ಪ್ರಾಚೀನ ಕನ್ನಡ ಕವಿಗಳು

ಪ್ರಾಚೀನ ಕನ್ನಡ ಸಾಹಿತ್ಯ

ದುರ್ವಿನೀತ (ಕಾಲ ಸು. 529 - 579)

ದುರ್ವಿನೀತನು ಗಂಗರ ಪ್ರಸಿದ್ಧ ಅರಸ. ಈತನು ಗುಣಾಢ್ಯನು ಪೈಶಾಚಿ ಭಾಷೆಯಲ್ಲಿ ಬರೆದಿರುವ ಬೃಹತ್ಕಥಾ ಎಂಬ ಕೃತಿಯನ್ನು ವಡ್ಢಕತೆ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದಿಸಿದ್ದಾನೆ ಎಂದು ಊಹಿಸಲಾಗಿದೆ. ಅಲ್ಲದೇ ಕಿರಾತಾರ್ಜುನಿಯ ಕೃತಿಯ 15ನೇ ಸರ್ಗಕ್ಕೆ ಟೀಕೆಯನ್ನು ಬರೆದಿದ್ದಾನೆ ಎಂಬ ಉಲ್ಲೇಖಗಳಿವೆ

ತುಂಬೂಲಾಚಾರ್ಯ (ಕಾಲ ಸು. 7ನೇ ಶ)

ಚೂಡಾಮಣಿ ಎಂಬ ವ್ಯಾಖ್ಯಾನ ಗ್ರಂಥವನ್ನುಗುಣಗಾಂಕೀಯಂ ಎಂಬ ಛಂದಶ್ಶಾಸ್ತ್ರ ಗ್ರಂಥವನ್ನು ಬರೆದಿರುವನು ಎಂಬ ವಿವರ ಭಟ್ಟಾಕಳಂಕನ ಶಬ್ಧಾನುಶಾಸನದಿಂದ ತಿಳಿಯುತ್ತದೆ.

ಶಾಮಕುಂದಾಚಾರ್ಯ (ಕಾಲ ಸು. 7ನೇ ಶ)

ಪ್ರಭೃತ ಎಂಬ ಕೃತಿಯನ್ನು ಬರೆದನೆಂದು ಊಹಿಸಲಾಗಿದೆ.

ಸೈಗೊತ್ತ ಶಿವಮಾರ (ಕಾಲ ಸು. 700)

ಗಂಗವಂಶದ ಅರಸನಾದ ಈತನು ಗಜಾಷ್ಟಕ ಎಂಬ ಕೃತಿಯನ್ನು ಬರೆದನೆಂದು, ಅದು  ಓವನಿಗೆ ಮತ್ತು ಒನಕೆವಾಡು ಎಂಬ ಛಂದಸ್ಸಿನ ರೂಪದಲ್ಲಿತ್ತು ಎಂಬ ಪ್ರತೀತಿಯಿದೆ. ಇದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಗೊಂಡಿರುವ ಕನ್ನಡದ ಮೊದಲ ಜಾನಪದ ಕೃತಿ ಎನ್ನಲಾಗಿದೆ.

ಶ್ರೀವಿಜಯ (ಕಾಲ 814 - 877)

ಕನ್ನಡದ ಮೊದಲ ಉಪಲಬ್ಧ ಗ್ರಂಥ ಕವಿರಾಜಮಾರ್ಗದ ಕರ್ತೃವಾದ ಇವನು ರಾಷ್ಟ್ರಕೂಟ ಅರಸ ನೃಪತುಂಗನ ಆಸ್ಥಾನಕವಿಯಾಗಿದ್ದನು.

ಕವಿರಾಜಮಾರ್ಗ ಒಂದು ಲಕ್ಷಣ ಶಾಸ್ತ್ರ ಗ್ರಂಥವಾಗಿದ್ದು. ಇದರ ಆಕರ ಗ್ರಂಥ ದಂಡಿ ಕವಿಯ ಸಂಸ್ಕೃತದ ಕಾವ್ಯಾದರ್ಶ. ಈ ಕೃತಿಯು ದೋಷಾನುವರ್ಣನಾ ನಿರ್ಣಯ, ಶಬ್ಧಾಲಂಕಾರವರ್ಣನಾ ನಿರ್ಣಯ ಮತ್ತು ಅರ್ಥಾಲಂಕಾರವರ್ಣನಾ ನಿರ್ಣಯ ಎಂಬ ಮೂರು ಭಾಗಗಳಿಂದ ಕೂಡಿದೆ.

ಕಾವ್ಯದ ಮೊದಲ ಪರಿಚ್ಚೇದವಾದ ದೋಷಾನುವರ್ಣನಾ ನಿರ್ಣಯದಲ್ಲಿ ಕಾವ್ಯದೋಷದ ಜೊತೆಗೆ ಕನ್ನಡ ನಾಡಿನ ಮತ್ತು ಕನ್ನಡಿಗರ ವರ್ಣನೆಯಿದೆ. ದೋಷಾನುವರ್ಣನಾ ನಿರ್ಣಯದಲ್ಲಿ ಕವಿಯ ಸ್ವಂತಿಕೆಯಿದೆ. ಎರಡನೆಯ ಪರಿಚ್ಚೇದ ಶಬ್ದಾಲಂಕಾರ ವರ್ಣನಾ ನಿರ್ಣಯ ಮತ್ತು ಮೂರನೆಯ ಪರಿಚ್ಚೇದ ಅರ್ಥಾಲಂಕಾರವರ್ಣನಾ ನಿರ್ಣಯದಲ್ಲಿ ಅಲಂಕಾರಗಳ ವರ್ಣನೆಯಿದ್ದು ಕಾವ್ಯಾದರ್ಶದ ಪ್ರಭಾವ ಇದೆ.

ಕವಿಯು ಉತ್ತರ ಮತ್ತು ದಕ್ಷಿಣ ಎಂಬ ಕಾವ್ಯ ಪ್ರಕಾರಗಳನ್ನು ಹೇಳುವುದರ ಜೊತೆಗೆ ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳಾದ ಬೆದಂಡೆ ಮತ್ತು ಚೆತ್ತಾಣೆಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಕನ್ನಡದಲ್ಲಿ ಗದ್ಯ-ಪದ್ಯ ಮಿಶ್ರಿತವಾದ ಗದ್ಯಕತೆ ಎಂಬ ಪ್ರಕಾರವಿತ್ತೆಂದು ಸಹ ಹೇಳಿದ್ದಾನೆ.

ದುರ್ಗಸಿಂಹ  ಕವಿಯು "ಶ್ರೀ ವಿಜಯರ ಕವಿಮಾರ್ಗವು ಭಾವಿಸುವ ಜನಕ್ಕೆ ಕನ್ನಡಿ ಮತ್ತು ಕೈ ದೀವಿಗೆ ಎಂದಿದ್ದಾನೆ.

"ಪೂರ್ವಾಚಾರ್ಯರ್ ದೇಸಿಯನೇ ನಿರಿಸಿ ಖಂಡಪ್ರಾಸಮನತಿಶಯಮಿದೆಂದು ಯತಿಯಂ ಮಿಕ್ಕರ್" ಎಂದು ಪ್ರಾಸದ ಕುರಿತು ಕವಿ ಹೇಳಿದ್ದಾನೆ.

"ಸಕ್ಕದಮುಂ ಪಾಗದ ಮುಮದುಕ್ಕುಂ ಬಗೆದಂತೆ ಸಮರಿ ಪೇಳಲ್", "ಸಮಸಂಸ್ಕೃತಂಗಳೊಳ್ ತಳ್ತಮರ್ದಿರೆ ಕನ್ನಡವನರಿದು ಪೇಳ್ಗೆ", "ನೆಗಳ್ದಿರ್ದ ಕನ್ನಡಂಗಳೊಳ್ ಅಗಣಿತಗುಣವಿದಿತ ಸಂಸ್ಕೃತೋಕ್ತಕ್ರಮಮಂ ಬಗೆದೊಂದು ಮಾಡಿ" ಎಂದು ಮುಂತಾಗಿ ಕನ್ನಡ ಸಂಸ್ಕೃತಗಳ ಮಿಶ್ರಣದ ಕುರಿತು ಹೇಳಿದ್ದಾನೆ.

"ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ" ಎಂಬಲ್ಲಿ ಕವಿಯ ಪರಧರ್ಮ ಸಹಿಷ್ಣುತೆ ಬಗ್ಗೆ ತಿಳಿಯುತ್ತದೆ.

ಕವಿಯು ತನ್ನ ಹಿಂದಿನ ಪ್ರಸಿದ್ಧ ಕವಿಗಳಾಗಿದ್ದ ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಎಂಬ ಗದ್ಯಕವಿಗಳನ್ನು, ಕವೀಶ್ವರ, ಲೋಕಪಾಲ, ಪಂಡಿತ, ಚಂದ್ರ ಎಂಬ ಪದ್ಯಕವಿಗಳನ್ನು ನೆನೆದಿದ್ದಾನೆ.

ಕಿಸುವೊಳಲು (ಪಟ್ಟದಕಲ್ಲು)ಕೊಪಣ (ಕೊಪ್ಪಳ)ಪುಲಿಗೆರೆ (ಲಕ್ಷ್ಮೇಶ್ವರ)ಒಕ್ಕುಂದ ಈ ನಾಲ್ಕು ಸ್ಥಳಗಳ ನಡುವೆ ಕನ್ನಡನಾಡು ಇತ್ತೆಂದು ಕವಿ ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.

ಅಸಗ (ಕಾಲ ಸು. 853)

ಈತನು ವರ್ಧಮಾನ ಚರಿತಂ ಎಂಬ ಸಂಸ್ಕೃತ ಗ್ರಂಥವನ್ನು ಬರೆದಿರುವನೆಂದು, ಈತನ ಮತ್ತೊಂದು ಕೃತಿ ಕರ್ಣಾಟ ಕುಮಾರಸಂಭವ ಎಂಬುದು ಕಾವ್ಯವೆಂದು ಜಯಕೀರ್ತಿಯ ಛಂದೋನುಶಾಸನದಿಂದ ತಿಳಿದುಬಂದಿದೆ.

ಗುಣನಂದಿ (ಕಾಲ ಸು. 900)

ಪೂಜ್ಯಪಾದ ಎಂಬಾತನಿಂದ ರಚನೆಯಾದ ಜೈನೇಂದ್ರ ವ್ಯಾಕರಣಕ್ಕೆ, ಈತನು ಪ್ರಕ್ರಿಯಾವತಾರ ಎಂಬ ವ್ಯಾಖ್ಯಾನ ಗ್ರಂಥವೊಂದನ್ನು ಬರೆದಿದ್ದಾನೆಂದು ಕವಿಚರಿತೆಕಾರರು ತಿಳಿಸಿದ್ದಾರೆ. ಭಟ್ಟಾಕಳಂಕ ಈತನನ್ನು ಭಗವಾನ್ ಗುಣನಂದಿ ಎಂದು ಸ್ಮರಿಸಿದ್ದಾನೆ.

ಒಂದನೇ ಗುಣವರ್ಮ (ಕಾಲ ಸು. 900)

ಗುಣವರ್ಮನು ಹರಿವಂಶ ಹಾಗೂ ಶೂದ್ರಕ ಎಂಬ ಕೃತಿಗಳನ್ನು ಬರೆದನೆಂದು ನಾಗವರ್ಮ, ಕೇಶಿರಾಜ ಹಾಗೂ ಸೂಕ್ತಿ ಸುಧಾರ್ಣವದ ಮಲ್ಲಿಕಾರ್ಜುನರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.

ಶಿವಕೋಟ್ಯಾಚಾರ್ಯ/ಭ್ರಾಜಿಷ್ಣು  (ಕಾಲ ಸು 900)

ಈತನ ನಿಜನಾಮ ಭ್ರಾಜಿಷ್ಣು. ಈತನು ಆರಾಧನಾ ಕರ್ಣಾಟ ಟೀಕಾ (ವಡ್ಡಾರಾಧನೆ) ಎಂಬ ಕೃತಿ ಬರೆದನು. ವಡ್ಡಾರಾಧನೆಯಲ್ಲಿ ಈಗ ಇರುವುದು ಕೇವಲ ೧೯ ಕತೆಗಳಷ್ಟೇ. ವಾಸ್ತವದಲ್ಲಿ ಆರಾಧನಾ ಕರ್ಣಾಟ ಟೀಕಾ (ವಡ್ಡಾರಾಧನೆ) ಕೃತಿಯು ಸು ೧೫೦ ಕತೆಗಳ ಬೃಹತ್ ಗ್ರಂಥವಾಗಿತ್ತು ಎಂಬುದು ಅನೇಕರ ವಾದ.

ಪುಣ್ಯಾಸ್ರವ ಕಥಾಕೋಶ ಎಂಬ ಸಂಸ್ಕೃತ ಗ್ರಂಥದ ಕವಿಯಾದ ರಾಮಚಂದ್ರ ಮುಮಕ್ಷು ಎಂಬ ಕವಿಯ ಹೊರತಾಗಿ ಮತ್ತಾವುದೇ ಕನ್ನಡ ಕವಿಯಾಗಲಿ ಸಂಸ್ಕೃತ ಕವಿಯಾಗಲಿ ಭ್ರಾಜಿಷ್ಣುವಿನ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ.

ಭಗವತೀ ಆರಾಧನಾ ಮತ್ತು ಹರಿಷೇಣನ ಕಥಾಕೋಶ ಕೃತಿಗಳು ವಡ್ಡಾರಾಧನೆಗೆ (ಆರಾಧನಾ ಕರ್ಣಾಟ ಟೀಕಾ) ಪ್ರೇರಣೆಯಾಗಿವೆ. ಇದನ್ನು ಉಪಸರ್ಗ ಕೇವಲಿಗಳ ಕತೆ ಎಂತಲೂ ಕರೆಯುವರು.

ಇಂಡಿಯನ್ಈ ಆಂಟಿಕ್ವೆರಿಯಲ್ಲಿದ್ದ ಈ ಕೃತಿಯನ್ನು ೧೮೮೩ ರಲ್ಲಿ ಮೊದಲ ಬಾರಿಗೆ ಕೆ ಬಿ ಪಾಠಕ್ ಅವರು ಪರಿಶೀಲಿಸಿ ಇದರ ಕರ್ತೃ ರೇವಕೋಟ್ಯಾಚಾರ್ಯ ಎಂಬುದಾಗಿ ಹೇಳಿದರು. ಮುಂದೆ ಡಿ ಎಲ್ ನರಸಿಂಹಾಚಾರ್ಯರು ಅಧ್ಯಯನ ನಡೆಸಿ ಇದರ ಕರ್ತೃ ಶಿವಕೋಟ್ಯಾಚಾರ್ಯ ಎಂದು ತೀರ್ಮಾನಿಸಿದರು.

ಡಾ ಎಂ ಎಂ ಕಲ್ಬುರ್ಗಿಯವರು ತಮ್ಮ ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಕೃತಿಯಲ್ಲಿ ಕನ್ನಡದ ಮೊದಲ ಗದ್ಯಕಾರ ಭ್ರಾಜಿಷ್ಣುವೆ ಆಗಿರುವ ಸಾಧ್ಯತೆಯಿದೆ, ಶಿವಕೋಟ್ಯಾಚಾರ್ಯ ಅಲ್ಲ ಎಂಬುದಾಗಿ ಹೇಳಿದ್ದಾರೆ. 

ಹಂಪ ನಾಗರಾಜಯ್ಯ ಅವರು ಸಹ ತಮ್ಮ ವಡ್ಡಾರಾಧನೆ ಸಮಗ್ರ ಅಧ್ಯಯನ ಎಂಬ ಲೇಖನದಲ್ಲಿ ಕಲ್ಬುರ್ಗಿಯವರ ವಾದವನ್ನು  ಬೆಂಬಲಿಸಿದ್ದಾರೆ. ಅಲ್ಲದೆ ಭ್ರಾಜಿಷ್ಣು ಎಂಬಾತನು ಸು ೮೦೦-೮೭೦ ರ ಅವಧಿಯಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕಲ್ಬುರ್ಗಿ ಪ್ರದೇಶದಲ್ಲಿ ನೆಲೆಸಿದ್ದವನೆಂದು ಹೇಳಿದ್ದಾರೆ.

ವಡ್ಡಾರಾಧನೆಯು ಕನ್ನಡದ ಮೊದಲ ಗದ್ಯಕೃತಿಯಾಗಿದೆ. ಇದು ಪೂರ್ವದ ಹಳಗನ್ನಡದ ಮತ್ತು ಹಳಗನ್ನಡದ ಸಂಧಿಕಾಲದಲ್ಲಿ ರಚನೆಯಾಗಿದ್ದು ಜೈನ ಧಾರ್ಮಿಕ ಕಥೆಗಳ ಸಂಕಲನವಾಗಿದೆ. ಪ್ರತಿಯೊಂದು ಕತೆಯು ಒಂದೊಂದು ಪ್ರಾಕೃತ ಗಾಹೆಯಿಂದ ಪ್ರಾರಂಭವಾಗುತ್ತದೆ.

ಈ ಕೃತಿಯಲ್ಲಿ ರೋಮ್ ಮತ್ತು ಗ್ರೀಕ್ ದೇಶಗಳ ದಿನಾರ್, ದಮ್ಮ ಎಂಬ ನಾಣ್ಯಗಳ ಉಲ್ಲೇಖವಿದೆ.

ಶ್ರವಣಬೆಳಗೊಳವನ್ನು ಭದ್ರಬಾಹು ಭಟ್ಟಾರರ ಕತೆಯಲ್ಲಿ ಕಳ್ವಿಪ್ಪು ಎಂದು ಕರೆಯಲಾಗಿದೆ.

ವಡ್ಡಾರಾಧನೆಯು ಶಾರೀರಕ್ಕಂ, ಆಹಾರಕ್ಕಂ ನಿವೃತ್ತಿಗೈದು ಮುಕ್ತಿಯನ್ನಾಶ್ರಯಿಸಿದ ರಿಸಿಗಳ ಕತೆಗಳ ಸಂಗ್ರಹವಾಗಿದೆ.

    ೧. ಸುಕುಮಾರಸ್ವಾಮಿ ಕಥೆ
    ೨. ಸುಕೌಶಳಸ್ವಾಮಿ ಕಥೆ
    ೩. ಗಜಕುಮಾರನ ಕಥೆ
    ೪. ಸನತ್ಕುಮಾರ ಚಕ್ರವರ್ತಿಯ ಕಥೆ
    ೫. ಅಣ್ಣಿಕಾ ಪುತ್ರನ ಕಥೆ
    ೬. ಭದ್ರಬಾಹು ಭಟ್ಟಾರರ ಕಥೆ
    ೭. ಲಲಿತಘಟೆಯ ಕಥೆ
    ೮. ಧರ್ಮಘೋಷ ಭಟ್ಟಾರನ ಕಥೆ
    ೯. ಸಿರಿದಿಣ್ಣ ಭಟ್ಟಾರರ ಕಥೆ
    ೧೦. ವೃಷಭಸೇನ ಭಟ್ಟಾರರ ಕಥೆ
    ೧೧. ಕಾರ್ತಿಕ ಋಷಿಯ ಕಥೆ
    ೧೨. ಅಭಯಘೋಷನೆಂಬ ಮುನಿಯ ಕಥೆ
    ೧೩. ವಿದ್ಯುಚ್ಚೋರ ರಿಸಿಯ ಕಥೆ
    ೧೪. ಗುರುದತ್ತ ಭಟಾರನ ಕಥೆ
    ೧೫. ಚಿಲಾತಪುತ್ರನ ಕಥೆ
    ೧೬. ದಂಡಕ ರಿಸಿಯ ಕಥೆ
    ೧೭. ಅಯ್ನೂರು ಋಷಿಗಳ ಕಥೆ
    ೧೮ ಚಾಣಕ್ಯರಿಸಿಯ ಕಥೆ
    ೧೯. ವೃಷಭಸೇನ ರಿಸಿಯ ಕಥೆ

ಪಂಪ (ಕಾಲ ಸು 920)

ಚಾಲುಕ್ಯ ಅರಸ ಅರಿಕೇಸರಿಯ ಆಶ್ರಯದಲ್ಲಿ ಇದ್ದ ಪಂಪನುಪಂಪಭಾರತ (ವಿಕ್ರಮಾರ್ಜುನ ವಿಜಯ) ಮತ್ತು ಆದಿಪುರಾಣ ಎಂಬ ಎರಡು  ಮಹಾಕಾವ್ಯಗಳನ್ನು ಬರೆದನು.

ಆದಿಪುರಾಣ ಧಾರ್ಮಿಕ ಕಾವ್ಯಒಂದನೇ ತೀರ್ಥಂಕರನಾದ ಆದಿದೇವನ (ವೃಷಭದೇವ) ಕತೆಯನ್ನು ಒಳಗೊಂಡಿದೆ. ಅಲ್ಲದೇ ಇದು ಉಪಲಬ್ಧವಾದ ಕನ್ನಡದ ಮೊದಲ ಜೈನ ಪುರಾಣ

ಪಂಪಭಾರತ ಲೌಕಿಕ ಕಾವ್ಯ. ತನ್ನ ಅರಸ ಅರಿಕೇಸರಿಯನ್ನು ಅರ್ಜುನನೊಂದಿಗೆ ಹೋಲಿಸಿ ಪಂಪಭಾರತವನ್ನು ಬರೆದ ಕಾರಣಅರಿಕೇಸರಿಗೆ ಇದ್ದ ಗುಣಾರ್ಣವ ಎಂಬ ಬಿರುದು ಪಂಪನಿಗೂ ದೊರೆತು ಕವಿತಾ ಗುಣಾರ್ಣವ ಎಂದು ಹೆಸರಾದನು.

"ಬೆಳಗುವೆನಿಲ್ಲಿ ಲೌಕಿಕಂ ಅಲ್ಲಿ ಜಿನಾಗಮನಂ" ಎಂದು ತನ್ನೆರೆಡು ಕೃತಿಗಳ ಬಗ್ಗೆ ಹೇಳಿಕೊಂಡಿರುವ ಪಂಪ "ಪ್ರಸನ್ನಗಂಭೀರವಚನರಚನಚತುರ" ಎಂದು ತನ್ನನ್ನು ಹೊಗಳಿಕೊಂಡಿದ್ದಾನೆ.

ಆದಿಪುರಾಣ

16 ಆಶ್ವಾಸಗಳ ಈ ಕೃತಿ ಪಂಪನ ಧಾರ್ಮಿಕ ಕಾವ್ಯ. ಮೊದಲ ತೀರ್ಥಂಕರ ಆದಿದೇವನ (ವೃಷಭನಾಥ) ಕತೆಯನ್ನೊಳಗೊಂಡ ಈ ಕೃತಿಯ ಆಕರ ಗ್ರಂಥ ಜಿನಸೇನಾಚಾರ್ಯರ ಪೂರ್ವಪುರಾಣ.

ಧರ್ಮ ಮತ್ತು ಕಾವ್ಯ ಧರ್ಮಗಳ ಸಮನ್ವಯದ ಈ ಕೃತಿಯನ್ನು "ನೆಗಮ್ದಿದಿಪುರಾಣದೊಳರಿವುದು ಕಾವ್ಯಧರ್ಮಮಂ ಧರ್ಮಮಮ್ " ಎಂದಿದ್ದಾನೆ.

ಲಲಿತಾಂಗ - ಶ್ರೀಮತಿ, ವಜ್ರಜಂಘ - ಸ್ವಯಂಪ್ರಭೆ ಈ ಕೃತಿಯ ಪ್ರಮುಖ ಪಾತ್ರಗಳು. ನೀಲಾಂಜನೆಯ ನೃತ್ಯದ ಸನ್ನಿವೇಶ ಈ ಕೃತಿಯ ರಸಘಟ್ಟಗಳಲ್ಲಿ ಮುಖ್ಯವಾದುದು. ಪೊಕ್ಕಳ್ ಜನಾಂತರಂಗಮುಮಂ ರಂಗಮುಮಂ" ಎನ್ನುತ್ತಾ ಕವಿ ಅವಳ ಅಂದವನ್ನು ವರ್ಣಿಸುತ್ತಾನೆ. ನೀಲಾಂಜನೆಯ ನೃತ್ಯ ಸಂದರ್ಭವೇ ಆದಿದೇವನ ಜ್ಞಾನೋದಯಕ್ಕೆ ಕಾರಣವಾಗುತ್ತದೆ.

ಪಂಪಭಾರತ (ವಿಕ್ರಮಾರ್ಜುನ ವಿಜಯ)

ಇದು ಪಂಪನ ಲೌಕಿಕ ಕಾವ್ಯ. ತನ್ನ ಆಶ್ರಯದಾತ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ಈ ಕೃತಿಯನ್ನು ಬರೆದಿದ್ದಾನೆ. 14 ಆಶ್ವಾಸಗಳ ಈ ಕೃತಿ ಒಂದು ಬೃಹತ್ ಕಾವ್ಯ.

ತನ್ನ ಪಂಪಭಾರತದ ಕುರಿತು ಪಂಪನ ನುಡಿಗಳು 

"ಕತೆ ಪಿರಿದಾದೊಡಂ ಕತೆಯ ಮೇಯ್ಗಿಡಲೀಯದೆ ಮುಂ ಸಮಸ್ತಭಾರತಮನಪೂರ್ವಮಾಜ ಸಲೆ ಪೇಳ್ದ ಕವೀಶ್ವರರಿಲ್ಲ" 

"ವ್ಯಾಸಮುನೀಂದ್ರರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ"

"ಮುನ್ನಿನ ಕಬ್ಬಮನೆಲ್ಲ ಮಿಕ್ಕಿ ಮೆಟ್ಟಿದವು ಸಮಸ್ತ ಭಾರತಮುಮಾದಿಪುರಾಣ ಮಹಾಪ್ರಬಂಧಮುಮ್"

"ಇದು ನಿಚ್ಛಮ್  ಪೊಸತವರ್ಣನೆಂಬೊಲತಿಗಂಭೀರಂ ಕವಿತ್ವಮ್ ಜಗಕ್ಕದರಿಂದ ಕವಿತಾಗುಣಾರ್ಣವ" 

ವೈರಿನಶೀದ್ರೋದ್ಭಾಮರ್ಪೋದ್ದಶನನ ಕಥಾನಾಯಕಂ ಮಾಡಿ ಸಂದರ್ಜುನನೊಳ್ ಪೋಲ್ವೀ ಕಥಾಭಿತ್ತಿಯಂ ಅನುನಯದಿಂ ಪೇಳಿಲೆಂದೆತ್ತಿಕೊಂಡೆಮ್" ಎನ್ನುತ್ತಾ ಈ ಕಾವ್ಯವನ್ನು ಪ್ರಾರಂಭಿಸುತ್ತಾನೆ.

"ಇದುವೇ ಮಹಾಭಾರತಕ್ಕಾದಿಯಾಯ್ತು ಅಬ್ಜದಳಾಕ್ಷಿ ಪೇಳ ಸಾಮಾನ್ಯಮೆ ಬಗೆಯೇ ಭವತ್ಕೇಶ ಪಾಷಪ್ರಪಂಚಂ" ಎಂಬುದು ದ್ರೌಪದಿ ವಸ್ತ್ರಾಪಹರಣ ಸಂದರ್ಭದ ಮಾತು.

"ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ", "ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆ ಚಿತ್ತದಿಂ'' ಎಂಬ ಸಾಲುಗಳು ಪಂಪಭಾರತದಲ್ಲಿ ಬರುವ ಕರ್ಣನ ಬಗೆಗಿನ ಪಂಪನ ಮೆಚ್ಚುಗೆಯ ಮಾತುಗಳು.

"ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದುಒಂದಿ ದೇಸಿಯೊಳ್ ಪುಗುವುದುಪೊಕ್ಕು ಮಾರ್ಗದೊಳೆ ತಳ್ವುದುತಳ್ತೊಡೆ ಕಾವ್ಯಬಂಧಮೊಪ್ಪುಗುಂ" ಎಂದು ತನ್ನ ಶೈಲಿಯ ಕುರಿತು ಹೇಳಿಕೊಂಡಿದ್ದಾನೆ.

ಪಂಪನು ರತ್ನತ್ರಯರಲ್ಲಿ (ರತ್ನತ್ರಯರು ಪಂಪಪೊನ್ನರನ್ನ) ಒಬ್ಬನುನಾಡೋಜ ಎಂಬುದು ಅವನ ಮತ್ತೊಂದು ಜನಪ್ರಿಯ ಬಿರುದು. ಸುಕವಿಜನಮನೋಮಾನಸ್ತೋಮಸಹಂಸ, ಕವಿತಾ ಗುಣಾರ್ಣವ, ಸಂಸಾರ ಸಾರೋದಯ, ಸರಸ್ವತಿ ಮಣಿಹಾರ ಇವು ಪಂಪನ ಬಿರುದುಗಳು.

ಈತನಿಗೆ ಜಿನವಲ್ಲಭನೆಂಬ ತಮ್ಮನಿದ್ದನು. ಈ ಜಿನವಲ್ಲಭನು ಪಂಪನನ್ನು ಕುರಿತು ಬರೆಸಿದ ಒಂದು ಶಾಸನ ಇಂದಿನ ಆಂಧ್ರಪ್ರದೇಶದ ಕುರ್ಕ್ಯಾಲ ಎಂಬಲ್ಲಿ ದೊರೆತಿದ್ದು. ಇದೇ ಕುರ್ಕ್ಯಾಲ ಶಾಸನ ಅಥವಾ ಗಂಗಾಧರಂ ಶಾಸನ 

ಪಂಪ ತನ್ನ ಕೃತಿಗಳನ್ನು ಪುಲಿಗೆರೆಯ ತಿರುಳ್ಗನ್ನಡದಲ್ಲಿ ಬರೆದಿದ್ದಾನೆ. ಅವನ ನೆಚ್ಚಿನ ಸ್ಥಳ ಬನವಾಸಿ

"ಪಸರಿಪ ಕನ್ನಡಕ್ಕೊರ್ವನೆ ಸತ್ಕವಿ ಪಂಪನಾವಗಂ" ಎಂದು ಹೇಳಿದವನು ನಾಗರಾಜ ಕವಿ.

ಪೊನ್ನ (ಕಾಲ ಸು. 940)

ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಕೃಷ್ಣನ ಆಸ್ಥಾನ ಕವಿ ಪೊನ್ನರತ್ನತ್ರಯರಲ್ಲಿ ಎರಡನೆಯವಕವಿ ಚಕ್ರವರ್ತಿಗಳಲ್ಲಿ ಮೊದಲಿಗ (ಕವಿಚಕ್ರವರ್ತಿಗಳು ಪೊನ್ನರನ್ನಜನ್ನ).

ಇಂದ್ರನಂದಿ ಮುನಿ ಮತ್ತು ಜಿನಚಂದ್ರ ಮುನಿಗಳು ಇವನ ಗುರುಗಳು.

ಈತನಿಗೆ ಕುರುಳ್ಗಳ ಸವಣ ಮತ್ತು ಉಭಯ ಕವಿಚಕ್ರವರ್ತಿ ಎಂಬ ಬಿರುದುಗಳಿದ್ದವು.

"ಸಕ್ಕದದೊಳ್ ಮುನ್ನಲ್ಲ ಕಾಳಿದಾಸಂಗಂ ನಾಲ್ವಡಿ ರಚನೆಯೊಳ್ ಕುರುಳ್ಗಳ ಸವಣಂ" ಎಂದು ಪೊನ್ನ ತನ್ನನ್ನು ತಾನು ಕಾಳಿದಾಸನಿಗಿಂತಲೂ ಶ್ರೇಷ್ಠ ಎಂದು ಹೇಳೀಕೊಂಡಿದ್ದಾನೆ. ಮತ್ತು "ಪಳಂಗಿನಿಸೆಡೆಗುಡದ ಅಸಹಾಯಕವೀಶ್ವರಂ ಕುರುಳ್ಗಳ ಸವಣಂ" ಎನ್ನುವ ಮಾತು ಒಣ ಪ್ರತಿಷ್ಠೆ ಎಂಬಂತಿದೆ.

"ಲೋಕೋತ್ತರಲೌಕಿಕಪರಿಣತಿ ಪುನ್ನಿಗಂಗೆ ಶಾಂತೀಶ್ವರರಾಮಕಥಾಪ್ರಶಸ್ತಿಯಿಂದಾದ ಕೃತಿಗಳಿಂ" ಎಂದು ತನ್ನೆರೆಡು  ಮೇರು ಕೃತಿಗಳ ಬಗ್ಗೆ ಹೇಳಿಕೊಂಡಿದ್ದಾನೆ.

ಗತಪ್ರತ್ಯಾಗತ ಮತ್ತು ಭುವನೈಕ ರಾಮಾಭ್ಯುದಯ ಎರಡು ಕೃತಿಗಳು ದೊರೆತಿಲ್ಲ. ತನ್ನ ಆಶ್ರಯದಾತ ಮೂರನೇ ಕೃಷ್ಣನನ್ನು ರಾಮನಿಗೆ ಹೋಲಿಸಿ ಭುವನೈಕ ರಾಮಾಭ್ಯುದಯವನ್ನು ಬರೆದನೆಂದು ಕಾಣುತ್ತದೆ.

ಶಾಂತಿಪುರಾಣ 

12 ಆಶ್ವಾಸಗಳುಳ್ಳ ಈ ಕೃತಿ 16 ನೇ ತೀರ್ಥಂಕರನಾದ ಶಾಂತಿನಾಥನ ಕತೆಯನ್ನೊಳಗೊಂಡಿದೆ. ಪುರಾಣ ಚೂಡಾಮಣಿಯೆಂದು ಪೊನ್ನನು ಹೇಳಿಕೊಂಡ ಶಾಂತಿಪುರಾಣದ 1000 ಪ್ರತಿಗಳನ್ನು ಅತ್ತಿಮಬ್ಬೆ ಪ್ರತಿ ಮಾಡಿಸಿದಳು.

"ಕೈಕೊಳ್ವೊಡೆ ಆತ್ಮಸುಖಮನೆ ಕೈಕೊಳ್ವುದು ದೇಹಿಧರೆ ಶಾಶ್ವತಮಲ್ತು" ಎಂಬ ಸಾಲು ಶಾಂತಿಪುರಾಣದಲ್ಲಿ ಶಾಂತೀಶ್ವರನ ಪರಿಷ್ಕ್ರಮಣದ ಸಮಯದಲ್ಲಿ ಬರುತ್ತದೆ.

ಈ ಕತೆಯ ಜ್ಯೋತಿ ಪ್ರಭಾ ಸ್ವಯಂವರ ಸಂದರ್ಭವನ್ನು ಕಾಳಿದಾಸನ ರಘುವಂಶ ಕಾವ್ಯದಿಂದ ಆಯ್ದುಕೊಂಡಿದ್ದಾನೆ.

ಜಿನಾಕ್ಷರಮಾಲೆ

36 ಕಂದಪದ್ಯಗಳಿಂದ ರಚಿತವಾದ ಈ ಕಾವ್ಯ ಕ ಇಂದ ಳ ವರೆಗೆ ಅಕಾರಾದಿಯ ರೂಪದಲ್ಲಿ ರಚನೆಯಾಗಿದೆ.

ರನ್ನ (ಕಾಲ ಸು. 949)

ಚಾಲುಕ್ಯ ಚಕ್ರವರ್ತಿ ತೈಲಪ ಮತ್ತು ಅವನ ಮಗ ಸತ್ಯಾಶ್ರಯ ಇರೆವಬೆಡಂಗರು ರನ್ನನಿಗೆ ಆಶ್ರಯದಾತರು.

ಈತನ ಗುರುಗಳು ಅಜಿತಸೇನಾಚಾರ್ಯರುಅತ್ತಿಮಬ್ಬೆ ಆಶ್ರಯದಾತೆ

ಪಂಪನುಂ ಪೊನ್ನಿಗನಂ ಕವಿರತ್ನಮಂ ಈ ಮೂವರೇ ಕವಿಗಳ್” ಎಂದು ಹೇಳಿಕೊಂಡಿರುವನಲ್ಲದೇ, “ಸರಸ್ವತಿಯ ಭಂಡಾರದ ಮುದ್ರೆ ಒಡೆದವನು ತಾನು” ಎಂದು ತನ್ನನ್ನು ತಾನು ಹೊಗಳಿಕೊಂಡಿದ್ದಾನೆ.

"ರತ್ನಪರೀಕ್ಷಕನಾಮ್ ಕೃತಿ। ರತ್ನ ಪರೀಕ್ಷಕನೆಂದು ಫಣಿಪತಿಯ ಪಣಾ ರತ್ನಮುಮಂ ರನ್ನನ ಕೃತಿ। ರತ್ನಮುಮಂ ಪರೀಕ್ಷಿಪಂ ಗೆಂಟೆರ್ದೆಯೇ? ಎಂದು ತನ್ನ ಕಾವ್ಯವನ್ನು ವಿಮರ್ಶಿಸುವವರನ್ನು ಪ್ರಶ್ನಿಸುತ್ತಾನೆ. 

ಗದಾಯುದ್ಧ (ಸಾಹಸಭೀಮ ವಿಜಯ)

ಗದಾಯುದ್ಧ 10 ಆಶ್ವಾಸಗಳ ಚಂಪೂ ಕಾವ್ಯ. ಪಂಪಭಾರತದ 13-14 ನೇ ಆಶ್ವಾಸಗಳನ್ನು ಆಧಾರವಾಗಿ ಇರಿಸಿಕೊಂಡು ಗದಾಯುದ್ಧವನ್ನು ಸಿಂಹಾವಲೋಕನ ಕ್ರಮದಲ್ಲಿ ಬರೆದಿದ್ದಾನೆ. 

ಭಾಸನ ಊರುಭಂಗಭಟ್ಟನಾರಾಯಣನ ವೇಣಿಸಂಹಾರ ಕೃತಿಗಳ ಪ್ರಭಾವವೂ ಇದರ ಮೇಲೆ ಆಗಿದೆ. 

ಪಂಪ ತನ್ನ ಅರಸ ಅರಿಕೇಸರಿಯನ್ನು ಅರ್ಜುನನೊಂದಿಗೆ ಹೋಲಿಸಿದಂತೆಯೇ ರನ್ನ ತನ್ನ ಆಶ್ರಯದಾತ ಇರೆವಬೆಡಂಗನನ್ನು ಭೀಮನಿಗೆ ಹೋಲಿಸಿ ಈ ಕೃತಿಯನ್ನು ರಚಿಸಿದ್ದಾನೆ.

"ಕುರುಂನಂದನರಂ ಕೊಂದೆಕುರುಶಾಬಾನುಜನ ನೆತ್ತರಂ ಕುಡಿದೆಂ" ಮತ್ತು "ಯಮಸುತ ನಿಂಬುಕೆಯ್ವನೆಮಗಿನ್ನುಮೊಡಂಬಡು ಕಂದ" ಎಂಬ ಗದಾಯುದ್ಧದಲ್ಲಿನ ಸಾಲುಗಳು ಭೀಮನ ಶೌರ್ಯದ ನುಡಿಗಳು.

ಕರ್ಣನನ್ನು ಕಳೆದುಕೊಂಡ ಸುಯೋಧನನ ಮಾತುಗಳಿವು, "ನೆಲಕಿರಿವೆನೆಂದು ಬಗೆದಿರೆ ಛಲಕಿರಿವೆಂ ಪಾಂಡುಸುತರೊಳೀ ನೆಲನಿದು ಪಾಳ್ನೆಲವೆನಗೆ"

ಅಜಿತನಾಥ ಪುರಾಣ

ಅಜಿತನಾಥ ಪುರಾಣವು 12 ಆಶ್ವಾಸಗಳುಳ್ಳ ಎರಡನೇ ತೀರ್ಥಂಕರನಾದ ಅಜಿತನಾಥನ ಪುರಾಣ. ಇದರ ಜೊತೆಗೆ ಸಗರ ಚಕ್ರವರ್ತಿಯ ಕತೆಯೂ ಇದೆ. ಮೊದಲ ಆಶ್ವಾಸದಲ್ಲಿ ಅತ್ತಿಮಬ್ಬೆಯ ಇತಿವೃತ್ತಾಂತವಿದೆ.

"ಮದುವೆಗಳುಪಿದಮನೆಯಂದದಿನಿರ್ದುದು ಅಯೋಧ್ಯಾನಗರಂ" ಎಂಬ ಸಾಲು ಅಜಿತನಾಥನು ವೈರಾಗ್ಯ ಹೊಂದಿ ಪುರವನ್ನು ಬಿಟ್ಟು ಹೊರಡುವಾಗಿನ ಸಂದರ್ಭದ್ದು.

ಸಗರನ ಮಿತ್ರ ಸಗರನ ಅರವತ್ತು ಸಾವಿರ ಮಕ್ಕಳನ್ನು ಕೊಂದು ಸಗರನಲ್ಲಿಗೆ ಬಂದು "ಈ ನಿನ್ನ ಪೇಳ್ದ ಧರ್ಮಮಿದೇನೆನೆಗೆಯೋ, ನಿನಗುಮುಂಟೋ" ಎಂದು ಸಗರನನ್ನು ಧರ್ಮಪರೀಕ್ಷೆ ಮಾಡುತ್ತಾನೆ. ಈ ಸಂದರ್ಭವೇ ಸಗರನ ವೈರಾಗ್ಯಕ್ಕೆ ಕಾರಣವಾಗುತ್ತದೆ.

ಇವುಗಳಲ್ಲದೇ ರನ್ನಕಂದ ಎಂಬ ನಿಘಂಟು ಕೃತಿಯನ್ನು ಸಹ ರಚಿಸಿದ್ದಾನೆ. ಪರಶುರಾಮ ಚರಿತೆ ಮತ್ತು ಚಕ್ರೇಶ್ವರ ಚರಿತೆ ಇವು ಅನುಪಲಬ್ಧ ಕೃತಿಗಳಾಗಿವೆ.

ಚಾವುಂಡರಾಯ (ಕಾಲ ಸು. 974)

ಗೊಮ್ಮಟ ಎಂಬುದು ಇತನಿಗಿದ್ದ ಮತ್ತೊಂದು ಹೆಸರು. ಆದರೆ ರಾಯ, ಅಣ್ಣ ಎಂಬುವು ಜನಪ್ರಿಯ ಹೆಸರು. 

ಗಂಗದೊರೆ  ನಾಲ್ಕನೇ ರಾಚಮಲ್ಲನ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡಾಧಿಕಾರಿ ಆಗಿದ್ದವನು.

ಈತನು ತ್ರಿಷಷ್ಠಿಲಕ್ಷಣಾಮಹಾಪುರುಷರು (ಚಾವುಂಡರಾಯ ಪುರಾಣ) ಎಂಬ ಗ್ರಂಥವನ್ನು ಬರೆದನು. ಇದು ಅರವತ್ತು ಮೂರು ಜನ ಶಲಾಕ ಪುರುಷರ ಕಥೆಯಾಗಿದೆ. ಇದಕ್ಕೆ ಆಕರ ಗುಣಭದ್ರಾಚಾರ್ಯರ ಉತ್ತರಪುರಾಣ (ಮಹಾಪುರಾಣ).

ಚಾವುಂಡರಾಯನಿಗೆ ಸಮರಪರಶುರಾಮವೀರಮಾರ್ತಾಂಡ, ಪ್ರತಿಪಕ್ಷ ರಾಕ್ಷಸ ಮತ್ತು ಸಂಯಕ್ತ್ವ ರತ್ನಾಕರ ಎಂಬ ಬಿರುದುಗಳಿದ್ದವು.

ಒಂದನೇ ನಾಗವರ್ಮ (ಕಾಲ ಸು 990)

ನಾಗವರ್ಮನು ಪಂಪನ ತವರೂರಾದ ವೆಂಗಿಪಳು ಗ್ರಾಮದವನು. ನಾಗವರ್ಮನ ಕೃತಿಗಳು ಕರ್ನಾಟಕ ಕಾದಂಬರಿ ಮತ್ತು ಛಂದೋಂಬುಧಿ

ಕವಿರಾಜ, ಬುಧಾಬ್ಜವನಕಳಹಂಸಕವಿರಾಜ ಹಂಸಕಂದಕಂದರ್ಪ, ನೆಗಳ್ತೆಗೋಜ, ಇವು ನಾಗವರ್ಮನಿಗಿದ್ದ ಬಿರುದುಗಳು.

ಕರ್ನಾಟಕ ವಿಷಯಜಾತಿಗಳನ್ನು ಕುರಿತು ಹೇಳುವಾಗ ಸಾಂಗತ್ಯವನ್ನು ಉಲ್ಲೇಖಿಸಿಲ್ಲ.

ಕಾದಂಬರಿಯನ್ನು ಬಾಣಭಟ್ಟನ ಸಂಸ್ಕೃತ ಕಾದಂಬರಿಯನ್ನು ಆಧರಿಸಿ ಬರೆದಿದ್ದಾನೆ, ಈ ಕೃತಿಯು “ಸಂಸ್ಕೃತದಿಂದ ಕನ್ನಡಕ್ಕೆ ಅನುವಾದವಾದ ಮೊದಲ ಕೃತಿಯಾಗಿದೆ”. ಪುಂಡರೀಕ - ಮಹಾಶ್ವೇತೆ, ಚಂದ್ರಾಪೀಡ - ಕಾದಂಬರಿ ಎಂಬ ನಾಯಕ ನಾಯಕಿಯರ ಪ್ರಣಯ ಕಥೆಯೇ ಈ ಕೃತಿಯ ವಸ್ತು.

ಕಾದಂಬರಿಯಲ್ಲಿ ತನ್ನ ಆಶ್ರಯದಾತ ಚಂದ್ರರಾಜನನ್ನು ಕಾದಂಬರಿಯ ನಾಯಕನಿಗೆ ಹೋಲಿಸಿ ಕೃತಿಯನ್ನು ರಚಿಸಿದ್ದಾನೆ.

ಛಂದೋಂಬುದಿ ಕನ್ನಡದ ಮೊದಲ ಛಂದಶ್ಯಾಸ್ತ್ರ ಗ್ರಂಥವಾಗಿದೆ

ದುರ್ಗಸಿಂಹ (ಕಾಲ ಸು. 1031)

ಕಿಸುನಾಡಿನ ಸಯ್ಯಡಿ ಇವನ ಜನ್ಮಸ್ಥಳ, ತಂದೆ ಈಶ್ವರಾರ್ಯ ತಾಯಿ ರೇವಾಂಬೆ.

ಚಾಲುಕ್ಯ ಅರಸ ಜಗದೇಕಮಲ್ಲ ಜಯಸಿಂಹನ ಆಸ್ಥಾನದಲ್ಲಿ ದಂಡನಾಯಕ ಹಾಗೂ ಸಂಧಿವಿಗ್ರಹಿ ಆಗಿದ್ದನು. ಶಂಕರಭಟ್ಟ ಎಂಬಾತ ಇವನ ಗುರುವಾಗಿದ್ದನು.

ಇವನು ಪಂಚತಂತ್ರ ಎಂಬ ಕೃತಿಯನ್ನು ಬರೆದಿದ್ದಾನೆ. ಈ ಕೃತಿಗೆ ಆಕರವಾಗಿ ವಸುಭಾಗಭಟ್ಟನ ಸಂಸ್ಕೃತ ಪಂಚತಂತ್ರವನ್ನು ಬಳಸಿಕೊಂಡಿದ್ದಾನೆ. ಪಂಚತಂತ್ರ ಅಧಿಕವಾಗಿ ಗದ್ಯವೇ ಬಳಕೆಯಾಗಿರುವ ಚಂಪೂ ಕಾವ್ಯ.

ವಸುಭಾಗಭಟ್ಟನ ಸಂಸ್ಕೃತ ಪಂಚತಂತ್ರ ಕೃತಿಗೆ ಆಕರ ಪೈಶಾಚಿ ಭಾಷೆಯಲ್ಲಿ ರಚಿತವಾದ ಗುಣಾಢ್ಯನ ಬೃಹತ್ ಕಥಾಕೋಶ ಈ ಕತೆಗಳು ಮಿತ್ರಸಂಹಿತಕ್ಕೆ ಸೇರುವಂತಹವಾಗಿವೆ.

ಬಿಹಾರದ ಆರಾ ಎಂಬಲ್ಲಿ ದೊರೆತ ಒಂದು ಹಸ್ತಪ್ರತಿಯಲ್ಲಿ ದುರ್ಗಸಿಂಹನ ಕುರಿತು ಉಲ್ಲೇಖವಿದೆ.

ಚಂದ್ರರಾಜ (ಕಾಲ ಸು. 11ನೇ ಶ)

ಮಾಚನಲ್ಲ ರೇಚಭೂಪ ಎಂಬ ಸಾಮಂತ ಅರಸನಲ್ಲಿ ಆಸ್ಥಾನಕವಿಯಾಗಿದ್ದನು.

ಈತನು ಮದನತಿಲಕ ಎಂಬ ಸಂಕಲನ ಗ್ರಂಥವನ್ನು ಬರೆದನು.

ಮದನತಿಲಕದಲ್ಲಿ ಮೊದಲ ಬಾರಿಗೆ ಷಟ್ಪದಿಯ ಲಕ್ಷಣಗಳು ಕಾಣಸಿಗುತ್ತವೆ.

"ಆಗಮಲೌಕಿಕವಿರೋಧಮಂ ಕಳೆದು ಸಾರಾಂಶಮಂ ಕೊಂಡು ಪಲವುಮತಂಗಳನೊಂದುಮಾಡಿ" ಎಂದು ತನ್ನ ಕೃತಿಯ ಉದ್ದೇಶ ಹೇಳಿಕೊಂಡಿದ್ದಾನೆ.

ನಾಗವರ್ಮಾಚಾರ್ಯ (ಕಾಲ ಸು. 11ನೇ ಶ)

ಉದಯಾದಿತ್ಯನೆಂಬ ಅರಸನಲ್ಲಿ ಸಂಧಿವಿಗ್ರವಿಯೂ ಕವಿಯೂ ಆಗಿದ್ದನು.

ಕನ್ನಡದ ಮೊದಲ ಶತಕ ಕೃತಿಯಾದ ಚಂದ್ರಚೂಡಾಮಣಿಶತಕವನ್ನು ರಚಿಸಿದನು. ಜ್ಞಾನಸಾರ ಎಂಬುದು ಈ ಕೃತಿಯ ಮತ್ತೊಂದು ಹೆಸರು.

ಎರಡನೇ ನಾಗವರ್ಮ (ಕಾಲ ಸು. 1042)

ಇವನ ಗುರು ವೀರ ಭಟ್ಟಾರಕರು.

ತಾನು "ಜಿನಮತವನಹಂಸಂ ವಿಪ್ರವಂಶಾವತಂಸಂ" "ಸ್ವನುಗತ ಶುಭಶರ್ಮಮ್ ನಿರ್ಮಶಮ್ ನಾಗವರ್ಮಮ್"  ಎಂದು ತನ್ನ ಬಗ್ಗೆ ಹೊಗಳಿಕೊಂಡಿದ್ದಾನೆ.

ನಾಗವರ್ಮನಿಗೆ ಅಭಿನವ ಶರ್ವವರ್ಮ, ಕವಿಕರ್ಣಪೂರ, ಕವಿಕಂಠಾಭರಣ, ಕವಿತಾಗುಣೋದಯ ಎಂಬ ಬಿರುದುಗಳಿದ್ದವು.

ವರ್ಧಮಾನ ಪುರಾಣ

ಚಂಪೂ ಕಾವ್ಯವಾದ ವರ್ಧಮಾನಪುರಾಣ ಕನ್ನಡದಲ್ಲಿ ದೊರೆತ ವರ್ಧಮಾನ ಪುರಾಣಗಳಲ್ಲಿ ಮೊದಲನೆಯದು.  16 ಆಶ್ವಾಸಗಳುಳ್ಳ ಈ ಕೃತಿಯು 24 ನೇ ತೀರ್ಥಂಕರನಾದ ಮಹಾವೀರನ ಕತೆಯನ್ನು ಒಳಗೊಂಡಿದೆ.

ಕಾವ್ಯಾವಲೋಕನ

ಕಾವ್ಯಾವಲೋಕನ ಒಂದು ಅಲಂಕಾರ ಗ್ರಂಥ. ಈ ಕೃತಿಯು ಕನ್ನಡದ ಮೊದಲ ಅಲಂಕಾರಿಕ ಗ್ರಂಥವಾಗಿದ್ದು ಸೂತ್ರಗಳು ಕಂಪದ್ಯದಲ್ಲಿ ರಚನೆಯಾಗಿವೆ.

ತನ್ನ ಈ ಕೃತಿಯನ್ನು ಕುರಿತು ನಾಗವರ್ಮ "ಕವಿಗಳ್ಗಿದು ಕೈಗನ್ನಡಿ ಕವಿತೆಗೆ ಬಾಳ್ಗೊದಲು ಉದಾತ್ತ ವಾಗ್ದೇವತೆಗುದೃವಹೇತುಕೋಶ ಗೃಹಮೇನೇ ಭುವನದೊಳಿದು ಪರೆದು ನಿಲ್ವುದೊಂಡಚ್ಚರಿಯೇ" ಎಂದು ಹೇಳಿದ್ದಾನೆ.

ಇದರಲ್ಲಿ ಶಬ್ದಸಂಸ್ಕೃತಿ, ಕಾವ್ಯವೃತ್ತಿ, ಗುಣವಿವೇಕ, ರೀತಿ ಕ್ರಮರಸನಿರೂಪಣೆ ಮತ್ತು ಕವಿಸಮಯ ಎಂಬ 5 ಅಧಿಕರಣಗಳಿವೆ. ಕವಿಸಮಯದಲ್ಲಿ ಮತ್ತೇ ಅಸಾದಾಖ್ಯಾತಿ, ಸದಕೀರ್ತನ, ನಿಯಮಾರ್ಥ ಮತ್ತು ಐಕ್ಯ ಎಂಬ 4 ವಿಭಾಗಗಳಿವೆ.

ಸಂಧಿ, ನಾಮ, ಸಮಾಸ, ತದ್ಧಿತ ಮತ್ತು ಅಖ್ಯಾತ ಎಂಬ 5 ಅಧ್ಯಾಯಗಳಿವೆ.

ಮಾರ್ಗ ವಿಭಾಗ ದರ್ಶನ, ಶಬ್ದಾಲಂಕಾರ ನಿರ್ಣಯ ಮತ್ತು ಅರ್ಥಲಂಕಾರ ಎಂಬ 3 ಪ್ರಕರಣಗಳಿವೆ. 

ಕರ್ನಾಟಕ ಭಾಷಾಭೂಷಣ

ಕರ್ನಾಟಕ ಭಾಷಾಭೂಷಣವು ಕನ್ನಡದಲ್ಲಿ ದೊರೆತ ವ್ಯಾಕರಣ ಗ್ರಂಥಗಳಲ್ಲಿ ಮೊದಲನೆಯದು. 10 ಪರಿಚ್ಚೇದಗಳನ್ನು ಹೊಂದಿರುವ ಈ ಕೃತಿಯ ಸೂತ್ರಗಳು ಸಂಸ್ಕೃತದಲ್ಲಿವೆ.

ಭಾಷಾಭೂಷಣದ ಮೇಲೆ ಶರ್ವವರ್ಮನ ಕಾತಂತ್ರ ವ್ಯಾಕರಣ ಪ್ರಭಾವವಿದೆ ಎಂಬುದು ಹಲವು ವಿದ್ವಾಂಸರ  ಅಭಿಪ್ರಾಯ. 

ಈ ಕೃತಿಯನ್ನು ಆಧರಿಸಿ ಭಟ್ಟಾಕಳಂಕನು ಶಬ್ದಾನುಶಾಸನವನ್ನು ಬರೆದನು.

ಅಭಿದಾನ ವಸ್ತುಕೋಶ

ಅಭಿದಾನ ವಸ್ತುಕೋಶ ಕಂದಪದ್ಯಗಳಲ್ಲಿ ರಚನೆಯಾದ ಒಂದು ನಿಘಂಟು. ಕನ್ನಡದಲ್ಲಿ ದೊರೆತ ನಿಘಂಟುಗಳಲ್ಲಿ ಅಭಿದಾನ ವಸ್ತುಕೋಶವೇ ಮೊದಲನೆಯದು. ಈ ಕೃತಿಯಲ್ಲಿ ಸಂಸ್ಕೃತ ಪದಗಳಿಗೆ ಕನ್ನಡದಲ್ಲಿ ಅರ್ಥವನ್ನು ನೀಡಲಾಗಿದೆ.

ಛಂದೋವಿಚಿತಿ ಮತ್ತು ವತ್ಸರಾಜಚರಿತೆ ಕೃತಿಗಳು ದೊರೆತಿಲ್ಲ.

ನಾಗಚಂದ್ರ (ಕಾಲ ಸು. 1040 - 1100)

ಅಭಿನವ ಪಂಪ ಎಂದು ಖ್ಯಾತನಾಗಿದ್ದ ನಾಗಚಂದ್ರ, ಹೊಯ್ಸಳ ಬಲ್ಲಾಳನಲ್ಲಿ ಆಶ್ರಯ ಪಡೆದಿದ್ದ. ಇವನಿಗೆ ಅರ್ಥಾಂತರನ್ಯಾಸಪ್ರಿಯ ಎಂದು ಕರೆಯುತ್ತಿದ್ದರು.

ಪಂಪರಾಮಾಯಣ (ರಾಮಚಂದ್ರಚರಿತ ಪುರಾಣ)

16 ಆಶ್ವಾಸಗಳುಳ್ಳ ಪಂಪರಾಮಾಯಣ “ಕನ್ನಡದಲ್ಲಿ ದೊರೆತ ಮೊದಲ ಜೈನ ರಾಮಾಯಣ”.

ಪಂಪರಾಮಾಯಣಕ್ಕೆ ಆಕರವಾಗಿ ವಿಮಲಸೂರಿಯ ಪ್ರಾಕೃತ ಭಾಷೆಯ ಪಉಮಚರಿವು ಮತ್ತು ರವಿಷೇಣನ ಸಂಸ್ಕೃತ ಭಾಷೆಯ ಪದ್ಮಪುರಾಣ ಕೃತಿಗಳನ್ನು ಬಳಸಿಕೊಂಡಿದ್ದಾನೆ.

"ಉದಾತ್ತರಾಘವಂ ನಾಯಕನಾಗೆ ವಿಶ್ರುತವೆನಿಪ್ಪುದು ವಿಷಯಂ ಒಪ್ಪದೊಡಾವುದಂ ಒಪ್ಪಲಾರ್ಕುಮೇ" "ಅಪೂರ್ವಮೆನೆ ರಾಮಕಥೆಯನ್ ಅಭಿವರ್ಣಿಸುವೆಮ್" ಎಂದು ತನ್ನ ಕೃತಿಯನ್ನು ಕುರಿತು ಹೊಗಳಿಕೊಂಡಿದ್ದಾನೆ

"ಪದ್ಮಪತ್ರದ ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ" ಎಂಬ ಸಾಲು ಸೀತೆಯನ್ನು ಕಂಡು ವಿಚಲಿತಗೊಂಡ ರಾವಣನ ಮನೋಸ್ಥಿತಿಯನ್ನು ಕುರಿತಾದುದು.

ಮಲ್ಲಿನಾಥ ಪುರಾಣ.

19 ನೇ ತೀರ್ಥಂಕರನಾದ ಮಲ್ಲಿನಾಥನ ಕಥೆಯನ್ನು ಒಳಗೋಣ 14 ಆಶ್ವಾಸಗಳ ಕೃತಿಯಾಗಿದೆ. ಈ ಕೃತಿಗೆ ಆಕರ ಗುಣಭದ್ರಾಚಾರ್ಯರ ಉತ್ತರಪುರಾಣ.

ನಾಗಚಂದ್ರ ಹೇಳುವಂತೆ ಈ ಕಾವ್ಯದ ಉದ್ದೇಶ "ಜೀವಕ್ಕೆ ಶರಣ್ಯವೊಂದೇ ನಿರ್ಮಾಧರ್ಮಮ್". 

ಶಾಂತಿನಾಥ (ಕಾಲ ಸು. 1068)

ಚಾಲುಕ್ಯ ಚಕ್ರವರ್ತಿ ಭುವನೈಕಮಲ್ಲನ ಸಾಮಂತ ಲಕ್ಷ್ಮಣ ರಾಜನ ಮಂತ್ರಿಯಾಗಿದ್ದನು

ಸುಕುಮಾರಚರಿತಮ್ ಎಂಬ ಚಂಪೂ ಕಾವ್ಯವನ್ನು ಬರೆದಿದ್ದಾನೆ.

ಸಹಜಕವಿಚತುರಕವಿಸರಸ್ವತಿಮುಖಮುಕುರಜಿನಮತಾಂಭೋಜಿನಿ ರಾಜಹಂಸ ಎಂಬುವು ಇವನ ಬಿರುದುಗಳು

ನಯಸೇನ (ಕಾಲ ಸು. 1112)

ಈತನ ಗುರು ನರೇಂದ್ರಸೇನ ಮುನಿ 

ನಯಸೇನನ ಧರ್ಮಾಮೃತ ಕೃತಿ “ಜನತೆಗಾಗಿ ಬರೆದ ಮೊದಲ ಜೈನ ಪುರಾಣ” ಎಂದು ಖ್ಯಾತವಾಗಿದೆ. ಈ ಕೃತಿಯು ಸದ್ಗತಿ ಪಡೆದ 14 ಜೈನ ಮಹಾಪುರುಷರ ಕತೆಯಾಗಿದೆ.

ನಯಸೇನನು ಪರಮತ ವಿಡಂಬನೆ ಮತ್ತು ಸ್ವಮತ ಸ್ಥಾಪನೆಯ ಪರಂಪರೆಗೆ ನಾಂದಿ ಹಾಕಿದನು.

ತನ್ನ ಕೃತಿಯ ಸೊಬಗನ್ನು ಹೆಚ್ಚಿಸಲು ಕವಿ ಮಾಲೋಪಮೆಯನ್ನು ಬಳಸಿದ್ದಾನೆ.

ರಂ.ಶ್ರೀ ಮುಗಳಿಯವರು ಜನತೆಯ ಕವಿಗಳೆಂದು ಹೆಸರಾದ ಕನ್ನಡ ಕಲೋಪಾಸಕರಲ್ಲಿ ನಯಸೇನನು ತೀರಾ ಎತ್ತರದಲ್ಲಿ ಅಲ್ಲದಿದ್ದರೂ ಎದ್ದು ಕಾಣುವ ನೆಲೆಯಲ್ಲಿ ಕೂಡ ನಿಲ್ಲಬಲ್ಲಎಂದಿದ್ದಾರೆ.

ನಿರುಪಮಾ ಸಹಜಕವಿ, ಜನಪಯಃ ಪಯೋಧಿಹಿಮಕರ, ನೂತನ ವಿತಾವಿಲಾಸ, ದಿಗಂಬರದಾಸಸೂತ್ರ ಕವಿತಾ ವಿಲಾಸ ಇವನ ಬಿರುದುಗಳು

ಸಂಸ್ಕೃತವನ್ನು ತಿರಸ್ಕರಿಸಿ ಶುದ್ಧಗನ್ನಡದಲ್ಲಿ ಬರೆಯಬೇಕು ಎಂದು ಕವಿ ಹೇಳಿರುವ ಮಾತುಗಳು.

"ನಾಣ್ಣುಡಿ ದೇಸಿವೆತ್ತ ಪೊಸನುಡಿ ಮಾರ್ಗಂ" 

"ಸಕ್ಕದಮಂ ಪೇಳ್ವೊಡೆ ನೆರೆ ಸಕ್ಕದಮಂ ಪೇಳ್ಗೆಶುದ್ಧ ಕನ್ನಡದೊಳ್ ತಂದಿಕ್ಕುವುದೇ ಸಕ್ಕದಂಗಳ ತಕ್ಕುದೆ ಬೆರಸಲ್ಕೆ ಘೃತಮುಮಂತೈಲಮುಮಂ"

ಕಾಮೆಂಟ್‌ಗಳು