ದಾಸ ಸಾಹಿತ್ಯ
ದಾಸ ಸಾಹಿತ್ಯ
ಪ್ರಮುಖ ಕೀರ್ತನಕಾರರ
ಕೃತಿಗಳು, ಕೀರ್ತನೆಗಳು
ಮತ್ತು ಅಂಕಿತನಾಮಗಳು
ನರಹರಿ ತೀರ್ಥರು - (ಕಾಲ
ಸು.1280 -1333)
ಅಂಕಿತನಾಮ : ಶ್ರೀ ರಘುಪತಿ, ನರಹರಿಪೂರ್ಣ
ಮೂಲನಾಮ ಸ್ವಾಮಿಶಾಸ್ತ್ರಿ
ದಾಸಸಾಹಿತ್ಯ ಪಿತಾಮಹಾ ಎಂದೇ ಖ್ಯಾತಿವೆತ್ತರು
ಪ್ರಮುಖ ಕೀರ್ತನೆಗಳು
"ಎಂತು ಮರುಳಾದೆ ನಾನೆಂತು
ಮರುಳಾದೆ"
"ಹರಿಯೇ ಇದು ಸರಿಯೇ ಚರಣ
ಸೇವಕನಲ್ಲಿ ಕರುಣ ಬಾರದ್ಯಾಕೆ"
ಶ್ರೀ ಪಾದರಾಯ - (ಕಾಲ ಸು. 1404 -1502)
ಅಂಕಿತನಾಮ : ರಂಗವಿಠಲ
ನಿಜನಾಮ ಲಕ್ಷ್ಮೀನಾರಾಯಣ ಮುನಿ
ಕೃತಿಗಳು : ಭ್ರಮರಗೀತೆ, ವೇಣುಗೀತೆ ಮತ್ತು ಗೋಪಿಗೀತೆ
ಪ್ರಮುಖ ಕೀರ್ತನೆಗಳು
"ಭಕ್ತಿಬೇಕು, ವಿರಕ್ತಿಬೇಕು, ಶಕ್ತಿಬೇಕು ಮುಂದೆ ಮುಕ್ತಿ
ಬಯಸುವವಗೆ"
"ಹೆತ್ತ ಮಕ್ಕಳು ಹುಚ್ಚರಾದರೆ
ತಾಯ್ತಂದೆ ಎತ್ತದೆ ನೆಲಕೆ ಬಿಸುಡುವರೆ"
"ಯಾಕೆ ಪುಟ್ಟಿಸಿದೆ ನೀ
ಸಾಕಲಾರದೆ"
"ನಾ ನಿನಗೇನು ಬೇಡುವುದಿಲ್ಲ, ಎನ್ನ ಹೃದಯ ಮಂಟಪದೊಳು"
"ಶಿರ ನಿನ್ನ ಚರಣದಲ್ಲೆರಗಲಿ"
ವ್ಯಾಸರಾಯರು - (ಕಾಲ ಸು. 1447 - 1539)
ಅಂಕಿತನಾಮ : ಶ್ರೀ ಕೃಷ್ಣ
ಮೂಲನಾಮ ಯತಿರಾಜ
ಪ್ರಮುಖ ಕೀರ್ತನೆಗಳು
"ದಾವಾನಲನ ತಪ್ಪಿಸಿ ಕಾಡಾನೆಯ
ದೇವಗಂಗೆಗೆ ತಂದು ಹೊಗಿಸಿದಂತೆ"
"ಗಾತ್ರವೇ ಮಂದಿರ, ಹರಿದಯವೇ ಮಂಟಪ, ನೇತ್ರವೇ ಮಹಾದೀಪ"
ವಾದಿರಾಜರು - (ಕಾಲ ಸು. 1480 - 1600)
ಅಂಕಿತನಾಮ : ಹಯವದನ
ನಿಜನಾಮ ಭೂವರಾಹ
ಕೃತಿಗಳು : ಲಕ್ಷ್ಮೀ ಶೋಭಾನೆ, ವೈಕುಂಠ ವರ್ಣನೆ,
ಸ್ವಪ್ನಪದ, ಕೀಚಕವಧ, ಕೇಶವನಾಮ, ಗುಂಡಕ್ರಿಯೆ, ಹಯವದನ ಮುದ್ರಿಕೆ, ಮತ್ತು ಭಾರತ ತಾತ್ಪರ್ಯ
ನಿರ್ಣಯ
ಪುರಂದರದಾಸರು - (ಕಾಲ ಸು. 1480 - 1564)
ಅಂಕಿತನಾಮ : ಪುರಂದರ ವಿಠಲ
ಮೊದಲ ಹೆಸರು ಶ್ರೀನಿವಾಸ ನಾಯಕ
ದಾಸರೆಂದರೆ ಪುರಂದರದಾಸರಯ್ಯ ಎಂದು ವ್ಯಾಸರಾಯರಿಂದ
ಹೊಗಳಿಸಿಕೊಂಡ ದಾಸಶ್ರೇಷ್ಠರು
ಪ್ರಮುಖ ಕೀರ್ತನೆಗಳು
"ನಗೆಯು ಬರುತಿದೆ ಎನಗೆ ನಗೆಯು
ಬರುತಿದೆ"
"ತನುವ ನೀರೊಳಗದ್ದಿ ಫಲವೇನು"
"ಬೇವುಬೆಲ್ಲದೊಳಿಡಲೇನು ಫಲ"
"ಮೂರ್ಖರಾದರು ಜನರು
ಲೋಕದೊಳಗೆ"
"ಮಡಿಮಡಿ ಮಡಿಯೆಂದು ಅಡಿಗಡಿ
ಹಾರುವಿ"
"ಜಾಲಿಯ ಮರದಂತೆ ಧರೆಯೊಳು
ದುರ್ಜನರು''
"ಹೊಲೆಯ ಹೊರಗಿಹನೆ
ಊರೊಳಗಿಲ್ಲವೇ"
"ಮಲವ ತೊಳೆಯಬಲ್ಲರಲ್ಲದೆ ಮನವ
ತೊಳೆಯಬಲ್ಲರೆ"
"ಉದರ ವೈರಾಗ್ಯವಿದು ನಮ್ಮ
ಪದುಭನಾಮನಲಿ ಲೇಶ ಭಕ್ತಿಯು ಇಲ್ಲ"
"ಒಲ್ಲೆನೆ ವೈದಿಕ ಗಂಡನ"
"ಬೇನೆ ತಾಳಲಾರೆ ಬಾಯೆನ್ನ
ಗಂಡ"
"ತಾಳಿಯ ಹರಿದು ಬೀಸಾಟೆ"
"ಕೇಳನೋ ಹರಿ ತಾಳನೋ"
"ಇಬ್ಬರೆಂಡಿರ ಸುಖವ ಇಂದು
ಕಂಡೆನೆಯ್ಯ"
''ಈಸಬೇಕು ಇದ್ದು ಜಯಿಸಬೇಕು"
"ಮಾನವ ಜನ್ಮ ದೊಡ್ಡದು
ಹುಚ್ಚಪ್ಪಗಳಿರ"
"ಸ್ನಾನವ ಮಾಡಿರೋ
ಜ್ಞಾನತೀರ್ಥದಲಿ"
"ಸಕಲವೆಲ್ಲವೂ
ಹರಿಸೇವೆಯನ್ನಿ"
"ಧರ್ಮವೇ ಜಯವೆಂಬ
ದಿವ್ಯಮಂತ್ರ"
"ಎಚ್ಚರದಲಿ ನಡೆ ಮನವೇ"
"ಇನ್ನಾದರೂ ನಿನಗೆ ತಿಳಿಯದೆ"
"ಬ್ರಾಹ್ಮಣನೆಂದರೆ ಬ್ರಹ್ಮನ
ತಿಳಿದವ"
"ಕಲ್ಲಾಗಿ ಇರಬೇಕು
ಕಠಿಣಭವತೊರೆಯೊಳಗೆ ಬಿಲ್ಲಾಗಿ ಇರಬೇಕು ಬಲ್ಲವರೊಳಗೆ"
"ಅವ ಕುಲವಾದರೇನು
ಆವನಾದರೇನು"
"ಕುಲದ ಮೇಲೆ ಹೋಗಬೇಡ, ಕುಲವಿಲ್ಲ ಜ್ಞಾನಿಗಳಿಗೆ"
"ವಿಧಿನಿಷೇಧ
ನಿನ್ನವರಿಗೆಂತೋ"
"ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ
ಬೀಜವ ಬಿತ್ತಿ ಜೇನುಮಳೆಗರೆದರೆ ವಿಷ ಹೋಗುವುದೇನಯ್ಯ"
"ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ"
"ಕಿಚ್ಚಿಗೆ ಇರುವೆ ಮುತ್ತುವುದೇ, ಗಾಳಿಗೆ ಗಿರಿ ನಡುಗುವುದೇ"
"ಧರ್ಮವೇ ಜಯವೆಂಬ ದಿವ್ಯಮಂತ್ರ
ಮರ್ಮವನು ತಿಳಿದು ಆಚರಿಸುವುದು ಕೇಳಿ"
ಕನಕದಾಸರು - (ಕಾಲ ಸು. 1508 -1606)
ಅಂಕಿತನಾಮ : ಕಾಗಿನೆಲೆ ಅದಿಕೇಶವ
ಮೂಲ ಹೆಸರು ತಿಮ್ಮಣ್ಣನಾಯಕ (ಕನಕನಾಯಕ)
ಕೃತಿಗಳು ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ನಳಚರಿತ್ರೆ, ಮೋಹನತರಂಗಿಣಿ, ನರಸಿಂಹಸ್ತವ
ತನ್ನ ಸಾಂಗತ್ಯ ಕೃತಿ ಮೋಹನತರಂಗಿಣಿಯನ್ನು ಕುರಿತು
"ಹರಿಶರಣರ ಪೆರ್ಚು, ಬುಧಜನರಿಗೆ
ಮೆಚ್ಚು, ದುರಿತಾಟವಿಗೆ ಕಾಳ್ಗಿಚ್ಚು, ವಿರಹಿಗಳಿಗೆ ಮೆಚ್ಚು, ಕೇಳ್ವರಿಗಿದು
ತಣಿಬೆಲ್ಲದಚ್ಚು" ಎಂದು ಹೇಳಿಕೊಂಡಿದ್ದಾನೆ.
ಹರಿಭಕ್ತಿಸಾರ ಮತ್ತು ನಳಚರಿತ್ರೆ ಭಾಮಿನಿ ಷಟ್ಪದಿಯಲ್ಲಿ
ರಚಿತವಾದ ಕಾವ್ಯಗಳು.
ರಾಮಧಾನ್ಯ ಚರಿತೆ ಒಂದು ಖಂಡ ಕಾವ್ಯ
ಪ್ರಮುಖ ಕೀರ್ತನೆಗಳು
"ಏನೂ ಇಲ್ಲದ ಎರಡು ದಿನದ
ಸಂಸಾರ"
"ತನು ನಿನ್ನದು ಜೀವನ
ನಿನ್ನದು"
"ತಲ್ಲಣಿಸದಿರು ಕಂಡ್ಯ ತಾಳು
ಮನವೆ"
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ"
"ನನ್ನಿಂದ ನಾನೇ ಜನಿಸಿ
ಬಂದೆನು"
"ಪಂಚೇಂದ್ರಿಯಗಳೆಂಬ ಮಂಚಿಕೆಯ
ಹಾಕಿರಯ್ಯ"
"ನಾಯಿ ಬಾಯಿ ಅರಿವೀಯಂತೆ ನಾನಾ
ಕೋಟಲೆಯಲಿ ಬಿದ್ದು"
"ಕುಲಕುಲವೆನ್ನುತಿಹರು
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ"
ವೈಕುಂಠದಾಸರು - (ಕಾಲ ಸು. 1500)
ಪ್ರಮುಖ ಕೀರ್ತನೆಗಳು
ಅಂಕಿತನಾಮ : ವೈಕುಂಠ ಕೇಶವ
''ಮಸುಮತಿಯ ಸುರವಧೆ ಘನವಾಯಿತಲ್ಲ''
''ಮಾಡು ದಾನ ಧರ್ಮ ಪರಉಪಕಾರ''
''ಏನು ನೆಲೆಯೆನುತಿಹೆ ಮನುಜ''
''ಸತ್ಯಂ ವದ ಧರ್ಮಂ ಚರ''
''ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ''
ರಾಘವೇಂದ್ರ ತೀರ್ಥರು -
(ಕಾಲ ಸು. 1595- 1671)
ಪ್ರಮುಖ ಕೀರ್ತನೆಗಳು
ಅಂಕಿತನಾಮ : ವೇಣುಗೋಪಾಲ
ಇಂದು ಎನಗೆ ಗೋವಿಂದ
ಮಾರುತ ನಿನ್ನಯ ಮಹಿಮೆ - ಸುಳಾದಿ
ಪ್ರಸನ್ನ ವೆಂಕಟದಾಸರು -
(ಕಾಲ ಸು.1680)
ಪ್ರಮುಖ ಕೀರ್ತನೆಗಳು
ಅಂಕಿತನಾಮ : ಪ್ರಸನ್ನ
ವೆಂಕಟಕೃಷ್ಣ
"ಬಿಡೆನೋ ನಿನ್ನಂಘ್ರಿ
ಶ್ರೀನಿವಾಸ"
"ಶ್ರೀಲೋಲನಂಘ್ರಿ ಸಂಬಂಧ
ಕೈಗೂಡಿ"
"ತೊಲ ತೊಲಗೆಲೊ ಕಲಿ ನಿಲ್ಲರಿಲ್ಲಿ''
"ಅರಿಗಳೇ ಸಖರಕ್ಕು
ಅತಿವಿಷಾಮೃತಮಕ್ಕು"
ವಿಜಯದಾಸರು - (ಕಾಲ ಸು 1683 - 1755)
ಅಂಕಿತನಾಮ : ವಿಜಯ
ವಿಠಲ, ಹಯವದನ ವಿಠಲ
ಮೂಲ ಹೆಸರು ದಾಸಪ್ಪ
ಪ್ರಮುಖ ಕೀರ್ತನೆಗಳು
"ಸದಾ ಎನ್ನ ಹೃದಯದಲ್ಲಿ ವಾಸಮಾಡೋ
ಹರಿಯೇ"
"ನಿನ್ನ ನಾನು ಬಿಡುವವನಲ್ಲ, ಎನ್ನ ನೀನು ಬಿಡಲು ಸಲ್ಲ"
"ಅಂತರಂಗದ ಕದವು
ತೆರೆಯಿತೆಂದು"
"ಹರಿ ಸರ್ವೊತ್ತಮ ವಾಯು
ಜೀವೊತ್ತಮ"
"ಪವಮಾನ ಪವಮಾನ ಜಗದ ಪ್ರಾಣಾ
ಸಂಕರುಷಣಾ ಭವಭಯ ರಣ್ಯಾ ಧಹನಾ ಪವನಾ"
"ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರಿಯಾ"
ಗೋಪಾಲದಾಸರು - (ಕಾಲ ಸು. 1722 - 1765)
ಅಂಕಿತನಾಮ : ಗೋಪಾಲ
ವಿಠಲ
ಮೂಲ ಹೆಸರು ಭಾಗಣ್ಣ
"ಭಕ್ತಿಯಲ್ಲಿ ಭಾಗಣ್ಣ ಎಂದೇ
ಖ್ಯಾತರಾದರು"
ಪ್ರಮುಖ ಕೀರ್ತನೆಗಳು
"ಆವ ರೋಗವು ಎನಗೆ ದೇವ
ಧನ್ವಂತ್ರಿ"
"ಹರಿಮೂರ್ತಿಗಳು ಎನ್ನ ಕಣ್ಣುಗಳಿಗೆ
ಕಾಣಿಸವು"
"ಏನ ಬೇಡಲಿ ನಿನ್ನ ಬಳಿಗೆ
ಬಂದು"
"ರಥವಾನೇರಿದ ರಾಘವೇಂದ್ರ"
"ವೈರಾಗ್ಯ ಮಾರ್ಗ ಕೇಳು"
"ಆವ ರೋಗವೋ ಎನಗೆ
ಧನ್ವಂತ್ರಿ"
"ಬಾರಯ್ಯ ಬಾ ಬಾ ಬಕುತರ
ಪ್ರಿಯ"
"ಎನ್ನ ಭಿನ್ನಪ ಕೇಳೋ ಧನ್ವಂತ್ರಿ
ದಯಮಾಡೊ"
"ಹ್ಯಾಂಗೆ ಮಾಡಲಯ್ಯ
ಹೋಗುತಿದೆ"
ಜಗನ್ನಾಥ ದಾಸರು - (ಕಾಲ
ಸು. 1728 - 1809)
ಅಂಕಿತನಾಮ : ಜಗನ್ನಾಥ
ವಿಠಲ
ಮೊದಲ ಹೆಸರು ಶ್ರೀನಿವಾಸ
ಈತನು ಹರಿಕಥಾಮೃತಸಾರ ಎಂಬ ಕೃತಿಯನ್ನು ಬರೆದಿದ್ದಾನೆ.
ಪ್ರಮುಖ ಕೀರ್ತನೆಗಳು
"ಎನ್ನಂಥ ಭಕ್ತರು ಅನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ"
"ರಾಮನ ನೋಡಿರೈ ನಿಮ್ಮಯ ಕಾಮಿತ
ಬೇಡಿರೈ"
"ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ"
"ಆವ ಕುಲದವನಾದಡೇನಿನ್ನಾವ
ದೇಶದೊಳಿದ್ದಡೇನಿ"
"ಕಂಡ ಕಂಡಲ್ಲಿ ವಿಶ್ವರೂಪ
ಕಾಂಬರು"
"ಅರಿತವರಿಗತಿಸುಲಭ ಹರಿಯ
ಪೂಜೆ"
"ಉಂಡು ಉಟ್ಟದ್ದೆಲ್ಲ ಹರಿಯ ಸೇವೆಯನ್ನಿ"
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ