ಅಲಂಕಾರಗಳು

 ಅಲಂಕಾರಗಳು

ಭಾಮಹನು ತನ್ನ ಕಾವ್ಯಾಲಂಕಾರ ಕೃತಿಯ 3ನೇ ಪರಿಚ್ಛೇದದಲ್ಲಿ ಅಲಂಕಾರಗಳ ಕುರಿತು ವಿವರಿಸಿದ್ದಾನೆ.

ದಂಡಿ ಕವಿಯು ತನ್ನ ಕಾವ್ಯಾದರ್ಶ ಕೃತಿಯ 2ನೇ ಪರಿಚ್ಛೇದದಲ್ಲಿ ಅರ್ಥಾಲಂಕಾರಗಳ ಬಗ್ಗೆ ಮತ್ತು 3ನೇ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ಬಗ್ಗೆ ವಿವರಿಸಿದ್ದಾನೆ. ಅಲಂಕಾರದ ಕುರಿತು ದಂಡಿಯು ಕಾವ್ಯಶೋಭಾಕರನ್ ಧರ್ಮಾನಲಂಕಾರಾನ್ ಪ್ರಚಕ್ಷತೇ ಎಂದಿದ್ದಾನೆ.

ಅರ್ಥಾಲಂಕಾರಗಳು

ಉಪಮಾಲಂಕಾರ

ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ

ಉದಾಹರಣೆ :

ಮಗುವಿನ ಮುಖವು ಚಂದ್ರನಂತೆ ಮನೋಹರವಾಗಿದೆ.

ಉಪಮೇಯ : ಮಗುವಿನ ಮುಖ

ಉಪಮಾನ : ಚಂದ್ರ

ಸಮಾನಧರ್ಮ (ಸಾಧಾರಣಧರ್ಮ) : ಮಗುವಿನ ಮುಖ ಮತ್ತು ಚಂದ್ರನಲ್ಲಿರುವ ಆಹ್ಲಾದಕತ್ವ

ಉಪಮಾವಾಚಕ : ಚಂದ್ರನ ಮುಖದಂತೆ ಎಂಬಲ್ಲಿರುವ ಅಂತೆ ಎಂಬ ಶಬ್ದವೇ  

ಉಪಮಾಲಂಕಾರದಲ್ಲಿ ಪೂರ್ಣೋಪಮಾಲಂಕಾರ ಮತ್ತು ಲುಪ್ತೋಪಮಾಲಂಕಾರ ಎಂಬ ಎರಡು ವಿಧಗಳಿವೆ,

ಪೂರ್ಣೋಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಮತ್ತು ಉಪಮಾವಾಚಕ ಶಬ್ದಗಳಿರುತ್ತವೆ ಆದ್ದರಿಂದ ಇದನ್ನು ಪೂರ್ಣೋಪಮಾಲಂಕಾರ ಎನ್ನುವರು.

ಉದಾಹರಣೆ :

ಸೀತೆಯ ಮುಖ ಕಮಲದಂತೆ ಅರಳಿತು

ಉಪಮೇಯ : ಸೀತೆಯ ಮುಖ

ಉಪಮಾನ : ಚಂದ್ರ

ಸಮಾನ ಧರ್ಮ : ಅರಳುವಿಕೆ

ಉಪಮಾವಾಚಕ ಶಬ್ದ : ಅಂತೆ

ಲುಪ್ತೋಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಅಥವಾ ಉಪಮಾವಾಚಕ ಶಬ್ದ ಇವುಗಳಲ್ಲಿ ಯಾವುದಾದರೊಂದು ಲುಪ್ತವಾಗಿರುತ್ತದೆ (ಇರುವುದಿಲ್ಲ). ಆದ್ದರಿಂದ ಇದನ್ನು ಲುಪ್ತೋಪಮಾಲಂಕಾರ ಎನ್ನುವರು

ಉದಾಹರಣೆ :

ಹಾರಲು ಬಯಸುವೆನು ಹಕ್ಕಿಗಳಂತೆ

ಉಪಮೇಯ : ಲುಪ್ತವಾಗಿದೆ (ಉಪಮೇಯ ಯಾರೆಂದು ವಾಕ್ಯದಲ್ಲಿ ಹೇಳಿಲ್ಲ)

ಉಪಮಾನ : ಹಕ್ಕಿ

ಸಮಾನ ಧರ್ಮ : ಹಾರುವಿಕೆ

ಉಪಮಾವಾಚಕ ಶಬ್ದ : ಅಂತೆ

ರೂಪಕಾಲಂಕಾರ

ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಭೇದವಿಲ್ಲದೆ ಹೇಳುವುದೇ ರೂಪಕಾಲಂಕಾರ.  ಇಲ್ಲಿ ಅಭೇದದಿಂದ ಹೇಳಿರುವುದರಿಂದ ಇದು ಅಭೇದ ರೂಪಕ’ ವೆಂದು ಹೇಳಲ್ಪಡುವುದು.

ಉದಾಹರಣೆ :

ರಾಧೆಯ ಮುಖ ಕಮಲದಲ್ಲಿ ನಗು ಅರಳಿತು

ಇಲ್ಲಿ ರಾಧೆಯ ಮುಖ ಮತ್ತು ಕಮಲ ಒಂದೇ ಎಂದುಅವೆರಡರಲ್ಲಿ ಭೇದವಿಲ್ಲದೆ ಹೇಳಲಾಗಿದೆ.

ವರ್ಣಿಸುವ ವಸ್ತುವು ಇನ್ನೊಂದರಂತೆ (ಉಪಮಾನದಂತೆ) ಇದೆ ಎಂದು ಹೇಳದೆಎರಡೂ ವಸ್ತುಗಳು ಎಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ ಅಭೇದ ರೂಪಕಾಲಂಕಾರವೆನಿಸುವುದು.

ಉತ್ಪ್ರೇಕ್ಷಾಲಂಕಾರ

ಒಂದು ವಸ್ತುವನ್ನೋ ಅಥವಾ ಸನ್ನಿವೇಶವನ್ನೋ ಮತ್ತೊಂದನ್ನಾಗಿ ಕಲ್ಪಿಸಿಕೊಂಡು ವರ್ಣಿಸುವುದೇ ಉತ್ಪ್ರೇಕ್ಷೆಯೆನಿಸುವುದು. ವರ್ಣಿಸುವ ವಸ್ತುವಿನಲ್ಲಿ ಅಥವಾ ಸನ್ನಿವೇಶದಲ್ಲಿ ಕಲ್ಪಿಸಿಕೊಳ್ಳುವ ವಸ್ತುವಿನ ಅಥವಾ ಸನ್ನಿವೇಶದ ಗುಣ ಇರಬೇಕು.

ಉದಾಹರಣೆ :

ರಕ್ತದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಈ ರೀತಿ ಚಿಕ್ಕ ಚಿಕ್ಕ ಬೆಟ್ಟಗಳನ್ನು ಹೊಸದಾಗಿ ಹರಡಿರುವರೋ ಎನ್ನುವಂತೆ ಸತ್ತು ಬಿದ್ದ ಆನೆಗಳ ಹಿಂಡು ಕಾಣುತ್ತಿತ್ತು.

ದೃಷ್ಟಾಂತಾಲಂಕಾರ

ವರ್ಣಿಸುವ ವಿಷಯಕ್ಕೆ ಬೇರೊಂದು ವಿಷಯದ ದೃಷ್ಟಾಂತವು ಪ್ರತಿಬಿಂಬದ ಹಾಗೆ ಕಾಣುವಂತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು.

ಉದಾಹರಣೆ :

ಊರು ಉಪಕಾರ ಅರಿಯದುಹೆಣ ಶೃಂಗಾರ ಅರಿಯದು.

ಅರ್ಥಾಂತರನ್ಯಾಸಾಲಂಕಾರ

ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ ಅರ್ಥಾಂತರನ್ಯಾಸಾಲಂಕಾರ ಎನಿಸುವುದು.

ಉದಾಹರಣೆ :

ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನುಬುದ್ಧಿವಂತರಾದ ಮಕ್ಕಳಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದು ಕಷ್ಟವೇನಲ್ಲ

ಈ ಮೇಲಿನ ಉದಾಹರಣೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದವನು ಬುದ್ದಿವಂತನಾಗಿರುತ್ತಾನೆಅಥವಾ ಬುದ್ಧಿವಂತನಾದವನು ಪ್ರಥಮ ಸ್ಥಾನವನ್ನು ಪಡೆಯುತ್ತಾನೆ ಎಂದು ಎರಡೂ ವಾಕ್ಯಗಳು ಒಂದಕ್ಕೊಂದು ಸಮರ್ಥನೆ ಮಾಡಿಕೊಳ್ಳುತ್ತವೆ.

ಶ್ಲೇಷಾಲಂಕಾರ

ಒಂದು ಶಬ್ದವು ಒಂದು ವಾಕ್ಯದಲ್ಲಿ ಪ್ರಯೋಗವಾದಾಗ ಬೇರೆ ಬೇರೆ ಅರ್ಥಗಳನ್ನು ಕೊಡುವಂತಿದ್ದರೆ ಅದು ಶ್ಲೇಷಾಲಂಕಾರವೆನಿಸುವುದು.

ಉದಾಹರಣೆ :

ನಂಬಿ ಕರೆದರೆ ಓ ಎನ್ನನೇ ಶಿವನು

ಇಲ್ಲಿ ನಂಬಿಯಣ್ಣ ಎಂಬ ಶಿವ ಭಕ್ತನು ಕರೆದರೆ ಶಿವನು ಬಾರದಿರುವನೇ ಎಂಬ ಅರ್ಥವೂನಂಬಿಕೆಯಿಟ್ಟು ಕರೆದರೆ ಶಿವನು ಬಾರದಿರುವನೇ ಎಂಬ ಅರ್ಥವೂ ಏಕಕಾಲದಲ್ಲಿ ಈ ಅಲಂಕಾರದಲ್ಲಿ ಮೂಡಿಬಂದಿವೆ.

ಶಬ್ದಾಲಂಕಾರಗಳು

ಶಬ್ದ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರವೆನ್ನುವರು. ಇದರಲ್ಲಿ ಮೂರು ವಿಧ

ಅನುಪ್ರಾಸ

ವೃತ್ತ್ಯನುಪ್ರಾಸ : ಒಂದು ಸಾಲಿನಲ್ಲಿ ಒಂದೇ ಅಕ್ಷರವು ಒಂದಕ್ಕಿಂತ ಹೆಚ್ಚು ಬಾರಿ ಪುನರಾವರ್ತನೆಗೊಂಡು ಅದರಿಂದ ಕಾವ್ಯದ ಸೌಂದರ್ಯ ಹೆಚ್ಚಾದರೆ ಅದನ್ನು ಎನ್ನುವರು.

ತುಪ್ಪದ ಮಾತಿಗೆ ಒಪ್ಪಿಕೊಂಡು ತಿಪ್ಪೆಪಾಲಾದ

ತುಂಟನಾದವ ಮಂಟಪದಲ್ಲಿ ಕೂತರೂ ತಂಟೆ ಬಿಡಲಾರ

ಛೇಕಾನುಪ್ರಾಸ : ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದವು ಪುನಃ ಪುನಃ ಪದ್ಯದಲ್ಲಿ ಬಂದಿದ್ದರೆ ಅದು ಛೇಕಾನುಪ್ರಾಸವೆನಿಸುವುದು

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ

ಯಮಕಾಲಂಕಾರ

ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋಪದಭಾಗವೋ ಒಂದು ಪದ್ಯದ ಆದಿಮಧ್ಯಅಂತ್ಯ ಸ್ಥಾನಗಳಲ್ಲಿ ಎಲ್ಲಿಯಾದರೂ ನಿಯತವಾಗಿ ಬಂದಿದ್ದರೆ ಅದು ಯಮಕಾಲಂಕಾರವೆನಿಸುವುದು.

ಬರಹೇಳ್ ನಿಕುಂಭನಂ ಶುಂಭನಂ ಜಂಭನಂ

ಬರಹೇಳ್ ಸಶಬಲನಂಪ್ರಬಲನಂಸುಬಲನಂ

ಚಿತ್ರಕವಿತ್ವ

ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ

ನನ್ದನ ನನ್ದನ ನುನ್ನೊನ್ದನ

ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ

ಕಾಮೆಂಟ್‌ಗಳು