ನವೋದಯ ಭಾಗ 3

ನವೋದಯ  ಭಾಗ 3

ತೀ ನಂ ಶ್ರೀಕಂಠಯ್ಯ (1906-1966)

ಕವನ ಸಂಕಲನ : ಒಲುಮೆ (ಕನ್ನಡದ ಮೊದಲನೆಯ ಪ್ರೇಮಗೀತೆಗಳ ಕವನ ಸಂಕಲನ), ಬಿಡಿ ಮುತ್ತು (ಸಂಸ್ಕೃತ ಸುಭಾಷಿತ ಮತ್ತು ಮುಕ್ತಕಗಳ ಕನ್ನಡಾನುವಾದ)

ಪ್ರಬಂಧ ಸಂಕಲನ : ನಂಟರು

ಮೀಮಾಂಸೆ : ಭಾರತೀಯ ಕಾವ್ಯಮೀಮಾಂಸೆ (ಮರಣೋತ್ತರ ಪಂಪ ಪ್ರಶಸ್ತಿ), ಕಾವ್ಯಾನುಭವ

ವ್ಯಾಕರಣ : ಕನ್ನಡ ಮಧ್ಯಮ ವ್ಯಾಕರಣ

ಸಂಪಾದನೆ : ನಂಬಿಯಣ್ಣನ ರಗಳೆ, ಗದಾಯುದ್ಧ, ಹೆಣ್ಣು ಮಕ್ಕಳ ಪದಗಳು (ಜನಪದ ಗೀತೆಗಳ ಸಂಗ್ರಹ)

ಅನುವಾದ : ರಾಕ್ಷಸನ ಮುದ್ರಿಕೆ (ಸಂಸ್ಕೃತ ನಾಟಕ ಮುದ್ರಾರಾಕ್ಷಸದ ರೂಪಾಂತರ)

ವಿಮರ್ಶಾ ಕೃತಿಗಳು : ಪಂಪ, ಕಾವ್ಯ ಸಮೀಕ್ಷೆ, ಸಮಾಲೋಕನ

ಅಭಿನಂದನಾ ಗ್ರಂಥ : ಶ್ರೀಕಂಠತೀರ್ಥ

 

ರಂ ಶ್ರೀ ಮುಗಳಿ (1906-1993)

ರಸಿಕರಂಗ ಇವರ ಕಾವ್ಯನಾಮ. ಅಲ್ಲದೆ ಗಡಿನಾಡಿನ ಕನ್ನಡ ದೀಪ, ಕನ್ನಡ ಪಾರಿಜಾತ ಎಂಬುವು ಇವರಿಗಿದ್ದ ಜನಪ್ರಿಯ ಬಿರುದುಗಳು

ಕವನ ಸಂಕಲನಗಳು : ಬಾಸಿಗ, ಅಪಾರ ಕರುಣೆ, ಓಂ ಅಶಾಂತಿ, ಮೋಟುಮರ ಮಾತಾಡಿತು, ನಿತ್ಯ ನಿರಂತರ, ನವಮಾನವ, ಮಣಿಮಾಲೆ, ಸಾವಿತ್ರಿ, ಪ್ರಳಯದ ಕಸ.

ಕಥಾ ಸಂಕಲನ : ಕನಸಿನ ಕೆಳದಿ

ಕಾದಂಬರಿಗಳು : ಅನ್ನ (ಬಂಗಾಳದ ಬರಪೀಡಿತ ಸಂದರ್ಭದ ಕತೆ), ಬಾಳುರಿ (ಬಡತನ, ನಿರುದ್ಯೋಗ), ಕಾರಣಪುರುಷ (ಕರ್ನಾಟಕದ ಏಕೀಕರಣ, ಬಡತನ, ನಿರುದ್ಯೋಗ), ಅಗ್ನಿವರ್ಣ

ನಾಟಕಗಳು : ಎತ್ತಿದ ಕೈ (ಏಕಾಂಕ) ಮತ್ತು ಸೇವಾ ಪ್ರದೀಪ ಮತ್ತು ವಿಜಯ ಸಾಮ್ರಾಜ್ಯ ನಾಟಕಗಳು ವಿಜಯನಗರ ಇತಿಹಾಸದ ಕುರಿತಾದುದಾಗಿವೆ

ನಾಮಧಾರಿ (ಪ್ರತಿಷ್ಠಿತ ವ್ಯಕ್ತಿಗಳ ವಿಡಂಬನೆ), ಮನೋರಾಜ್ಯ, ಧನಂಜಯ, ಅಕ್ಕಮಹಾದೇವಿ, ಪಾವನ ಪಾವಕ, ಅಪೂರ್ವ.

ವಿಮರ್ಶಾ ಕೃತಿಗಳು : ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು, ಸಾಹಿತ್ಯೋಪಾಸನೆ, ರನ್ನನ ಕೃತಿರತ್ನ, ತವನಿಧಿ, ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ, ವಿಮರ್ಶೆಯ ವ್ರತ, ಕನ್ನಡ ಸಾಹಿತ್ಯ ಚರಿತ್ರೆ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ಕನ್ನಡ ಸಾಹಿತ್ಯದ ಇತಿಹಾಸ, ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು, ಆಂಡಯ್ಯ, ಬೇಂದ್ರೆ ಕಾವ್ಯ ಮಹಾಕೃತಿ, ಪುನರ್ನವೋದಯ

ಪ್ರಬಂಧ ಸಾಹಿತ್ಯ : ಕನ್ನಡನುಡಿ ತನ್ನ ಕಾಲಮೇಲೆ ತಾ ನಿಲ್ಲಬಹುದೇ?, ನವೀನ ಪ್ರಜ್ಞೆಯ ಸೂತ್ರಗಳು, ಕನ್ನಡದವೆಂಬಾ ಮಂತ್ರ, ಕನ್ನಡದ ಕರೆ, ಸಾಹಿತ್ಯ ಮತ್ತು ಪರಂಪರೆ, ಕನ್ನಡ ಸಾಹಿತ್ಯದ ವೈಶಿಷ್ಠ್ಯ, ಮಾತೆಂಬುದು ಜ್ಯೋತಿರ್ಲಿಂಗ, ಕನ್ನಡನಾಡಿನಲ್ಲಿ ಪರೋಪಕಾರ, ಕಟುಸತ್ಯ, ಪಾಥೇಯ, ಕನ್ನಡ ಕಾವ್ಯ ಸಂಚಯ, ಕನ್ನಡ ಸಾಂಸ್ಕøತಿಕ ಪರಂಪರೆ, ಮಹಾಕೃತಿ, ನವೀನ ಪ್ರಜ್ಞೆ ಸೂತ್ರಗಳು

ವಿನೋದ ಸಾಹಿತ್ಯ : ನನ್ನ ಕೆಲವು ಯುದ್ಧೋತ್ತರ ಯೋಜನೆಗಳು, ನಾದುರಸ್ತ

ಇಂಗ್ಲಿಷ್ ಸಾಹಿತ್ಯ : ಹೆರಿಟೇಜ್ ಆಫ್ ಕರ್ನಾಟಕ

ಜೀವನ ಚರಿತ್ರೆ : ಅರವಿಂದ ಮಕರಂದ, ಶಾಂತಕವಿ

ಆತ್ಮ ಕಥನ : ಜೀವನ ರಸಿಕ

1963 ರಲ್ಲಿ ತುಮಕೂರಿನ ಸಿದ್ಧಗಂಗಾದಲ್ಲಿ ನಡೆದ 44 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ತ ಸು ಶಾಮರಾಯ (1906-1998)

ಸಂಶೋಧನಾ ಪ್ರಬಂಧ : ಕನ್ನಡ ನಾಟಕಗಳು

ವಿಮರ್ಶಾ ಗ್ರಂಥಗಳು : ರತ್ನಾಕರ ವರ್ಣಿ, ಮುದ್ದಣ, ಪಂಪ, ಸಾಹಿತ್ಯ ಚರಿತ್ರೆ ವಿಮರ್ಶೆ,

ಸಂಪಾದನೆ : ಅರಣ್ಯ ಪರ್ವ, ಅದಿಪರ್ವ, ಉದ್ಯೋಗಪರ್ವ, ವಿರಾಟ ಪರ್ವ, ಸಭಾಪರ್ವ, ಕನ್ನಡ ಮಹಾಭಾರತ, ಕುಮಾರವ್ಯಾಸ ಭಾರತ, ಭರತೇಶ ವೈಭವ, ಜೈಮಿನಿ ಭಾರತ, ಅಚಣ್ಣನ ವರ್ಧಮಾನ ಪುರಾಣ, ಅಜಿತ ಪುರಾಣ, ಕರ್ನಾಟಕ ಶಬ್ದಾನುಶಾಸನಂ, ಶಬ್ದಮಣಿ ದರ್ಪಣಂ, ಮಹಾಶ್ವೇತೆ, ಹರಿಹರನ ಉಡುತಡಿಯ ಅಕ್ಕಮಹಾದೇವಿ ರಗಳೆ

ನಿಘಂಟು : ಕುಮಾರವ್ಯಾಸ ಭಾರತದ ನಿಘಂಟು, ಜೈನ ಪರಿಭಾಷಾ ರತ್ನಕೋಶ

ವ್ಯಾಕರಣ : ವ್ಯಾಕರಣ ಸಾರ

ಕಾದಂಬರಿ : ಮಂಕನ ಮಡದಿ

ಕಥಾಸಂಕಲನ : ಶಿವಶರಣ ಕಥಾರತ್ನ ಕೋಶ, ಕಥಾವಲ್ಲರಿ (ಪ್ರಾಚೀನ ಕಥನ ಕವನಗಳ ಸಂಗ್ರಹ), ಕಥಾಕೋಶ

ಇತರ ಪ್ರಮುಖ ಕೃತಿಗಳು : ವಚನ ರಾಮಾಯಣ, ವಚನ ಭಾಗವತ, ಕನ್ನಡ ಸಾಹಿತ್ಯ ಚರಿತ್ರೆ, ಭಾರತದ ಇತಿಹಾಸ ಪಾಠಗಳು

ಮೂರು ತಲೆಮಾರು ಕೃತಿಯಲ್ಲಿ ಇವರ ಕುಟುಂಬದ ಅನುಭವಗಳ ಸಂಗ್ರಹವಿದೆ.

ಅಭಿನಂದನಾ ಗ್ರಂಥ : ಸ್ವಸ್ತಿ, ನಂದನವನ

 

ಆದಿನಾಥ ನೇಮಿನಾಥ ಉಪಾಧ್ಯೆ (1906-1975)

ಪ್ರಾಕೃತ ಸಾಹಿತ್ಯ : ಆನಂದ ಸುಂದರಿ (ನಾಟಕ), ಉಷಾಣಿರುದ್ಧ (ಕಾವ್ಯ), ಕಾರ್ತಿಕೇಯಾನು ಪ್ರೇಕ್ಷ್ಯಾ, ಕುವಲಯ ಮಾಲಾಕಹಾ (ಶೃಂಗಾರ ಪ್ರಧಾನ ಕಾವ್ಯ), ಜಂಬೂದೀವ ಪಣ್ಣತ್ತಿ ಸಂಗ್ರಹ, ಚಂದ್ರಲೇಖಾ, ಪ್ರವಚನ ಸಾರ.

ಸಂಸ್ಕೃತ ಸಾಹಿತ್ಯ : ಕಥಾ ಕೋಶ, ಧೂರ್ತಾಖ್ಯಾನ ( ವಿಡಂಬನ ಕಥಾಕೋಶ), ಅನ್ಯ ಟೀಕಾಕಾರರು, ಪುಣ್ಯಾಸ್ರವ ಕಥಾಕೋಶ.

ಇಂಗ್ಲಿಷ್ ಸಾಹಿತ್ಯ : ಪ್ರಾಕೃತ ಲಾಂಗ್ವೇಜಸ್ ಅಂಡ್ ಲಿಟರೇಚರ್, ಗೋವಿಂದ ಪೈ- ಮ್ಯಾನ್ ಆಫ್ ಲೆಟರ್ಸ್, ಸಮಂತಭದ್ರ ಅ್ಯನ್ ಔಟ್ಸ್ಟ್ಯಾಂಡಿಂಗ್ ಪರ್ಸನಾಲಿಟಿ.

ಕನ್ನಡ ಸಾಹಿತ್ಯಪ್ರಾಕೃತ ಭಾಷೆ, ಕವಿ ರನ್ನ ಇತ್ಯಾದಿ ಲೇಖನಗಳು.

ಸಂಪಾದನೆ : ಚಿನ್ಮಯ ಚಿಂತಾಮಣಿ, ಜ್ಞಾನಭಾಸ್ಕರ ಚರಿತೆ  ಇವುಗಳು ಕಾವ್ಯಗಳು. ಪಾಲಿ ಮತ್ತು ಪ್ರಾಕೃತ, ಧವಲಾ, ಆತ್ಮಾನುಶಾಸನ, ಪಂಚವಿಂಶತಿ, ತಿಲೋಯ ಪಣ್ಣತ್ತಿ, ಬೃಹತ್ ಕಥಾಕೋಶ.

1967 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ 46 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಎಸ್ ಕೆ ಕರೀಂಖಾನ್ (1908-2006)

ಕಥಾಸಂಕಲನ : ನಿವಾರ (ಚಾರಿತ್ರಿಕ ಕತೆಗಳ ಸಂಕಲನ)

ಅನುವಾದ : ನೀಹಾರ (ಉರ್ದುವಿನಿಂದ ಕನ್ನಡಕ್ಕೆ ತಂದ ಕತೆಗಳ ಸಂಕಲನ)

ಕಾದಂಬರಿ : ಬಲಿದಾನಿ ಹುಸೇನ್ (ಸ್ವಾತಂತ್ರ್ಯಾನಂತರ ಭಾರತದ ದುಸ್ಥಿತಿಯ ಚಿತ್ರಣ), ಮಾತೃಶಾಪ

ನಾಟಕ : ನಿರ್ದೋಷಿ, ಶ್ರೀ ಕೃಷ್ಣಲೀಲೆ, ಹುಮಾಯುನ್, ಅಂಬರನಾಥ, ಮಹಾಪ್ರಭು ಮಾಗಡಿ ಕೆಂಪೇಗೌಡ.

 

ಜಿ ಪಿ ರಾಜರತ್ನಂ (1909-1979)

ಇವರ ಕಾವ್ಯನಾಮ ಭ್ರಮರ

ಕಾವ್ಯಗಳಲ್ಲಿ ಕನ್ನಡಾಂಗ್ಲೋ ಪದಗಳ ಬಳಕೆಯನ್ನು ತಂದವರು.

ಏಕಾಂಕ ನಾಟಕಗಳು ನಾಟಕಗಳು : ಸಂಭವಾಮಿ ಯುಗೇ ಯುಗೇ, ಗಂಡುಗೊಡಲಿ, ನರಕದ ನ್ಯಾಯ ಮತ್ತು ಕಂಬ್ಲಿ ಸೇವೆ, ಸೋಲಿಗರ ಸಿದ್ಧ ಮತ್ತು ನೆನಪು

ಕವನ ಸಂಕಲನಗಳು : ಹೀಗಾಯಿತು, ಶಾಂತಿ, ನೂರು ಪುಟಾಣಿ, ಪುರುಷ ಸರಸ್ವತಿ, ರತ್ನನ ಪದಗಳು, ಎಂಡಕುಡುಕ ರತ್ನ, ನಾಗನ ಪದಗಳು

ವಿಮರ್ಶೆಗಳು : ವಿಚಾರ ತರಂಗ, ಕಿರಣಾನುಭವ, ಸಭಾವಿನಯ, ಸಾರಸ್ಯ ಮತ್ತು ವಿಚಾರ ರಶ್ಮಿ

ಮಕ್ಕಳ ಸಾಹಿತ್ಯ : ಕೆನೆಹಾಲು, ತಾರೆ, ಚುಟುಕ

ಉಪನ್ಯಾಸಗಳ ಸಂಕಲನ : ಸ್ನೇಹದ ಸೇತುವೆ

ಆತ್ಮಕತೆ : ಹತ್ತುವರ್ಷ, ನಿರ್ಭಯಾಗ್ರಫಿ

ಇತರೆ ಪ್ರಮುಖ ಕೃತಿಗಳು : ಬುದ್ಧನ ಜಾತಕಗಳು, ಧರ್ಮದಾನಿ ಬುದ್ಧ, ಭಗವಾನ್ ಮಹಾವೀರ, ಮಹಾವೀರನ ಮಾತುಕತೆ, ಬುದ್ಧ ವಚನ ಪರಿಚಯ, ಜಾತಕ ಕತೆಗಳು, ಪಾಲಿಪಜ್ಜ ಪುಷ್ಪಾಂಜಲಿ, ಶ್ರೀ ಗೊಮ್ಮಟೇಶ್ವರ, ಚೀನಾ ದೇಶದ ಬೌದ್ಧ ಯಾತ್ರಿಕರು ಮುಂತಾದವು.

ಕಡಲೆಪುರಿ, ಗುಲಗಂಜಿ, ಕಂದನ ಕಾವ್ಯಮಾಲೆ, ಕೋಳಿ ಕಳ್ಳ, ಗೂಳೂರು ಗಾಯಕರು, ಬಾ ಕರು ಬಾ

ನಮ್ಮ ನಮ್ಮವರು, ವಿದ್ಯಾರ್ಥಿ ವಿಚಾರ ವಿಲಾಸ, ಗಂಧದ ಗುಡಿ, ನಮ್ಮ ಬೇಂದ್ರೆಯವರು, ಬಾಲ ಸರಸ್ವತಿ, ಹೂವಿನ ಪೂಜೆ,

ಅಭಿನಂದನಾ ಗ್ರಂಥಗಳು : ಜೀವರತ್ನ, ಪರಿಚಾರಕ

1978 ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ದಿನಕರ ದೇಸಾಯಿ (1909-1982)

ಕನ್ನಡ ಸಾಹಿತ್ಯದಲ್ಲಿ ಚುಟುಕುಬ್ರಹ್ಮ ಎಂದೇ ಖ್ಯಾತರಾದವರು

ಪತ್ರಿಕೆ : ಜನಸೇವಕ

ಕವನ ಸಂಗ್ರಹ : ಪ್ರಪಂಚದ ಕೆಲಸಗಾರರು, ಹೂ ಗೊಂಚಲು, ತರುಣರ ದಸರೆ, ಕಡಲ ಕನ್ನಡ, ದಾಸಾಳ, ರೈತರ ಹಾಡುಗಳು, ಮಕ್ಕಳ ಗೀತೆಗಳು, ಮಕ್ಕಳ ಪದ್ಯಗಳು, ಚೌಪದಿ, ವಾಸಾಳ

ಪ್ರವಾಸ ಕಥನ : ನಾ ಕಂಡ ಪಡುವಣ

ಅಭಿನಂದನಾ ಗ್ರಂಥ : ದಿನಕರ ದರ್ಶನ

 

ಎಂ ವಿ ಸೀತಾರಾಮಯ್ಯ (1910-1990)

ಮೈ ವೆಂ ಸಿ ಮತ್ತು ರಾಘವ ಇವರ ಕಾವ್ಯನಾಮಗಳು

ಕವನ ಸಂಕಲನ : ಹಕ್ಕಿ ಹಾಡು, ರಾಗ, ಅಶೋಕ ಚಕ್ರ, ಆ ಚಿತ್ರಗಳು ಮತ್ತು ಇತರ ಕಥನ ಕವನಗಳು, ವಿಶ್ವಜ್ಯೋತಿ ಬಾಪು, ರಾಷ್ಟ್ರರಥ, ಗೀತಭಾರತಿ, ಹಂಸಪಥ

ಕಥಾ ಸಂಕಲನ : ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ, ಶಿಲಾಮುಖ,   ಯೌವನಸುಧೆ, ಮಾರ್ಗದರ್ಶಕ, ಕರುಣಾಲಹರಿ

ನಾಟಕ : ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗಿದ ಕೈ, ಸ್ವಯಂವರ, ಜೀವನ ನಾಟಕ

ಕಾದಂಬರಿ : ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ, ಮಾವನ ಮಗಳು, ಸ್ನೇಹದ ಕಾಣಿಕೆ, ತಾಯ ಬಯಕೆ  ಮುಂತಾದವು.

ಪ್ರಬಂಧ : ಧೂಮಲೀಲೆ, ಮುಗಿಲುಗಳು, ಹಿಡಿಹೂವು, ಹಿತಚಿಂತನ, ಬಾಳಿನ ಬುತ್ತಿ

ಸಂಪಾದನೆ : ಚಿನ್ನದ ಬೆಳಸು, ಕವಿರಾಜಮಾರ್ಗ, ಉದಯಾದಿತ್ಯಾಲಂಕಾರ

ವಿಮರ್ಶೆ : ಹೊಸಗನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು, ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ  ಕೊಡುಗೆ, ಕಾವ್ಯ ಮೀಮಾಂಸೆ, ಜೈಮಿನಿ ಭಾರತ ಸಮೀಕ್ಷೆ

ಮಕ್ಕಳ ಸಾಹಿತ್ಯ : ಹಾವಾಡಿಗ, ಹೂವಾಡಗಿತ್ತಿ, ಕೋಡಂಗಿ

ಇತರೆ : ಸಾಹಿತ್ಯ ಮತ್ತು ಚಿತ್ರಕಲೆ

ಅಭಿನಂದನಾ ಗ್ರಂಥ : ಆಸ್ವಾದ

 

ರಾವ್ ಬಹದ್ದೂರ್ (1910-1984)

ಇವರ ನಿಜನಾಮ ಕುಲಕರ್ಣಿ ರಾಮಚಂದ್ರ ಭೀಮರಾವ್

ಕಥಾಸಂಕಲನಗಳು : ಮನೆ ಸುಟ್ಟ ಕಿಡಿ, ಮನ ಬೆಳಗಿತು, ಇತಿಹಾಸ ಭೂತ ಮತ್ತಿತರ ಕತೆಗಳು

ಕಾದಂಬರಿಗಳು : ಗ್ರಾಮಾಯಣ (ಹಳ್ಳಿಯಲ್ಲಿ ನಡೆದ ಚಲೆಜಾವ್ ಚಳುವಳಿ ಮತ್ತು ಗ್ರಾಮೀಣ ಜೀವನದ ಸಮಗ್ರ ನೋಟ), ಧೂಮಕೇತು (ರಾಜಕೀಯ ಅವ್ಯವಸ್ಥೆ), ಕಾಂಚನಮೃಗ (ಭ್ರಷ್ಟಾಚಾರ)

ಮುತ್ತು ಕಟ್ಟಿದಳು ಮತ್ತು ದೇವದಾಸಿ ಕಾದಂಬರಿಗಳ ವಸ್ತು ಹರಕೆಹೊತ್ತ ಕೆಳಜಾತಿ ಸ್ತ್ರೀಯರ ವೇಶ್ಯಾವಾಟಿಕೆಯ ಕತೆ.

ಸೂಜಿಗಲ್ಲು, ಬಿತ್ತಿ ಬೆಳೆದವರು, ಕನಸು-ನನಸು ಕೃತಿಗಳು ಉಪ್ಪಿನ ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟದ ಅಂಶಗಳನ್ನು ಒಳಗೊಂಡಿವೆ.

ಬ್ರಹ್ಮಾಂಡ, ವೃಂದಾವನ, ಸಾಮ್ಯವಾದ, ಬಾಳು ಬಂಗಾರ, ಗೌಡರ ಕೋಣ, ತಬ್ಬಲಿಗಳು, ಮುಂತಾದವು.

ಪ್ರವಾಸ ಕಥನ : ನಾ ಕಂಡ ಬಾಂಗ್ಲಾದೇಶ

ಅನುಭವಗಳ ಸಂಕಲನ : ಮರೆಯದ ನೆನಹುಗಳು

 

ಸ ಸ ಮಾಳವಾಡ (1910-1987)

ವಿಮರ್ಶೆ : ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ, ಸಾಹಿತ್ಯ ಸಮಾಲೋಚನೆ, ಸಾಹಿತ್ಯ ಸಂಗಮ,  ಪುಸ್ತಕ ಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನ ದರ್ಶನ, ಕಾವ್ಯ

ಜೀವನ ಚಿತ್ರಣ :  ಕವೀಂದ್ರ ರವೀಂದ್ರರುಷಡಕ್ಷರಿಸಾಹಿತ್ಯ ದೃಷ್ಟಿಹರಿಹರ-ರಾಘವಾಂಕರು

ಸಂಪಾದಿತ ಕೃತಿ : ಕನ್ನಡ ಗದ್ಯಮಾಲೆ, ರಾಘವಾಂಕ ಚರಿತ್ರೆ, ಶ್ರೀ ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಪದ ಮಂಜರಿ (ಕಾವ್ಯ ನಿಘಂಟು) ಮುಂತಾದವು

ವೈಚಾರಿಕ ಬರಹ : ಸಂಸ್ಕೃತಿ, ಕಾಲವಾಹಿನಿ, ದೃಷ್ಟಿಕೋನ, ನಾಲ್ಕು ಭಾಷಣಗಳು, ಸುವಿಚಾರ ಸಂಗಮ   ಮುಂತಾದವು

ಪ್ರವಾಸ ಕಥನ : ಪಯಣದ ಕತೆಸಂಚಾರ ಸಂಗಮ

ಆತ್ಮಕೃತಿ : ಹಳ್ಳಿಯ ಹುಡುಗದಾರಿ ಸಾಗಿದೆ

 

ಸಂ ಶಿ ಭೂಸನೂರಮಠ (1910-1990)

ಸಂಪಾದನೆ : ವಚನ ಸಾಹಿತ್ಯ ಸಂಗ್ರಹ, ಭಕ್ತಿ ಸುಧಾಸಾರ, ಸಿದ್ಧನಂಜೇಶನ ಗುರುರಾಜ ಚರಿತ್ರೆ, ಮೋಳಿಗೆಯ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನವರ ವಚನಗಳು, ಗೌರಾಂಕ ಮೋಳಿಗೆಯ್ಯನ ಪುರಾಣ, ಅದೃಶ್ಯ ಕವಿಯ ಪ್ರೌಢರಾಯನ ಕಾವ್ಯ, ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ, ಮಹಾಲಿಂಗದೇವರ ಏಕೋತ್ತರ ಶತಸ್ಥಲ

ಮಹಾಕಾವ್ಯ : ಭವ್ಯ ಮಾನವ (ಅಕ್ಕಮಹಾದೇವಿ - ಪಂಪ ಪ್ರಶಸ್ತಿ)

ವಿಮರ್ಶೆ : ಪರಾಮರ್ಶೆಯ ಪರಾಮರ್ಶೆ (ಕೇಂದ್ರ ಸಾಹಿತ್ಯ ಅಕಾಡೆಮಿ). ಶೂನ್ಯ ಸಂಪಾದನೆಯ ಪರಾಮರ್ಶೆಕಲ್ಯಾಣದಿಂದ ಕಾಶ್ಮೀರಕ್ಕೆ.

 

ಕೃಷ್ಣಮೂರ್ತಿ ಪುರಾಣಿಕ (1911-1985)

ಕಾದಂಬರಿಗಳು : ಮುಗಿಲ ಮಲ್ಲಿಗೆ, ಮುತ್ತೈದೆ, ಮಣ್ಣಿನ ಮಗಳು, ಧರ್ಮದೇವತೆ, ಕಣ್ಣು ತುಂಬಿದ ಕರುಣೆ, ವೇಷಧಾರಿ, ಮಂಗಲಾಕ್ಷತೆ, ಮಂದಾರ ಮಂದಾಕಿನಿ, ಗಂಧದ ಬಳ್ಳಿ, ಹಾಲುಂಡ ತವರು, ಬೆವರಿನ ಬೆಲೆ, ಹಿಮಗಿರಿಯ ಗೌರಿ, ಸನಾದಿ ಅಪ್ಪಣ್ಣ, ಭಾಗೀರತಿ, ಪಾವನಗಂಗಾ, ಕುಲವಧು, ಮನಸೋತ ಮನದನ್ನೆ, ಹಸಿರು ತೋರಣ, ಅನಿರೀಕ್ಷಿತ ಮುಂತಾದವು

ಕಥಾಸಂಕಲನ : ರಾಮೂನ ಕತೆಗಳು

ಕವನ ಸಂಕಲನ : ಬಾಳಕನಸು, ಜೀವನಾದ

ವಿಮರ್ಶೆ : ಸಾಹಿತ್ಯ ಪ್ರಬಂಧಗಳು

ನಾಟಕಗಳು : ಸೈರಂಧ್ರಿ, ಜಯಭೇರಿ

ಮಕ್ಕಳ ಸಾಹಿತ್ಯ : ಅಳಿಯ ದೇವರ ಆಟ, ಬೆಳವಡಿ ಮಲ್ಲಮ್ಮ

ಅಭಿನಂದನಾ ಗ್ರಂಥ : ಕಾದಂಬರಿ ದರ್ಶನ

 

ಪರ್ವತವಾಡಿ ನರಸಿಂಗರಾಯರು (1911-1994)

ಪರ್ವತವಾಣಿ ಇವರ ಕಾವ್ಯನಾಮ

ನಾಟಕಗಳು : , ಹಗ್ಗದ ಕೊನೆ (ಗಲ್ಲಿಗೇರಿಸುವ ಪದ್ಧತಿ ಸರಿಯೋ ತಪ್ಪೋ ಎಂಬ ವಿಮರ್ಶೆ), ಕವಿಭಿಕ್ಷೆ (ಪ್ರಾಣಿಬಲಿ, ಅಸ್ಪೃಶ್ಯತೆ, ಹಿಂಸೆ, ಪರಮತ ಮಾತ್ಸರ್ಯ ಇವುಗಳ ಕುರಿತು ಕವಿಗಿರುವ ಕರ್ತವ್ಯ ಜ್ಞಾನ), ಕನಕಾಭಿಷೇಕ ( ಲೈಂಗಿಕ ರೋಗದ ಸಮಸ್ಯೆ)

ಹಣಹದ್ದು, ಬಹಾದ್ದೂರ್ ಗಂಡು, ಮುಕುತಿ ಮೂಗುತಿ, ವಿಪರ್ಯಾಸ, ಕೀಚಕ, ಮಧ್ಯಪಾನ, ಜೇನುಗೂಡು, ಸತಿ ಸಾವಿತ್ರಿ, ತಿರುಮಂತ್ರ ಮುಂತಾದವು

ಅನುವಾದ : ಶೇಕ್ಸ್ಪಿಯರ್ ನ ಹ್ಯಾಮ್ಲೆಟ್ (ನಾಟಕ), ಉಂಡಾಡಿ ಗುಂಡ (ಆಲಿವರ್ ಗೋಲ್ಡ್ ಸ್ಮಿತ್ ನ ಷಿ ಸ್ಟೂಪ್ಸ್ ಟು ಕಾಂಕರ್)

ಆತ್ಮಕತೆ : ನನ್ನಕಥೆ

 

ಜಯಲಕ್ಷ್ಮಿ ಶ್ರೀನಿವಾಸನ್ (1911-2001)

ಕಾದಂಬರಿಗಳು : ಗ್ರಾಮೋದ್ಧಾರಕ ರಾಮಚಂದ್ರ, ಸುಶೀಲೆ ಮತ್ತು ಶಿಶು ಸಂರಕ್ಷಣೆ, ಕುಮುದಿನಿ ಕೃಪಾಶಂಕರ್, ಚಂಚತಿ, ಪರಿಮಲೆ ಸುಲೋಚನೆ, ಪುಷ್ಫಹಾರ, ಪರಿಣಯ, ವಿಜಯಾ

ಕಥಾಸಂಕಲನಗಳು : ದೀಪಾವಳಿ ಮತ್ತು ಇತರ ಕತೆಗಳು, ಪ್ರತಿಫಲ

ಪ್ರವಾಸ ಸಾಹಿತ್ಯ :  ಅಮೆರಿಕೆಯ ಪ್ರವಾಸ, ನಾನು ಕಂಡ ಜರ್ಮನಿ

ಅನುವಾದ : ಆ.ನ.ಕೃ ಅವರ ಸಂಧ್ಯಾರಾಗ, ಮಂಗಳಸೂತ್ರ, ತಾಯಿಯ ಕರುಳು, ಕಣ್ಣೀರು, ಸಾಹಿತ್ಯ ರತ್ನ, ಗೃಹಲಕ್ಷ್ಮಿ ಕಾದಂಬರಿಗಳನ್ನು ಹಾಗೂ ಮಾಸ್ತಿಯವರ ಸುಬ್ಬಣ್ಣ, ಮಂಜುಳಾ ಕೃತಿಗಳನ್ನು ತಮಿಳಿಗೆ ಅನುವಾದ ಮಾಡಿದ್ದಾರೆ.

 

ವಿ ಎಂ ಇನಾಂದಾರ್ (1912-1986)

ಕಾದಂಬರಿಗಳು : ಮೂರಾಬಟ್ಟೆ (1942 ರ ಆಗಸ್ಟ್ ಚಳುವಳಿಯ ಸ್ವಾತಂತ್ರ್ಯ ಹೋರಾಟ), ಕನಸಿನ ಮನೆ, ಕಟ್ಟಿದ ಮನೆ, ಶಾಪ, ಸ್ವರ್ಗದ ಬಾಗಿಲು, ಈ ಪರಿಯ ಸೊಬಗು, ಮುಗಿಯದ ಕಥೆ, ಚಿತ್ರ ಲೇಖ, ಊರ್ವಶಿ, ನವಿಲು ನೌಕೆ, ಬಾಡಿದ ಹೂ, ತ್ರಿಶಂಕು, ಯಾತ್ರಿಕರು, ಎರಡು ಧ್ರುವ, ವಿಜಯ ಯಾತ್ರೆ, , ಮೋಹಿನಿ, ಮಂಜು ಮುಸುಕಿದ ದಾರಿ, ಕತ್ತಲೆಯ ಕಡಲು, ಮುಂತಾದವು

ಪ್ರಬಂಧ ಲೇಖನ : ಸಂಸ್ಕೃತ ನಾಟಕಗಳಲ್ಲಿ ನಾಯಕಿ ಮತ್ತು ವಿದೂಷಕಿ ಪಾತ್ರಗಳು

ನಾಟಕ : ಬಿಡುಗಡೆ

ಸಂಪಾದಿತ  : ಡಾ. ಅಂಬೇಡ್ಕರ್ ವ್ಯಕ್ತಿ ಮತ್ತು ವಿಚಾರ, ವಿ ಸೀ – 75

ಅನುವಾದ : ಶರಶ್ಚಂದ್ರ - ವ್ಯಕ್ತಿ ಮತ್ತು ಕಲಾವಿದ, ದೃಷ್ಟಿಲಾಭ, ಯಯಾತಿ (ಮೂಲ-ಮರಾಠಿ)

ವಿಮರ್ಶೆ : ಪಾಶ್ಚಾತ್ಯ ಕಾವ್ಯ ಮೀಮಾಂಸೆ, ಕಾಳಿದಾಸನ ಕಥಾನಕಗಳು, ಉತ್ತರರಾಮ ಚರಿತ, ಗೋವಿಂದ ಪೈ ಕಾವ್ಯ, ಕುವೆಂಪು ಕಾದಂಬರಿಗಳು, ಶ್ರೀರಾಮಪಟ್ಟಾಭಿಷೇಕ- ಒಂದು ಸಮಾಲೋಕನ, ಶ್ರೀನಿವಾಸರ ಕಾದಂಬರಿಗಳಲ್ಲಿ ಜೀವನ ದರ್ಶನ

ಇತರ ಮುಖ್ಯ ಕೃತಿಗಳು : ಮಂಗಲ್ಯಾಂಡಿನಲ್ಲಿ ಮೂರು ವಾರ (ವಿಡಂಬನಾ ಪ್ರವಾಸ ಸಾಹಿತ್ಯ), ಗಲಿವರನ ಪ್ರವಾಸಗಳು, ಕಾದಂಬರಿ ಲೋಕ, ಅಲೋಕ (ಬಿಡಿ ಲೇಖನಗಳ ಸಂಕಲನ), ಕಾರಂತರ ಬದುಕು ಬರಹ, ಬಿ ಎಂ ಶ್ರೀ ಬದುಕು ಬರಹ.

ಅಭಿನಂದನಾ ಗ್ರಂಥ : ನವನೀತ

 

ಅಶ್ವತ್ಥ  (1912-1994)

ಕಾದಂಬರಿಗಳು : ರಂಗನಾಯಕಿ, ಮರ್ಯಾದೆ ಮಹಲು, ಬರದ ಸಿರಿ, ಅಜ್ಞಾತನ ನಂಜುಂಡಾಯಣ, ಮುನಿಯನ ಮಾದರಿ, ಹಂಬಲ.

ಕಥಾಸಂಕಲನಗಳು : ದೂರದ ಕಾಶಿಯಲ್ಲಿ, ಬಾಳ ಹೊಳೆ, ಅಗ್ನಿಸಾಕ್ಷಿ, ಜಯಂತಿ, ನೋವು-ನಲಿವು, ಸೊಸೆಗೊಂದು ಉಡುಗೊರೆ, ದೀಪಾವಳಿ, ಕಲ್ಯಾಣಮಸ್ತು, ಜೀವನ, ರಾಧಾಕೃಷ್ಣ, ಹುಚ್ಚನ  ಹೆಂಡತಿ ಮುಂತಾದವು.

ನಾಟಕಗಳು : ಬಹುಮಾನ, ಕೃಷ್ಣಲೀಲಾ, ಕ್ರಾಂತಿಕಾರ, ಮಗು, ನಿರ್ಮಲ, ಹುಚ್ಚ, ಕಣ್ತೆರೆ, ದಿವ್ಯದರ್ಶನ

ಖಂಡಕಾವ್ಯ : ಮಹಾಯುದ್ಧ

ಪ್ರಬಂಧಗಳು : ಮೂಗಿನ ಮೇಲೆ, ಇಂದಿನ ಪತ್ರಿಕೆ ನೋಡಿದ್ದೀರಾ?, ಬನ್ನಿ ನನ್ನ ಉಪವನಕೆ, ನವ್ಯವಾಗಿ, ಬಡ ಮುತ್ತೈದೆ ಹಾರ್ಮೋನಿಯಂ, ಕ್ರಿಕೆಟ್ ಓದೋಣ, ಸಮಿತಿಮಯ ಜಗತ್, ರೋಗಿಷ್ಟರು

 

ಜಯದೇವಿತಾಯಿ ಲಿಗಾಡೆ (1912-1986)

ಪ್ರಮುಖ ಕೃತಿಗಳು : ಜಯಗೀತೆ, ತಾಯಿಯ ಪದಗಳು, ತಾರಕ ತಂಬೂರಿ, ಬಂದೇವು ಕಲ್ಯಾಣಕೆ, ಸಾವಿರದ ಪದಗಳು

ಮಹಾಕಾವ್ಯ : ಶ್ರೀ ಸಿದ್ಧರಾಮ ಪುರಾಣ

ಸಂಪಾದನೆ : ಅರುವಿನಾಗರದಲ್ಲಿ

 

ಕೊಡಗಿನ ಗೌರಮ್ಮ (1912-1939)

ಕಥಾಸಂಕಲನಕಂಬನಿ

ವಾಣಿಯ ಸಮಸ್ಯೆ, ಒಂದು ಪುಟ್ಟ ಚಿತ್ರ, ಪ್ರಾಯಶ್ಚಿತ್ತ, ಸನ್ಯಾಸಿ ರತ್ನ, ಅವಳ ಭಾಗ್ಯ, ಕೌಸಲ್ಯಾನಂದನ, ನಾಲ್ಕು ಘಟನೆಗಳು, ಅಪರಾಧಿ ಯಾರು? ಸುಳ್ಳು ಸ್ವಪ್ನ, ಒಂದು ಚಿತ್ರ ಪಾಪದ ಮದುವೆ, ಮರದ ಬೊಂಬೆ ಇವು ಅವರ ಪ್ರಮುಖ ಕತೆಗಳು

 

ವಾಣಿ (1912-1988)

ಮೊದಲ ಹೆಸರು ಸುಬ್ಬಮ್ಮ

ಕಾದಂಬರಿಗಳು : ಎರಡು ಕನಸು, ಬಿಡುಗಡೆ, ಚಿನ್ನದ ಪಂಜರ, ಮನೆ ಮಗಳು, ಅವಳ ಭಾಗ್ಯ, ಕಾವೆರಿಯ ಮಡಿಲಲ್ಲಿ, ಅಂಜಲಿ, ಬಾಳೆಯ ನೆರಳು, ಅನಿರೀಕ್ಷಿತ, ಅಲ್ಲೆ ನಿಲ್ಲೆ, ಶಿಶಿರಗಾನ, ಹೂವು ಮುಳ್ಳು, ಪ್ರೇಮ ಸೇತು, ತ್ರಿಶೂಲ, ಬಲೆ, ನೆರಳು-ಬೆಳಕು, ಎರಡು ಕನಸು, ಶುಭಮಂಗಳ, ಹೊಸಬೆಳಕು, ಸುಲಗ್ನಾ ಸಾವಧಾನ,.

ಕಥಾಸಂಕಲನಗಳು : ಕಸ್ತೂರಿ, ಅರ್ಪಣೆ, ಅಪರೂಪದ ಅತಿಥಿ, ಬಾಬು ಬರ್ತಾನೆ, ಹ್ಯಾಪಿ ಬರ್ತ್ಡೆ, ನಾಣಿಯ ಮದುವೆ, ತಾರಮ್ಮಯ್ಯ

ವಚನ ಸಂಗ್ರಹ : ನವನೀತ

 

ಮತಿಘಟ್ಟ ಕೃಷ್ಣಮೂರ್ತಿ (1912-2006)

ಜಾನಪದ : ನಾಡಪದಗಳು, ಗೃಹಿಣಿ ಗೀತೆ, ಸಾಂಪ್ರದಾಯಿಕ ಗೀತೆಗಳು, ಶಕುನದ ಹಕ್ಕಿ, ಹೊನ್ನ ಹೊತ್ತಿಗೆ (ಜಾನಪದ ನಾಟಕ), ನಮ್ಮ ಹಳ್ಳಿಯ ಹಾಡು, ಸರ್ವೋದಯ, ಪಚ್ಚೆತೆನೆ (ಜಾನಪದ ಸಣ್ಣ ಕತೆಗಳ ಸಂಗ್ರಹ)

ಜಾನಪದ ನಾಟಕ : ಹೊಂಬಾಳೆ, ಮರುಗಿ ಗಂಡನ ಪೂಜೆ

ಜನಪದ ಕವನ ಸಂಕಲನ : ಝೇಂಕಾರ, ಉಯ್ಯಾಲೆ

ಕಾದಂಬರಿ : ಕಳಸಾಪುರದ ಹುಡುಗರು

 

ಬೀಚಿ (1913-1980)

ಬೀಚಿಯವರ ನಿಜನಾಮ ರಾಯಸಂ ಭೀಮಸೇನರಾವ್

ಕಾದಂಬರಿಗಳು : ದಾಸ ಕೂಟ (ಕನ್ನಡದ ಮೊದಲ ಹಾಸ್ಯ ಪ್ರಧಾನ ಕಾದಂಬರಿ), ಸತೀಸೂಳೆ, ಸರಸ್ವತಿ ಸಂಹಾರ, ಬೆಂಗಳೂರು ಬಸ್ಸು, ಮೇಡಮ್ಮನ ಗಂಡ, ದೇವನ ಹೆಂಡ, ಏರದ ಬಳೆ, ಟೆಂಟ್ ಸಿನೆಮಾ, ಸತ್ತವನು ಎದ್ದು ಬಂದಾಗ, ಆರಿದ ಚಹ, ಬಿತ್ತಿದ್ದೆ ಬೇವು, ಬ್ರಹ್ಮಚಾರಿಯ ಮಗ, ಕಾಮಂಣ, ಎಲ್ಲಿರುವೆ ತಂದೆ ಬಾರೋ, ಮೂರು ಹೆಣ್ಣು ಐದು ಜಡೆ, ಮುರಿದ ಬೊಂಬೆ, ಕಮಲಮ್ಮನ ಕುಂಕುಮ ಬಲ, ಸೀತೂ ಮದುವೆ, ಕತ್ತಲಲ್ಲಿ ಬಂದವಳು, ಮಹಾಯುದ್ಧ, ಕಮಲೆಯ ಓಲೆಗಳು, ಗರತಿಯ ಗುಟ್ಟು

ಹಾಸ್ಯ ಕಥಾಸಂಕಲನ : ಆಗಿಷ್ಟು - ಈಗಿಷ್ಟು, ಅರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ಅಂದನಾ ತಿಂಮ, ಆಟೋ, ಬಂಗಾರದ ಕತ್ತೆ, ಬೀಚಿ ಬುಲೆಟಿನ್, ಬೆಳ್ಳಿ ತಿಂಮ ನೂರೆಂಟು ಹೇಳಿದ, ಬೆಳ್ಳಿ ಪತ್ರಗಳು, ಬ್ರಹ್ಮಚಾರಿ, ಬುಲೆಟ್ಸ್-ಉ - ಬಾಂಬ್ಸ್ -, ಭಗವದ್ಗೀತೆ, ಚಿನ್ನದ ಕಸ, ಹೆಣ್ಣು ಕಾಣದ ಗಂಡು, ಕಲ್ಲು ಹೇಳಿತು, ಕನ್ನಡ ಎಮ್ಮೆ, ಕಾಮಲೋಕ, ಕಾಣದ ಸುಂದರಿ, ಖಾದಿ ಸೀರೆ, ಲಕ್ಷ್ಮೀ ಪೂಜೆ, ಲೇವಡಿ ಟೈಪಿಸ್ಟ್, ಮಾತನಾಡುವ ದೇವರುಗಳು, ಮನೆತನದ ಗೌರವ, ನರಪ್ರಾಣಿ, ನಂಬರ್ 55, ಸಾಹುಕಾರ ಸುಬ್ಬಮ್ಮ, ಸಕ್ಕರೆ ಮೂಟೆ, ಸಂಪನ್ನರಿದ್ದಾರೆ ಎಚ್ಚರಿಕೆ, ತೋಚಿದ್ದು ಗೀಚಿದ್ದು, ತಿಂಮ ರಸಾಯನ, ತಿಂಮ ಸತ್ತಾಗ, ತಿಂಮನ ತಲೆ, ತಿಂಮಾಯಣ, ತಿಮ್ಮಿಕ್ಷನರಿ, ಹುಚ್ಚು ಹುರುಳು, ಉತ್ತರ ಭೂಪ, ಸುನಂದೂಗೆ ಏನಂತೆ, ಬೆಳ್ಳಿ ಮಾತ್ರೆಗಳು, ಗರತಿಯ ಗುಟ್ಟು, ಮಾತ್ರೆಗಳು

ನಾಟಕಗಳು : ಹನ್ನೊಂದನೆಯ ಅವತಾರ, ಮನುಸ್ಮೃತಿ, ಏಕೀಕರಣ, ವಶೀಕರಣ, ಏಕೋದರರು, ಸೈಕಾಲಜಿಸ್ಟ್ ಸಾರಂಗಪಾಣಿ, ದೇವರ ಆತ್ಮಹತ್ಯೆ, ನಾನೇ ಸತ್ತಾಗ

ಅಂಕಣಗಳು : ಕೆನೆಮೊಸರು, ಬೇವಿನಕಟ್ಟೆ, ನೀವು ಕೇಳಿದಿರಿ

ಪ್ರವಾಸ ಸಾಹಿತ್ಯ : ದೇವರಿಲ್ಲದ ಗುಡಿ

ಆತ್ಮಕಥೆ : ನನ್ನ ಭಯಾಗ್ರಫಿ

 

ಜಿ ವೆಂಕಟಸುಬ್ಬಯ್ಯ (1913-2021)

ಪತ್ರಿಕೆ : ಪುರಾಣ ಕಥಾವಳಿ

ವಿಮರ್ಶಾ ಲೇಖನ ಸಂಗ್ರಹ : ಅನುಕಲ್ಪನೆ, ಪರಾಮರ್ಶನ, ಇಣುಕು ನೋಟ, ಕನ್ನಡ ಸಾಹಿತ್ಯ ನಡೆದು ಬಂದ ದಾರಿ, ಕರ್ನಾಟಕ ವೈಭವ ಮತ್ತು ಇತರ ಶಬ್ದ ಚಿತ್ರಗಳು.

ಕವನ ಸಂಕಲನ : ಹೃದಯಗೀತ

ಅನುವಾದ : ಭಾಷಾಂತರ ಪಾಠಗಳು, ಕಾಲೇಜ್ ಭಾಷಾಂತರ, ತಿಳಿದುದೆಲ್ಲವ ಬಿಟ್ಟು

ಸಂಪಾದನೆ : ಮುದ್ದಣ ಭಂಡಾರ

ನಿಘಂಟು : ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು, ಇಗೋ ಕನ್ನಡ (ಸಾಮಾಜಿಕ ನಿಘಂಟು), ಪ್ರಿಸಮ್ ಇಂಗ್ಲಿಷ್-ಕನ್ನಡ ನಿಘಂಟು, ಪ್ರಿಸಮ್ ಕನ್ನಡ ಕ್ಲಿಷ್ಟಪದಕೋಶ, ಕನ್ನಡ ನಿಘಂಟು ಪರಿವಾರ ಎಂಬುದು ನಿಘಂಟುಗಳ ಕುರಿತಾದ ಕೃತಿ

ಗೌರವ ಗ್ರಂಥ : ಸಾಹಿತ್ಯ ಜೀವಿ

 

ಎಚ್ ವಿ ಸಾವಿತ್ರಮ್ಮ (1913-1995)

ಕಥಾಸಂಕಲನ : ಮರುಮದುವೆ, ನಿರಾಶ್ರಿತೆ, ಲಕ್ಷ್ಮೀ, ಸರಿದ ಬೆರಳು, ಪ್ರತೀಕ್ಷೆ, ಮದುವಣಗಿತ್ತಿ, ಬಿಸಿಲುಗುದರೆ (ನೀಳ್ಗತೆ)

ಕಾದಂಬರಿ : ಸೀತೆ ರಾಮ ರಾವಣ, ವಿಮುಕ್ತಿ

ಅನುವಾದ : ಚಿನ್ನದ ದೋಣಿ (ರವೀಂದ್ರನಾಥ ಠಾಗೂರರ ಕಥಾಸಂಕಲನ), ನೌಕಾಘಾತ (ಕಾದಂಬರಿ), ಹಸಿವೊ ಹಸಿವು, ಮದುವಣಗಿತ್ತಿ, ಮಹಾತ್ಮಾ ಗಾಂಧಿ :  ಜಗತ್ತಿಗೆ ಅವರ ಸಂದೇಶ

ಇತರ ಕೃತಿಗಳು : ಮಧ್ಯಯುಗದ ಭಾರತದ ಚರಿತ್ರೆ, ಗೋರಾ, ಮನೆಜಗತ್ತು, ಹುಲಿಯ ಬೆನ್ನೇರಿದಾಗ, ಸ್ಮರಭಸ್ಮ, ಶಶಿಲೇಖಾ, ನೀಲನೇತ್ರೆ, ಮಹಾದೇವನ ಜಟಾಜೂಟದಲ್ಲಿ

 

ಎಚ್ ದೇವೀರಪ್ಪ (1913-1988)

ಕಾದಂಬರಿ : ಬೆಳುವಲದ ಮಡಿಲಲ್ಲಿಹಳ್ಳಿಯ ಬದುಕು

ನಾಟಕ : ಕಲಾಯೋಗಿತುಂಗಭದ್ರ

ಸಂಪಾದನೆ : ಬಸವರಾಜ ಚಾರಿತ್ರ್ಯರಾಮನಾಥ ಚಾರಿತ್ರ್ಯ

ಕಥಾಸಂಕಲನ : ಸುವರ್ಣ ಸಂಪುಟ

 

ಸರಸ್ವತಿಬಾಯಿ ರಾಜವಾಡೆ (1913-1994)

ಗಿರಿಬಾಲೆ ಎಂಬುದು ಇವರ ಕಾವ್ಯನಾಮ

ಪತ್ರಿಕೆ : ಸುಪ್ರಭಾತ (ಮಹಿಳಾ ಪತ್ರಿಕೆ)

ಕಾದಂಬರಿ : ವಿಮಲೆ

ಕಥಾಸಂಕಲನಗಳು : ಆಹುತಿ, ಕದಂಬ, ಪ್ರೇಮ ವಿವಾಹ

ಕವನಸಂಕಲನಗಳು : ಕಲಿಯೋಣು ಬಾ, ಸಿದ್ದಾಂತ, ಹೆಚ್ಚಿನ ಹಿರಿಮೆ, ನಿತ್ಯಸತ್ಯ

ಅನುವಾದ : ಪರಿಣಯ (ಮೂಲ-ಮರಾಠಿ)

ನಾಟಕಗಳು : ಸಾರ್ಥಕ ಜೀವನ, ನಲ್ಮೆಯ ಸಹೋದರ, ಸಾಂಟಾ ಮೀರಾ, ಪ್ರಕಾಶ, ಬಿರುಗಾಳಿ

ಅಂಕಣ ಬರಹ : ಏನು ಅಡಿಗೆ

 

ಎಸ್ ವಿ ಪರಮೇಶ್ವರ ಭಟ್ಟ (1914-2000)

ಕನ್ನಡದ ಕಾಳಿದಾಸ ಎಂದೇ ಪ್ರಸಿದ್ಧಿಯಾಗಿದ್ದವರು.

ಕವನ ಸಂಗ್ರಹಗಳು : ಪ್ರೇಮಾರಾಧನೆ, ರಾಗಿಣಿ, ಗಗನ ಚುಕ್ಕಿ, ಅಂಚೆಯ ಪೆಟ್ಟಿಗೆ, ಕೃಷ್ಣ ಮೇಘ, ಸಂಜೆ ಮಲ್ಲಿಗೆ

ಕಥನ ಕವನ : ಮಾಚಯ್ಯ, ಜಹನಾರ

ವಚನ ಸಂಕಲನಗಳು : ಉಪ್ಪುಕಡಲು, ಪಾಮರ, ಅಂಬರ

ವಿಮರ್ಶಾ ಕೃತಿಗಳು : ಅಕ್ಕಮಹಾದೇವಿ, ಭಾವಗೀತೆ, ಸೀಳುನೋಟ, ಅದ್ಭುತ ರಾಮಾಯಣದ ಕತೆ

ಮಕ್ಕಳ ಸಾಹಿತ್ಯ : ಭೂಮಿ ಮತ್ತು ಧೂಮಕೇತು, ಮುಂತಾದವು.

ಒಗಟುಗಳ ಸಂಕಲನ : ಕಣ್ಣು ಮುಚ್ಚಾಲೆ

ಪ್ರೌಢ ಪ್ರಬಂಧ : ರಸಋಷಿ ಕುವೆಂಪು, ಬದುಕು -ಬೆಳಕು ಸ್ಮೃತಿಗಳು

ಅನುವಾದಿತ ಕೃತಿಗಳು : ಕನ್ನಡ ಬುದ್ಧ ಚರಿತೆ, ಕನ್ನಡ ಅಮರು ಶತಕ, ಕನ್ನಡ ಕವಿ ಕೌಮುದಿ, ಕನ್ನಡ ಗೀತ ಗೋವಿಂದ

ಕನ್ನಡ ಗಾಥಾಸಪ್ತಶತಿ (ಚಂದ್ರವೀಧಿ, ಇಂದ್ರಚಾಪ, ತುಂಬೆಹೂ, ಚಿತ್ರಕಥೆ, ಸುರಗಿಯ ಸುರಹೊನ್ನೆ ಕೃತಿಗಳು ಕನ್ನಡದ ಗಾಥಾಸಪ್ತಶತಿಗಳೆಂದು  ಪ್ರಸಿದ್ಧವಾಗಿವೆ),

ಸಂಪಾದನೆ : ಮುದ್ದಣನ ಶ್ರೀ ರಾಮಪಟ್ಟಾಭಿಷೇಕ

ಜಾನಪದ : ಮಂಥಾನ

ಪ್ರಬಂಧ ಸಾಹಿತ್ಯ : ಭಾಸ ಸಂಪುಟ, ಭವಭೂತಿ ಸಂಪುಟ, ಕವಿಕಾವ್ಯ ಪರಿಚಯ, ಕನ್ನಡ ಹರ್ಷ ಮಹಾಸಂಪುಟ, ಕಾಳಿದಾಸ ಸಂಪುಟ (ಮೇಘದೂತ, ಮಾಳವಿಕಾಗ್ನಿಮಿತ್ರ, ಕುಮಾರ ಸಂಭವ, ರಘುವಂಶ, ಅಭಿಜ್ಞಾನ ಶಾಕುಂತಲ)

ಅಭಿನಂದನಾ ಗ್ರಂಥ : ಪೂರ್ಣಕುಂಭ, ಪರಮೇಶ್ವರ ಪ್ರಶಸ್ತಿ

 

ಕೆ ಎಸ್ ನರಸಿಂಹಸ್ವಾಮಿ (1915-2003)

ಕವನ ಸಂಕಲನ : ಶಿಲಾಲತೆ (ನಗರ ಜೀವನದ ಸಮಸ್ಯೆಗಳು), ತೆರೆದ ಬಾಗಿಲು (ಕೇಂದ್ರ ಸಾಹಿತ್ಯ ಅಕಾಡೆಮಿ), ದುಂಡುಮಲ್ಲಿಗೆ (ಪಂಪ ಪ್ರಶಸ್ತಿ), ಮೈಸೂರು ಮಲ್ಲಿಗೆ, ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ನವಿಲದನಿ, ಸಂಜೆ ಹಾಡು, ಕೈಮರದ ನೆಳಲಲ್ಲಿ, ಎದೆ ತುಂಬ ನಕ್ಷತ್ರ, ಮೌನದಲಿ ಮಾತ ಹುಡುಕುತ್ತ, ದೀಪ ಸಾಲಿನ ನಡುವೆ, ಮಲ್ಲಿಗೆಯ ಮಾಲೆ, ಮನೆಯಿಂದ ಮನೆಗೆ, ನವ ಪಲ್ಲವ, ಹಾಡು-ಹಸೆ.

ಕಥಾ ಸಂಕಲನ : ಮಾರಿಯ ಕಲ್ಲು

ವಿಮರ್ಶೆ : ದಮಯಂತಿಉಪವನ

ಅನುವಾದ : ನನ್ನ ಕನಸಿನ ಭಾರತಮೋಹನಮಾಲೆಪ್ರಪಂಚದ ಬಾಲ್ಯದಲ್ಲಿಮೀಡಿಯಾಹಕಲ್ ಬರಿಫಿನ್ನನ ಸಾಹಸಗಳು. ಸುಬ್ರಹ್ಮಣ್ಯ ಭಾರತಿಮಾಯಾಶಂಖ ಮತ್ತು ಇತರ ಕತೆಗಳುರಾಣಿಯ ಗಿಳಿ ಮತ್ತು ರಾಜನ ಮಂಗಪುಷ್ಕಿನ್‌ ಕವಿತೆಗಳುರಾಬರ್ಟ್‌ ಬರ್ನ್ಸ್‌ ಪ್ರೇಮಗೀತೆಗಳು.

ಅಭಿನಂದನಾ ಗ್ರಂಥ : ಚಂದನ

 

ಎಚ್ ಎಲ್ ನಾಗೇಗೌಡ (1915-2005)

ಕರ್ನಾಟಕ ಜಾನಪದ ಟ್ರಸ್ಟ್‌ (ಕರ್ನಾಟಕ ಜಾನಪದ ಪರಿಷತ್) ಅನ್ನು ಸ್ಥಾಪಿಸಿದರು.

ಪ್ರವಾಸ ಕಥನ : ನಾ ಕಂಡ ಪ್ರಪಂಚ

ಕವನ ಸಂಕಲನ : ನಾನಾಗುವೆ ಗೀಜಗನ ಹಕ್ಕಿ, ಕಥೆ-ವ್ಯಥೆ

ಕಥಾ ಸಂಕಲನ : ಕಂಡು ಕೇಳಿದ ಕಥೆಗಳು, ಖೈದಿಗಳ ಕಥೆಗಳು

ಕಾದಂಬರಿ : ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಗಂಧರ್ವ

ಜಾನಪದ ಸಾಹಿತ್ಯ : ಸೋಬಾನೆ, ಚಿಕ್ಕಮ್ಮನ ಪದಗಳು, ಕರ್ನಾಟಕದ ಜಾನಪದ ಕಥೆಗಳು, ಪದವವೆ ನಮ್ಮ ಎದೆಯಲ್ಲಿ, ಮೈಲಾರ ಲಿಂಗನ ಕಾವ್ಯ, ಹೆಳವರು ಮತ್ತು ಅವರ ಕಾವ್ಯಗಳು, ಹಾಡಾನಬನ್ನಿ ದನಿ ಎತ್ತಿ, ಕನ್ನಡ ಜಾನಪದಕೋಶ, ಎಸ್ಸೆನ್ಷಿಯಲ್ ಆಫ್ ಕರ್ನಾಟಕ ಫೋಕ್ಲೋರ್, ಜಾನಪದ ಜಗತ್ತು.

ಅನುವಾದ : ಗಿರಿಜನ ಪ್ರಪಂಚ (ವೆರಿಯರ್ ಎಲ್ವಿರ್), ಮಾರ್ಕೊಪೋಲೋ ಪ್ರವಾಸ ಕಥನ, ಪ್ರವಾಸಿ ಕಂಡ ಇಂಡಿಯಾ (ಪ್ರಾಚೀನ ವಿದೇಶಿ ಯಾತ್ರಿಕರು ಭಾರತ ಪ್ರವಾಸದ ಕುರಿತ ಬರಹಗಳ ಸಂಗ್ರಹ),

ಇತರ ಪ್ರಮುಖ ಕೃತಿಗಳು : ನನ್ನೂರು, ಬೆಟ್ಟದಿಂದ ಬಟ್ಟಲಿಗೆ (ಕಾಫಿ ಬೆಳೆಯ ಕುರಿತು)

ಗೌರವ ಗ್ರಂಥ : ನಾಗವಲ್ಲಿ

 

ಕಯ್ಯಾರ ಕಿಂಞಣ್ಣ ರೈ (1915-2015)

ಕವನ ಸಂಕಲನ : ಐಕ್ಯಗಾನ (ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ), ಶ್ರೀಮುಖ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ (ನೀಳ್ಗವನಗಳ ಸಂಕಲನ), ಪ್ರತಿಭಾ ಪಯಸ್ವಿನಿ, ಮಕ್ಕಳ ಪದ್ಯಮಂಜರಿ, ಎನ್ನಪ್ಪೆ ತುಳುವಪ್ಪೆ (ತುಳು ಭಾಷೆ- ದೇಶಭಕ್ತಿ, ಸ್ವಾತಂತ್ರ್ಯ ಹೋರಾಟ)

ಕಥಾಸಂಕಲನ : ಅನ್ನದೇವರು ಮತ್ತು ಇತರ ಕಥೆಗಳು, ಲಕ್ಷ್ಮೀಶನ ಕಥೆಗಳು

ಅನುವಾದ : ಪಂಚಮಿ, ಸೀತಾ, ಚಾಂಡಾಲ ಭಿಕ್ಷುಕಿ (ಆಶಾನ್ ರ ಖಂಡಕಾವ್ಯಗಳು)

ಜೀವನ ಚರಿತ್ರೆ : ರತ್ನರಾಶಿ (ಸ್ವಾತಂತ್ರ್ಯ ಹೋರಾಟಗಾರರ ಜೀವನ ಚಿತ್ರಗಳ ಸಂಕಲನ)

ಲೇಖನ ಸಂಕಲನ : ಸಾಹಿತ್ಯದೃಷ್ಟಿ, ರಾಷ್ಟ್ರೀಯ ಸಾಹಿತ್ಯ ಮತ್ತು ಸ್ವತಂತ್ರ ಸಾಹಿತ್ಯ

ನಾಟಕ : ವಿರಾಗಿಣಿ

ಆತ್ಮಕಥನ : ದುಡಿತವೆ ನನ್ನ ದೇವರು

 

ಭಾರತೀಸುತ (1915-1976)

ಶಾನಭಾಗ್ ರಾಮಯ್ಯ ನಾರಾಯಣ ಇವರ ನಿಜನಾಮ

ಕಥಾ ಸಂಕಲನ : ಚಿಂಬ ಹಿಡಿದ ಮೀನು, ಬೆಂಕಿಯಲ್ಲಿ ಬೆಂದವಳು.

ನೀಳ್ಗತೆಗಳು : ಪೆಟ್ರೇಷಿಯಾ (ಸ್ವಾತಂತ್ರ್ಯಪೂರ್ವ ಘಟನಾವಳಿಗಳು), ದೂರಹೋದಳು (ಧರ್ಮದಿಂದ ದೂರಾಗುವ ಪ್ರೇಮಿಗಳು), ವಲ್ಮೀಕ (ರಾಜಕೀಯ ಭ್ರಷ್ಟಾಚಾರ), ಮನೆಗೆ ಬಂದ ಮಹಾಬಲಿ, ನನ್ನ ಅತ್ತಿಗೆ, ಗಿಳಿಯು ಪಂಜರದೊಳಿಲ್ಲ, ಕಂದನನ್ನು ಕದ್ದವನು, ಇಲಿ ಮತ್ತು ಅವು-ಇವು

ಕಾದಂಬರಿ : ಎಡಕಲ್ಲು ಗುಡ್ಡದ ಮೇಲೆ, ಸಂತಾನ ಭಿಕ್ಷೆ, ಹುಲಿಯ ಹಾಲಿನ ಮೇವು, ಗಿರಿಕನ್ನಿಕೆ, ಬಯಲುದಾರಿ, ಇಳಿದು ಬಾ ತಾಯಿ, ವಕ್ರರೇಖೆ, ಬೆಳಕಿನೆಡೆಗೆ, ಬೆಂಕಿಯ ಮಳೆ, ಅಮಾತ್ಯ ನಂದಿನಿ, ಸಾಧನ ಕುಟೀರ, ಹಾವಿನ ಹುತ್ತ, ದೊರೆ ಮಗಳು, ಕೊಳಲಿನ ಕರೆ, ಹುಲಿಬೋನು, ಅವಳದಾರಿ, ಪೃಥ್ವಿರಾಜ.

ಅನುವಾದ : ತಲೆತಿರುಕ ಯೋಧ (ಸರ್ವಾಂಟಿಸ್ನ ಡಾನ್ ಕ್ವಿಕ್ಸೋಟ್), ಇರಾನಿನ ವೀರ, ದೊರೆ ಮಗಳು, ಕಾಲಯಾನ (ಎಚ್ ಜಿ ವೇಲ್ಸ್ ನ ಟೈಂ ಮಷಿನ್).

ಮಕ್ಕಳ ಸಾಹಿತ್ಯ : ಕಳ್ಳರ ಪಜೀತಿ, ಮಂತ್ರದ ಕೊಳಲು, ಹುಲಿಗಳ ದಿಬ್ಬಣ, ಹನ್ನೊಂದು ಹಂಸಗಳು, ನಳ ದಮಯಂತಿ, ಮಲ್ಲಿಗೆ ಹಳ್ಳಿಯ ಜಾಣರು,  ಮುಂತಾದವು.

 

ಟಿ ಸುನಂದಮ್ಮ (1917-2006)

ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ

ನಗೆ ಬರಹಗಳು : ಜಂಬದ ಚೀಲ, ಪೆಪ್ಪರಮೆಂಟು, ಬಣ್ಣದ ಚಿಟ್ಟೆ, ಮುತ್ತಿನ ಚೆಂಡು, ರೂಢಿಗಾಡಿ, ವೃಕ್ಷವಾಹನ, ನನ್ನ ಅತ್ತೆಗಿರಿ, ಸರಸ ಮಹಲ್

ನಗೆ ನಾಟಕಗಳು : ಆದರ್ಶದ ಆಡಂಬರ, ಕೂಸು ಹುಟ್ಟುವದಕ್ಕೆ ಮುಂಚೆ, ಗೃಹಲಕ್ಷ್ಮಿ, ಬಾದರಾಯಣ, ಚಿಕ್ಕಪ್ಪನ ಉಯಿಲು, ಚಕ್ರಚುಕ್ಕೆ, ಸದಾಶಿವನ ಸ್ವಯಂವರ, ಬರೆ ಕೈ

ಮಕ್ಕಳ ಸಾಹಿತ್ಯ : ತೆನಾಲಿ ರಾಮಕೃಷ್ಣ

ರೇಡಿಯೋ ನಾಟಕಗಳು : ದ್ರೌಪದಿ, ಸೀತಾ, ಮಹಿಷಾಸುರ ಮರ್ಧಿನಿ

ಅಭಿನಂದನಾ ಗ್ರಂಥ : ಸುನಂದಾಭಿನಂದನ

 

ಎಂ ಕೆ ಇಂದಿರಾ (1917-1994)

ಕಾದಂಬರಿಗಳು : ತುಂಗಭದ್ರಾ, ಗೆಜ್ಜೆಪೂಜೆ, ಸದಾನಂದ, ಫಣಿಯಮ್ಮ, ಮಧುವನ, ನಾಗವೇಣಿ, ತಗ್ಗಿನ ಮನೆ ಸೀತೆ, ಗಿರಿಬಾಲೆ, ಪೂರ್ವಾಪರ, ಶಾಂತಿಧಾಮ, ಮನೆತುಂಬಿದ ಮಡದಿ, ಬ್ರಹ್ಮಚಾರಿ, ಹೆಣ್ಣಿನ ಆಕಾಂಕ್ಷೆ, ತಾಪದಿಂದ ತಂಪಿಗೆ, ಬುಲೆಟ್, ತಪೋವನದಲ್ಲಿ, ಕಲಾದರ್ಶಿ, ಬೀದಿಗೆ ಚಂದ್ರಮ ಕೊಂಡು, ಮುಸುಕು, ಆತ್ಮಸಖಿ, ಚಿದ್ವಿಲಾಸ, ಯಾರು ಹಿತವರು, ಸುಖಾಂತ, ಜಾತಿ ಕೆಟ್ಟವಳು, ಕತೆಗಾರ, ಕೂಚುಭಟ್ಟ, ವರ್ಣಲೀಲೆ, ಹಸಿವು, ಮನೆಕಟ್ಟಿನೊಡು, ಹೂಬಾಣ, ಒಂದೇ ನಿಮಿಷ, ಅಮರಾವತಿ, ಸೂತ್ರಧಾರಿ, ನೂರೊಂದು ಬಾಗಿಲು, ಮನೋಮಂದಿರ, ಡಾಕ್ಟರ್, ರಸವಾಹಿನಿ, ನಾಗವೀಣಾ, ಆಭರಣ, ಕನ್ಯಾಕುಮಾರಿ ಯಾರಿಗೆ, ಜಾಲ, ಗುಂಡ, ಪವಾಡ,  ಚಿತ್ರಭಾರತ, ಅಗೋಚರ, ಸಗೋಚರ, ಕೂಪ, ಸೂತ್ರಧಾರಿಣಿ, ತಾಳಿದವ್ರು, ಹಂಸಗಾನ, ವಿಚಿತ್ರಪ್ರೇಮ, ಕವಲು ಮುಂತಾದವು.

ಗೆಜ್ಜೆಪೂಜೆ, ಫಣಿಯಮ್ಮ, ಪೂರ್ವಾಪರ ಕಾದಂಬರಿಗಳು ಚಲನಚಿತ್ರಗಳಾಗಿವೆ.

ಕಥಾಸಂಕಲಗಳು : ನವರತ್ನ, ಅಂಬರದ ಅಪ್ಸರೆ, ನವಜೀವನ, ಸ್ಪೂರ್ತಿ, ದಶಾವತಾರ, ಕಲ್ಪನಾ ವಿಲಾಸ, ಸುಸ್ವಾಗತ, ಪವಾಡ, ಮೋಹನಮಾಲೆ, ಪೌರ್ಣಿಮೆ.

ಹಾಸ್ಯ ಬರಹ : ನಗಬೇಕು

ಪ್ರವಾಸ ಕಥನ : ಅನುಭಾವಕುಂಜ

ಅಭಿನಂದನಾ ಗ್ರಂಥ : ಸುರಗಿ

 

ಮಿರ್ಜಿ ಅಣ್ಣಾರಾಯ (1918-1975)

ಇಂದುತನಯ ಎಂಬುದು ಇವರ ಕಾವ್ಯನಾಮವಾಗಿತ್ತು

ಕಾದಂಬರಿಗಳು : ನಿಸರ್ಗ, ರಾಷ್ಟ್ರಪುರುಷ (ಸ್ವಾತಂತ್ರ್ಯ ಹೋರಾಟ ಮತ್ತು ಮುಂಬೈ ಜೀವನ), ಅಶೋಕಚಕ್ರ (ಗ್ರಾಮೀಣ ಜೀವನ, ಆರ್ಥಿಕ ಅಸಮಾನತೆ, ಶೋಷಣೆ)

ಭಸ್ಮಾಸುರ, ಪ್ರತಿಸರಕಾರ, ಹದಗೆಟ್ಟ ಹಳ್ಳಿ, ಸಿದ್ಧಚಕ್ರ, ರಾಮಣ್ಣ ಮಾಸ್ತರ, ಎರಡು ಹೆಜ್ಜೆ, ಶ್ರೇಯಾಂಕ, ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ, ಋಷಭದೇವ

ಕಥಾಸಂಕಲನಗಳು : ಪ್ರಣಯ ಸಮಾಧಿ, ವಿಜಯಶ್ರೀ, ಅಮರ ಕಥೆಗಳು.

ವಿಮರ್ಶೆ : ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ಕನ್ನಡ ಸಾಹಿತ್ಯದ ಒಲವುಗಳು, ಜೈನಧರ್ಮ

ಸಂಪಾದನೆ : ಕಲ್ಯಾಣ ಕೀರ್ತಿ ಕವಿಯ ಚಿನ್ಮಯಿ ಚಿಂತಾಮಣಿ, ಭರತೇಶ ವೈಭವದ ಶೋಭನ ಸಂಧಿಗಳು

ಅನುವಾದ : ಜನತಾ ರಾಮಾಯಣ (ರವಿಷೇಣನ ಪದ್ಮಪುರಾಣ), ಮಹಾಪುರಾಣಸಾರ, ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ರತ್ನ ಕರಂಡಕ ಶ್ರಾವಕಾಚಾರ

ವ್ಯಕ್ತಿಚಿತ್ರ : ಮಹಾಪುರುಷ, ಪ್ರಿಯದರ್ಶಿ, ಭಾರತದ ಬೆಳಕು, ಖಾರವೇಲ, ಶ್ರೀಶಾಂತಿ ಸಾಗರರು ಮುಂತಾದವು.

ಅಭಿನಂದನಾ ಗ್ರಂಥ : ಮಿರ್ಜಿ ಅಣ್ಣಾರಾಯ

 

ಸಿದ್ಧಯ್ಯ ಪುರಾಣಿಕ (1918-1994)

ನಾಟಕಗಳು : ಆತ್ಮಾರ್ಪಣೆ, ಭಾರತವೀರ (1962ರ ಚೀನಾ ದಾಳಿ), ರಜತ ರೇಖೆ, ಭಗ್ನನೂಪುರ, ಗಿರಿಜಾ ಕಲ್ಯಾಣ ಮತ್ತು ಕೆಲವು ಗೇಹ ನಾಟಕಗಳು

ಕಾದಂಬರಿ : ತ್ರಿಭುವನ ಮಲ್ಲ

ಮಕ್ಕಳ ಸಾಹಿತ್ಯ : ತುಪ್ಪಾರೊಟ್ಟಿ ಗೇಗೇಗೇ, ಗಿಲ್ ಗಿಲ್ ಗಿಲಗಚ್ಚಿ, ತಿರುಗೆಲೇ ತಿರುಗೆಲೆ ತಿರುಗುಯ್ಯಾಲೆ, ನ್ಯಾಯ ನಿರ್ಣಯ, ಮಕ್ಕಳ ಲೋಕ ಸಂಚಾರ, ಬಣ್ಣದ ಓಕುಳಿ

ಕಥಾ ಸಂಕಲನ : ಕಥಾ ಮಂಜರಿ ಹಾಗೂ ತುಷಾರ ಹಾರ

ಕವನ ಸಂಕಲನಗಳು : ಮಾನಸ ಸರೋವರ, ಮೊದಲು ಮಾನವನಾಗು, ಹಾಲ್ದೆನೆ, ಮರುಳ ಸಿದ್ಧನ ಕಂತೆ, ಜಲಪಾತ, ಕರುಣಾ ಶ್ರಾವಣ, ಕಲ್ಲೋಲ ಮಾಲೆ, ಚರಗ

ಅನುವಾದ ಸಾಹಿತ್ಯ : ನಜರ್ ಅಕ್ಬರಾದಿ

ಸಂಪಾದನೆ : ಕನ್ನಡ ಪದ ರತ್ನಾಕರ, ಶ್ರೀಕಾರ, ಪ್ರಬಂಧಮಾಲೆ, ಸುಬೋಧಸಾರ, ಸರಹದ್ ಗಾಂಧಿ, ಮಹಾತ್ಮ ಕನಕದಾಸ ಪ್ರಶಸ್ತಿ, ಮಣಿಹ, ಶರಣ ಪ್ರಸಾದ

ವಚನ ಸಾಹಿತ್ಯ : ವಚನೋದ್ಯಾನ, ವಚನ ನಂದನ

ಇತರ ಪ್ರಮುಖ ಕೃತಿಗಳು : ಗ್ರಾಮ ಸ್ವರಾಜ್ಯ, ಚಿಂತನ ಲಹರಿ

ಆತ್ಮಕಥೆ : ನನ್ನ ನಿನ್ನೆಗಳೊಡನೆ ಕಣ್ಣುಮುಚ್ಚಾಲೆ

ಅಭಿನಂದನಾ ಗ್ರಂಥ : ಕಾವ್ಯಾನಂದ

1987 ರಲ್ಲಿ ಕಲುಬುರ್ಗಿಯಲ್ಲಿ ನಡೆದ 58 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ದೇ ಜವರೇಗೌಡ (1918-2016)

ಕರ್ನಾಟಕದಲ್ಲೇ ಮೊದಲ ಬಾರಿಗೆ ಜಾನಪದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿ ಜಾನಪದ ಅಧ್ಯಯನಕ್ಕೆ ತಳಹದಿಯನ್ನು ರೂಪಿಸಿಕೊಟ್ಟಿದ್ದು ಇವರ ಮುಖ್ಯವಾದ ಸಾಧನೆ

ಜಾನಪದ : ಜಾನಪದ ಅಧ್ಯಯನಜಾನಪದ ಸೌಂದರ್ಯಜಾನಪದ ವಾಹಿನಿಜನಪದ ಗೀತಾಂಜಲಿ

ಕಾದಂಬರಿ : ಕಡುಗಲಿ ಕುಮಾರರಾಮಬೆಂಗಳೂರು ಕೆಂಪೇಗೌಡ

ಆತ್ಮಕಥೆ : ಹೋರಾಟದ ಬದುಕುನೆನಪಿನ ಬುತ್ತಿನನ್ನ ಉಪವಾಸದ ಕತೆ

ಅನುವಾದ : ಹಮ್ಮು-ಬಿಮ್ಮು (ಜೇನ್ ಆಸ್ಟಿನ್ ಅವರ ಪ್ರೈಡ್ ಅಂಡ್ ಪ್ರಿಜುಡೀಸ್)ನೆನಪು ಕಹಿಯಲ್ಲ (ಕೃಷ್ಣಾ ಹಥೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್)ಆನಾ ಕೆರಿನಿನಾ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ)ಯುದ್ಧ ಮತ್ತು ಶಾಂತಿ, (ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್)ಪುನರುತ್ಥಾನ (ಟಾಲ್ ಸ್ಟಾಯ್ ಅವರ ರಿಸರೆಕ್ಷನ್)ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ (ಗದ್ಯ)

ಭಾಷಣಗಳ ಸಂಗ್ರಹ : ಕುಲಪತಿಯ ಭಾಷಣಗಳುದೇಜಗೌ ಭಾಷಣಗಳು

ಪತ್ರ ಸಾಹಿತ್ಯ : ಕುಲಪತಿಯ ಪತ್ರಗಳು

ಪ್ರಬಂಧ ಹರಟೆ : ಕೆನೆತೆನೆಬೆರಕೆ ಸೊಪ್ಪು

ನಿಘಂಟು : ಕನ್ನಡ ವಿಶ್ವಕೋಶವಿಷಯ ವಿಶ್ವಕೋಶ-ಕರ್ನಾಟಕಇಂಗ್ಲಿಷ್-ಕನ್ನಡ ನಿಘಂಟು

ಪ್ರವಾಸ ಕಥನ :  ವಿಸ್ಮಯಗಳ ನಾಡಿನಲ್ಲಿ, ಪ್ರವಾಸಿಯ ದಿನಚರಿ, ವಿದೇಶದಲ್ಲಿ ನಾಲ್ಕುವಾರ, ನಿಚ್ಚ ಹಸಿರಿನ ನಾಡಿನಲ್ಲಿ,  ಆಫ್ರಿಕಾಯಾತ್ರೆ, ಯೇಸು ವಿಭೀಷಣರ ನಾಡಿನಲ್ಲಿ

ಇತರೆ ಪ್ರಮುಖ ಕೃತಿಗಳು : ಸಾಹಿತಿಗಳ ಸಂಗದಲ್ಲಿಸಿದ್ಧಗಂಗೆಯ ಶಿವನಿಧಿಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಕನ್ನಡ ಛಂದಸ್ಸಿನ ಇತಿಹಾಸಗದ್ಯಶೈಲಿಸ್ಥಳನಾಮ ವ್ಯಾಸಂಗಕುವೆಂಪು ಸಾಹಿತ್ಯ: ಕೆಲವು ಅಧ್ಯಯನಗಳುಕುವೆಂಪು ದರ್ಶನ ಮತ್ತು ಸಂದೇಶಕುವೆಂಪು ಶೈಲಿ ಮುಂತಾದವು

ಅಭಿನಂದನಾ ಗ್ರಂಥಗಳು : ಅಂತಃಕರಣದೇಜಗೌ - ವ್ಯಕ್ತಿ ಮತ್ತು ಸಾಹಿತ್ಯರಸಷಷ್ಟಿಎಪ್ಪತ್ತರ ಹೊಸ್ತಿಲಲ್ಲಿಅಮೃತವರ್ಷಅಪೂರ್ವ

ಕನ್ನಡ ಕಣ್ಮಣಿ, ಕನ್ನಡ ಸೇನಾನಿ, ಕರ್ಮಯೋಗಿ, ಕುಲಪತಿಯ ಸಾಧನೆಗಳು, ಗುಡಿಸಿಲಿನಿಂದ ಗಂಗೋತ್ರಿಗೆ ಇವುಗಳು ಇವರನ್ನು ಕುರಿತು ರಚನೆಯಾದ ಕೆಲವು ಪ್ರಮುಖ ಕೃತಿಗಳು.

 

ಬಿ ಜಿ ಎಲ್ ಸ್ವಾಮಿ (1918-1980)

ವಿಜ್ಞಾನ ಸಾಹಿತ್ಯ : ವಿಜ್ಞಾನ ವಿಹಾರ (ಜೇಡಗಳ ಪ್ರಣಯ ಪ್ರಸಂಗ, ಪ್ಲಾಟಿಪಸ್, ಜೇಡನ ಚರಕ, ಹಸಿವಿನ ಬಳ್ಳಿ), ಹಸುರು ಹೊನ್ನು (ಕೇಂದ್ರ ಸಾಹಿತ್ಯ ಅಕಾಡೆಮಿ), ಸಸ್ಯಜೀವಿ ಪ್ರಾಣಿಜೀವಿ, ಸಸ್ಯಪುರಾಣ

ಅನುವಾದ : ಬೆಳದಿಂಗಳಲ್ಲಿ ಅರಳಿದ ಮೊಲ್ಲೆ, ಜ್ಞಾನರಥ, ನಡೆದಿಹೆ ಬಾಳೌ ಕಾವೇರಿ

ಪ್ರವಾಸ ಕಥನ : ಅಮೇರಿಕಾದಲ್ಲಿ ನಾನು

ಇತರ ಪ್ರಮುಖ ಕೃತಿಗಳು : ಕಾಲೇಜು ರಂಗ, ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ, ಸಾಕ್ಷಾತ್ಕಾರದ ಹಾದಿಯಲ್ಲಿ, ಕಾಲೇಜು ತರಂಗ, ಪಂಚಕಲಶಗೋಪುರ, ಮೈಸೂರು ಡೈರಿ, ಬೃಹದಾರಣ್ಯಕ, ಫಲಶ್ರುತಿ, ಶಾಸನಗಳಲ್ಲಿ ಗಿಡಮರಗಳು, ಮೀನಾಕ್ಷಿಯ ಸೌಗಂಧ, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ

 

ಎಲ್ ಬಸವರಾಜು (1919-2012)

ಸಂಪಾದನೆ : ಆದಿಪುರಾಣಪಂಪಭಾರತಶಿವದಾಸ ಗೀತಾಂಜಲಿಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆಕನ್ನಡ ಛಂದಸ್ಸು ಸಂಪುಟಶಬ್ದಮಣಿ ದರ್ಪಣದೇವರ ದಾಸೀಮಯ್ಯನ ವಚನಗಳು.

ಕವನ ಸಂಕಲನ : ಠಾಣಾಂತರಜಾಲರಿ

ಅನುವಾದ : ಭಾಸನ ಭಾರತ ರೂಪಕ, ಅಶ್ವಘೋಷನ ಬುದ್ಧಚರಿತೆ (ಕೇಂದ್ರ ಸಾಹಿತ್ಯ ಅಕಾಡೆಮಿ), ಸೌಂದರಾನಂದ ಕೃತಿಗಳನ್ನು ನಾಟಕಾಮೃತ ಬಿಂದುಗಳು ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ.

ಸಂಶೋಧನೆ : ಅಲ್ಲಮನ ವಚನಚಂದ್ರಿಕೆ

 

ಮಲ್ಲಿಕಾ (1920-   )

ಕಾದಂಬರಿ : ಜೀವನಾಗಂಗಾ (ಸ್ವಾತಂತ್ರ್ಯೋತ್ತರ ಭಾರತದ ಹೆಣ್ಣಿನ ಸ್ಥಿತಿಗತಿ), ವಂದೇಮಾತರಂ (ರಾಜಕೀಯ), ಡಾ. ಅಘೋರ (ವೈದ್ಯಕೀಯ ವೃತ್ತಿ), ಸಂತ್ರಾಸಿನಿ (ಕೌಟುಂಬಿಕ ದುರಂತ)

ಮನೋನ್ಮಣಿ, ಡಾ ಕಮಲೇಶ್, ವಿಜಯಗಾಥಾ, ಅನಂತಾನಂತದೆಡೆಗೆ, ಕಲ್ಯಾಣಿ ರಾಗಿಣಿ, ಪುಣ್ಯ ತಪೋನಿಧಿ, ಕಾವ್ಯಾನಂದ ನಂದಿನಿ, ಆತ್ಮ ಗೀತಾಂಜಲಿ, ಪದ್ಮಾಲಯ, ಶ್ರದ್ದಾಲಯ, ವಿಶೇಷ ಸುದ್ದಿ

ಕಥಾಸಂಕಲನಗಳು : ಕಮಲಾನಿಮ ಕಥಾ, ಶ್ರೀ ಹರ್ಷಲ, ಫಾಲ್ಗುಣಿ ಪರ್ವ, ವೈಶಾಖಿ ಪರ್ವ, ಶ್ರೀಮುಖಿ, ಲಿಯೋನ್, ಬಹುರತ್ನ ವಸುಂಧರಾ, ಗರ್ಭ ರತ್ನ ವಸುಂಧರಾ, ಸುಧಾಮಣಿ, ರಮಣೀ ಮಣಿ

ಕವನ ಸಂಕಲನಗಳು : ಗಗನ ಕುಸುಮ, ಜೀವನ ಕುಸುಮ, ಕಸ್ತೂರಿ ಮಾಲಿಕೆ, ಬಕುಳರಾಜಿ, ಸಮಯೇ, ನಾದಬಿಂದು, ಧ್ಯಾನಾವಸಾನಸಮಯೋ, ಮಂದಾರಮಾಲಾ, ಚಂಪಕರಾಜಿ, ಮಂಗಳಾರತಿ, ಗಾನತೀರ್ಥ, ಪುಷ್ಫಾಂಜಲಿ, ಸಂಜೀವನ ಕಾವ್ಯ, ಪೂಜಾವಸಾನ

ನೀಳ್ಗವನಗಳು : ಉತ್ತರೋತ್ತರಣಿ, ರಾಗಾನುರಾಗಿಣಿ, ಪ್ರಫುಲ್ಲಭಾರತಿ, ಕಲ್ಯಾಣ ಭಾರತಿ

ಐಂದ್ರ ಕೀರ್ತಿ ಕೇತನಂ ಎಂಬುದು ಇವರ ಗದ್ಯಕಾವ್ಯ ಮತ್ತು ತರಂಗಿಣಿ ಎಂಬುದು ಅಷ್ಟಷಟ್ಪದಿಯಲ್ಲಿ (ಸಾನೆಟ್) ರಚಿತವಾದ ಕಾವ್ಯ

ಶ್ರೀ ವಿವೇಕಾನಂದ ವಿಜಯ ಮಹಾಕಾವ್ಯದ ಮೂಲಕ ಕನ್ನಡದಲ್ಲಿ ಮಹಾಕಾವ್ಯ ರಚಿಸಿದ ಮೊದಲ ಲೇಖಕಿ ಎನಿಸಿಕೊಂಡರು

ನಾಟಕಗಳು : ಪುಣ್ಯಾಭಿಸಾರ, ಪುಣ್ಯ ಪಯೋನಿಧಿ

ಮಕ್ಕಳ ಸಾಹಿತ್ಯ : ರಂಗನ ಸಾಹಸ, ಬೆಳದಿಂಗಳ ರಾತ್ರಿ, ಓಹಿಯೋಜ ಸರೋವರ, ಕೌಶಿಕನ ಗೊಂಬೆ, ದೂರದೇಶದಲ್ಲಿ

 

ಶಾಂತಾದೇವಿ ಮಾಳವಾಡ (1922-2005)

ಕಥಾಸಂಕಲನ : ಮೊಗ್ಗೆಯ ಮಾಲೆ, ಕುಂಕುಮ ಬಲ

ಪ್ರಬಂಧ ಲೇಖನಗಳು : ಕನ್ನಡದ ತಾಯಿ, ಮಹಿಳೆಯರ ಅಲಂಕಾರ, ಸೊಬಗಿನ ಮನೆ, ಮಹಿಳೆಯರ ಆತ್ಮಶ್ರೀ, ರಸಾಪಾಕ, ಸಾರ್ವಜನಿಕ ರಂಗದಲ್ಲಿ ಮಹಿಳೆ, ದಾಂಪತ್ಯಯೋಗ, ವಧುವಿಗೆ ಉಡುಗೊರೆ, ಜನನೀ ಜನ್ಮ ಭೂಮಿಶ್ಚ, ಮಹಿಳಾ ಚೇತನ, ಸಮುಚ್ಚಯ, ಭಾರತದ ಮಾನಸ ಪುತ್ರಿಯರು

ಕಾದಂಬರಿ : ಬಸವ ಪ್ರಕಾಶ, ಶೂರರಾಣಿ ಕೆಳದಿಯ ಚನ್ನಮ್ಮಾಜಿ

ಪ್ರವಾಸ ಕಥನ : ಶ್ರೀಗಿರಿಯಿಂದ ಹಿಮಗಿರಿಗೆ

ಮಕ್ಕಳ ಸಾಹಿತ್ಯ : ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ನಾಗಲಾಂಬಿಕೆ, ನೀಲಾಂಬಿಕೆ, ಕುಟುಂಬ, ಬಸವಯುಗದ ಶಿವಶರಣೆಯರು, ಭಾರತದ ಮಾನಸಪುತ್ರಿಯರು, ಗಂಗಾಂಬಿಕೆ, ಶಿವಯೋಗಿಣಿ, ಎಣ್ಣೆ ಹೊಳೆಯ ನಂದಾದೀಪ, ಪುರಾತನ ಶರಣರು, ದಾನದಾಸೋಹಿ ದಾನಮ್ಮ

ಅಭಿನಂದನಾ ಗ್ರಂಥ : ಪ್ರಶಾಂತ

 

ಡಾ ಕೆ ಕೃಷ್ಣಮೂರ್ತಿ (1923-)

ಪಿಎಚ್.ಡಿ ಪ್ರಬಂಧ : ಧ್ವನ್ಯಾಲೋಕ ಮತ್ತು ಅದರ ಟೀಕಾಕಾರರು / ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ

ಅನುವಾದ ಅಲಂಕಾರ ಗ್ರಂಥಗಳು : ಧ್ವನ್ಯಾಲೋಕ ಕಾವ್ಯಮೀಮಾಂಸೆ, ಕಾವ್ಯಾಲಂಕಾರ ಸೂತ್ರವೃತ್ತಿ, ಔಚಿತ್ಯ ವಿಚಾರ ಚರ್ಚೆ, ಕವಿಕಂಠಾಭರಣ, ಕಾವ್ಯಾದರ್ಶ, ಕಾವ್ಯಾಲಂಕಾರ, ಕಾವ್ಯಪ್ರಕಾಶ, ಆನಂದವರ್ಧನನ ಕಾವ್ಯಮೀಮಾಂಸೆ, ಬಸವಣ್ಣನವರ ವಚನಗಳ ಮೀಮಾಂಸೆ

ಅನುವಾದ ನಾಟಕಗಳು : ಭಾಸನ ಆರು ಕಿರು ನಾಟಕಗಳು, ಪ್ರತಿಮಾ ನಾಟಕ, ಮೃಚ್ಛಕಟಿಕ, ಕಿರಾತಾರ್ಜುನೀಯ, ಮಧ್ಯಮ ವ್ಯಾಯೋಗ

ಅನುವಾದ ಕಾವ್ಯಗಳು : ಉತ್ತರರಾಮ ಚರಿತ, ಯಜ್ಞಫಲ, ಆಶ್ಚರ್ಯ ಚೂಡಾಮಣಿ

ವಿಮರ್ಶಾ ಸಾಹಿತ್ಯ : ಸೃಜನಶೀಲತೆ ಮತ್ತು ಪಾಂಡಿತ್ಯ, ಭವಭೂತಿ, ರಸೋಲ್ಲಾಸ, ಕನ್ನಡ ಸಾಹಿತ್ಯದಲ್ಲಿ ಶೃಂಗಾರ ರಸ, ಕನ್ನಡದಲ್ಲಿ ಕಾವ್ಯ ತತ್ವ, ಭಾರತೀಯ ಕಾವ್ಯ ಮೀಮಾಂಸೆ ತತ್ವ ಮತ್ತು ಪ್ರಯೋಗ, ಸಂಸ್ಕೃತ ಕಾವ್ಯ

ಇತರ ಅನುವಾದ ಸಾಹಿತ್ಯ : ಚಂಪೂರಾಮಾಯಣ (ಅರಣ್ಯಕಾಂಡ), ಶಾಕುಂತಲ, ದೂತ ಘಟೋತ್ಕಚ ಮತ್ತು ಕರ್ಣಭಾರ, ಧರ್ಮಶಾಸ್ತ್ರದ ಇತಿಹಾಸ, ಲುಪ್ತ ದಿಗಂತ

ಅಭಿನಂದನಾ ಗ್ರಂಥ : ಅಭಿಜ್ಞಾನ

 

ಎನ್ ಬಸವಾರಾಧ್ಯ (1926-2001)

ಸಂಪಾದನೆ : ತೊರವೆ ರಾಮಾಯಣ ಸಂಗ್ರಹ, ತ್ರಿಪುರ ದಹನ  ಸಾಂಗತ್ಯ, ಚಂದ್ರಹಾಸನ ಕಥೆ, ಭೈರವೇಶ್ವರ ಕಾವ್ಯದ ಕಥಾ ಸೂತ್ರ ರತ್ನಾಕರ, ಹರಿಶ್ಚಂದ್ರ ಕಾವ್ಯಂ, ಚೇರಮಕಾವ್ಯಂ, ಸರ್ವಜ್ಞ ವಚನ ಸಂಗ್ರಹ, ಉದ್ಭಟದೇವ ಚರಿತೆ, ವಡ್ಡಾರಾಧನೆ, ಉದ್ಯೋಗಸಾರ.

ಭಾಷಾಂತರ : ಸಚಿತ್ರ ಶಾಲಾ ನಿಘಂಟುರಾಘವಾಂಕ.

ಮಕ್ಕಳ ಸಾಹಿತ್ಯ : ಜೋತಿಷಿಯ ಮಗ ಮತ್ತು ಕೊಡದಣ್ಣ ಬಿಡದಣ್ಣಅಪ್ಪಯ್ಯ ಮತ್ತು ಬಾಯಿಶೂರ-ಕೈಶೂರ.

ಅಭಿನಂದನಾ ಗ್ರಂಥಗಳು : ಆರಾಧ್ಯ ಸಂಪದ ಹಾಗೂ ಆರಾಧ್ಯ ಸಿರಿ

 

ಮುದೇನೂರು ಸಂಗಣ್ಣ (1927-2008)

ನಾಟಕಗಳು : ಚೌತಿ ಚಂದ್ರ, ಬಂಗಾರದ ತಟ್ಟೆ, ಜನ ಅರಣ್ಯ, ಶೀಲಾವತಿ, ಬಾಳ ಭಿಕ್ಷುಕ, ಮೋಚಿಮಾವ, ನವಿಲು ಕುಣಿದಾವ, ಸೂಳೆ ಸಂಕವ್ವ. ಅನುವಾದಿತ ನಾಟಕಗಳು- ಥಾವೂ ಕಾಹಿಸಿ, ಏಕದಾ ನಿಶಾತ್ ಕಾಲೆ

ಅನುವಾದ : ಭಾರತದ ಪ್ರೇಮ ಕತೆಗಳು (ಮೂಲ-ಶುಬೋಧ ಘೋಷ್)

ಜಾನಪದ ಸಂಪಾದನೆ : ಚಿತ್ರಪಟ ರಾಮಾಯಣ (ಜನಪದ ನಾಟಕ), ಜಾನಪದ ಮುಕ್ತಕಗಳು (ಜನಪದ ಕಾವ್ಯ), ಆ ಅಜ್ಜ ಈ ಮೊಮ್ಮಗ (ನೀಳ್ಗವನ), ಲಕ್ಷಾಪತಿ ರಾಜನ ಕತೆ (ಕಂಬಾರರೊಂದಿಗೆ), ಗೊಂದಲಿಗ ದೇವೇಂದ್ರಪ್ಪನ ಆಟಗಳು (ಜಾನಪದ ಆಟಗಳು)

ನಿಘಂಟು : ಚಿಗಟೇರಿ ಪದಕೋಶ

 

ಎಚ್ ತಿಪ್ಪೇರುದ್ರಸ್ವಾಮಿ (1928-1994)

ಪಿಎಚ್.ಡಿ : ಶರಣರ ಅನುಭವ ಸಾಹಿತ್ಯ

ಕಾದಂಬರಿಗಳು : ಪರಿಪೂರ್ಣದೆಡೆಗೆ (ಅಲ್ಲಮ ಪ್ರಭುವಿನ ಚರಿತ್ರೆ), ಕದಳಿಯ ಕರ್ಪೂರ (ಅಕ್ಕಮಹಾದೇವಿಯ ಚರಿತ್ರೆ), ಜ್ಯೋತಿ ಬೆಳಗಿತು (ನಿಜಗುಣ ಶಿವಯೋಗಿಗಳ ಚರಿತ್ರೆ), ನೆರಳಾಚೆಯ ಬದುಕು (ಸಿದ್ಧರಾಮನ ಚರಿತ್ರೆ), ಜಡದಲ್ಲಿ ಜಂಗಮ (ಷಣ್ಮುಖ ಶಿವಯೋಗಿಯ ಚರಿತ್ರೆ), ಕರ್ತಾರನ ಕಮ್ಮಟ (ಬಸವಣ್ಣ) ಸತ್ಯಾಶ್ರಯ ಸಾಮ್ರಾಜ್ಯ (ಇಮ್ಮಡಿ ಪುಲಿಕೇಶಿ), ವಿಜಯ ಕಲ್ಯಾಣ (ಪ್ರೌಢದೇವರಾಯ), ವಚನ ವಿರೂಪಾಕ್ಷ (ಹರಿಹರ-ರಾಘವಾಂಕ), ಶಿಸ್ತುಗಾರ ಶಿವಪ್ಪನಾಯಕ

ಕವನ ಸಂಕಲನ : ತಪೋರಂಗ

ಕಥಾ ಸಂಕಲನ : ಸಾಹಿತ್ಯ ಚಿತ್ರಗಳು

ನಾಟಕ : ವಿಧಿಪಂಜರ (ರುದ್ರ ನಾಟಕ), ನಿಜಗುಣ ಶಿವಯೊಗಿ

ಸಂಶೋಧನೆ : ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಕೇಂದ್ರ ಸಾಹಿತ್ಯ ಅಕಾಡೆಮಿ)

ಮೀಮಾಂಸೆ : ತೌಲನಿಕ ಕಾವ್ಯ ಮೀಮಾಂಸೆ

ವಿಮರ್ಶೆ : ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು, ಸಾಹಿತ್ಯ ಮತ್ತು ಸಮಕಾಲೀನ ವಾಸ್ತವಿಕತೆ

ಅಭಿನಂದನಾ ಗ್ರಂಥ : ಶಿವಚಿಂತನ

 

ಗುರುಲಿಂಗ ಕಾಪಸೆ (1928-  )

ಪ್ರವಾಸ ಕಥನ : ಶಾಲ್ಮಲೆಯಿಂದ ಗೋದಾವರಿಯವರೆಗೆ

ಮಕ್ಕಳ ಸಾಹಿತ್ಯ : ಕವಿ ರವೀಂದ್ರರು, ಶಿ ಶಿ ಬಸವನಾಳ

ವಿಮರ್ಶೆ : ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ

ಸಂಪಾದನೆ : ಕಾಲ-ಕವಿ (ಕಾವ್ಯ), ಹೈಮವತಿ ಶೈವಲೀಲೆ(ಗಿರಿಜಾ ಕಲ್ಯಾಣ ಸಂಗ್ರಹ), ಚೆಂಬೆಳಕು (ಕಣವಿ ಅಭಿನಂದನ ಗ್ರಂಥ), ಬೆಳಗಲಿ (ದುರದುಂಡೇಶ್ವರ ನಿಂಗಪ್ಪ ಬೆಳಗಲಿ ಅಭಿನಂದನ ಗ್ರಂಥ), ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ)

ಪಾರಮಾರ್ಥ ಗೀತಾ ಪ್ರವಚನ, ಹರಿಹರನ ಐದು ರಗಳೆಗಳು, ಅರವಿಂದ ಪರಿಮಳ, ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ, ಭವ್ಯ ಮಾನವ ಕಾವ್ಯ ದರ್ಶನ, ಜ್ಞಾನಸಿಂಧು, ಪಿ ಧೂಲಾಸಾಹೇಬ, ಕನ್ನಡ ಕಾವಲು, ಮಧುರಚೆನ್ನರ ಲೇಖನಗಳು, ಚಾಮರಸ, ಮುಗಿಯದ ಹಾಡು, ಶಬ್ದಸ್ಮೃತಿ

ಅನುವಾದ : ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ, ಬಸವೇಶ್ವರಾಂಚೆ ವಚನ

ಇತರ ಪ್ರಮುಖ ಕೃತಿಗಳು : ಅಕ್ಕಮಹಾದೇವಿ (ಕೇಂದ್ರಸಾಹಿತ್ಯ ಅಕಾಡೆಮಿ), ಮಧುರಚೆನ್ನ, ಶ್ರೀ ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು

 

ತ್ರಿವೇಣಿ (1928-1963)

ಶ್ರೀಮತಿ ಅನಸೂಯ ಶಂಕರ ಇವರ ನಿಜನಾಮ

ಕಾದಂಬರಿಗಳು : ಕೀಲುಗೊಂಬೆ (ಕಾಮಕ್ಕೆ ಬಲಿಯಾದ ಸ್ತ್ರೀ), ಮೊದಲ ಹೆಜ್ಜೆ (ಪುರುಷ ಪ್ರಧಾನ ಸಮಾಜ)

ಅಪಸ್ವರ, ಅಪಜಯ ಕಾದಂಬರಿಗಳು ಪರರ ಆಶ್ರಿತ ಹೆಣ್ಣಿನ ದುಃಖಮಯ ಜೀವನದ ಬಗ್ಗೆ ಕುರಿತಾದವು.

ಕಂಕಣ, ಮುಕ್ತಿ ಕಾದಂಬರಿಗಳ ವಸ್ತು ಅವಿವಾಹಿತ ಸ್ತ್ರೀಯರ ಕನಸು, ಮಾನಸಿಕ ತೊಳಲಾಟ, ಸಮಸ್ಯೆಗಳು.

ಹಣ್ಣೆಲೆ ಚಿಗುರಿದಾಗ, ಬೆಳ್ಳಿಮೋಡ, ಹೂವು ಹಣ್ಣು, ಕಾಶಿಯಾತ್ರೆ, ದೂರದ ಬೆಟ್ಟ, ಬಾನು ಬೆಳಗಿತು, ಹೃದಯಗೀತೆ, ತಾವರೆಯ ಕೊಳ, ಸೋತು ಗೆದ್ದವಳು, ಅವಳ ಮನೆ, ವಸಂತಗಾನ, ತೀರ್ಥಯಾತ್ರೆ, ಅವಳ ಮಗಳು.

ಮನೋವೈಜ್ಞಾನಿಕ ಕಾದಂಬರಿಗಳುಶರಪಂಜರ, ಬೆಕ್ಕಿನ ಕಣ್ಣು ಕಾದಂಬರಿಗಳು ಮಾನಸಿಕ ಅಸ್ವಸ್ಥ ಯುವತಿಯರ ಸುತ್ತ ಹೆಣೆದ ಕತೆ, ಮುಚ್ಚಿದ ಬಾಗಿಲು (ಸುಪ್ತಮನಸ್ಸಿನಲ್ಲಡಗಿರುವ ಆಸೆ ಆಕಾಂಕ್ಷೆಗಳು)

ಕಥಾಸಂಕಲನಗಳು : ಸಮಸ್ಯೆಯ ಮಗು, ಎರಡು ಮನಸ್ಸು, ಹೆಂಡತಿಯ ಹೆಸರು

 

ಅನುಪಮಾ ನಿರಂಜನ (1934-1991)

ಕಾದಂಬರಿಗಳು : ಅನಂತಗೀತ, ಶ್ವೇತಾಂಬರಿ, ಹಿಮದ ಹೂ, ಆಳ, ದಿಟ್ಟೆ, ಸಂಕೋಲೆಯೊಳಗಿಂದ, ನೂಲು ನೇಯ್ದ ಚಿತ್ರ, ಘೋಷ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಣ ಪಡುವಣ, ಚಿತ್ತ ಮೋಹನ, ಕಣಿವೆಗೆ ಬಂತು ಬೇಸಿಗೆ, ಪರೀಕ್ಷೆ, ನಟಿ, ಮಾಧವಿ, ಕೊಳಚೆ ಕೊಂಪೆಯ ದಾನಿಗಳು, ಎಳೆ, ಸೇವೆ, ಮುಕ್ತಿಚಿತ್ರ, ಮೂಲಮುಖಿ, ಸ್ನೇಹ ಪಲ್ಲವಿ, ಋಣಮುಕ್ತಳು (ಚಲನಚಿತ್ರ)

ಕಥಾ ಸಂಕಲನಗಳು : ಕಣ್ಮಣಿ, ರೂವಾರಿಯ ಲಕ್ಷ್ಮಿ, ನೀರಿಗೆ ನೈದಿಲೆ ಶೃಂಗಾರ, ಏಳುಸುತ್ತಿನ ಮಲ್ಲಿಗೆ, ಹೃದಯ ಸಮುದ್ರ, ಗಿರಿಧಾಮ, ಒಡಲು, ಪುಷ್ಪಕ, ಒಂದು ಗಿಣಿಯ ಕಥೆ

ಪ್ರವಾಸ ಸಾಹಿತ್ಯ : ಸ್ನೇಹ ಯಾತ್ರೆ, ಅಂಗೈಯಲ್ಲಿ ಯುರೊ ಅಮೆರಿಕ

ಆತ್ಮಕತೆ : ನೆನಪು : ಸಿಹಿ-ಕಹಿ, ಬರಹಗಾರ್ತಿಯ ಬದುಕು

ನಾಟಕ : ಕಲ್ಲೋಲ

ಅನುವಾದ : ಲೊಲ್ಲ್ಜ್ ಇಝ್ಬ್

ಕಾಮೆಂಟ್‌ಗಳು