ತಿಯೋಗಭಗವಾನ್ ಕೌಟಿಲ್ಯ

ಪ್ರಬಂಧಗಳು : ಗರುಡಗಂಬದ ದಾಸಯ್ಯ, ನಮ್ಮ ಊರಿನ ರಸಿಕರು, ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು, ಕಥೆಗಳು ಮತ್ತು ವಿನೋದ ಚಿತ್ರಗಳು, ಬೆಸ್ತರ ಕರಿಯ, ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು, ಆಚಾರ ಕೆಟ್ಟರೂ ಆಕಾರ ಕೆಡಬಾರದು, ಹಾರುವಯ್ಯ ಹಜಾಮನಾದುದು, ಸೇತುವೆ, ನಮ್ಮ ಹೊಳೆಯ ಒಂದು ಅನುಭವ, ಹಳ್ಳಿಯ ಚಿತ್ರಗಳು

ಸಂಪಾದನೆ : ಹೊಸಗನ್ನಡ ಪ್ರಬಂಧ ಸಂಕಲನ

ಪ್ರವಾಸ ಸಾಹಿತ್ಯ : ಅಮೇರಿಕಾದಲ್ಲಿ ಗೊರೂರು (ಕೇಂದ್ರ ಸಾಹಿತ್ಯ ಅಕಾಡೆಮಿ)

ಲೇಖನಗಳ ಸಂಗ್ರಹ : ಸಾಹಿತ್ಯ ರಶ್ಮಿ

ಜನಪದ : ಜನಪದ ಜೀವನ ಮತ್ತು ದರ್ಶನಹಳ್ಳಿಯ ಬಾಳುಹಳ್ಳಿಯ ಹಾಡುಗಳು

ಅಭಿನಂದನಾ ಗ್ರಂಥ : ಗೊರೂರು ಗೌರವ ಗ್ರಂಥಸಂಸ್ಮರಣ ಗ್ರಂಥ , ಹೇಮಾವತಿಯ ಚೇತನ

1982 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಎಂ ಶಿವರಾಂ (1904-1984)

ಪತ್ರಿಕೆ : ಕೊರವಂಜಿ

ನಗೆ ಬರಹಗಳು : ತುಟಿ ಮೀರುದುದು, ಕೆಣಕೋಣು ಬಾ, ಇಂದಾನೊಂದು ಕಾಲದಲ್ಲಿ, ನಗುಸರಸಿ ಅಪ್ಸರೆಯರು, ಥಳುಕುಥಣಕ, ನಗೆಗೆರೆ ಚಿತ್ರಗಳು, ನಗು, ಜಗ್ಗೋಜಿ, ನಮ್ಮ ಅಡಿಗೆ ಪದದ ಊಟ, ಕಾರ್ತೀಕ  ನಗು ಸಂಸಾರಿಗಳು, ಕೊರವಂಜಿ ಕಂಡ ನಗು ಸಂಸಾರಿಗಳು ಕೊರವಂಜಿ ಕಂಡ ನಗು ದರ್ಬಾರಿಗಳು, ಕೊರವಂಜಿ ಕಂಡ ನಗು ಸಮಾಜ, ಕೊರವಂಜಿ ಕಂಡ ನಗು ವ್ಯಕ್ತಿಗಳು

ಪ್ರವಾಸ ಕಥನ : ಕೊರವಂಜಿಯ ಪಡುವಣ ಯಾತ್ರೆ

ಕಥಾ ಸಂಕಲನ : ಬುದ್ದೋಜಿಪೋಂತಿಯಾಗೋಅಂಚೆಪೇದೆಯ ಅಂತರ್ ಹೆಂಡತಿ

ಆರೋಗ್ಯ : ಮನೋನಂದನಮನಮಂಥನ (ಕೇಂದ್ರ ಸಾಹಿತ್ಯ ಅಕಾಡೆಮಿ)

ವಿಚಾರ ಸಾಹಿತ್ಯ : ಮನನಮೃಗಶಿರ ಕಾಲಪಶ್ಯಾಮಿ ಕಥೆಗಳುಯೋಚಿಸಿದರೆ

ಕಾದಂಬರಿ : ಪಂಪಾಪತಿಯ ಕೃಪೆ (ವಿಜಯನಗರ ಕಾಲದ ಘಟನೆಯೊಂದರ ಆಧಾರಿತ), ಮಧುವನದಲ್ಲಿ ಮೇಳ, ಹರಿದ ಉಯಿಲು,  ಕಾರ್ತೀಕ ಸೋಮವಾರ

ಕವನ ಸಂಗ್ರಹ : ಸಾಕ್ಷಿ ಸಂಕಲಿಕೆ

ಇಂಗ್ಲೀಷ್ ಕೃತಿಗಳು : ಕೈಲಾಸಂ ಅಂಡ್ ಐಆನಂದ ಅಂಡ್ ಎಕ್ಸ್ಪೀರಿಯನ್ಸ್ಆನಂದ ಅಂಡ್ ದ ಗ್ರೇಟ್ ತ್ರೀ ಆಚಾರ್ಯಾಸ್ಡೆತ್ ಅಂಡ್ ನಚಿಕೇತ

 

ಕ ವೆಂ ರಾಘವಾಚಾರ್ (1904-1986)

ಕನ್ನಡದಲ್ಲಿ ಅನೇಕ ಹೊಸ ಶಬ್ದಗಳನ್ನು ಸೃಷ್ಟಿಸಿ ಶಬ್ದಬ್ರಹ್ಮ ಎನಿಸಿಕೊಂಡರು

ಗ್ರೀಕ್ ನಿಂದ ಮೊದಲ ಬಾರಿಗೆ ನಾಟಕಗಳನ್ನು ಕನ್ನಡಕ್ಕೆ ಪರಿಚಯಿಸಿದರು.

ಅನುವಾದ : ಅಂತಿಗೊನೆ (ಸೋಫೋಕ್ಲಿಸ್), ಅಗಮೆಮ್ನಾನ್ (ಈಸ್ಕಿಲಸ್), ಕಪ್ಪೆಗಳು (ಈಡಿಪಸ್)

ಸಂಪಾದನೆ : ಜನ್ನನ ಯಶೋಧರ ಚರಿತೆ

ಲೇಖನ ಸಂಗ್ರಹ : ನಂದಾನೆನಪು

ಭಾಷಾಶಾಸ್ತ್ರ : ತೌಲನಿಕ ದ್ರಾವಿಡ ಭಾಷಾ ವಿಜ್ಞಾನ

 

ಗೋವಿಂದ ಭೀಮಾಚಾರ್ಯ ಜೋಶಿ (1904-1993)

ಜಡಭರತ ಮತ್ತು ಅನಾಮಧೇಯ ಇವರ ಕಾವ್ಯನಾಮಗಳು

ಮನೋಹರ ಗ್ರಂಥಮಾಲೆಯನ್ನು ಸ್ಥಾಪಿಸಿದರು

ನಾಟಕ : ಮೂಕಬಲಿ, ಆ ಊರು ಈ ಊರು (ಎರಡೂ ನಾಟಕಗಳ ವಸ್ತು ಗ್ರಾಮೀಣ ಮತ್ತು ನಗರ ಸಮಾಜ, ಪುರುಷ ಸಮಾಜದ ದಬ್ಬಾಳಿಕೆ, ಸಂಕೇತಕ್ಕಾಗಿ ಸಂಕೇತ ಎಂಬ ಅನುಭವ)

ಅನುವಾದ : ನಾನೇ ಬಿಜ್ಜಳ (ಪಿರಾಂಡೆಲ್ಲೋನ ನಾಲ್ಕನೇ ಹೆನ್ರಿ ನಾಟಕ), ಸತ್ತವರ ನೆರಳು (ದ್ವಿಭಾಷಾ ನಾಟಕ, ದೃಶ್ಯಮಾದ್ಯಮದ ಸಂವಹನದಲ್ಲಿನ ಸಮಸ್ಯೆಗಳು, ಧಾರ್ಮಿಕ ಅವ್ಯವಹಾರಗಳು), ಕದಡಿದ ನೀರು (ಸ್ವಾತಂತ್ರ್ಯೋತ್ತರ ಭಾರತದ ಹದಗೆಟ್ಟ ಗ್ರಾಮೀಣ ಸ್ಥಿತಿಗತಿ), ಪರಿಮಳದವರು

ಸಂಪಾದನೆ : ಜರ್ಮನ್ ಬಂಗ್ಲೆ

ಕಾದಂಬರಿ : ಧರ್ಮಸೆರೆ (ವನಮಾಲಿ ಎಂಬ ಮೂಕ ಹೆಣ್ಣಿನ ಹೋರಾಟದ ಬದುಕು ಮತ್ತು ಮೀನಾಕ್ಷಿ ಎಂಬ ಅಕ್ಷರಸ್ಥ ಹೆಣ್ಣಿನ ಶರಣಾಗತಿಯ ಬದುಕು)

ಕವನ ಸಂಕಲನ : ಜೀವಫಲ

ಜಡಭರತನ ಕನಸುಗಳು ಎಂಬುದು ಒಂದು ಬಗೆಯ ಸ್ವಪ್ನಕಥನ

 

ಸಿಂಪಿ ಲಿಂಗಣ್ಣ (1905-1993)

ಕರ್ನಾಟಕದ ಜಾನಪದ ರತ್ನಜಾನಪದ ದಿಗ್ಗಜರೆಂದೆ ಖ್ಯಾತರಾದವರು ಸಿಂಪಿ ಲಿಂಗಣ್ಣ

ಪತ್ರಿಕೆ : ಮುದ್ದು (ಕೈಬರಹದ ಪತ್ರಿಕೆ)ಕಮತಿಗೆಅಮೃತ

ಹಲಸಂಗಿ ಗೆಳೆಯರು ಎಂಬ ಗುಂಪನ್ನು ಕಟ್ಟಿದರು

ಜಾನಪದ ಕೃತಿಗಳು : ಜಾನಪದ ಗರತಿಯ ಹಾಡು (ತ್ರಿಪದಿಗಳು)ಜೀವನ ಸಂಗೀತ (ಲಾವಣಿಗಳು)ಹೆಡಿಗೆ ಜಾತ್ರೆ (ಜನಪದ ಪ್ರಬಂಧಗಳ ಸಂಕಲನ)

ಮಲ್ಲಿಗೆ ದಂಡೆ, ಉತ್ತರ ಕರ್ನಾಟಕದ ಜನಪದ ಕಥೆಗಳು, ಗರತಿಯ ಬಾಳು, ಜನಾಂಗದ ಜೀವಾಳ, ಕಿರಿದರೊಳ್ ಪಿರಿದರ್ಥದ ಚಲಕ, ಉತ್ತರ ಕರ್ನಾಟಕದ ಜನಪದ ಗೀತೆಗಳು, ಲಾವಣಿಗಳು, ಗರತಿಯ ಬಾಳ ಸಂಹಿತೆ, ಗಾದೆಗಳ ಗಾರುಡಿ, ನಾಟ್ಯ ಸಾಧನೆ, ತಲೆಮಾರಿನ ಹಿಂದೆ, ಸಾಯ್ ಕೊಲ್

ಕವನ ಸಂಕಲನ : ಮಿಲನ (ಖಂಡಕಾವ್ಯ), ಮುಗಿಲ ಜೇನು, ಶ್ರುತಾಶ್ರುತ, ಪೂಜಾ, ಪೂಜಾಗದ್ಯಗೀತೆಗಳು, ಮಾತೃವಾಣಿ, ನಮಸ್ಕಾರ, ಸಾಯ್ಕೊಲ್

ಕಥಾ ಸಂಕಲನ : ಢಾಳಿಸಿದ ದೀಪಕಣ್ಮಸುಕುಮಧುವನಸತ್ಯಕತೆಗಳು, ಪವಿತ್ರ ಜೀವನ (ಟಾಲ್ಸ್ಟಾಯ್ ಕಥೆಗಳು), ಸುಂದರ ಕಥೆಗಳು

ಕಾದಂಬರಿ : ಬೆಟ್ಟದ ಹೊಳೆ

ನಾಟಕಗಳು : ಮರೆಮುಚ್ಚುಕ (ಅಸ್ಪೃಶ್ಯತೆಯ ವಿರೋಧ), ಜನಜೀವನ, ಸಪ್ತಪದಿ, ಭಕ್ತಿರಹಸ್ಯ, ಮೊದಲನೆ ದೇಶದ್ರೋಹಿ, ಸಾವಿನ ಸಮಸ್ಯೆ

ಚಂಡಾಳ ಚೌಕಡಿ ಮತ್ತು ಪೃಥ್ವಿರಾಜ ನಾಟಕಗಳ ತಿರುಳು ಗ್ರಾಮೀಣ ಜನರ ಪುಂಡಾಟಿಕೆಯ ಕತೆ

ಪ್ರಬಂಧ ಸಾಹಿತ್ಯ : ಜೀವನ ದೃಷ್ಟಿ, ಸತ್ಯಕಾಮ, ಸರ್ವಜ್ಞ, ಸ್ವರ್ಗದೋಲೆಗಳು, ಸನ್ಯಾಸಿ ದಿಬ್ಬ, ಬದುಕಿನ ಬೆಲೆ, ಸಾಹಿತ್ಯ ಸಂಪರ್ಕ, ಬಾಳ ಬೇಸಾಯ, ಆರ್ಯದೇಶ ಭಕ್ತಿ, ಭಾರತದ ಭವ್ಯ ಸಿದ್ಧತೆ, ಭಾರತದ ಸಾಂಸ್ಕೃತಿಕ ಸಂಘಟನೆ, ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?, ಬಾಳಬಟ್ಟೆ, ನೂರು ಗಡಿಗೆ ಒಂದು ಬಡಿಗೆ, ಮಕ್ಕಳಿವರೇನಮ್ಮ?, ಅಸ್ತವ್ಯಸ್ತ, ದಿಟ್ಟಿಸಿ ನೋಡಿದರೆ

ಜೀವನ ಚರಿತ್ರೆಗಳು : ಸಿಡಿಲು ಸನ್ಯಾಸಿ (ವಿವೇಕಾನಂದ ಜೀವನ)ಮಹತ್ಕ್ರಾಂತಿಯ ಮಹಾಮನು (ರಾಮಕೃಷ್ಣ ಪರಮಹಂಸ)ದತ್ತ ಸಾಹಿತ್ಯ (ಬೇಂದ್ರೆಯವರ ಜೀವನ ಹಾಗೂ ಸಾಹಿತ್ಯ), ಮಧುರಚನ್ನರ ಸ್ಮೃತಿಗಳು, ಕರೆಯಿಸಿಕೊಂಡು ಬಂದವರುಸುಪ್ರಮಾನಸದ ಮಹಾಮಾತೆ, ಮಧುರಚನ್ನರು: ಅವರ ಕಾರ್ಯ ಮತ್ತು ಸಾಧನೆ, ವಿಶ್ವಕವಿ ರವೀಂದ್ರ

ಆತ್ಮ ಚರಿತ್ರೆ : ಮೂವತ್ತೈದು ವರ್ಷನಾಗಾಲೋಟ

ಇತರ ಪ್ರಮುಖ ಕೃತಿಗಳು : ಕಿರುಗನ್ನಡಿ (ಕನ್ನಡ ವ್ಯಾಕರಣ), ಲೋಬೋಲೋಬೋ, ಸ್ವಾರ್ಥತ್ಯಾಗ, ಕವಿ ಮತ್ತು ಕಾವ್ಯ, ಹರಿಜನೋದ್ಧಾರ

1993 ರಲ್ಲಿ ಕೊಪ್ಪಳದಲ್ಲಿ ನಡೆದ 62 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಕಾಪಸೆ ರೇವಪ್ಪ

ಮಧುರ ಚೆನ್ನರೊಂದಿಗೆ ಗರತಿಯ ಹಾಡು ಮತ್ತು ಮಲ್ಲಿಗೆ ದಂಡೆ ಕೃತಿಗಳನ್ನು ಸಂಪಾದಿಸಿದ್ದಾರೆ.

ಕಥಾಸಂಕಲನ : ನಂದನವನ

ಕಾದಂಬರಿ : ಸನ್ಯಾಸಿ

 

ಪು ತಿ ನರಸಿಂಹಾಚಾರ್ (1905-1998)

ಕವನ ಸಂಕಲನ : ಕಿರಿಯರ ಕಾಣಿಕೆ, ತಳಿರು, ಹಣತೆ, ಮಾಂದಳಿರು, ಶಾರದ ಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ, ಇರುಳ ಮೆರುಗು, ಹಳೆಯ ಬೇರು ಹೊಸ ಚಿಗುರು, ಎಂಬತ್ತರ ನಲುಗು, ರಥಸಪ್ತಮಿ, ನಿರೀಕ್ಷೆ, ಹಣತೆಯ ಹಾಡು

ಕಾವ್ಯ : ನವಿರಂಗಿ (ಕಥನ ಕವನ)ಶ್ರೀಹರಿ ಚರಿತೆ (ಮಹಾಕಾವ್ಯಪಂಪ ಪ್ರಶಸ್ತಿ)

ಗೀತನಾಟಕಗಳು : ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ಶಬರಿ, ಗೋಕುಲ ನಿರ್ಗಮನ, ಹರಿಣಾಭಿಸರಣ, ದೀಪಲಕ್ಷ್ಮಿ, ಕುಚೇಲ ಕೃಷ್ಣ, ಶ್ರೀ ರಮಣ ಪ್ರಭ

ವಿಕಟಕವಿ ವಿಜಯ (ಸಮಕಾಲೀನ ರಾಜಕೀಯ ಸ್ಥಿತಿಗತಿ)ಹಂಸದಮಯಂತಿ ಮತ್ತು ಇತರ ರೂಪಕಗಳು (ಕೇಂದ್ರ ಸಾಹಿತ್ಯ ಅಕಾಡೆಮಿ)ಕವಿ ಮತ್ತು ದೋಣಿಯ ಬಿನದ (ಜಾನಪದ ಗೀತನಾಟಕ), ಜಾಹ್ನವಿಗೆ ಜೋಡಿ ದೀವಿಗೆ 

ಪ್ರಬಂಧ ಸಾಹಿತ್ಯ : ರಾಮಾಚಾರಿಯ ನೆನಪು (ನೆನಪುಗಳ ಸಂಕಲನ), ಧ್ವಜರಕ್ಷಣೆ (ದೇಶಭಕ್ತಿ), ದೀಪರೇಖೆ (ಧಾರ್ಮಿಕ ವಿಮರ್ಶೆ), ಈಚಲ ಮರದ ಕೆಳಗೆ, ಧೇನುಕ ಪುರಾಣ, ಭೀತಿಮೀಮಾಂಸೆ, ಯದುಗಿರಿಯ ಗೆಳೆಯರು, ರಥಸಪ್ತಮಿ

ಮೀಮಾಂಸೆ : ಕಾವ್ಯ ಕುತೂಹಲರಸಪ್ರಜ್ಞೆ

ಅನುವಾದ : ಬದಲಿಸಿದ ತಲೆಗಳು, ಸಿರಿಬಾಯನುಡಿ, ಮಹಾಪ್ರಸ್ಥಾನ, ಕನ್ನಡ ಭಗವದ್ಗೀತೆ, ಗಯಟೆಯ ಫೌಸ್ಟ್, ನಮ್ಮಾಳ್ವರ್, ಸಮಕಾಲೀನ ಭಾರತೀಯ ಸಾಹಿತ್ಯ

ಅಭಿನಂದನಾ ಗ್ರಂಥ : ಯದುಗಿರಿಯ ವೀಣೆಯದುಗಿರಿ

1981 ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ 63 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು


ಬಿ ಬಿ ಹೆಂಡಿ

ಪ್ರಮುಖ ಕೃತಿಗಳು : ಕರ್ನಾಟಕದ ಗಾದೆಗಳು (ಡಾ. ಲಠ್ಠೆಯವರೊಂದಿಗೆ)ಆಯ್ದ ಜನಪದ ಕಥನ ಗೀತೆಗಳು, ಜಾನಪದ ಸಾಹಿತ್ಯ ದರ್ಶನ, ದಾಸರಾಟ, ಜಾನಪದ ಶಾಸ್ತ್ರ, ಹರದೇಶಿ ನಾಗೇಶಿ, ಜನಪದ ನೂರೆಂಟು ಕಥೆ.

ಕಾಮೆಂಟ್‌ಗಳು