ಪ್ರಸ್ತಾರ

 ಪ್ರಸ್ತಾರ

ಲಘು

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು (U) ಎನ್ನುವರು.

ಗುರು

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( _ ) ಎಂದು ಕರೆಯುವರು.


ಅಕ್ಷರವು ಗುರು ಆಗುವ ಸಂದರ್ಭ

ದೀರ್ಘಾಕ್ಷರ         

 _  U

ಶಾಲೆ

ಒತ್ತಕ್ಷರದ ಹಿಂದಿನ ಅಕ್ಷರ    

U U

ಒತ್ತಿನಣೆ

ಅನುಸ್ವಾರದಿಂದ ಕೂಡಿರುವ ಅಕ್ಷರ  

  _   U

ಬಂದನು

ವಿಸರ್ಗದಿಂದ ಕೂಡಿರುವ ಅಕ್ಷರ  

 _   U

ದುಃಖ

ವ್ಯಂಜನಾಕ್ಷರದಿಂದ ಕೂಡಿದ ಅಕ್ಷರ  

U  U   _

ಮನದೊಳ್

ಐ ಸ್ವರವಿರುವ ಅಕ್ಷರ   

_   U  U

ಕೈಮುಗಿ

ಔ ಸ್ವರವಿರುವ ಅಕ್ಷರ  

  _   U

ಮೌನ

ಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ    

ಶಿಥಿಲದ್ವಿತ್ವ

ಕೆಲವು ಸಂದರ್ಭಗಳಲ್ಲಿ ಅಕ್ಷರಗಳು ಒತ್ತಕ್ಷರಗಳಿಂದ ಕೂಡಿದ್ದರೂ ಅವುಗಳನ್ನು ನಾವು ಗುರು (_) ಎಂದು ಪರಿಗಣಿಸದೆ ತೇಲಿಸಿ ಉಚ್ಚರಿಸಿ ಲಘುವಾಗಿಯೇ ಪರಿಗಣಿಸುತ್ತೇವೆ ಇದನ್ನೇ ಶಿಥಿಲದ್ವಿತ್ವ ಎನ್ನುವರು.

ಕೇಶಿರಾಜ ಶಿಥಿಲದ್ವಿತ್ವವನ್ನು ಕನ್ನಡದ ಅಸಾಧಾರಣ ಲಕ್ಷಣ ಎಂದಿದ್ದಾನೆ.

ಕೇಶಿರಾಜ ಹೇಳುವಂತೆ ಶಿಥಿಲದ್ವಿತ್ವ ಆಗುವ ಸಂದರ್ಭಗಳು

ನಾಮ ಶಿಥಿಲದ್ವಿತ್ವ

ಲಘು ಅಕ್ಷರದಿಂದ ಪ್ರಾರಂಭವಾಗಿ ರಳ (ೞ)ಕುಳ (ಳ)ರೇಫ (ರ)ಶಕಟರೇಫ (ಱ) ಈ ಅಕ್ಷರಗಳಿಂದ ಕೊನೆಯಾಗಿರುವ ನಾಮಪ್ರಕೃತಿಗಳ (ನಾಮಪದದ ಮೂಲರೂಪ) ಮುಂದೆ ಗಳ್ ಎಂಬ ಬಹುವಚನ ರೂಪವಾಗಲಿಗೆ (ಚತುರ್ಥಿ ವಿಭಕ್ತಿ ಪ್ರತ್ಯಯ) ಆಗಲಿ ಬಂದಾಗ ಅಲ್ಲಿ ಶಿಥಿಲದ್ವಿತ್ವವಾಗುತ್ತದೆ.

ಅಗೞ್ಗಳ್ (ಅಗೞ್+ಗಳ್),

ಎಸೞ್ಗೆ (ಎಸೞ್+ಗೆ),

ಮುಗುಳ್ಗಳ್ (ಮುಗುಳ್+ಗಳ್),

ಪುಗುಳ್ಗೆ (ಪುಗುಳ್+ಗೆ),

ಕನರ್ಗಳ್ (ಕನರ್+ಗಳ್),

ನವಿರ್ಗೆ (ನವಿರ್+ಗೆ),

ಎಡರ್ಗಳ್ (ಎಡಱ್+ಗಳ್)

ಲಘು ಅಕ್ಷರದಿಂದ ಪ್ರಾರಂಭವಾಗಿ ರಳ (ೞ)ಕುಳ (ಳ)ರೇಫ (ರ)ಶಕಟರೇಫ (ಱ) ಈ ಅಕ್ಷರಗಳಿಂದ ಕೊನೆಯಾಗಿರುವ ಪದಗಳ ಮುಂದೆ ಗವ ಕಾರಗಳಿಂದ ಪ್ರಾರಂಭವಾಗುವ ಪದಗಳು ಬಂದು ಸೇರಿದಾಗ ಶಿಥಿಲದ್ವಿತ್ವ ಉಂಟಾಗುತ್ತದೆ.

ಕುಳಿರ್ಗಾಳಿ (ಕುಳಿರ್+ಗಾಳಿ),

ಅಮಳ್ದೊಂಗಲ್ (ಅಮಳ್+ದೊಂಗಲ್)

ಪೂರ್ವಪದವು  ಲಘು ಅಕ್ಷರದಿಂದ ಪ್ರಾರಂಭವಾಗಿ ರಳ (ೞ)ಕುಳ (ಳ)ರೇಫ (ರ)ಶಕಟರೇಫ (ಱ) ಈ ಅಕ್ಷರಗಳಿಂದ ಕೊನೆಯಾಗಿರುವ ಕ್ರಿಯಾಪ್ರಕೃತಿಯಾದ (ಕ್ರಿಯಾಪದದ ಮೂಲರೂಪ) ಮುಂದೆ ದದಪವ ಎಂಬ ಕಾಲ ಪ್ರತ್ಯಯಗಳಾಗಲಿಪ್ರಥಮ ಪುರುಷದ ವಿದ್ಯರ್ಥ ಗೆ ಪ್ರತ್ಯಯವಾಗಲಿಪ್ರಥಮಪುರುಷದ ಭವಿಷ್ಯತ್ ನ ಗುಂ ಪ್ರತ್ಯಯವಾಗಲಿ ಬಂದಾಗ ಶಿಥಿಲದ್ವಿತ್ವವಾಗುತ್ತದೆ.

ಜಗುೞ್ದಂ (ಜಗುೞ್+ದಂ),

ಪೊಗೞ್ಗೆ (ಪೊಗಳ್+ಗೆ),

ನೆಗೞ್ಗುಂ (ನೆಗೞ್+ಗುಂ),

ನುಸುಳ್ವಂ (ನುಸುಳ್+ವಂ),

ತೊಡರ್ದಪಂ (ತೊಡಱ್+ದಪಂ).

ಗಣ

ಇಲ್ಲಿ ಗಣ ಎಂದರೆ ಅಕ್ಷರಗಳ ಗುಂಪು. ಇದರಲ್ಲಿ ವರ್ಣಗಣ (ಅಕ್ಷರಗಣ)ಮಾತ್ರಾಗಣ ಮತ್ತು ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.

ಮಾತ್ರಾಗಣ

ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ (ಮಾತ್ರೆ ಎಂದರೆ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲ).

ಪದ್ಯದ ಸಾಲಿನಲ್ಲಿ ನಿಯಮಕ್ಕನುಗುಣವಾಗಿ ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು.

ಮಾತ್ರಾಗಣ ಆಧಾರಿತ ಛಂದೋರೂಪಗಳು

ಕಂದ ಪದ್ಯ, ಷಟ್ಪದಿ, ರಗಳೆ, ದ್ವಿಪದಿ, ಮಾತ್ರಾ ಚೌಪದಿ, ಧವಳ/ಧವಲ


ಅಕ್ಷರಗಣ

ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ. ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಣಗಳ್ಲಿ ಒಟ್ಟು ಎಂಟು ವಿಧಗಳಿವೆ.

ಯಗಣ, ಮಗಣ, ತಗಣ, ರಗಣ, ಜಗಣ, ಭಗಣ, ನಗಣ, ಸಗಣ

ಯಮಾತಾರಾಜಭಾನ ಸಲಗಂ ಸೂತ್ರ

ಅಕ್ಷರಗಣಗಳನ್ನು ಯಮಾತಾರಾಜಭಾನಸಲಗಂ ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.

ಗಣ         ಅಕ್ಷರಗಳು       ಪ್ರಸ್ತಾರ

ಯಗಣ     ಯಮಾತಾ      U _ _

ಮಗಣ      ಮಾತಾರಾ      _ _ _

ತಗಣ        ತಾರಾಜ         _ _ U

ರಗಣ       ರಾಜಭಾ         U _

ಜಗಣ       ಜಭಾನ          U _ U

ಭಗಣ       ಭಾನಸ           U U

ನಗಣ       ನಸಲ            U U U

ಸಗಣ        ಸಲಗಂ           U U _ 

ಅಕ್ಷರ ಗಣಗಳನ್ನು ನೆನಪಿಡಲು ಸೂತ್ರ

ಗುರು ಲಘು ಮೂರಿರೆ ಮ - ನ - ಗಣ

ಗುರು ಲಘು ಮೊದಲಲ್ಲಿ ಬರಲು ಭ - ಯ - ಗಣಮೆಂಬರ್

ಗುರು ಲಘು ನಡುವಿರೆ ಜ - ರ - ಗಣ

ಗುರು ಲಘು ಕೊನೆಯಲ್ಲಿ ಬರಲು ಸ  ತ – ಗಣಮಕ್ಕುಂ

ಅಂಶಗಣ

ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶಗಣ. ಇದನ್ನು ನಾಗವರ್ಮನು ಕರ್ಣಾಟಕ ವಿಷಯಜಾತಿ ಎಂದೂ ಜಯಕೀರ್ತಿಯು ಕರ್ಣಾಟಕ ವಿಷಯ ಭಾಷಾಜಾತಿ ಎಂದೂ ಕರೆದಿದ್ದಾನೆ.

ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲ (ಲಘು) ಅಥವಾ ಎರಡು ಮಾತ್ರಾಕಾಲ (ಗುರು) ಆಗಬಹುದು. ಆದರೆ ಗಣದ ಆರಂಭದಲ್ಲಿ ಕಡ್ಡಾಯವಾಗಿ ಎರಡು ಲಘು ಬಂದಿದ್ದರೆ ಮಾತ್ರ ಒಂದು ಅಂಶವೆಂದು ಪರಿಗಣಿಸಬೇಕು. ಗುರು ಬಂದಿದ್ದಲ್ಲಿ ಒಂದು ಗುರುವಿಗೆ ಒಂದು ಅಂಶ ಎಂದು ತಿಳಿಯಬೇಕು.

ಉದಾಹರಣೆ

U  U U        -    U           -    -             U   U  -

ಕ ವಿ ತೆ      ಬಾ ಣ         ರಾ ಧಾ         ಲ ಲಿ ತಾ

ಯಾವುದು ಅಂಶ ಎನಿಸುವುದಿಲ್ಲ

U  -           U    -    U

ಲ ತಾ       ವ ದಂ ತಿ                 

ಅಂಶಗಣದಲ್ಲಿ ಮೂರು ವಿಧ. ಅವನ್ನು ಬ್ರಹ್ಮಗಣ, ವಿಷ್ಣುಗಣ, ರುದ್ರಗಣ ಎಂದುಕರೆಯುವರು.

ನಾಗವರ್ಮ ಛಂದೋಂಬುಧಿಯಲ್ಲಿ (ಸು 990) ಬ್ರಹ್ಮ ವಿಷ್ಣು ರುದ್ರ ಎಂಬ ಸಂಜ್ಞೆಗಳಿಂದ ನಿರ್ದೇಶಿಸಿದ್ದಾನೆ. ಜಯಕೀರ್ತಿ ರತಿ ಮದನ ಶರ ಎಂದು ಸೂಚಿಸಿದ್ದಾನೆ; ತೆಲುಗು ಲಾಕ್ಷಣಿಕರು ಸೂರ್ಯ ಇಂದ್ರ ಚಂದ್ರ ಎಂದು ಕರೆದಿದ್ದಾರೆ. ತಮಿಳಿನಲ್ಲಿ ಈರಶೈಶೀರ್, ಮೂವಶೈಶೀರ್ ಮತ್ತು ನಾಲಶೈಶೀರ್ ಎಂಬ ಹೆಸರುಗಳಿವೆ.

ಬ್ರಹ್ಮಗಣದಲ್ಲಿ ಎರಡು ಅಂಶಗಳಿರುತ್ತವೆಒಟ್ಟು ನಾಲ್ಕು ಪ್ರಕಾರವಾಗಿ ವಿಂಗಡಿಸಬಹುದು

ಗುಗು      _, _

ಗುಲ      _, U

ಲಲಗು    U U, _

ಲಲಲ     U U, U

ವಿಷ್ಣುಗಣದಲ್ಲಿ ಮೂರು ಅಂಶಗಳು ಇರುತ್ತವೆ. ಒಟ್ಟು ಎಂಟು ಪ್ರಕಾರವಾಗಿ ವಿಂಗಡಿಸಬಹುದು

ಗುಲ          _, U, U

ಗುಗುಲ         _, _, U

ಗುಗುಗು        _, _, _

ಗುಗು         _, U, _

ಲಲಗುಗು        U U, _, _

ಲಲಗುಲ         U U, _, U

ಲಲಗು         U U, U, _

ಲಲ          U U, U, U

ರುದ್ರಗಣದಲ್ಲಿ ನಾಲ್ಕು ಅಂಶಗಳಿರುತ್ತವೆಇವುಗಳನ್ನು ಒಟ್ಟು ಹದಿನಾರು ಪ್ರಕಾರವಾಗಿ ವಿಂಗಡಿಸಬಹುದು

ಗುಲ       _, U, U, U

ಗುಗುಲ      _, _, U, U

ಗುಗುಗುಲ     _, _, _, U

ಗುಗುಗುಗು    _, _, _, _

ಗುಗುಲ      _, U, _, U

ಗುಗು      _, U, U, _

ಗುಗುಗು     _, _, U, _

ಗುಗುಗು     _, U, _, _

ಲಲಗುಗುಗು   U U, _, _, _

ಲಲಲ     U U, U, U, U

ಲಲಗುಗು    U U,  U, _, _

ಲಲಗು     U U, U, U, _

ಲಲಗುಗು    U U, _, U, _

ಲಲಗುಗುಲ    U U, _, _, U

ಲಲಗುಲ     U U, _, U, U

ಲಲಗುಲ     U U, U, _, U

ಕಾಮೆಂಟ್‌ಗಳು