ಸಂಶೋಧನಾ ಸಾಹಿತಿಗಳು 2

ಸಂಶೋಧನಾ ಸಾಹಿತಿಗಳು ಭಾಗ -2

ಎಚ್ ಸಿ ನಂದೀಮಠ (1903-1975)

ಪ್ರಮುಖ ಕೃತಿಗಳು : ಕರ್ನಾಟಕ ಧರ್ಮಗಳು, ಕವಿಕರ್ಣ ರಸಾಯನ, ಕನ್ನಡ ಕುವಲಯಾನಂದ, ಧಮ್ಮಪದ, ಗಿರಿಜಾ ಕಲ್ಯಾಣ, ಶೂನ್ಯ ಸಂಪಾದನೆ, ಶೈವ ಸಿದ್ಧಾಂತ, ಹ್ಯಾಂಡ್ಬುಕ್ ಆಫ್ ವೀರಶೈವಿಸಮ್

ಶಾಸನ  ಪ್ರಬಂಧ ಅರ್ಜುನವಾಡ ಶಾಸನಗುಮ್ಮಳಾಪುರ ಶಾಸನಚೌಡಪುರ ಶಾಸನ

1952 ರಲ್ಲಿ ಬೇಲೂರಿನಲ್ಲಿ ನಡೆದ 35 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಡಿ ಕೆ ಭೀಮಸೇನರಾವ್ (1904-1969)

ಸಂಪಾದನೆ :  ಶಬ್ದಮಣಿದರ್ಪಣ, ಪಂಚತಂತ್ರ, ಯುದ್ಧ ಪಂಚಕ, ಚಾಯಣ ಭಾಷ್ಯಂ, ಸುಕುಮಾರ ಭಾರತಿ

ಸಂಶೋಧನಾ ಸಾಹಿತ್ಯ ಕರ್ನಾಟಕಾಂದ್ರ ಮಹಾರಾಷ್ಟ್ರ ಸಾಹಿತ್ಯಾವಲೋಕನಅವಲೋಕನ ಸಂಶೋಧನಾ

ಅನುವಾದ : ಶತಮೂರ್ಖರು

ಕವನ ಸಂಕಲನ : ಹೂಮಾಲೆ

 

ಡಿ ಎಲ್ ನರಸಿಂಚಾರ್ (1906-1971)

ಸಂಪಾದನೆ : ಸಕಲ ವೈದ್ಯ ಸಂಹಿತಾ ಸಾರಾರ್ಣವ, ಪಂಪರಾಮಾಯಣ ಸಂಗ್ರಹ, ವಡ್ಡಾರಾದನೆ, ಗೋವಿನ ಹಾಡು, ಸಿದ್ಧರಾಮ ಚರಿತೆಯ ಸಂಗ್ರಹ, ಸಿದ್ಧರಾಮ ಚಾರಿತ್ರ್ಯ, ಸುಕುಮಾರ ಚರಿತೆ, ಕುಮಾರವ್ಯಾಸ ಭಾರತದ ಭೀಷ್ಮಪರ್ವ, ಶಬ್ದಮಣಿದರ್ಪಣಂ, ಹಂಪೆಯ ಹರಿಹರ.

ಸಂಶೋಧನಾ ಕೃತಿಗಳು : ಶಬ್ದವಿಹಾರ (ಪ್ರಾಚೀನ ಸಾಹಿತ್ಯದ ಶಬ್ದಾರ್ಥ ವಿಚಾರಗಳ ಕುರಿತಾದ ಗ್ರಂಥ), ಕನ್ನಡ ಗ್ರಂಥ ಸಂಪಾದನೆ, ಪಂಪಭಾರತ ದೀಪಿಕೆ, ಪೀಠಿಕೆಗಳು - ಲೇಖನಗಳು.

ವಿಮರ್ಶಾ ಲೇಖನಗಳು : ಜನ್ನನೂ ವಾದಿರಾಜನೂ, ಕುಮಾರವ್ಯಾಸನ ದೃಷ್ಟಿಯಲ್ಲಿ ಕರ್ಣ, ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ, ಮಾನಸೋಲ್ಲಾಸದಲ್ಲಿ ಛಂದಸ್ಸು, ಕುಮುದೇಂದು ರಾಮಾಯಣದ ಪರಿಷ್ಕರಣ ವಿಚಾರ, ಬಸವಣ್ಣನವರ ಕೆಲವು ವಚನಗಳ ಪಾಠ, ಕನ್ನಡದಲ್ಲಿ ಶಬ್ದರಚನೆ, ಲಕ್ಮ್ಷೀಶನ ಕಾಲ, ಅಭಿನವ ಪಂಪ, ಸಾಹಿತ್ಯ ಚರಿತ್ರೆಯ ಸ್ವರೂಪ.

ಅಭಿನಂದನಾ ಗ್ರಂಥಗಳು : ಜ್ಞಾನೋಪಾಸಕ ಮತ್ತು ಉಪಾಯನ

1960 ರಲ್ಲಿ ಬೀದರ್ ನಲ್ಲಿ ನಡೆದ 41 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಎಂ ಮರಿಯಪ್ಪ ಭಟ್ಟ (1906-1980)

ಕಿಟೆಲ್ ನಿಘಂಟನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿ   ಅಭಿನವ ಕಿಟೆಲ್ ಎಂಬ ಹೆಸರಿಗೆ ಪಾತ್ರರಾದರು.

ಸಂಪಾದನೆ : ಮಂಗರಾಜನ ಅಭಿನವಾಭಿದಾನಂ, ಸೆಲೆಕ್ಟೆಡ್ ಕನ್ನಡ ಇನ್ಸ್ಕ್ರಿಪ್ಷನ್ಸ್, ಅಚಣ್ಣನ ವರ್ಧಮಾನ ಪುರಾಣಂ, ಪಾರ್ಶ್ವನಾಥ ಪುರಾಣಂ, ಶ್ರೀಧರಾಚಾರ್ಯನ ಜಾತಕ ತಿಲಕಂ, ಚಿಕುಪಾಧ್ಯಾಯನ ವಿಷ್ಣುಪುರಾಣಂ, ಹಳಗನ್ನಡ - ನಡುಗನ್ನಡ ಕಾವ್ಯ ಸಂಗ್ರಹ, ಹೊಸಗನ್ನಡ - ನಡುಗನ್ನಡ ಕಾವ್ಯ ಸಂಗ್ರಹ, ಹೊಸಗನ್ನಡ ಕಾವ್ಯಶ್ರೀ, ನಾಲ್ನುಡಿ - ನಾಣ್ಣುಡಿ, ಸರ್ವಜ್ಞನ ವಚನ ಸಂಗ್ರಹ, ಖಗಮಣಿ ದರ್ಪಣ, ಗುಣಚಂದ್ರನ ಛಂದಸ್ಸಾರ, ಸಂಗೀತ ರತ್ನಾಕರ, ಗುರುಬಸವನ ಸದ್ಗುರು ರಹಸ್ಯ, ರಾಜಾದಿತ್ಯನ ವ್ಯವಹಾರ ಗಣಿತ.

ಸಂಶೋಧನಾ ಲೇಖನಗಳ ಸಂಗ್ರಹ : ದ್ರಾವಿಡಿಕ್ ಸ್ಟಡೀಸ್

ಅನುವಾದ : ಸಂತರ ಚರಿತ್ರೆ

ಇತರ ಪ್ರಮುಖ ಕೃತಿಗಳು : ಕನ್ನಡ ಸಂಸ್ಕೃತಿ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಕೇಶೀರಾಜ

 

ಸ ಸ ಮಾಳವಾಡ (1910-1987)

ವಿಮರ್ಶೆ : ಕರ್ನಾಟಕ ಸಾಹಿತ್ಯ - ಸಂಸ್ಕೃತಿ ದರ್ಶನ, ಸಾಹಿತ್ಯ ಸಮಾಲೋಚನೆ, ಸಾಹಿತ್ಯ ಸಂಗಮ, ಸಾಹಿತ್ಯ ದೃಷ್ಟಿ, ಪುಸ್ತಕ ಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನ ದರ್ಶನ, ಹರಿಹರ ರಾಘವಾಂಕರು ಕಾವ್ಯ ಮತ್ತು ಜೀವನ ಚಿತ್ರಣ, ಕವೀಂದ್ರ ರವೀಂದ್ರರು, ಷಡಕ್ಷರಿ

ಸಂಪಾದನೆ : ಕನ್ನಡ ಗದ್ಯಮಾಲೆ, ರಾಘವಾಂಕ ಚರಿತ್ರೆ, ಶ್ರೀ ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಪದ ಮಂಜರಿ (ಕಾವ್ಯ ನಿಘಂಟು),  ಸಂಗೀತ ರತ್ನ ಮುಂತಾದವು

ವೈಚಾರಿಕ ಬರಹ : ಸಂಸ್ಕೃತಿ, ಕಾಲವಾಹಿನಿ, ದೃಷ್ಟಿಕೋನ, ನಾಲ್ಕು ಭಾಷಣಗಳು, ಸುವಿಚಾರ ಸಂಗಮ   ಮುಂತಾದವು

ಪ್ರವಾಸ ಕಥನ : ಪಯಣದ ಕತೆ, ಸಂಚಾರ ಸಂಗಮ

ಆತ್ಮಕೃತಿ : ಹಳ್ಳಿಯ ಹುಡುಗ, ದಾರಿ ಸಾಗಿದೆ

ಐತಿಹಾಸಿಕ: ಸ್ವಾದಿ ಅರಸು ಮನೆತನ

 

ಸಂ ಶಿ ಭೂಸನೂರಮಠ (1910-1990)

ಸಂಪಾದನೆ : ವಚನ ಸಾಹಿತ್ಯ ಸಂಗ್ರಹ, ಭಕ್ತಿ ಸುಧಾಸಾರ, ಸಿದ್ಧನಂಜೇಶನ ಗುರುರಾಜ ಚರಿತ್ರೆ, ಮೋಳಿಗೆಯ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನವರ ವಚನಗಳು, ಗೌರಾಂಕ ಮೋಳಿಗೆಯ್ಯನ ಪುರಾಣ, ಅದೃಶ್ಯ ಕವಿಯ ಪ್ರೌಢರಾಯನ ಕಾವ್ಯ, ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ, ಮಹಾಲಿಂಗದೇವರ ಏಕೋತ್ತರ ಶತಸ್ಥಲ. ಭಕ್ತಿ ಸುಧಾಸಾರ, ಮೋಳಿಗಯ್ಯನ ಪುರಾಣ, ಲಿಂಗ ಲೀಲಾ ವಿಲಾಸ ಚಾರಿತ್ರ್ಯ

ಮಹಾಕಾವ್ಯ : ಭವ್ಯ ಮಾನವ (ಅಕ್ಕಮಹಾದೇವಿ - ಪಂಪ ಪ್ರಶಸ್ತಿ)

ವಿಮರ್ಶೆ : ಪರಾಮರ್ಶೆಯ ವಿಮರ್ಶೆ, ಶೂನ್ಯ ಸಂಪಾದನೆಯ ಪರಾಮರ್ಶೆ (ಕೇಂದ್ರ ಸಾಹಿತ್ಯ ಅಕಾಡೆಮಿ), ಕಲ್ಯಾಣದಿಂದ ಕಾಶ್ಮೀರಕ್ಕೆ

 

ಎಚ್ ದೇವೀರಪ್ಪ (1913-1988)

ಕಾದಂಬರಿ : ಬೆಳವಲದ ಮಡಿಲಲ್ಲಿ, ಹಳ್ಳಿಯ ಬದುಕು

ನಾಟಕಗಳು : ಕಲಾಯೋಗಿ, ತುಂಗಭದ್ರ

ಕಥಾಸಂಕಲನ : ಸುವರ್ಣ ಸಂಪುಟ

ಸಂಪಾದನೆ : ಬಸವರಾಜ ಚಾರಿತ್ರ್ಯ, ರಾಮನಾಥ ಚಾರಿತ್ರ್ಯ, ಸಿಂಗಿರಾಜ ಪುರಾಣ, ಗಿರಿಜಾ ಕಲ್ಯಾಣ ಮಹಾಪ್ರಬಂಧ, ಅಜಿತ ತೀರ್ಥಂಕರ ಪುರಾಣ ತಿಲಕಂ, ಇಂದ್ರಕೀಲ, ಹರಿಹರನ ರಗಳೆಗಳು, ಹರಿಹರನ ಮೂರು ಪುರಾತನರು, ಜನ್ನನ ಅನಂತನಾಥ ಪುರಾಣ, ಜೇಡರ ದಾಸಿಮ್ಮಯ್ಯನ ವಚನಗಳು, ಸವಿಗನ್ನಡ ಪಾಠಮಾಲೆ, ವಿಶ್ವಬಂಧು ಮರುಳಸಿದ್ದ ಮತ್ತು ಅವನ ಪರಂಪರೆ, ಕಾವ್ಯ ಸೌಂದರ್ಯ, ಚೆನ್ನವೀರ ಜಂಗಮದೇವನ ಷಟ್ಸ್ಥಲ

ಸಂಶೋಧನೆ : ಶಿವತತ್ವ ಚಿಂತಾಮಣಿ, ಕನ್ನಡ ಹಸ್ತಪ್ರತಿಗಳ ಇತಿಹಾಸ, ಸಂಶೋಧನಾ ಸಂಪುಟ

 

ಜಿ ಎಸ್ ಗಾಯಿ (1917-1995)

ಪಿಎಚ್ ಡಿ ಪ್ರಬಂಧ : A Historical Grammar of Old Kannada; Based entirely on the Kannada Inscriptions of the 8th 9th and 10th centuries A.D

ಅನುವಾದ : ಕಾಳಿದಾಸ, ಭವಭೂತಿ (ಮರಾಠಿಯಿಂದ ಕನ್ನಡಕ್ಕೆ)

ಅಭಿನಂದನಾ ಗ್ರಂಥ : Indian History of Epigraphy

 

ಪದ್ಮನಾಭಶರ್ಮ ಭುವನಹಳ್ಳಿ

ಪ್ರಮುಖ ಕೃತಿಗಳು : ಸತ್ಕ್ರಿಯಾದರ್ಪಣ, ದಯಾದೇವಿ (ಕೂಷ್ಮಾಂಡಿನಿ ಯಕ್ಷಿಯ ಕತೆ - ನೀಳ್ಗತೆ), ಜೈನಧರ್ಮ ಬೋಧ (ಮಕ್ಕಳ ಸಾಹಿತ್ಯ), ಸಮಂತಭದ್ರ ಸಂಗತಿ (ಜ್ವಾಲಾಮಾಲಿನಿ ಮಹಾತ್ಮೆ), ನಲ್ನುಡಿಗನ್ನಡಿ (ಶಬ್ದಮಣಿದರ್ಪಣ ಆಧಾರಿತ ವ್ಯಾಕರಣ ಕೃತಿ)

ಅನುವಾದ : ಛಹಢಾಲ, ಲಘುಜೈನ ಸಿದ್ದಾಂತ ಪ್ರವೇಶಿಕಾ (ಹಿಂದಿಯಿಂದ ಕನ್ನಡಕ್ಕೆ)

 

ಎಲ್ ಬಸವರಾಜು (1919-2012)

ಸಂಪಾದನೆ : ಆದಿಪುರಾಣ, ಪಂಪಭಾರತ, ಶಿವದಾಸ ಗೀತಾಂಜಲಿ, ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ, ಕನ್ನಡ ಛಂದಸ್ಸು ಸಂಪುಟ, ಶಬ್ದಮಣಿ ದರ್ಪಣ, ದೇವರ ದಾಸಿಮಯ್ಯನ ವಚನಗಳು, ಬಸವಣ್ಣನವರ ವಚನಗಳು, ತೊರವೆ ರಾಮಾಯಣ, ಅಲ್ಲಮನ ವಚನಚಂದ್ರಿಕೆ, ಅಕ್ಕನ ವಚನಗಳು, ಅಲ್ಲಮಪ್ರಭು ವಚನಗಳು, ಸರ್ವಜ್ಞನ ವಚನಗಳು, ಶೃಂಗಾರ ನಿದರ್ಶನ, ನರಹರಿ, ಬಸವ ವಚನಾಮೃತ

ಕವನ ಸಂಕಲನ : ಠಾಣಾಂತರ, ಜಾಲರಿ

ಅನುವಾದ : ಭಾಸನ ಭಾರತ ರೂಪಕ, ಅಶ್ವಘೋಷನ ಬುದ್ಧಚರಿತೆ (ಕೇಂದ್ರ ಸಾಹಿತ್ಯ ಅಕಾಡೆಮಿ), ನಾಟಕಾಮೃತ ಬಿಂದುಗಳು (ಸೌಂದರಾನಂದ), ಶೂನ್ಯ ಸಂಪಾದನೆ, ನಿಜಗುಣ ಶಿವಯೋಗಿಗಳು, ಸಿದ್ಧರಾಮ ಚಾರಿತ್ರ್ಯ, ಹರಿಶ್ಚಂದ್ರ ಕಾವ್ಯದ ಗದ್ಯಾನುವಾದ

 

ಆರ್ ಸಿ ಹಿರೇಮಠ (1920-1998)

ಪಿಎಚ್.ಡಿ : Linguistic Investigation of some problems on the relationship of Indo-aryan and Dravidian languages

ಕವನ ಸಂಕಲನ : ಮೌನ ಸ್ಪಂದನ, ಸುಮಾಂಜಲಿ, ಸಮರ ದುಂದುಬಿ

ನಾಟಕ : ಹರಿಶ್ಚಂದ್ರ

ಸಂಪಾದನೆ : ಆದಿಪುರಾಣ, ನೇಮಿನಾಥ ಪುರಾಣ, ಮಲ್ಲಿನಾಥ ಪುರಾಣ, ರಾಮಚಂದ್ರಚರಿತ ಪುರಾಣಂ, ಸೋಮನಾಥ ಚಾರಿತ್ರ್ಯ, ಪ್ರಭುಲಿಂಗಲೀಲೆ, ಪದ್ಮರಾಜಪುರಾಣ, ಬಸವಪುರಾಣ, ರಾಜಶೇಖರ ವಿಳಾಸ ಸಂಗ್ರಹ, ಮೋಹನ ತರಂಗಿಣಿ, ಆರು ಪುರಾತನರ ರಗಳೆಗಳು, ಮಹಲಿಂಗಲೀಲೆ, ಬಸವರಾಜ ವಿಜಯಂ, ತ್ರಿಷಷ್ಟಿ ಪುರಾತನ ಚಾರಿತ್ರ್ಯ, ಕೈವಲ್ಯ ದರ್ಪಣ,  ಕುಂದಣ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ, ಷಟ್ಸ್ಥಲ ಜ್ಞಾನ ಸಾರಾಮೃತ, ಜ್ಯೊತಿ ಬೆಳಗುತಿದೆ, ಪದ್ಮಶ್ರೀ, ವೀರಶೈವ ಚಿಂತಾಮಣಿ, ಮುಕ್ತಿ ಕಂಠಾಭರಣ, ವಿಶೇಷಾನುಭವ ಷಟ್ಸ್ಥಲ, ವೀರಶೈವಾಮೃತ ಪುರಾಣಂ, ಶಿವದೀಪ್ತಿ, ಸಿಂಗಿರಾಜ ಪುರಾಣ, ಅಖಂಡೇಶ್ವರ ವಚನಗಳು, ಅಮುಗೆ ರಾಯಮ್ಮ ಮತ್ತು ಅಕ್ಕಮ್ಮನ ವಚನಗಳು, ಬಸವಣ್ಣನ ವಚನಗಳು, ಸಿದ್ದರಾಮೇಶ್ವರನ ವಚನಗಳು, ನೀಲಮ್ಮನ ವಚನಗಳು, ಲಿಂಗಮ್ಮನ ವಚನಗಳು, ಮಹಾದೇವಿಯಕ್ಕನ ವಚನಗಳು, ಅಲ್ಲಮ ಪ್ರಭುವಿನ ವಚನಗಳು, ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ, ಸಿದ್ದಲಿಂಗ ಯತಿಯ ಶೂನ್ಯ ಸಂಪಾದನೆ

ವಿಮರ್ಶಾ/ಪ್ರಬಂಧ ಕೃತಿಗಳು : ಸಾಹಿತ್ಯ ಸಮಸೃಷ್ಟಿ, ಪಟ್ಸ್ಥಳ ಪ್ರಭ, ಮಹಾಕವಿ ರಾಘವಾಂಕ, ಕವಿ ಪದ್ಮಣಾಂಕ, ಸಾಹಿತ್ಯ ಸಮವೃಷ್ಟಿ, ಬುದ್ಧಿಸಮ್ ಇನ್ ಕರ್ನಾಟಕ (ನಶಿಸಿ ಹೋಗುತ್ತಿರುವ ಬೌದ್ಧಮತ), ಕವಿ ಕಾವ್ಯ ಮಹೋನ್ನತಿ, ಕನ್ನಡ ಶಾಸನ ಸಂಪದ, ಕನ್ನಡ ಗದ್ಯದ ಮುನ್ನಡೆ, ಜಾನಪದ ಸಾಹಿತ್ಯ ದರ್ಶನ, ಕನ್ನಡ ಶಾಸನ ಸಂಪುಟ, ಧರ್ಮದೀಪ್ತಿ, ಅಮೃತ ಬಿಂದುಗಳು, ಬಸವೇಶ್ವರ ವಚನಾಮೃತ, ವೀರಶೈವ ದರ್ಶನ, ಸರ್ವಧರ್ಮ ದರ್ಶನ

ಅನುವಾದ : ಅಸ್ಸಾಮಿ ಸಾಹಿತ್ಯ ಚರಿತ್ರೆ, ರಾಜಶೇಖರ ವಿಳಾಸ, ಜ್ಯೋತಿ ಬೆಳಗುತಿದೆ

ಆತ್ಮಕಥನ : ಉರಿಬರಲಿ - ಸಿರಿಬರಲಿ

 

ಜಿ ಎಸ್ ಅಮೂರ (1925- )

ಇವರು ಕರ್ನಾಟಕದ ಬರ್ನಾಡ್ ಷಾ ಎಂದು ಪ್ರಸಿದ್ಧರಾದವರು

ಪಿ ಹೆಚ್‌ ಡಿ : ದ ಕಾನ್ಸೆಪ್ಟ್ ಆಫ್ ಕಾಮೆಡಿ

ಸಂಪಾದನೆ :  ಶ್ರೀರಂಗ (ಸಮಗ್ರ ಕೃತಿಗಳು),  ಹುಯಿಲುಗೋಳ ನಾರಾಯಣರಾಯ (ಸಮಗ್ರ ಕೃತಿಗಳು)

ವಿಮರ್ಶಾ ಪ್ರಬಂದಗಳು : ಕೃತಿ ಪರೀಕ್ಷೆ, ಭುವನದ ಭಾಗ್ಯ (ಬೇಂದ್ರೆ ಸಾಹಿತ್ಯ ಕುರಿತು - ಕೇಂದ್ರ ಸಾಹಿತ್ಯ ಅಕಾಡೆಮಿ), ಆಧುನಿಕ ಕನ್ನಡ ವಿಮರ್ಶೆ, ಮಹಾಕವಿ ಮಿಲ್ಟನ್, ವ್ಯವಸಾಯ, ಅರ್ಥಲೋಕ, ಕನ್ನಡ ಕಥನ ಸಾಹಿತ್ಯ - ಕಾದಂಬರಿ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ಕಾದಂಬರಿಯ ಸ್ವರೂಪ ಹೊಸ ಚಿಂತನೆ, ದ ರಾ ಬೇಂದ್ರೆ, ಅಮೃತವಾಹಿನಿ, ಶಾಂತಿನಾಥ ದೇಸಾಯಿ, ಬೇಂದ್ರೆ ಕಾವ್ಯದ ಪ್ರತಿಮಾಲೋಕ, ಕಥನ ಶಾಸ್ತ್ರ, ಸೀಮೋಲ್ಲಂಘನ, ಸಮಕಾಲೀನ ಕಥೆ - ಕಾದಂಬರಿ, ಸಣ್ಣಕತೆ, ಕನ್ನಡ ಕಾದಂಬರಿಯ ಬೆಳವಣಿಗೆ, ಆಧುನಿಕ ಕನ್ನಡ ಸಾಹಿತ್ಯದ ವಿರಾಟಪುರುಷ

ಅನುವಾದ : ನೆಹರು

ಸಂಪಾದನೆ : ಅವಳ ಕತೆಗಳುಚಿತ್ತಾಲರ ಆಯ್ದ ಕತೆಗಳು

 

ಎಲ್ ಎಸ್ ಶೇಷಗಿರಿರಾವ್ (1925 - 2019)

ಕಥೆಗಳ ಸಂಕಲನ : ಇದು ಜೀವನ, ಜಗದ ಜಾತ್ರೆಯಲ್ಲಿ, ಮುಟ್ಟಿದ ಗುರಿ ಮತ್ತು ಇತರ ಕಥೆಗಳು, ಮುಯ್ಯಿ

ಸಾಹಿತ್ಯ ವಿಮರ್ಶೆ : ಕಾದಂಬರಿ - ಸಾಮಾನ್ಯ ಮನುಷ್ಯ, ಸಾಹಿತ್ಯ ವಿಶ್ಲೇಷಣೆ, ಹೊಸಗನ್ನಡ ಸಾಹಿತ್ಯ ಚರಿತ್ರೆ, ಸಾಹಿತ್ಯ - ಬದುಕು, ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯ ಪರಂಪರೆಗಳ ಮನೋಧರ್ಮ, ಸಾಹಿತ್ಯದ ಕನ್ನಡಿಯಲ್ಲಿ, ಭಾರತೀಯ ಸಾಹಿತ್ಯ ಸಮೀಕ್ಷೆ, ಒಳನೋಟ, ಪ್ರಿಯ ಕನ್ನಡ ಬಂಧು, ಸಿರಿ ಸಂಪದ, ಅನುಶೀಲನ, ವಿಚಾರ ವಿಮರ್ಶೆ, ಕೃತಿ ಆಕೃತಿ, ಶ್ರೀ ಮಹಾಭಾರತ ಒಂದು ಪಕ್ಷಿನೋಟ, ಸ್ಪಂದನ, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಗ್ರೀಕ್ ರಂಗಭೂಮಿ ಮತ್ತು ನಾಟಕ, ಇಂಗ್ಲಿಷ್ ಸಾಹಿತ್ಯ ಚರಿತ್ರೆ (ಕೇಂದ್ರ ಸಾಹಿತ್ಯ ಅಕಾಡೆಮಿ), ಪಾಶ್ಚಾತ್ಯ ಸಾಹಿತ್ಯ ಲೋಕದಲ್ಲಿ, ಆಲಿವರ್ ಗೋಲ್ಡ್ ಸ್ಮಿತ್, ಫ್ರಾನ್ಜ್ ಕಾಫ್ಕಾ, ವಿಲಿಯಮ್ ಶೇಕ್ಸ್ಪಿಯರ್, ಮಾಸ್ತಿ - ಜೀವನ ಮತ್ತು ಸಾಹಿತ್ಯ, ಟಿ ಪಿ ಕೈಲಾಸಂ, ಎಲ್ ಎಸ್ ಎಸ್ ಕಂಡ ತ ರಾ ಸು, ಕುವೆಂಪು ಸಾಹಿತ್ಯ ಜಗತ್ತಿನಲ್ಲಿ

ಅನುವಾದ : ಇಲಿಯಡ್, ಎರಡು ನಗರಗಳ ಕತೆ, ಒಂದು ಕೊಲೆಯ ವೃತ್ತಾಂತ

ಸಂಪಾದನೆ : ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಕನ್ನಡದ ಅಳಿವು ಉಳಿವು, ಕನ್ನಡ ಭಾರತಿ, ಕಿರಿಯರ ಕರ್ನಾಟಕ, ಅಂತರ ಭಾರತಿ ಪುಸ್ತಕ ಪ್ರದರ್ಶನ, ಕನ್ನಡ ತಾಯಿಗೆ ನುಡಿನಮನ, ಜ್ಞಾನ ಗಂಗೊತ್ರಿ, ಸಪ್ನ ಜ್ಞಾನದೀಪ ಮಾಲೆ, ಸಪ್ನ ದಿವ್ಯ ದರ್ಶನ ಮಾಲೆ, Sixty years of Kannada Poetry, Sixty years of Kannada pose, Sixty years of Kannada Short Story

ನಾಟಕಗಳು : ಆಕಾಂಕ್ಷೆ ಮತ್ತು ಆಸ್ತಿಜೀವನ ಚರಿತ್ರೆಸಾರ್ಥಕ ಸುಬೋಧಎಂ ವಿಶ್ವೇಶ್ವರಯ್ಯ

ಇತರೆ ಪ್ರಮುಖ ಕೃತಿಗಳು : ಬೆಳಕಿನ ದೂತರು, ಚಾರ್ಲ್ಸ್ ಡಿಕನ್ಸ್, A History of English Literature, An introduction to Modern Kannada Literture Etc

2007 ರಲ್ಲಿ ಉಡುಪಿಯಲ್ಲಿ ನಡೆದ 74 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

 

ಜಿ ಎಸ್ ಶಿವರುದ್ರಪ್ಪ (1926 - 2013)

ನವೋದಯ ಹಾಗೂ ನವ್ಯ ಎಂಬ ಈ ಎರಡೂ ಪಂಥಗಳಿಗೆ ಸೇರದ ಕವಿ ಎಂದು ಗುರ್ತಿಸಿಕೊಂಡವರು

ಪಿ ಎಚ್‌ ಡಿ ಪ್ರಬಂಧ : ಸೌಂದರ್ಯ ಸಮೀಕ್ಷೆ

ಕವನ ಸಂಕಲನಗಳು : ಸಾಮಗಾನ, ಚೆಲುವು - ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ತೆರೆದ ದಾರಿ, ಗೋಡೆ, ಕಾಡಿನ ಕತ್ತಲಲ್ಲಿ, ಚಕ್ರಗತಿ, ಎದೆ ತುಂಬಿ ಹಾಡುವೆನು, ಪ್ರೀತಿ ಇಲ್ಲದ ಮೇಲೆ, ತೀರ್ಥವಾಣಿ, ಕಾರ್ತೀಕ, ನನ್ನ ನಿನ್ನ ನಡುವೆ, ವ್ಯಕ್ತ ಮಧ್ಯ.

ವಿಮರ್ಶೆ : ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಗತಿಬಿಂಬ, ಅನುರಣನ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಸೌಂದರ್ಯ ಸಮೀಕ್ಷೆ, ಸಾಹಿತ್ಯ ವಿಮರ್ಶೆ, ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ, ಕುವೆಂಪು : ಪುನರಾವಲೋಕನ, ಸಮಗ್ರ ಗದ್ಯ, ಬೆಡಗು, ನವೋದಯ, ಕುವೆಂಪು - ಒಂದು ಪುನರ್ವಿಮರ್ಶೆ, ಕನ್ನಡ ವಿಮರ್ಶೆ ನೆಲೆ ಬೆಲೆ, ಪ್ರಾಯೋಗಿಕ ವಿಮರ್ಶೆ, ಹಿನ್ನೆಲೆ, ವಿಸ್ತರಣ

ಸಂಪಾದನೆ : ದರ್ಶನ ವಿಮರ್ಶೆ, ಸಾಹಿತ್ಯ ವಾರ್ಷಿಕ, ಹೊಸಗನ್ನಡ ಸಾಹಿತ್ಯದ ಎರಡು ಮಾರ್ಗಗಳು, ವಾಕ್ಯ ಮಾಣಿಕ್ಯ ಕೋಶ, ಪಂಪ ಒಂದು ಅಧ್ಯಯನ, ಸಮಕಾಲೀನ ಕನ್ನಡ ಕವಿತೆ, ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಭಾರತೀಯ ಪರಂಪರೆ, ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ, ಸ್ನೇಹ ಕಾರ್ತೀಕ, ನಾದಸೇತು ಮತ್ತು ಇತರ ನಾಟಕಗಳು, ಮಹಿಳೆ ಮತ್ತು ಕನ್ನಡ ಸಾಹಿತ್ಯ, ಕರ್ನಾಟಕ ಜಾನಪದ, ಕರ್ನಾಟಕ ನಾಟಕ ಪರಂಪರೆ ಮತ್ತು ಪ್ರಯೋಗ, ದಶವಾರ್ಷಿಕ ಸಾಹಿತ್ಯ ಸಮೀಕ್ಷೆ, ಕಾದಂಬರಿಕಾರರಾಗಿ ಕಾರಂತ, ಶ್ರೀನಿಧಿ, ಕುವೆಂಪು ರಸ ಚಿಂತನೆಯ ಮಿಂಚುಗಳು

ಮೀಮಾಂಸಾ ಕೃತಿಗಳು : ಕಾವ್ಯಾರ್ಥ ಚಿಂತನ (ಕೇಂದ್ರ ಸಾಹಿತ್ಯ ಅಕಾಡೆಮಿ), ಮಹಾಕಾವ್ಯ ಸ್ವರೂಪ, ಕನ್ನಡ ಕವಿಗಳ ಕಾವ್ಯ ಕಲ್ಪನೆ

ಅನುವಾದ : ಫಕೀರ ಮೋಹನ ಸೇನಾಪತಿ

ಆತ್ಮಕತೆ : ಚತುರಂಗ

ಪ್ರವಾಸ ಕಥನ : ಮಾಸ್ಕೋದಲ್ಲಿ 22 ದಿನ (ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ), ಅಮೆರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ,  ಗಂಗೆಯ ಶಿಖರಗಳಲ್ಲಿ

ಜೀವನ ಚರಿತ್ರೆ : ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ)

ಇತರ ಪ್ರಮುಖ ಕೃತಿಗಳು : ಕಾವ್ಯಾರ್ಥ ಪದಕೋಶ, ಮಹದೇವ

1992 ರಲ್ಲಿ ದಾವಣಗೆರೆಯಲ್ಲಿ ನಡೆದ 61 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಎನ್ ಬಸವಾರಾಧ್ಯ (1926 - 2001)

ಸಂಪಾದನೆ : ತೊರವೆ ರಾಮಾಯಣ ಸಂಗ್ರಹ, ತ್ರಿಪುರ ದಹನ  ಸಾಂಗತ್ಯ, ಚಂದ್ರಹಾಸನ ಕಥೆ, ಭೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರ, ಹರಿಶ್ಚಂದ್ರ ಸಾಂಗತ್ಯ, ಚೇರಮಕಾವ್ಯಂ, ಸರ್ವಜ್ಞ ವಚನ ಸಂಗ್ರಹ, ಉದ್ಭಟದೇವ ಚರಿತೆ, ವಡ್ಡಾರಾಧನೆ, ಅಬ್ಬಲೂರು ಚರಿತ್ರೆ, ಉದ್ಯೋಗಸಾರ, ಶತಕ ಸಾಂಗತ್ಯ, ಪಂಪಭಾರತ ಸಂಗ್ರಹ, ಗುರುಭಕ್ತಾಂಡರಿ ಚರಿತೆ, ಧರ್ಮನಾಥ ಪುರಾಣ, ಆರಾಧ್ಯ ಚಾರಿತ್ರ್ಯ, ಸಿದ್ಧಲಿಂಗೇಶ್ವರ ಸಾಂಗತ್ಯ, ಚತುರಾಚಾರ್ಯ ಚಾರಿತ್ರ್ಯ.

ಇತರ ಪ್ರಮುಖ ಕೃತಿಗಳು : ಕನ್ನಡ ಗದ್ಯ ವಿಕಾಸ, ಆಯ್ದ ಸಂಸ್ಕೃತ ನಾಟಕ ಕತೆಗಳು, ಕನ್ನಡ ಗದ್ಯಾವಲೊಕನ, ಹಳಗನ್ನಡ ನಿಘಂಟು, ಲೇಖನ ಸಂಚಯ

ಭಾಷಾಂತರ : ಸಚಿತ್ರ ಶಾಲಾ ನಿಘಂಟು, ರಾಘವಾಂಕ

ಮಕ್ಕಳ ಸಾಹಿತ್ಯ : ಜೋತಿಷಿಯ ಮಗ ಮತ್ತು ಕೊಡದಣ್ಣ ಬಿಡದಣ್ಣ, ಅಪ್ಪಯ್ಯ ಮತ್ತು ಬಾಯಿಶೂರ - ಕೈಶೂರ

ಅಭಿನಂದನಾ ಗ್ರಂಥಗಳು : ಆರಾಧ್ಯ ಸಂಪದ ಹಾಗೂ ಆರಾಧ್ಯ ಸಿರಿ

 

ಬಿ ಎಸ್ ಸಣ್ಣಯ್ಯ (1926-2021)

ಸಂಪಾದನೆ : ನೇಮಿನಾಥಪುರಾಣ, ಹರಿವಂಶಾಭ್ಯುದಯಂ, ಮೋಹನತರಂಗಿಣಿ, ರಾಜಾವಳಿ ಕಥಾಸಾರ, ವರ್ಧಮಾನ ಪುರಾಣ, ತೊರವೆ ರಾಮಾಯಣ, ಕಾವ್ಯಾವಲೋಕನ, ಸಾಹಸಭೀಮ ವಿಜಯ, ಅಜಿತ ಪುರಾಣ, ಖಗೇಂದ್ರಮಣಿದರ್ಪಣಂ

ಇತರ ಪ್ರಮುಖ ಕೃತಿಗಳು : ಗ್ರಂಥ ಸಂರಕ್ಷಣೆ, ಹಸ್ತಪ್ರತಿಶಾಸ್ತ್ರ ಪರಿಚಯ, ಪ್ರಾಚೀನ ಗ್ರಂಥ ಸಂಪಾದನೆ

 

ಎಂ ಚಿದಾನಂದ ಮೂರ್ತಿ (1931-2020)

ಪಿ ಎಚ್ ಡಿ ಪ್ರಬಂಧ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ

ಭಾಷಾ ವಿಜ್ಞಾನ : ಭಾಷಾ ವಿಜ್ಞಾನದ ಮೂಲತತ್ವಗಳುವಾಗಾರ್ಥ

ಛಂದಸ್ಸು : ಛಂದೋತರಂಗಕನ್ನಡದ ಮೊತ್ತ ಮೊದಲ ಷಟ್ಪದಿ ಕಾವ್ಯವನ್ನು ಸೊಲ್ಲಾಪುರದ ವಿವಾಹ ಪುರಾಣ ಶಾಸನದಲ್ಲಿ ಗುರುತಿಸಿಕೊಟ್ಟಿದ್ದಾರೆ

ಸಂಶೋಧನಾ ಸಾಹಿತ್ಯ : ಸಂಶೋಧನೆ, ಸಂಶೋಧನ ತರಂಗ, ಲಿಂಗಾಯತ ಅಧ್ಯಯನಗಳು, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಹೊಸತು ಹೊಸತು (ಕೇಂದ್ರ ಸಾಹಿತ್ಯ ಅಕಾಡೆಮಿ), ಪುರಾಣ ಸೂರ್ಯಗ್ರಹಣ, ಪಾಂಡಿತ್ಯ ರಸ, ಲಿಂಗಾಯತ ಅಧ್ಯಯನಗಳು, ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಕನ್ನಡ ಸಂಸ್ಕೃತಿ ನಮ್ಮ  ಹೆಮ್ಮೆ, ಕನ್ನಡಾಯಣ, ವೀರಗಲ್ಲು ಮತ್ತು ಮಾಸ್ತಿಗಲ್ಲುಗಳು, ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿ ಸಂಗೀತ ವಿಚಾರ

ಸಂಪಾದನೆ : ಶಾಸನ ಪದ್ಯಮಂಜರಿ, ಅಧ್ಯಯನ (ಶಂ ಬಾ ಜೋಶಿ ಅಭಿನಂದನಾ ಗ್ರಂಥ)

ವಚನ ಸಾಹಿತ್ಯ : ಶೂನ್ಯ ಸಂಪಾದನೆಯನ್ನು ಕುರಿತುವಚನ ಶೋಧವೀರಶೈವ ಧರ್ಮವಚನ ಸಾಹಿತ್ಯ

ಜಾನಪದ ಗ್ರಾಮೀಣಪಗರಣ ಮತ್ತು ಇತರ ಸಂಪ್ರದಾಯಗಳು

ಅಭಿನಂದನಾ ಗ್ರಂಥ : ಸಂಶೋಧನೆ

 

ಕುಶಾಲಪ್ಪ ಗೌಡ (1931- )

ಪ್ರಮುಖ ಕೃತಿಗಳು : ಮಾನಸ ಭಾರತ, ಮಧುರಾ ವಿಜಯಂ ಅಥವಾ ವೀರ ಕಂಪಣರಾಯ ಚರಿತಂ, ಕನ್ನಡ ಭಾಷಾವಲೋಕನ, ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಅಧ್ಯಯನ, ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು, ಸಿಂಜಿನಿ, ಊರೊಸಗೆ, ಕಡಲ ತಡಿಯ ಕನವರಿಕೆ, ನಾನು ಸತ್ತಿಲ್ಲ, ಕೊಳಚೇಪುರಿ ಪುಷ್ಪಕ ಪುರಾಣ, ಈ ಹೆನ್ ಪೆಕ್ಡ್, ಪುಸ್ತಕಂ ವಿನಿತಾವಿತ್ತಂ, ಸತ್ಯದ ಸುಳ್ಳು, ಹೆಂಡತಿಯನ್ನು ಹೇಗೆ ಕರೆಯುವುದು, ಕಮಲ ನಿಮೀಲನ

ಇಂಗ್ಲಿಷ್ ಸಾಹಿತ್ಯ : ಗೌಡ ಕನ್ನಡದ್ರಾವಿಡಿಯನ್ ಕೇಸ್ ಸಿಸ್ಟಮ್

 

ಟಿ ವಿ ವೆಂಕಟಾಚಲ ಶಾಸ್ತ್ರಿ (1933 - )

ಪಿ ಎಚ್ ಡಿ ಪ್ರಬಂಧ : ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನ

ವ್ಯಾಕರಣ ಗ್ರಂಥಗಳು : ಹೊಸಗನ್ನಡ ವ್ಯಾಕರಣಛಂದಸ್ಸು ಮತ್ತು ವ್ಯಾವಹಾರಿಕ ಕನ್ನಡದರ್ಪಣ ವಿವರಣಕನ್ನಡ ಪ್ರಥಮ ವ್ಯಾಕರಣಕನ್ನಡ ಬರೆವಣಿಗೆ - ದೋಷಗಳುದೌರ್ಬಲ್ಯಗಳುಹಳಗನ್ನಡ ವ್ಯಾಕರಣ ಪ್ರವೇಶಿಕೆಕನ್ನಡ ಆಡುಮಾತು ಬರೆವಣಿಗೆಗಳಲ್ಲಿ ವಿಕಲ್ಪರೂಪಗಳು - ರೂಢಿಯ ತಪ್ಪುಗಳು, ಶಬ್ದಮಣಿ ದರ್ಪಣ.

ವಿಮರ್ಶೆ ಮತ್ತು ಸಂಶೋಧನೆ ಸಾಹಿತ್ಯ ಮಂಥನ, ಚಾವುಂಡರಾಯ, ಜೈನ ಭಾಗವತ ಭಾರತಗಳು ಒಂದು ಸಮೀಕ್ಷೆ, ಪ್ರಾಚೀನ ಕನ್ನಡ ಸಾಹಿತ್ಯ - ಕೆಲವು ನೋಟಗಳು, ಮೂರು ಸಮೀಕ್ಷೆಗಳು, ಹೊಸಗನ್ನಡ ಸಾಹಿತ್ಯ - ಕೆಲವು ನೋಟಗಳು, ನಮ್ಮ ಕರ್ನಾಟಕ, ಪಂಪ, ಹಳೆಯ ಹೊನ್ನು, ಮಹಾಕಾವ್ಯ ಲಕ್ಷಣಕನ್ನಡ ಚಿತ್ರಕಾವ್ಯ, ಮುಲಕನಾಡು ಬ್ರಾಹ್ಮಣರು (ಸಮುದಾಯ, ಸಂಸ್ಕೃತಿ), ಅರ್ಧನೇಮಿಪುರಾಣ ಕಥಾಸಾರ, ವಸ್ತು ವಿಮರ್ಶೆ, ಕನಕಪುರ ಎಂಬ ಕಾನಕಾನ ಹಳ್ಳಿಯ ಚರಿತ್ರೆ, ಕನ್ನಡ ಅಭಿಜಾತ ಸಾಹಿತ್ಯ - ಅಧ್ಯಯನದ ಅವಕಾಶಗಳು; ಆಹ್ವಾನಗಳು, ಕುವೆಂಪು ಸಂಪುಟ, ರನ್ನಕವಿ ಕೃತಿಗಳು - ಕೆಲವು ವಸ್ತು ವಿಚಾರಗಳು; ಪಾಠ ವಿಮರ್ಶೆಗಳು, ಶಾಸ್ತ್ರೀಯ (ಭಾಗ 1-4), ಶಾಸ್ತ್ರೀಯ 5 - ಮಾರ್ಗದರ್ಶಕ ಮಹನೀಯರು, ಶಾಸ್ತ್ರೀಯ 6 - ಸಾಹಿತ್ಯ ಶೋಧ, ಶಾಸ್ತ್ರೀಯ 7 - ಸಾಹಿತ್ಯ ಸನ್ನಿಧಿ, ಶಾಸ್ತ್ರೀಯ 8 - ಸಾಹಿತ್ಯ ಕಲ್ಪ, ಶಾಸ್ತ್ರೀಯ 9 - ಸಾಹಿತ್ಯ ಸಂಧಾನ, ಶಾಸ್ತ್ರೀಯ 10 - ಸಾಹಿತ್ಯಾನುವಾದ, ಶಾಸ್ತ್ರೀಯ 11 - ಸಾಹಿತ್ಯ ಚಾರಣ

ಛಂದಸ್ಸು : ಕನ್ನಡ ಛಂದಸ್ಸು, ಕನ್ನಡ ಛಂದಃಸ್ವರೂಪ, ಕನ್ನಡ ಛಂದೋವಿಹಾರ, ಛಂದೋಂಬುಧಿ, ಕನ್ನಡ ಛಂದೋಮೀಮಾಂಸೆ, ಕನ್ನಡ ಛಂದಃಕೋಶ

ನಿಘಂಟು : ಶ್ರೀವತ್ಸ ನಿಘಂಟು, ಕನ್ನಡ ರತ್ನಕೋಶ, ಗಜಶಾಸ್ತ್ರ ಶಬ್ದಕೋಶ, ಅಚ್ಚಗನ್ನಡ ಪ್ರಾಣಿ ಪದಕೋಶ, ಅಚ್ಚಗನ್ನಡ ದೇಹಾವಯವ ಪದಕೋಶ

ಸಂಪಾದನೆ : ಅಲ್ಲಾವುದ್ದೀನ್ ಮತ್ತು ಅದ್ಭುತದೀಪ (ಎಸ್ ಜಿ ನರಸಿಂಹಾಚಾರ್), ಪ್ರಾಕ್ತನ (ಆರ್ ನರಸಿಂಹಾಚಾರ್ಯರ ಲೇಖನಗಳು), ಭಾಷಣಗಳು (ಡಿ ಎಲ್ ನರಸಿಂಹಾಚಾರ್ಯರ ರುದ್ರನಾಟಕ ಪನ್ಯಾಸಗಳು), ಅಭಿಜ್ಞಾನ (ಡಾ. ಕೆ ಕೃಷ್ಣಮೂರ್ತಿ ಅಭಿನಂದನ ಗ್ರಂಥ), ಶ್ರೀ ಸಾಹಿತ್ಯ ಮಣಿಮಾಲೆ (ಬಿ ಎಂ ಶ್ರೀಕಂಠಯ್ಯನವರ ಬರಹಗಳು ಭಾಷಣಗಳು), ಕಥಾವಳಿ (ಬಾಪು ಸುಬ್ಬರಾಯರು), ಶ್ರೀಕಂಠೇಶ್ವರ ಶತಕಂ (ಎಸ್ ಶ್ರೀಕಂಠಶಾಸ್ತ್ರೀ), ಅನುಕರಣ ಗೀತಲಹರಿ (ಎನ್ ಜಯರಾಮಾಚಾರ್ಯ), ಕಾವ್ಯಶ್ರೀರಂಗ (ದಸರಾ ಕವಿಸಮ್ಮೇಳನಗಳ ಕವಿತೆಗಳು), ಸಿರಿಭೂವಲಯ (ಕುಮುದೇಂದು), ಗ್ರಂಥಸಂಪಾದನ ಪರಿಭಾಷಾಕೋಶ, ಕನ್ನಡ ಸಾಹಿತ್ಯ ಚರಿತ್ರೆ, ಚಾಮರಸ, ಗದ್ಯಕುಸುಮಾಂಜಲಿ, ಮುಲಕನಾಡು ಸಿರಿ, ಕನ್ನಡ ಕಾವ್ಯಸಂಚಯ, ಎಸ್ ಜಿ ನರಸಿಂಹಾಚಾರ್ಯರ ಕವಿತೆಗಳು, ಕನ್ನಡ ಕವಿಗಳು ಕಂಡ ಗೊಮ್ಮಟೇಶ್ವರ, ಕನ್ನಡ ಚೆನ್ನುಡಿ, ಕಾವ್ಯವಾಹಿನಿ, ಚಂದ್ರನ ಮೇಲೊಂದು ಚಂದದ ಪಯಣ, ಶಬ್ದಮಣಿದರ್ಪಣಂ, ಮುದ್ರಾಮಂಜೂಷ, ಗಮಕಮಂಜೂಷ, ಆದಿಪುರಾಣಂ, ಕಾವ್ಯಜಿನಾಷ್ಟಕಗಳು, ಬೊಪ್ಪಣಪಂಡಿತನ ಗೊಮ್ಮಟಜಿನೇಂದ್ರ ಗುಣಸ್ತವಂ ಮತ್ತು ನಿರ್ವಾಣ ಲಕ್ಷ್ಮೀಪತಿಸ್ತವನಂ, ವಿಕ್ರಮಾರ್ಜುನ ವಿಜಯಂ, ಗಂಗರಾಜ ಶಿವಮಾರಕೃತ ಕಲ್ಪನಾರತ್ನ, ಬ್ರಹ್ಮಶಿವನ ಸಮಯಪರೀಕ್ಷೆ, ಶ್ರೀವಿಜಯ ಪ್ರಭೂತಂ ಕವಿರಾಜಮಾರ್ಗಂ, ಬಲವೈದ್ಯದ ಚೆಲುವನ ರತ್ನಶಾಸ್ತ್ರ, ಚಂದ್ರರಾಜನ ಮದನತಿಲಕ

ಅನುವಾದ : ಶಬ್ದಾರ್ಥವಿಹಾರ

ಇಂಗ್ಲಿಷ್ ಸಾಹಿತ್ಯ :  ಶ್ರೀಕಂಠಾಯನ - ಕಲೆಕ್ಟಡ್ ಪೇಪರ್ಸ್ ಆಫ್ ಡಾ. ಎಸ್ ಶ್ರೀಕಂಠಶಾಸ್ತ್ರಿವೈಬ್ರಾಂಟ್ ಇಂಡಿಯಾ - ಕಲೆಕ್ಟಡ್ ಪೇಪರ್ಸ್ ಆಫ್ ಮಹಾಮಹೋಪಧ್ಯಾಯ ಡಾ. ಆರ್ ಶಾಮಾಶಾಸ್ತ್ರಿ, ಶ್ರೀ ಕಂಠಿಕ - ಪ್ರೊ ಎಸ್ ಶ್ರೀಕಂಠಶಾಸ್ತ್ರಿ ಫೆಲಿಸಿಟೇಷನ್.

ನಾಟಕ : ಬದ್ಧಪ್ರಮೀತ್ಯೂಸ್ (ಈಸ್ಕಿಲಸ್ ಕವಿಯ ರುದ್ರನಾಟಕದ ಹಳಗನ್ನಡ ಅನುವಾದ)ಕಂಸ (ನೇಮಿಚಂದ್ರನ ಅರ್ಧನೇಮಿಪುರಾಣಂ)ಟ್ರಾಕಿಯ ಪೆಣ್ಗಳ್ (ಸಾಪೊಕ್ಲಿಸ್ ಕವಿಯ ವಮೆನ್ ಆಫ್ ಟ್ರಾಕಿಸ್ ರುದ್ರನಾಟಕದ ಹಳಗನ್ನಡ ಅನುವಾದ), ಹೊಸಗನ್ನಡ ಮಿತ್ರವಿಂದಾಗೋವಿಂದ

ಪ್ರಬಂಧ : ಕಾವ್ಯಚಿತ್ರಗಳು, ಸದ್ದೆಂತೆಂಬರ ಗಂಡ, ಮೆಲುಗಾಳಿಯ ಮಾತುಗಳು, ಉದಾರ ಚರಿತರು ಉದಾತ್ತ ಪ್ರಸಂಗಗಳು, ನೆನಪುಗಳ ನೆರಳಲ್ಲಿ, ಕೆಲವು ಹಳೆಯ ಪ್ರಸಂಗಗಳು.

ಭಾಷಾಂತರ : ಹರಿವಂಶ ಪುರಾಣಸಾರಕರ್ಣಪಾರ್ಯನ ನೇಮಿನಾಥ ಪುರಾಣ ಕಥಾಸಾರನಮ್ಮ ಮಾತೃಭೂಮಿ - ಸ್ವಾಮಿ ವಿವೇಕಾನಂದ

ಅಭಿನಂದನಾ ಗ್ರಂಥಗಳು : ಶ್ರೀ ಮುಖ, ಕನ್ನಡ ಮೇರು, ಡಾ. ಟಿ ವಿ ವೆಂಕಟಾಚಲಶಾಸ್ತ್ರೀ - ಬದುಕು-ಬರಹ, ತಿಂಗಳ ಬೆಳಕು

 

ಷಡಕ್ಷರಪ್ಪ ಶೆಟ್ಟರ್ (1935 - 2020)

ಪಿಎಚ್ ಡಿ ಪ್ರಬಂಧ : ಶ್ರವಣಬೆಳಗೊಳದ ವಾಸ್ತುಶಿಲ್ಪ

ಪ್ರಮುಖ ಕೃತಿಗಳು : ಸಾವಿಗೆ ಆಹ್ವಾನ, ಸಾವನ್ನು ಅರಸಿ, ಶ್ರವಣಬೆಳಗೊಳ, ಶಂಗಂ ತಮಿಳಗಂ ಮತ್ತು ಕನ್ನಡ ನಾಡುನುಡಿ, ಸೋಮನಾಥಪುರ, ಬಾದಾಮಿ ಚಾಳುಕ್ಯರ ಶಾಸನ ಸಾಹಿತ್ಯ, ಶಾಸನ ಸಾಹಿತ್ಯ, ಹಳಗನ್ನಡ ಲಿಪಿ - ಲಿಪಿಕಾರ - ಲಿಪಿ ವ್ಯವಸಾಯ, ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ, ಪ್ರಾಕೃತ ಜಗದ್ವಲಯ, ರೂವಾರಿ, ಸ್ಥಪತಿ

ಸಂಪಾದನೆ : ಆರ್ಕಿಯಲಾಜಿಕಲ್ ಸರ್ವೆ ಆಫ್ ಮೈಸೂರು, ಆ್ಯನುಯಲ್ ರಿಪೋರ್ಟ್ ಇತ್ಯಾದಿ

 

ಕೆ ವಿ ರಮೇಶ್ (1935 - 2013)

ಇಂಗ್ಲಿಷ್ ಸಾಹಿತ್ಯ : Indian Epigraphy, Chalukyas of  Vaataapi,  Inscriptions of Western Gangas, Indian Council of Historical Research, A Copper Plate Hoard of the Gupta Period from ‘Bagh', South Indian Inscriptions,  A History of South Kanara from the earliest times to the fall of Vijayanagara, South Indian Inscriptions, Dynastic List of Copper Plate Inscriptions noticed in Annual reports on Indian Epigraphy from 1887-1969, Archaeological Survey of India.

ತುಳುನಾಡಿನ ಇತಿಹಾಸ, ಕರ್ನಾಟಕ ಶಾಸನ ಸಮೀಕ್ಷೆ

ಕಾಮೆಂಟ್‌ಗಳು