ಅಕ್ಷರಗಣದ ಛಂದೋರೂಪಗಳು

 ಅಕ್ಷರಗಣದ ಛಂದೋರೂಪಗಳು

ವೃತ್ತಗಳು

ಅಕ್ಷರಗಣದ ಛಂದಸ್ಸನ್ನು ವೃತ್ತಗಳು ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರತಿ ಪದ್ಯದಲ್ಲಿ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ.

ಕನ್ನಡದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಹಾಗಾಗಿ ಅವನ್ನು ಖ್ಯಾತಕರ್ಣಾಟಕ ವೃತ್ತಗಳು ಎಂದು ಕರೆಯುತ್ತಾರೆ.

ಖ್ಯಾತ ಕರ್ನಾಟಕ ವೃತ್ತಗಳ ಸೂತ್ರ 

ಗುರುವೊಂದಾದಿಯೊಳುತ್ಪಲಂ, ಗುರು ಮೊದಲ್ ಮೂರಾಗೆ ಶಾರ್ದೂಲಂ

ಗುರು ನಾಲ್ಕಾಗಿರಲಂತು ಸ್ರಗ್ದರೆ, ಲಘು ದ್ವಂದ್ವ ಗುರು ದ್ವಂದ್ವ ಮಾ

ಗಿರೆ ಮತ್ತೇಭ, ಲಘು ದ್ವಯ ತ್ರಿಗುರುವಿಂದುಕ್ಕುಂ ಮಹಾಸ್ರಗ್ದರಂ

ಹರಿಣಾಕ್ಷೀ, ಲಘು ನಾಲ್ಕು ಚಂಪಕಮಿವಾರುಮ್ ಖ್ಯಾತಕರ್ನಾಟಕಂ

1. ಉತ್ಪಲಮಾಲಾ            _

2. ಶಾರ್ದೂಲ ವಿಕ್ರೀಡಿತ   _

3. ಸ್ರಗ್ದರಾ                         _

4. ಮತ್ತೇಭ ವಿಕ್ರೀಡಿತ       UU_

5. ಮಹಾ ಸ್ರಗ್ದರಾ             UU_

6. ಚಂಪಕಮಾಲಾ           UUUU

ಶಾರ್ದೂಲವಿಕ್ರೀಡಿತ ವೃತ್ತ

ಶಾರ್ದೂಲವಿಕ್ರೀಡಿತ ವೃತ್ತದಲ್ಲಿ ಪ್ರತಿಸಾಲಿನಲ್ಲೂ 19 ಅಕ್ಷರಗಳಿರುತ್ತವೆ. ವಿನ್ಯಾಸದಲ್ಲಿ ಮ ಸ ಜ ಸ ತ ತ ಗುರು ಗಣಗಳಿರುತ್ತವೆ.

       ಮ ಸ ಜ ಸ ತ 

  _ _      _   | U U _| U_U|UU   | _  _   U|  _ _ U|_

"ಕಣ್ಗೊಪ್ಪಲ್| ಮಸಜಂ|ಸತಂತ|ಗಮುಮಾ| ಶಾರ್ದೂಲ| ವಿಕ್ರೀಡಿ|ತಂ"

ಮತ್ತೇಭವಿಕ್ರೀಡಿತ ವೃತ್ತ

ಮತ್ತೇಭವಿಕ್ರೀಡಿತ ವೃತ್ತದ ಪ್ರತಿ ಸಾಲಿನಲ್ಲೂ 20 ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ ಸ ಭ ರ ನ ಮ ಯ ಗಣವಿನ್ಯಾಸವಿರುತ್ತದೆ.

  ಸ ಭ ರ ನ ಮ ಯ      

UU_| _  UU  |_  U _  | UUU | _   _ _  | U_ _ | U_

ಸಭರಂ|ನಂಮಯ|ಲಂಗಮುಂ|ಬಗೆಗೊ|ಳಲ್ ಮತ್ತೇ|ಭವಿಕ್ರೀ|ಡಿತಂ

ಉತ್ಪಲಮಾಲಾ ವೃತ್ತ

ಉತ್ಪಲಮಾಲಾವೃತ್ತದ ಪ್ರತಿ ಸಾಲಿನಲ್ಲೂ 20 ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ ಭ ರ ನ ಭ ಭ ರ ಗಣವಿನ್ಯಾಸವಿರುತ್ತದೆ.

    ಭ ರ ನ ಭ ಭ     

_  U  U| _  U _ | U  UU|_ UU|_ UU|_ U_| U    _

"ಉತ್ಪಲ|ಮಾಲೆಯ|ಪ್ಪುದುಭ|ರಂನಭ|ಭಂರಲ|ಗಂ ನೆಗ|ಳ್ದಿರಲ್"

ಚಂಪಕ ಮಾಲಾ ವೃತ್ತ

ಚಂಪಕ ಮಾಲಾವೃತ್ತದ ಪ್ರತಿ ಸಾಲಿನಲ್ಲೂ 21 ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ ನ ಜ ಭ ಜ ಜ ಜ ರ ಗಣವಿನ್ಯಾಸವಿರುತ್ತದೆ. 13ನೇ ಅಕ್ಷರಕ್ಕೆ ಯತಿ ಬರುತ್ತದೆ.

  ನ ಜ ಭ ಜ ಜ ಜ 

UUU|U_ U|_  UU|U  _ U|U  _ U|U _ U| _    _

ನಜಭ|ಜ ಜ0|0 ಬಗೆ|ಗೊಳುತ್ತಿ|ರೆ ಚ0|ಕಮಾಲೆ|ಯೆ0ದಪರ್

ಸ್ರಗ್ಧರಾ ವೃತ್ತ

ಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ 21 ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು ಮ ರ ಭ ನ ಯ ಯ ಯ

    ಮ ರ ಭ ನ ಯ ಯ ಯ

 _     _    _  | _  U_|  _    U U|U U U|U _   _| U  _  _ |U _  _

ತೋರಲ್ ಮಂರಂಭನಂಮೂಯಗ|ಣಮುಮ|ದೆತಾಂ ಸ್ರ|ಗ್ಧರಾ ವೃ|ತ್ತಮಕ್ಕುಂ

ಮಹಾಸ್ರಗ್ಧರಾ ವೃತ್ತ

ಮಹಾಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ 22 ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು ಸ ತ ತ ನ ಸ ರ ರ ಗು

  ಸ ತ ತ ನ ಸ ರ ರ ಗು

UU_| _ _ U|_ _   U|UUU|UU _ |  _ U  _ | _ U _ | _ 

ಸತತಂ|ನಂಸಂರ|ರಂಗಂ ನೆ|ರೆದೆಸೆ|ಯೆ ಮಹಾ| ಸ್ರಗ್ಧರಾ| ವೃತ್ತಮ|ಕ್ಕುಂ

ನೆನಪಿಡಲು ಸರಳ ಮಾರ್ಗ

 ( ಕ್ರಮವಾಗಿ 2 ವಿಕ್ರೀಡಿತ, 2 ಮಾಲಾ, 2 ಸ್ರಗ್ದರಾ)

1. ಶಾರ್ದೂಲ ವಿಕ್ರೀಡಿತ 19 ಅಕ್ಷರ 

(ಮೊದಲ ಗಣದ ವಿನ್ಯಾಸ  _)

2. ಮತ್ತೇಭ ವಿಕ್ರೀಡಿತ 20 ಅಕ್ಷರ  

(ಮೊದಲ ಗಣದ ವಿನ್ಯಾಸ UU_) 

3. ಉತ್ಪಲಮಾಲಾ  20 ಅಕ್ಷರ 

(ಮೊದಲ ಗಣದ ವಿನ್ಯಾಸ _UU)

4. ಚಂಪಕಮಾಲಾ 21  ಅಕ್ಷರ  

(ಮೊದಲ ಗಣದ ವಿನ್ಯಾಸ UUU)

5. ಸ್ರಗ್ದರಾ  21  ಅಕ್ಷರ 

(ಮೊದಲ ಗಣದ ವಿನ್ಯಾಸ _ )

6. ಮಹಾ ಸ್ರಗ್ದರಾ 22  ಅಕ್ಷರ  

(ಮೊದಲ ಗಣದ ವಿನ್ಯಾಸ UU_)

ಕಾಮೆಂಟ್‌ಗಳು