ಪ್ರಗತಿಶೀಲ ಸಾಹಿತ್ಯ

ಪ್ರಗತಿಶೀಲ ಸಾಹಿತ್ಯ

1935 ರಲ್ಲಿ ಲಂಡನ್ ನಲ್ಲಿ ಸಜ್ಜಾದ್ ಜಾಹಿರ್ ಅವರ ನೇತೃತ್ವದಲ್ಲಿ ಫ್ಯಾಸಿಸ್ಟ್‍ಗಳ ವಿರುದ್ಧ ಸಮ್ಮೇಳನವೊಂದು ನಡೆಯಿತು.

1936 ರಲ್ಲಿ ಲಖ್ನೌನಲ್ಲಿ ಪ್ರೇಮಚಂದ್ ರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಂಘದ ಮೊದಲ ಅಧೀವೇಶನ ನಡೆಯಿತು. ಈ ಅಧಿವೇಶನಕ್ಕೆ ಕರ್ನಾಟಕದಿಂದ ಶ್ರೀರಂಗ, ನಿರಂಜನ, ವಿ ಎಂ ಇನಾಂದಾರ್, ಕೃಷ್ಣಕುಮಾರ ಕಲ್ಲೂರ ಮುಂತಾದವರು ಭಾಗವಹಿಸಿದ್ದರು.

1943 ರಲ್ಲಿ ಬೆಂಗಳೂರಿನಲ್ಲಿ ಅ ನ ಕೃ ಅವರ ಅಧ್ಯಕ್ಷತೆಯಲ್ಲಿ ಪ್ರಗತಿಶೀಲರ ಒಂದು ಸಮ್ಮೇಳನ ನಡೆಯಿತು.

ಕಥೆ ಮತ್ತು ಕಾದಂಬರಿಗಳು ಪ್ರಗತಿಶೀಲ ಸಾಹಿತಿಗಳ ಪ್ರಮುಖ ಅಭಿವ್ಯಕ್ತಿ ಮಾಧ್ಯಮಗಳಾಗಿದ್ದವು. ನಾಟಕ ಸಾಹಿತ್ಯವನ್ನು ಶ್ರೀರಂಗ, ನಿರಂಜನರು ಸ್ವಲ್ಪಮಟ್ಟಿಗೆ ಬಳಸಿಕೊಂಡರು.

ಸಾಹಿತ್ಯವೆಂಬುದು ಸಮಾಜದಲ್ಲಿನ ಶ್ರೀಸಾಮಾನ್ಯನ ನೋವು, ಕಷ್ಟ, ಬದುಕು, ಶೊಷಣೆ ಇವುಗಳನ್ನು ಕುರಿತು ರಚನೆಯಾಗಬೇಕು. ಸಮಾಜದಲ್ಲಿನ ವಾಸ್ತವ ಸಂಗತಿಗಳು ಚಿತ್ರಿತವಾಗಬೇಕು ಎಂದು ಪ್ರಗತಿಶೀಲ ಸಾಹಿತ್ಯ ಪ್ರತಿಪಾದಿಸಿತು.


ಶ್ರೀರಂಗ (1904-1984)

ಇವರ ನಿಜನಾಮ ಆದ್ಯರಂಗಾಚಾರ್ಯ

ನಾಟಕಗಳು ಮುಕ್ಕಣ್ಣ, ವಿರಾಟಪುರುಷ, ಜರಾಸಂಧ, ನರಕದಲ್ಲಿ ನರಸಿಂಹ, ಸರ್ಕಸ್ಸಿನ ಸರಸ್ವತಿ, ಪ್ರಪಂಚ ಪಾಣಿಪತ್ತು ನಾಟಕಗಳ ವಸ್ತು ನಿರುದ್ಯೋಗ ಮತ್ತು ಸಂಪ್ರದಾಯ ಮನೋಭಾವ-ಪ್ರಗತಿಪರ ಧೋರಣೆಗಳ ನಡುವಿನ ಸಂಘರ್ಷ ಕುರಿತಾದುದಾಗಿವೆ.

ಸ್ವಾರ್ಥತ್ಯಾಗಧರ್ಮವಿಜಯ ನಾಟಕಗಳು ಸ್ವಾತಂತ್ರ್ಯ ಹೋರಾಟದ ಕತೆಗಳಾಗಿವೆ.

ನೀ ಮಾಯೆಯೊಳಗೋನಿನ್ನೊಳು ಮಾಯೆಯೋ?, ಇದು ಭಾಗ್ಯ ಇದು ಭಾಗ್ಯ ನಾಟಕಗಳು ಮನುಷ್ಯನ ಲೈಂಗಿಕ ಬಯಕೆಗಳನ್ನು ಬಿಂಬಿಸುತ್ತವೆ.

ಶೋಕಚಕ್ರ, ಯಾರಿಗೆ ಮಾಡ್ತೀ ಮ್ಯಾಂಲೊಳಲೊಟ್ಟೆ ನಾಟಕಗಳ ವಸ್ತು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಮತ್ತು ಪ್ರಜೆಗಳ ಅಸ್ಥಿರ ಜೀವನದ ಕುರಿತಾದುದಾಗಿವೆ.

ಲಂಚಾವತಾರಹುಟ್ಟಿದ್ದು ಹೊಲೆಯೂರು ನಾಟಕಗಳು ಭ್ರಷ್ಟಾಚಾರದ ಕುರಿತಾದವು.

ಕತ್ತಲೆ ಬೆಳಕು (ಜೀವನ ಮತ್ತು ಸಾಹಿತ್ಯಗಳ ಅಂತರಆದರ್ಶಗಳನ್ನು ಕುರಿತಾದದು)ಕೇಳು ಜನಮೇಜಯ (ಹೊಟ್ಟೆ ಹೊರೆಯಲು ಹಲವು ಮಾರ್ಗ ಎಂಬ ಧೋರಣೆಯ ಕತೆ)ದಾರಿ ಯಾವುದಯ್ಯಾ ವೈಕುಂಠಕೆ? (ದಾಸರ ನುಡಿಗಳ ವಿಡಂಬನೆ ಮತ್ತು ಶಕ್ತಿಶಾಲಿ ರಾಷ್ಟ್ರಗಳ ಅಣ್ವಸ್ತ್ರದಿಂದ ವಿಶ್ವವಿನಾಶವಾಗುವ ಸಂಭವ ಕುರಿತ ನಾಟಕ)ರಂಗಭಾರತ (ಮಹಾಭಾರತದ ಆಧುನಿಕ ಸ್ವರೂಪ)ಹರಿಜನ್ವಾರ (ಸಾಮಾಜಿಕ ವಿಡಂಬನೆ)ಸಂಸಾರಿಗೆ ಕಂಸ (ಸಂತಾನ ನಿರೋಧದ ಅಗತ್ಯ).

ವೈದ್ಯರಾಜ, ಉದರ ವೈರಾಗ್ಯ, ದರಿದ್ರನಾರಾಯಣ, ಗೆಳೆಯ ನೀನು ಹಳೆಯ ನಾನು, ಜೀವನ ಜೋಕಾಲಿ, ಅಧಿಕ ಮಾಸ, ಇದೇ ಸಂಸಾರ, ಸಂಧ್ಯಾಕಾಲ, ಗುಮ್ಮನೆಲ್ಲಿಹ ತೋರಮ್ಮ, ಸಿರಿಪುರಂದರ, ಸಂಜೀವನಿ, ಸಾವಿತ್ರಿ, ತೇಲಿಸೊ ರಂಗ ಇಲ್ಲ ಮುಳುಗಿಸೊ, ಸ್ವರ್ಗಕ್ಕೆ ಮೂರೆ ಬಾಗಿಲು, ಶತಾಯು ಗತಾಯು, ಕರ್ತಾರನ ಕಮ್ಮಟ, ಪರಮೇಶ್ವರ ಪುಲಿಕೇಶಿ, ನೀ ಕೊಡೆ ನಾ ಬಿಡೆ, ಕಾಲಾಯ ತಸ್ಮೈ ನಮಃ, ಕನ್ನಡ ಶ್ಯಾಮ, ಅಗ್ನಿಸಾಕ್ಷಿ, ನೀವೇ ಹೇಳ್ರಿ, ಈಸಬೇಕು ಇದ್ದು ಜೈಸಬೇಕು

ಏಕಾಂಕ ನಾಟಕಗಳು : ಪೂರ್ವರಂಗ, ಮುಹೂರ್ತ, ಮನೆಯಲ್ಲಿ ಮಹಾಸಭೆ, ಯಮನ ಸೋಲು, ದೀಪೋತ್ಸವ, ನನ್ನದಲ್ಲ ಅಶ್ವಮೇಧ, ಮೈರಾವಣ, ಕಾಮದಹನ, ಜೀವನರಂಗ, ನಿರಾಹಾರ, ಸಂಪುಷ್ಟ ರಾಮಾಯಣ, ಹನ್ನೊಂದುವರೆ, ಹೌಹಾರಿದ ಹರಿಶ್ಚಂದ್ರ, ರಾಮರಾಜ್ಯ, ಮೂಕನಾಯಕ, ಹರಿಹರ ಮಹಾದೇವ, ಕೊನೆಯ ಗುಟುಕು, ಭಾರತ ಭಾಗ್ಯ ವಿದಾತ, ನಿತ್ಯನಾಟಕ

ಕಾದಂಬರಿಗಳು ವಿಶ್ವಾಮಿತ್ರನ ಸೃಷ್ಟಿ (ಕನ್ನಡ ಸಾಹಿತ್ಯದಲ್ಲಿ ನವ್ಯತೆಯನ್ನು ಒಳಗೊಂಡ ಮೊದಲ ಕಾದಂಬರಿ), ಪ್ರಕೃತಿ (ದಲಿತ ಮತ್ತು ಉನ್ನತ ವರ್ಗಗಳ ನಡುವಿನ ಸಂಬಂಧಗಳು ಹೇಗೆ ಕಾಲಕ್ರಮೇಣ ಬದಲಾಗುತ್ತವೆ ಎಂಬುದು ಕೃತಿಯ ವಸ್ತು), ಪುರುಷಾರ್ಥ (ಸ್ವಾತಂತ್ರ್ಯ ಹೋರಾಟ ಮತ್ತು ತಿಲಕರ ಮರಣ), ವಿಷ ಚಕ್ರವ್ಯೂಹ (ಸ್ವಾತಂತ್ರ್ಯದ ಇಪ್ಪತ್ತು ವರ್ಷಗಳ ನಂತರ ಯುವಜನತೆ ಗಾಂಧಿಯನ್ನು ಕಂಡ ಬಗೆ)

ಉತ್ತರವಿಲ್ಲದ ಪ್ರಶ್ನೆ, ಗೌತಮನ ಶಾಪ, ಶಾಮರಾಯನ ಸತ್ಯ, ಸೌಜನ್ಯದ ಬೆಲೆ, ಭರಮಪ್ಪನ ಭೂತ, ಅನಾದಿ, ಕುಮಾರ ಸಂಭವ, ಅನಂತ.

ಪ್ರವಾಸ ಸಾಹಿತ್ಯಶ್ರೀರಂಗರ ಸಾಹಿತ್ಯ ಯಾತ್ರೆ, ಮಲಕ್ಕಣ್ಣನ ಯಾತ್ರೆ

ಕವನ ಸಂಕಲನಆಹ್ವಾನ

ರಂಗಭೂಮಿಯ ಕುರಿತುನಾಟ್ಯದರ್ಪಣಕನ್ನಡ ರಂಗಭೂಮಿಯ ಪುರೋಭಿವೃದ್ಧಿರಂಗನಾಟಕ ಶಾಸ್ತ್ರಭರತನ ನಾಟ್ಯಶಾಸ್ತ್ರನಾಟ್ಯಶಾಸ್ತ್ರದಲ್ಲಿ ನಟ, ನಗೆ, ಪ್ರೇಕ್ಷಕಮಾರ್ಗ, ಭಾರತೀಯ ರಂಗಭೂಮಿ

ವಿಮರ್ಶೆಕಾಳಿದಾಸ (ಕೇಂದ್ರ ಸಾಹಿತ್ಯ ಅಕಾಡೆಮಿ)ಭವಭೂತಿ

ಅನುವಾದಭಗವಾನ್ ಬುದ್ಧಹಾಳು ದೇಗಲುಚಂದ್ರಗುಪ್ತಪ್ರಾರಬ್ಧ ಮತ್ತು ಕಾಡುಕೋಳಿ

ಇತರೆ ಪ್ರಮುಖ ಕೃತಿಗಳು : ಗೀತಾ ಗಾಂಭೀರ್ಯ, ಗೀತಾ ದರ್ಪಣ, ಸ್ವಲ್ಪದರಲ್ಲಿ ಸ್ವಾರಸ್ಯ, ಋತುಸಂಹಾರ, ಜಾತಿಯ ಸಮಸ್ಯೆ, 42 ರ ಚಲೇಜಾವ್ ಚಳುವಳಿ

ಭಾಷಾಶಾಸ್ತ್ರ : ಶಾರದೆಯ ಸಂಸಾರ

ಇಂಗ್ಲಿಷ್ ಸಾಹಿತ್ಯಡ್ರಾಮಾ ಈಸ್ ಸ್ಯಾಂಸ್ಕ್ರಿಟ್ ಲಿಟರೇಚರ್ಇಂಡಿಯನ್ ಥಿಯೇಟರ್ಇಂಟ್ರಡಕ್ಷನ್ ಟು ಭರತಾಸ್ ನಾಟ್ಯಶಾಸ್ತ್ರಆರ್ಟಿಕಲ್ ಆನ್ ಭಾಸಸ್ ಟೆನ್ ಪ್ಲೇಯ್ಸ್ ಇತ್ಯಾದಿಗಳು.

1956 ರಲ್ಲಿ ರಾಯಚೂರಿನಲ್ಲಿ ನಡೆದ 38 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಅ ನ ಕೃಷ್ಣರಾಯ (1908-1971)

ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾದವರು

ಪತ್ರಿಕೆಕಥಾಂಜಲಿಕರ್ನಾಟಕ ಸಾಹಿತ್ಯ ಪರಿಷತ್

ಕಾದಂಬರಿಗಳುನಗ್ನಸತ್ಯಸಂಜೆಗತ್ತಲುಶನಿಸಂತಾನಅಪರಂಜಿ, ಕಳಂಕಿನಿ, ಕಬ್ಬಿಣದ ಕಾಗೆ, ಕಾದಂಬರಿಗಳು ಕಾಮ ಮತ್ತು ವೇಶ್ಯಾವಾಟಿಕೆ ಸಮಸ್ಯೆಯನ್ನು ಒಳಗೊಂಡಿವೆ. ಜೀವನಯಾತ್ರೆ (ದೇವದಾಸಿ ಸಮಸ್ಯೆ).

ಅಮೃತಮಂಥನ, ಏಣಾಕ್ಷಿ, ಕಾಂಚನಗಂಗ, ಕಾಗದದ ಹೂ, ಕಸ್ತೂರಿ, ಭೂಮಿಗಿಳಿದು ಬಂದ ಭಗವಂತ, ಚಿನ್ನದ ಗೋಪುರ, ಚಿರಂಜೀವಿ, ದೇವಪ್ರಿಯ, ನರನಾರಾಯಣ, ನರಬಲಿ, ಭಾಗ್ಯದ ಬಾಗಿಲು, ಮಣ್ಣಿನ ದೋಣಿ, ಮಾರ್ಜಾಲ ಸಂನ್ಯಾಸಿ, ಮಿಯಾ ಮಲ್ಲರ್, ಯಾರಿಗುಂಟು ಯಾರಿಗಿಲ್ಲ, ರತ್ನದೀಪ, ಶುಭಸಮಯ, ಸಮದರ್ಶನ, ಸುಮುಹೂರ್ತ, ಹೊನ್ನೇ ಮೊದಲು, ಹೊಸ ಸುಗ್ಗಿ, ಹೊಸಹುಟ್ಟು, ಚಿತ್ರವಿಚಿತ್ರ (ಚಲನಚಿತ್ರ ಪ್ರಪಂಚ), ಮುಯ್ಯಿಗೆ ಮುಯ್ಯಿ (ವಾಮಾಚಾರ), ಕಟ್ಟಿದ ಬಣ್ಣ, ಭುವನ ಮೋಹಿನಿ, ಪಂಕಜ, ಸುಂದರ ಸಂಸಾರ, ಗರುಡ ಮಚ್ಚೆ, ಜನತಾ ಜನಾರ್ಧನ, ಕಣ್ಣಿನ ಗೊಂಬೆ, ದಾದಿಯ ಮಗ, ಪರಿನಿರ್ವಾಣ, ಸಾಕಿದ ಅಳಿಯ, ಅಮರ ಆಗಸ್ಟ್ (1942 ರ ಚಳುವಳಿ)

ರಾಜಕೀಯ ಮತ್ತು ಸಾಮಾಜಿಕ ಚಿಂತನೆ : ಸಂಗ್ರಾಮ (ಸ್ತ್ರೀಲೋಭ), ಪಶ್ಚಾತ್ತಾಪ, ಪುನರಾವತಾರ, ಅರುಳು ಮರುಳು (ಧರ್ಮದ ಹೆಸರಿನಲ್ಲಿ ವಂಚನೆ), ಈಚಲು ಮರದವ್ವ (ಮಧ್ಯಪಾನ ಜಾಗೃತಿ),  ಕೃತಿಗಳ ವಸ್ತು ದಲಿತ ಚಿಂತನೆ, ಕಾಲಚಕ್ರ (ಲೋಭ ಮತ್ತು ಸಾಮಾಜಿಕ ಅಸ್ವಸ್ಥತೆ), ಜಾತಕಪಕ್ಷಿ (ಅಂತರ್ಜಾತೀಯ ವಿವಾಹ), ಪರಿವರ್ತನೆ, ಪಾಪಿಯನೆಲೆ (ವೈಚಾರಿಕತೆ), ಕಾಮಿನಿ ಕಾಂಚಾಣ (ಹಣದ ಮೋಹ), ಅಗ್ರತಾಂಬೂಲ (ಸೇವೆಯ ಹೆಸರಿನಲ್ಲಿ ನಡೆಯುವ ಅನ್ಯಾಯ), ಕುಲಪುತ್ರ (ಜಾತಿಮತ ಕಲಹ), ಆಶಿರ್ವಾದ ಮತ್ತು ಅನುಗ್ರಹ ಕಾದಂಬರಿಗಳ ವಸ್ತು ನೈತಿಕ ಮೌಲ್ಯ ನಿರೂಪಣೆ. ಅನ್ನದಾತ, ಭೂಮಿತಾಯಿ (ಗ್ರಾಮೋದ್ಧಾರ)ಈ ದಾರಿ ಆ ದಾರಿ, ಹೇಗಾದರೂ ಬದುಕೋಣ,  ಮರಳು ಮನೆ, ಕೀರ್ತಿ ಕಳಶ, ಕೃತಿಗಳ ವಸ್ತು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಸ್ಥಿತಿಗತಿ. ಹುಲಿಯುಗುರು (ಸಮಾಜ ದ್ರೋಹಿಗಳ ಪರಿವರ್ತನೆ),

ಕೌಟುಂಬಿಕ ವಸ್ತು : ಕಣ್ಣೀರು (ವರದಕ್ಷಿಣೆ ಸಮಸ್ಯೆ), ಮುಡಿಮಲ್ಲಿಗೆ, ತಾಯಿಯ ಕರುಳು, ಧರ್ಮಪತ್ನಿ, ಜೀವನದಿ, ಗೃಹಲಕ್ಷ್ಮಿ, ರುಕ್ಮಿಣಿ, ತಾಯಿಮಕ್ಕಳು, ಕುಂಕುಮ ಪ್ರಸಾದ, ಹೆಂಗರುಳು, ಮನೆಯಲ್ಲಿ ಮಹಾಯುದ್ಧ, ಅಣ್ಣ ತಂಗಿ, ಅಕ್ಕಯ್ಯ, ಕಂಕಣಬಲ (ವಿಚ್ಚೇದನ), ಹೆಣ್ಣುಜನ್ಮ, ಹೊಸಲು ದಾಟಿದ ಹೆಣ್ಣು, ಭಾಮಾಮಣಿ, ಶ್ರೀಮತಿ (ಪಾಶ್ಚಾತ್ಯ ಮತ್ತು ಪೌರಾತ್ಯ ವಿಚಾರ ಸಂಗರ್ಷ), ಪಂಜರದ ಗಿಣಿ (ಸ್ತ್ರೀ ಸ್ವಾತಂತ್ರ್ಯ), ಗೌರಿ, ಅಪರಂಜಿ, ಮುಡಿದ ಮಲ್ಲಿಗೆ, ಅಪರಾಜಿತೆ (ಹೆಣ್ಣಿನ ಹಠ), ರೂಪಶ್ರೀ , ಸ್ತ್ರೀಮುಖ ವ್ಯಾಘ್ರ,

ಐತಿಹಾಸಿಕ ಕಾದಂಬರಿಗಳು : ಅಳಿಯ ರಾಮರಾಯ, ವಿಜಯ ವಿದ್ಯಾರಣ್ಯ, ತಪೋಬಲ, ಪುಣ್ಯಪ್ರಭಾವ, ಪ್ರೌಢ ಪ್ರತಾಪಿ, ಮೋಹನ ಮುರಾರಿ, ಯಶೋದುಂದುಭಿ, ಅಭಯಪ್ರಧಾನ, ತೇಜೋಭಂಗ, ಪ್ರಳಯಾನಂತರ,  ಕೃತಿಗಳು ವಿಜಯನಗರ ಸಾಮ್ರಾಜ್ಯದ ಕುರಿತಾದುವು, ಯಲಹಂಕ ಭೂಪಾಲಕಿತ್ತೂರು ರಾಣಿ ಚೆನ್ನಮ್ಮ, ರಣವಿಕ್ರಮ (ರಾಣಾ ಪ್ರತಾಪ ಸಿಂಹ), ಸಂಗ್ರಾಮ ಧುರೀಣ

ಕಲಾವಿದ, ಹೃದಯ ಸಾಮ್ರಾಜ್ಯ, ನಟಸಾರ್ವಭೌಮ, ಬಣ್ಣದ ಬದುಕು, ಉದಯರಾಗ, ಸಂಧ್ಯಾರಾಗ ಕಾದಂಬರಿಗಳು ಕಲಾವಿದರ ಬದುಕನ್ನು ಕುರಿತವು. ಅಭಿಮಾನ (ನಾಟಕ ಕಂಪೆನಿಗಳ ಏಳುಬೀಳು)

ಸಾಹಿತ್ಯ ರತ್ನ, ಕನ್ನಡಮ್ಮನ ಗುಡಿಯಲ್ಲಿ, ದೀಪಾರಾಧನೆ, ಗಾಜಿನ ಮನೆ ಪತ್ರಿಕೋದ್ಯಮದ ಕುರಿತಾದ ಕಾದಂಬರಿಗಳು

ಸಂಪಾದನೆರಸಋಷಿಪ್ರಣಯ ಗೀತೆಗಳುಪ್ರಗತಿಶೀಲ ಸಾಹಿತ್ಯಭಾರತೀಯ ಕಲಾದರ್ಶನ, ಮರುಳಸಿದ್ಧ ಕಾವ್ಯ (ದೇಪ ಕವಿ)ಭಗವದ್ಗೀತಾರ್ಥಸಾರಕಾಮನ ಬಿಲ್ಲುಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡೆಮಿಯ ಪ್ರಕಟಣೆಗಳುಮ್ಯಾಕ್ಸಿಂ ಗಾರ್ಕಿ, ಭಾರತೀಯ ಸಂಸ್ಕೃತಿ ದರ್ಶನ 

ಕಥಾ ಸಂಕಲನಗಳುಅಗ್ನಿಕನ್ಯೆಕಾಮನ ಸೋಲುಕಣ್ಣುಮುಚ್ಚಾಲೆಕಿಡಿಶಿಲ್ಪಿಮಿಂಚುಸಮರ ಸುಂದರಿಪಾಪ ಪುಣ್ಯ ಅದೃಷ್ಟ ನಕ್ಷತ್ರ

ಅನುವಾದರಸಿಕಾಗ್ರಣಿರುಬಾಯತ್ ಕಾವ್ಯಭಾರತದ ಕಥೆಹಿಂದುಸ್ತಾನದ ಕತೆ, ನೀಲಲೋಚನೆ ಮತ್ತು ಇತರ ಕಥೆಗಳು, ಭಾರತದ ಕತೆ

ನಾಟಕಗಳು ಮದುವೆಯೋ ಮನೆಹಾಳೋ?, ಆದದ್ದೇನು?, ಜ್ವಾಲಾಮುಖಿ, ಗೋಮುಖ ವ್ಯಾಘ್ರ, ಜಗಜ್ಯೋತಿ ಬಸವೇಶ್ವರ, ರಾಜನರ್ತಕಿ, ಪಾಲು, ಆಹುತಿ, ಧರ್ಮ ಸಂಕಟ, ರಜಪೂತ ಲಕ್ಷ್ಮಿ, ಸ್ವರ್ಣಮೂರ್ತಿ, ಗುಬ್ಬಚ್ಚಿಯ ಗೂಡು, ವಿಶ್ವ ಧರ್ಮ, ಜೀವದಾಸೆಯ ಸಮಸ್ಯೆ, ಬಣ್ಣದ ಬೀಸಣಿಗೆ, ಮಾಗಡಿ ಕೆಂಪೇಗೌಡ, ರಾಷ್ಟ್ರಧುರೀಣ ಬೆಂಗಳೂರು ಕೆಂಪೇಗೌಡ, ಸೂತಪುತ್ರ ಕರ್ಣ, ಶ್ರೀರಾಮ ಪಾದುಕಾ ಪಟ್ಟಾಭಿಷೇಕ

ಪ್ರಬಂಧ ಬರಹಗಳು ಭಾರತೀಯ ಚಿತ್ರಕಲೆಯಲ್ಲಿ ರಾಜಾರವಿವರ್ಮನ ಸ್ಥಾನ (ಆಧುನಿಕ ಕನ್ನಡ ಸಾಹಿತ್ಯದಲ್ಲಿ ಚಿತ್ರಕಲೆಯ ವಿಮರ್ಶೆ ಒಳಗೊಂಡ ಮೊದಲ ಕೃತಿ), ಕರ್ನಾಟಕದ ಹಿತಚಿಂತನೆ, ಹೊಸ ಹುಟ್ಟು, ಭಾರತೀಯ ಚಿತ್ರಕಲೆ, ಕನ್ನಡದ ದಾರಿ, ಅಖಂಡ ಕರ್ನಾಟಕ, ಬಸವಣ್ಣನ ಅಮೃತವಾಣಿ, ಪೊರಕೆ (ಹರಟೆ), ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕನ್ನಡಮ್ಮನ ಗುಡಿಯಲ್ಲಿ, ಸಂಸ್ಕೃತಿಯ ವಿಶ್ವರೂಪ, ನಾಟಕಕಲೆ, ಚಿತ್ರಕಲೆ

ಸಾಹಿತ್ಯ ಮತ್ತು ಕಾಮಪ್ರಚೋದನೆ, ಸಾಹಿತ್ಯ ಮತ್ತು ಜೀವನ, ಸಾಹಿತ್ಯ ಸಮಾರಾಧನೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿ, ಸಾಹಿತ್ಯರತ್ನ, ಸಜೀವ ಸಾಹಿತ್ಯ, ಸಾಹಿತ್ಯ ಮತ್ತು ಯುಗಧರ್ಮ, ಸಾರ್ಥಕ ಸಾಹಿತ್ಯ, ಸಮಗ್ರ ವೀರಶೈವ ಸಾಹಿತ್ಯ

ವ್ಯಕ್ತಿ ಚಿತ್ರಗಳುಕರ್ನಾಟಕ ಕಲಾವಿದರುಕನ್ನಡ ಕುಲರಸಿಕರುನಿಡುಮಾಮಿಡಿ ಸನ್ನಿದಿಯವರು.

ಆತ್ಮಕತೆಬರಹಗಾರನ ಬದುಕುನನ್ನನ್ನು ನಾನೇ ಕಂಡೆ

ಅಭಿನಂದನಾ ಗ್ರಂಥರಸಚೇತನ

ಜಿ.ಪಿ ರಾಜರತ್ನಂ ಅವರು ಅ.ನ.ಕೃ ನೆನಪಿನಲ್ಲಿ ಸ್ನೇಹದ ದೀಪ ಎಂಬ ಕೃತಿ ಪ್ರಕಟಿಸಿದ್ದಾರೆ

1960 ರಲ್ಲಿ ಮಣಿಪಾಲದಲ್ಲಿ ನಡೆದ 42 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು


ಚದುರಂಗ (1916 -1998)

ಚದುರಂಗರ ನಿಜನಾಮ ಸುಬ್ರಹ್ಮಣ್ಯರಾಜು ಅರಸು.

ಕಾದಂಬರಿಗಳು : ಉಯ್ಯಾಲೆ (ಗಂಡು ಹೆಣ್ಣಿನ ನಡುವಿನ ಸೂಕ್ಷ್ಮ ಸಂಬಂಧಗಳು)ವೈಶಾಖ (ಪ್ರೀತಿಗೆ ಅಡ್ಡಿಯಾದ ಜಾತಿಸಾಮಾಜಿಕ - ಧಾರ್ಮಿಕ ಕಟ್ಟುಪಾಡುಗಳು ಕತೆಯ ವಸ್ತು - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ)ಹೆಜ್ಜಾಲ (ಶ್ರೇಣೀಕೃತ ಸಮಾಜದ ಕ್ರೌರ್ಯಶೋಷಣೆಗಳನ್ನು ಬಯಲಿಗೆಳೆದು ಬಿಡುಗಡೆಯ ಹಾದಿ ತೋರುವ ದಲಿತ ನಾಯಕನ ಕತೆ), ಸರ್ವಮಂಗಳಾ .

ಕಥಾಸಂಕಲನಗಳು ಸ್ವಪ್ನ ಸುಂದರಿ, ಶವದ ಮನೆ, ಇಣುಕು ನೋಟ, ಬಂಗಾರದ ಹೆಜ್ಜೆ, ಮೀನಿನ ಹೆಜ್ಜೆ, ಕ್ವಾಟೆ, ಮೃಗಯಾ, ಬಣ್ಣದ ಬೊಂಬೆ ಇತ್ಯಾದಿ

ನಾಟಕಗಳು ಕುಮಾರರಾಮಬಿಂಬಇಲಿಬೋನು (ಅಸಂಗತ ನಾಟಕ)

ಕವನ ಸಂಕಲನ ಅಲೆಗಳು

1994 ರಲ್ಲಿ ಮಂಡ್ಯದಲ್ಲಿ ನಡೆದ 63 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಅರ್ಚಕ ವೆಂಕಟೇಶ (1916-1977)

ಕವನ ಸಂಕಲನ ಪೂರ್ಣಚಂದ್ರಶಬ್ದಶಿಲ್ಪಶಿಲಾಪಕ್ಷ

ಕಥಾಸಂಕಲನ ಧ್ರುವನಕ್ಷತ್ರಜೀವನ ಸಂಗ್ರಾಮ

ನಾಟಕ ಪಂಗನಾಮ, ಬ್ಲ್ಯಾಕ್ ಮಾರ್ಕೆಟ್, ವೀರ ಸಾದಿಕ್, ಜಯವಿಜಯ, ಪಾನಕ ಕೋಸಂಬರಿ, ಪ್ರಹ್ಲಾದನ ಪಾಣಿಪತ್ತು, ಭ್ರಾತೃ ಪ್ರೇಮ, ಸಾವನದುರ್ಗ, ಹರಿದ ಚಂದ್ರ

ಕಾದಂಬರಿ ಅಸ್ಥಿಪಂಜರಚಲೋ ದಿಲ್ಲಿರವಿಶಂಕರ

ಜೀವನ ಚರಿತ್ರೆ ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಬೋಸ್, ಮದನಮೋಹನ ಮಾಳವೀಯ, ರಮಣ ಮಹರ್ಷಿ, ರಾಮನ ಕತೆ

 

ಬಸವರಾಜ ಕಟ್ಟೀಮನಿ (1919-1989)

ಪತ್ರಿಕೆ : ಉಷಾ

ಕಥಾ ಸಂಕಲನಗಳು ಕ್ಯಾರಾವಾನ್, ಸುಂಟರಗಾಳಿ, ಸೈನಿಕನ ಹೆಂಡತಿ, ಸೆರೆಯಿಂದ ಹೊರಗೆ, ಹುಲಿಯಣ್ಣನ ಮಗಳು, ಆಗಸ್ಟ್ 9, ಗುಲಾಬಿ ಹೂ, ಸೆರೆಯಿಂದ ಹೊರಗೆ ಮತ್ತು ಇತರ ಕತೆಗಳು, ಜೀವನ ಕಲೆ, ಗರಡಿಯಾಳು

ನಾಟಕ ಪಟ್ಟಣದ ಹುಡುಗಿ

ಕಾದಂಬರಿಗಳು ಮಣ್ಣು ಮತ್ತು ಹೆಣ್ಣು, ಬೀದಿಯಲ್ಲಿ ಬಿದ್ದವಳು, ಬಲೆಯ ಬೀಸಿದರು, ಗೋವಾದೇವಿ, ಆಶ್ರಮವಾಸಿ, ಬೆಳಗಿನ ಗಾಳಿ, ಸಮರಭೂಮಿ, ಜಲತರಂಗ, ಪೌರುಷ ಪರೀಕ್ಷೆ, ದ್ರೋಹಿ, ಹೆಂಡತಿ, ಬೆಂಗಳೂರಿಗೊಂದು ಟಿಕೀಟು, ಪ್ರಪಾತ, ಪ್ರಿಯ ಬಾಂಧವಿ, ಗ್ರಾಮ ಸೇವಿಕಾ, ಐದನೇಯ ದೇಸಾಯಿಣಿ, ಸಂಗೊಳ್ಳಿಯ ರಾಯನಾಯಕ, ಮಾಜೀಮಂತ್ರಿ, ತಿರುಗಣಿ, ಸೈತಾನ್, ಜೊತೆಗಾತಿ, ಮಗನ ತಾಯಿ, ಆಧುನಿಕ ಬಸವಣ್ಣ, ಮೋಹದ ಬಲೆಯಲ್ಲಿ, ಜರತಾರಿ ಜಗದ್ಗುರು, ಖಾನಾವಳಿಯ ಲೀಲಾ, ನೀ ನನ್ನ ಮುಟ್ಟಬೇಡ, ಜನಿವಾರ ಮತ್ತು ಶಿವದಾರ, ಗೆಳೆಯನ ಮಡದಿ, ಸಾಕ್ಷಾತ್ಕಾರ, ಕತ್ತರಿ ಪ್ರಯೋಗ, ಪಾತರಗಿತ್ತಿ, ಚಕ್ರವ್ಯೂಹ

ಜ್ವಾಲಾಮುಖಿಯ ಮೇಲೆ (ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭ್ರಷ್ಟ ರಾಜಕೀಯದ ವಿರುದ್ಧ ಪತ್ರಕರ್ತನೊಬ್ಬನ ಹೋರಾಟ). ಗಿರಿಯ ನವಿಲು (ಅಕ್ಕಮಹಾದೇವಿ)ಹರಿಜನಾಯಣ (ವರ್ಗ ಸಂಘರ್ಷ).

ಮಾಡಿ ಮಡಿದವರು ಮತ್ತು ಸ್ವಾತಂತ್ರ್ಯದೆಡೆಗೆ ಕಾದಂಬರಿಗಳು ಸ್ವಾತಂತ್ರ್ಯ ಹೋರಾಟ ಮತ್ತು ರಾಜಕೀಯ ಸ್ಥಿತಿ ಗತಿಗಳನ್ನು ಒಳಗೊಂಡಿವೆ

ನಾನು ಪೊಲೀಸನಾಗಿದ್ದೆಬಂಗಾರದ ಜಿಂಕೆಯ ಹಿಂದೆ ಕಾದಂಬರಿಗಳು ಆತ್ಮಕಥಾನಕ ರೀತಿಯಲ್ಲಿ ರಚನೆಯಾಗಿವೆ.

ಕವನ ಸಂಕಲನ ಕಂಪೋಜಿಟರ್ಸ್ವತಂತ್ರವ್ವ - 30

ಪ್ರವಾಸ ಕಥನ ನಾ ಕಂಡ ರಶಿಯಾ

ಅನುವಾದ ಕಾಡಿನ ಹಾಡು (ಬೈಲೂರಷಿಯನ್ ಕಥೆಗಳು)

ಮಕ್ಕಳ ಸಾಹಿತ್ಯ : ಸಂಗೊಳ್ಳಿ ರಾಯಣ್ಣಕುಮಾರರಾಮ

ಜೀವನ ಚರಿತ್ರೆ ಪ್ರಿಯದರ್ಶಿನಿ - ಮಾರ್ಗದರ್ಶಿನಿ ಇಂದಿರಾಗಂಧಿಸೇನಾಪತಿ ಚೆನ್ನಪ್ಪವಾಲಿ

ಸಂಪಾದನೆ ನವಿಲೂರು ಮನೆಯಿಂದ, ಹಾಲು ತೊರೆಗೆ ಬೆಲ್ಲದ ಕೆಸರು, ಗೋಕಾಕ ತಾಲ್ಲೂಕಿನಲ್ಲಿಯ ಸ್ವಾತಂತ್ರ್ಯ ಸಮರ, ರಸಿಕರಂಗದರ್ಶನ

ಆತ್ಮಕಥೆ ಕಾದಂಬರಿಕಾರನ ಬದುಕು

 

ತ ರಾ ಸುಬ್ಬರಾಯ (1920-1984)

ಕಾದಂಬರಿಗಳುಎಲ್ಲ ಅವನ ಹೆಸರಲ್ಲಿ ಮತ್ತು ಬೇಲಿ ಮೆಯ್ದ ಹೊಲ ಕಾದಂಬರಿಗಳು ಸ್ವಾತಂತ್ರ್ಯೋತ್ತರ ಭಾರತದ ಸ್ಥಿತಿಗತಿಯನ್ನು ತಿಳಿಸುತ್ತವೆ.

ಬಿಡುಗಡೆಯ ಬೇಡಿ (ಶೋಷಿತ ಹೆಣ್ಣು)ಮಸಣದ ಹೂ (ವೇಶ್ಯಾವಾಟಿಕೆಯ ಸಮಸ್ಯೆ)ಪುರುಷಾವತಾರ (ಭಿಕ್ಷುಕ ಮಕ್ಕಳ ಜೀವನ)ಮುಂಜಾವಿನಿಂದ ಮುಂಜಾವು (ಪತ್ರಕರ್ತರ ಬವಣೆ)ರಕ್ತ ತರ್ಪಣ (1942ರ ಆಗಸ್ಟ್ ಚಳುವಳಿ)

ಯಕ್ಷಪ್ರಶ್ನೆ, ಕೇದಿಗೆ ವನ, ಜೀತದ ಜೀವ, ಮನೆಗೆ ಬಂದ ಮಹಾಲಕ್ಷ್ಮಿ, ಚಂದವಳ್ಳಿಯ ತೋಟ, ನಾಗರಹಾವು, ಚಂದನದ ಗೊಂಬೆ, ಚಕ್ರತೀರ್ಥ, ಬೆಂಕಿಯ ಬಲೆ, ಗಾಳಿಮಾತು, ಪಂಜರದ ಪಕ್ಷಿ ಕಾರ್ಕೋಟಕ, ಖೋಟಾನೋಟು,  ಮೊದಲ ನೋಟ, ಬೇಡದ ಮಗು, ಸಾಕು ಮಗಳು, ಮಾರ್ಗದರ್ಶಿ, ಎರಡು ಹೆಣ್ಣು ಒಂದು ಗಂಡು, ಆಕಸ್ಮಿಕ, ಅಪರಾಧಿ, ಪರಿಣಾಮ, ಗ್ರಹಣ ಬಿಟ್ಟಿತು, ಕಾಮಾಕ್ಷಿ, ಬಂಗಾರಿ, ಸರ್ಪ ಮತ್ಸರ, ಕಣ್ಣು ತೆರೆಯಿತು, ವಿಷ ಪ್ರಾಷನ, ಗೃಹಪ್ರವೇಶ, ರಾಜೇಶ್ವರಿ, ಭಾಗ್ಯಶಿಲ್ಪಿ, ಬೆಳಕಿನ ಬೀದಿ, ಮರುಳ ಸೇತುವೆಹಾವು ಹಿಡಿದವರುಒಮ್ಮೆ ನಕ್ಕುನಗು, ಶಿಶು ದೈತ್ಯ, ಹೆಣ್ಣು ಕಟ್ಟಿದ ಮನೆ, ಶ್ರೀ ಚಕ್ರೇಶ್ವರಿ, ಬಯಕೆಯ ಬಂಧಿ, ಪರಿಮಳದ ಉರುಳು, ಲಾವಣ್ಯವತಿ, ಚದುರಂಗದ ಮನೆ, ಅಕ್ಕಮ್ಮನ ಮನೆ, ಶುಕ್ರವಾರದ ಲಕ್ಷ್ಮಿ

ಪೌರಾಣಿಕ ಕಾದಂಬರಿಗಳು : ಬೆಳಕು ತಂದ ಬಾಲಕನಾಲ್ಕು x ನಾಲ್ಕು=ಒಂದು

ಐತಿಹಾಸಿಕ ಕಾದಂಬರಿಗಳು : ವಿಜಯೋತ್ಸವ, ಕೀರ್ತಿನಾರಾಯಣ, ಹೊಯ್ಸಳೇಶ್ವರ ವಿಷ್ಣುವರ್ಧನ, ಶಿಲ್ಪಶ್ರೀ (ಚಾವುಂಡರಾಯನ ಚರಿತ್ರೆ), ಅಮೋಘವರ್ಷ ನೃಪತುಂಗ, ಸಿಡಿಲಮೊಗ್ಗು, ಅಗ್ನಿರಥ ಮುಕ್ತಿ ರಥ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿ ಹಂಸಗೀತೆ (ವೆಂಕಟಸುಬ್ಬಯ್ಯ ಎಂಬ ಸಂಗೀತಗಾರನ ಜೀವನ ಚರಿತ್ರೆ), ದುರ್ಗಾಸ್ತಮಾನ (ಮರಣೋತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ) ಕಂಬನಿಯ ಕುಯಿಲು, ರಕ್ತರಾತ್ರಿ, ರಾಜ್ಯದಾಹ, ತಿರುಗುಬಾಣ, ಹೊಸ ಹಗಲು, ಕಸ್ತೂರಿ ಕಂಕಣ ಮುಂತಾದವು.

ಕಥಾಸಂಕಲನ ರೂಪಸಿತೊಟ್ಟಿಲು ತೂಗಿತುಗಿರಿಮಲ್ಲಿಗೆಯ ನಂದನದಲ್ಲಿಇವೇ ನಿಜವಾದ ಸಂಪತ್ತುಮೂರು ಮತ್ತೊಂದು ಹೆಸರಿನಲ್ಲಿ

ನಾಟಕಗಳು ಮೃತ್ಯು ಸಿಂಹಾಸನ, ಅನ್ನಾವತಾರ (ರೇಡಿಯೋ ನಾಟಕ), ಮಹಾಶ್ವೇತೆ, ಜ್ವಾಲಾ, ಬಾಳು ಬೆಳಗಿತು, ರುದ್ರಧ್ಯಾಯ.

ಸಂಪಾದನೆ ಜಗದ್ಗುರುಶ್ರೀ ಶಿವಾರ್ಪಣ

ಅನುವಾದ : ದಳಪತಿ ಜವಾಹರ್ಡಾ। ಕೊಟ್ನಿಸ್

ಆತ್ಮಕತೆ : ಹಿಂತಿರುಗಿ ನೋಡಿದಾಗಮಂಥನ

ಅಭಿನಂದನಾ ಗ್ರಂಥ : ಗಿರಿಮಲ್ಲಿಗೆ

 

ವ್ಯಾಸರಾಯ ಬಲ್ಲಾಳ (1923-2008)

ಕಥಾಸಂಕಲನ : ಸಂಪಿಗೆಮಂಜರಿಕಾಡು ಮಲ್ಲಿಗೆತ್ರಿಕಾಲ, ಬದುಕಿನ ಆದರ್ಶ.

ಕಾದಂಬರಿ ಅನುರಕ್ತೆ (ಉಡುಪಿ ಮತ್ತು ಮುಂಬೈ ನಗರಗಳ ಜೀವನ)ವಾತ್ಸಲ್ಯಪಥಉತ್ತರಾಯಣ (ಮುಂಬೈ ನಗರ ಜೀವನ)ಹೇಮಂತಗಾನ (40 ರ  ದಶಕದ ಭಾರತದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿ ಹಾಗೂ ಉಸಿರುಗಟ್ಟುವ ಮುಂಬೈ ಜೀವನ), ಬಂಡಾಯ (ಮುಂಬೈ ಜೀವನಕಾರ್ಮಿಕ ಸಂಘರ್ಷವೇಶ್ಯಾವಾಟಿಕೆಸ್ತ್ರೀ ಶೋಷಣೆ ಕಾದಂಬರಿಯ ವಸ್ತು - ಕೇಂದ್ರ ಸಾಹಿತ್ಯ ಅಕಾಡೆಮಿ)ಆಕಾಶಕ್ಕೊಂದು ಕಂದೀಲುಹೆಜ್ಜೆಹೆಜ್ಜೆ ಗುರುತುಮಿಳ್ಳಿ ರಾಮಾಯಣ

ವ್ಯಕ್ತಿಚಿತ್ರ : ಖುರ್ಶಿದ್ ನರಮನ್

ಪ್ರವಾಸ ಕಥನ ನಾನೊಬ್ಬ ಭಾರತೀಯ ಪ್ರವಾಸಿ

ವಿಮರ್ಶೆ : ಕಟ್ಟುವೆವು ನಾವು

ರಾಜಕೀಯ ಬರಹ : ಸ್ವಾತಂತ್ರ್ಯಕ್ಕೆ ೫೦ ವರ್ಷ

ವಿಡಂಬನೆ : ಸಂಗ್ರಹ ಭಾರತಾಯಣ

ಅನುವಾದ ನಾಟಕ : ಗಿಳಿಯು ಪಂಜರದೊಳಿಲ್ಲ, ಮುಳ್ಳಿಲ್ಲದ ಮಂದಾರ

ಲೇಖನ ಮುಂಬಯಿ ಡೈರಿಮುಂಬಯಿಯ ನಂಟು ಮತ್ತು ಕನ್ನಡಪತ್ರಿಕೋದ್ಯಮಿಯ ಪತ್ರಗಳುಮಾನವತೆ ಸತ್ತಿಲ್ಲಪಯಣದ ಹಾದಿಯಲ್ಲಿ

 

ನಿರಂಜನ (1924-1995)

ಕುಳಕುಂದ ಶಿವರಾಯ ಇವರ ನಿಜನಾಮ

ಲೇಖನಗಳು : ಅಂಕಣ, ದಿನಚರಿ

ಕಾದಂಬರಿಗಳು ಬನಶಂಕರಿ (ಅನಾಥ ಹೆಣ್ಣಿನ ದುಃಖದ ಜೀವನ)ಚಿರಸ್ಮರಣೆ (ಕೈಯೂರ ರೈತ ಸಂಘಟನೆಯ ದಂಗೆ)ಅಭಯ (ಅನಾಥ ಸೇವಾಶ್ರಮವೊಂದರ ಕಥೆ)ಮೃತ್ಯುಂಜಯ (ಪ್ರಾಚೀನ ಈಜಿಪ್ಟ್ ನ ಫೆರೋಗಳ ಆಡಳಿತದಲ್ಲಿ ನಡೆದ ಕ್ರಾಂತಿಯ ಕಥೆ)

ಕಲ್ಯಾಣಸ್ವಾಮಿ ಮತ್ತು ಸ್ವಾಮಿ ಅಪರಾಂಪರ ಕೃತಿಗಳ ವಸ್ತು ಕೊಡಗು ಮತ್ತು ದ.ಕ ಜಿಲ್ಲೆಯಲ್ಲಿ ನಡೆದ ದಂಗೆಯನ್ನು ಆಧರಿಸಿ ರಚನೆಯಾಗಿವೆ.

ದೂರದ ನಕ್ಷತ್ರ, ರಂಗಮ್ಮನ ವಠಾರ, ನಂದಗೋಕುಲ, ಜಸ್ಟಿನ್ ರೊಮಿತ್, ಪಾಲಿಗೆ ಬಂದ ಪಂಚಾಮೃತ, ವಿಮೋಚನೆ, ಏಕಾಂಗಿನಿ, ಕೊನೇ ನಮಸ್ಕಾರ, ಮಿಣುಕುಹುಳ, ವಿಲಾಸಿನಿ, ದೀಕ್ಷೆ, ನವೋದಯ, ಅಂಜನ, ಟೀಪೂ, ತೊಟ್ಟಿಲು ತೂಗದ ಕೈ, ಹೆಣ್ಣಾಗಿ ಕಾಡಿತ್ತು ಮಾಯೆ, ಸ್ಮರಣೆಯೊಂದೇ ಸಾಲದೇ, ಬಂಗಾರದ ಜಿಂಕೆ, ಅಭಯಾಶ್ರಮ, ಸೌಭಾಗ್ಯ, ವಿಶಾಲಾಕ್ಷಿ, ನೋವು

ಕಥಾ ಸಂಕಲನಗಳು ಸಂಧಿಕಾರರಕ್ತ ಸರೋವರಅನ್ನಪೂರ್ಣಾಕೊನೆಯ ಗಿರಾಕಿಕಾತ್ಯಾಯಿನಿನಾಸ್ತಿಕ ಕೊಟ್ಟ ದೇವರು, ಅಯ್ಯನೇ, ವಾರದ ಹುಡುಗ, ಒಂಟಿ ನಕ್ಷತ್ರ ನಕ್ಕಿತು

ನಾಟಕಗಳು : ಸಂಗಮ ಸ್ನಾನ, ಅಹ್ವಾನ, ಸಾಮ್ರಾಜ್ಞೆ, ನಾವೂ ಮನುಷ್ಯರು, ಪಾಪಾಸು ಕಳ್ಳಿ, ಕಣ್ಣಿದ್ದವರಿಗೂ ನೀನೇ ಶಿವಾ.

ವ್ಯಕ್ತಿ ಚಿತ್ರ : ಋತುರಾಜ, ಪುರುಷೋತ್ತಮ, ನಡೆ  ಚೆನ್ನ ನುಡಿ ಚೆನ್ನ, ಹೆಜ್ಜೇನು ಸವಿದಂತೆ.

ಅಂಕಣ ಬರಹ : ಐದು ನಿಮಿಷ, ಕಾಲಕ್ಷೇಪ, ಸಾಧನಾ, ಪುಷ್ಪಹಾರ, ಬೇವು-ಬೆಲ್ಲ, ದಿನಚರಿಯಿಂದ, ರಾಜಧಾನಿಯಿಂದ, ಅಂಕಣ, ನೆಳಲು ಬೆಳಕು.

ಲೇಖನ ಬರಹ : ಬುದ್ದಿಭಾವ, ಬದುಕು, ಈ ಪುಸ್ತಕ ಓದಿದ್ದೀರಾ?, ಮನ್ಮಥ ಮುಟ್ಟದ ಲೇಖನಿ.

ಸಂದರ್ಶನ : ಮುಖತಃ

ಭಾಷಾಂತರ ತಾಯಿನೀತಿಕತೆಗಳು ಮದುವಣಗಿತ್ತಿ, ಸಮತಾವಾದಅಧ:ಪತನ, ನನ್ನ ಬಾಲ್ಯನನ್ನ ಬಾಲ್ಯ, ಜನತೆಯ ನಡುವೆ, ನನ್ನ ವಿಶ್ವವಿದ್ಯಾಲಯ, ಚೀನಾದ ನೀತಿ ಕತೆಗಳು, ಮಾನವನ ಪಾಡು, ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ, ಸಂಗಂ ರಾಜಕೀಯ - ಸಾಮಾಜಿಕ ವ್ಯವಸ್ಥೆ.

ಸಂಪಾದನೆ ಜ್ಞಾನ ಗಂಗೋತ್ರಿ (ಮಕ್ಕಳ ವಿಶ್ವಕೋಶ)ವಿಶ್ವಕಥಾಕೋಶ, ಜನತಾ ಸಾಹಿತ್ಯ.

ಇತರೆ : ಪ್ರಗತಿಶೀಲರ ಅಂತಃಕಲಹ, ಹಿಮಾಲಯದ ದಳ್ಳುರಿ, ಗಾಂಧಿ ಇಂದು  ನಾಳೆ, ಚಿರಸ್ಮರಣೆಯ ಕಯ್ಯೂರು. ಮಾಡೋಣ ಚಿಂತೆ, ಮುನ್ನುಡಿ, ಪ್ರಸ್ತಾವನೆ

 

ಎಸ್ ಅನಂತನಾರಾಯಣ (1925-1992)

ಪಿಹೆಚ್‌ಡಿ ಪ್ರಬಂಧ : ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ

ಕಾದಂಬರಿಗಳು : ಸಪ್ತ ಸಮಾಲೋಕ, ಅತ್ತಿಗೆ, ಆಲದ ಹೂ, ತೀರದ ಬಯಕೆ, ಪಯಣದ ಹಾದಿಯಲ್ಲಿ, ಮುರುಕು ಮಂಟಪ

ಸಂಪಾದನೆ : ಚಿಂತನ ಬಿಂದುಮೆಲಕುವಿಚಾರ ನಿಮಿಷ

ಪ್ರಬಂಧಗಳು: ಅರಣ್ಯ ಪರ್ವಹರಿಶ್ಚಂದ್ರ ಕಾವ್ಯ ಸಾಂಗತ್ಯ

ನಾಟಕಗಳು : ಪ್ರೇಮಬಲಿ, ಮಂಗಳಾರತಿ, ವಿಪರೀತಕ್ಬಂತೆ ವಿವಾಹ, ಪ್ರತಿಜ್ಞಾ ಯೌಗಂಧರಾಯಣ, ಸ್ವಪ್ನವಾಸವದತ್ತ, ಪೂರ್ಣಾಹುತಿ.

ಕವನ ಸಂಕಲನ : ಬಾಡದ ಹೂಉಷಾ ಸ್ವಪ್ನಬಣ್ಣಗಳು ಆಡಿದುವು

ಅನುವಾದ : ಲಾರ ಇಂಗಲ್ಸ್ ವೈಲ್ಡರ್‌ರವರ ಕೃತಿಗಳ ಅನುವಾದ - ದೊಡ್ಡ ಕಾಡಿನಲ್ಲಿ ಪುಟ್ಟಮನೆ, ಹುಲ್ಲುಗಾವಲಿನಲ್ಲಿ ಪುಟ್ಟಮನೆ, ರೈತರ ಹುಡುಗ, ಪ್ಲಮ್ ನದಿಯ ತೀರದಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ಚಳಿಯ ಸುಳಿಯಲ್ಲಿ, ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ, ಆ ಸೊಗಸಿನ ಬಂಗಾರದ ದಿನಗಳು, ಡೇಗೆ ಹಕ್ಕಿ : ಇಟಲಿ - ಆಸ್ಟ್ರಿಯಾ ಕಥೆಗಳು

ಸಂಸ್ಕೃತದಿಂದ ಕನ್ನಡಕ್ಕೆ : ಅಭಿಜ್ಞಾನ ಶಾಕುಂತಲಕನ್ನಡ ಉತ್ತರ ರಾಮಚರಿತೆಕನ್ನಡ ನಾಗಾನಂದಭಾಸನ ಎರಡು ನಾಟಕಗಳುಸಂಗ್ರಹ ಭಾಗವತಸಂಗ್ರಹ ಮಹಾಭಾರತ

ಇತರ ಪ್ರಮುಖ ಕೃತಿಗಳು : ಎಲಿಯಟ್ ನ ಮೂರು ಉಪನ್ಯಾಸಗಳು, ಕಲೆ ಎಂದರೇನು?, ಪಾಶ್ಚಾತ್ಯ ಕಾವ್ಯ ಚಿಂತನ, ಮಹತ್‌ಕಾವ್ಯ ಕಲ್ಪನೆ, ಸಾಹಿತ್ಯ ಪ್ರವೇಶ, ಸಾಹಿತ್ಯ ಮತ್ತು ಮನೋವಿಜ್ಞಾನ, ಸಾಹಿತ್ಯ ವಿಮರ್ಶೆಯ ತತ್ತ್ವಗಳು, ಸಾಹಿತ್ಯ ಮನನ.

ಕಾಮೆಂಟ್‌ಗಳು