ವಚನಕಾರರು ಮತ್ತು ಅಂಕಿತನಾಮಗಳು
ವಚನಕಾರರು ಮತ್ತು ಅಂಕಿತನಾಮಗಳು
◆ ಜೇಡರ ದಾಸಿಮ್ಮಯ್ಯ - ರಾಮನಾಥ
◆ ಬಸವಣ್ಣ - ಕೂಡಲಸಂಗಮದೇವ
◆ ಅಲ್ಲಮಪ್ರಭು - ಗುಹೇಶ್ವರ
◆ ಅಕ್ಕಮಹಾದೇವಿ - ಚೆನ್ನಮಲ್ಲಿಕಾರ್ಜುನ
◆ ಸಿದ್ದರಾಮ - ಕಪಿಲ ಸಿದ್ದಮಲ್ಲಿಕಾರ್ಜುನ, ಯೋಗಿನಾಥ
◆ ಚೆನ್ನ ಬಸವಣ್ಣ - ಕೂಡಲ ಚೆನ್ನಸಂಗಮದೇವ
◆ ಅಂಬಿಗರ ಚೌಡಯ್ಯ - ಅಂಬಿಗ ಚೌಡಯ್ಯ
◆ ಮುಕ್ತಾಯಕ್ಕ - ಅಜಗಣ್ಣ
◆ ಮಡಿವಾಳ ಮಾಚಯ್ಯ - ಕಲಿದೇವರ ದೇವಾ
◆ ಡೋಹರ ಕಕ್ಕಯ್ಯ - ಕಾಮಹರಪ್ರಿಯ ರಾಮನಾಥ
◆ ಆಯ್ದಕ್ಕಿ ಲಕ್ಕಮ್ಮ - ಅಮರೇಶ್ವರ ಲಿಂಗ
◆ ಹಡಪದ ರೇಚಣ್ಣ - ನಿಷ್ಕಳಂಕ ಕೂಡಲ ಚೆನ್ನ
ಸಂಗಮದೇವ
◆ ಅಮುಗೆ ರಾಯಮ್ಮ - ಅಮುಗೇಶ್ವರ
◆ ಗುರುಬಸವೇಶ್ವರ - ಗುರುಬಸವೇಶ್ವರ
◆ ಹಾವಿನಾಳ ಕಲ್ಲಯ್ಯ - ಮಹಾಲಿಂಗ ಕಲ್ಲೇಶ್ವರ
◆ ಮಾದರ ಚೆನ್ನಯ್ಯ - ನಿಃಕಳಂಕ ಮಲ್ಲಿಕಾರ್ಜುನ
◆ ಆದಯ್ಯ - ಸೌರಾಷ್ಟ್ರ ಸೋಮೇಶ್ವರ
◆ ಗೊಗ್ಗವ್ವೆ - ನಾಸ್ತಿನಾಥ
◆ ಒಕ್ಕಲಿಗ ಮುದ್ದಣ್ಣ -ಕಾಮಭೀಮ ಜೀವದೊಡೆಯ
◆ ವೀರಗೊಲ್ಲಾಳ - ವೀರವೀರೇಶ್ವರ ಲಿಂಗ
◆ ಹೆಂಡದ ಮಾರಯ್ಯ - ಧರ್ಮೇಶ್ವರ ಲಿಂಗ
◆ ಚಿಕ್ಕಣ್ಣ - ಉಳಿಯುವೇಶ್ವರ
◆ ರಕ್ಕಸದ ಬೊಮ್ಮರ್ಣಣ - ರಕ್ಕಸನೊಡೆಯ
◆ ಗಾವುದಿಮಾಚಯ್ಯ - ಗಾವುದಿಮಾಚಯ್ಯ
◆ ನಗಿಯ ಮಾರಿತಂದೆ - ಆತುರವೈರಿ ಮಾರೇಶ್ವರ
◆ ಅಮ್ಮಿ ದೇವಯ್ಯ - ಚೆನ್ನಬಸವಣ್ಣ ಪ್ರಿಯ ಕಮಲೇಶ್ವರ
ಲಿಂಗ
◆ ಸಕಲೇಶ ಮಾದರಸ - ಸಕಲೇಶ್ವರ ದೇವ
◆ ಬಾಲ ಸಂಗಣ್ಣ - ಕಮಟೇಶ್ವರ ಲಿಂಗ
◆ ಅಕ್ಕಮ್ಮ - ಅಚಾರವೇ ಪ್ರಾಣವಾದ ರಾಮೇಶ್ವರ ಲಿಂಗ
◆ ನುಲಿಯ ಚಂದಯ್ಯ - ಚಂದೇಶ್ವರ ಲಿಂಗ
◆ ಸೂಳೆ ಸಂಕವ್ವ - ನಿರ್ಲಜ್ಜೆಶ್ವರ
◆ ಏಲೇಶ್ವರದ ಕೇತಯ್ಯ - ಏಲೇಶ್ವರ ಲಿಂಗ
◆ ಡಕ್ಕೆಯ ಬೊಮ್ಮಣ್ಣ - ಕಾಲಾಂತಕ ಭೀಮೇಶ್ವರ ಲಿಂಗ
◆ ಸೊಡ್ಡಳ ಬಾಚರಸ - ಸೊಡ್ಡಳ
◆ ಮನಸಂದ ಮಾರಿತಂದೆ - ಮನಸಂದ ಮಾರೇಶ್ವರ
◆ ವೀರಶಂಕರ ದಾಸಯ್ಯ - ಘನಗುರು ಶಿವಲಿಂಗ ರಾಮನಾಥ
◆ ಚಂದಿಮರಸ - ಸಿಮ್ಮಲಿಗೆಯ ಚೆನ್ನರಾಮ
◆ ಗಂಗಾಂಬಿಕೆ - ಗಂಗಾಪ್ರಿಯ ಕೂಡಲ ಸಂಗಮದೇವ
◆ ನೀಲಾಂಬಿಕೆ/ನೀಲಲೋಚನೆ - ಸಂಗಯ್ಯ
◆ ಮಧುವಯ್ಯ - ಅರ್ಕೇಶ್ವರಲಿಂಗ
◆ ನೀಲಮ್ಮ - ಬಸವ
◆ ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ - ಭೀಮೇಶ್ವರಾ
◆ ಕದಿರ ಕಾಯಕದ ಕಾಳವ್ವೆ - ಗುಮ್ಮೇಶ್ವರ
◆ ರೇವಮ್ಮೆ - ನಿರಂಗಲಿಂಗ
◆ ವೀರಮ್ಮ - ಶಾಂತೇಶ್ವರ ಪ್ರಭುವೇ
◆ ಬಾಚಿಕಾಯಕದ ಕಾಳವ್ವೆ - ಕರ್ಮಹರ ಕಾಳೇಶ್ವರಾ
◆ ಕೇತಲದೇವಿ - ಕುಂಬೇಶ್ವರ
◆ ರೇಚವ್ವೆ - ನಿಜಶಾಂತೇಶ್ವರ
◆ ಕಾಮಮ್ಮ - ನಿರ್ಭೀತಿ ನಿಜಲಿಂಗದಲ್ಲಿ
◆ ಲಕ್ಷ್ಮಮ್ಮ - ಅಗಜೇಶ್ವರಲಿಂಗವು
◆ ಗಂಗಮ್ಮ - ಗಂಗೇಶ್ವರಲಿಂಗ
◆ ಮಸಣಮ್ಮ - ನಿಜಗುಣೇಶ್ವರಲಿಂಗದಲ್ಲಿ
◆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ - ಉರಿಲಿಂಗ
ಪೆದ್ದಿಗಳರಸ
◆ ರೇಕಮ್ಮ - ಶ್ರೀ ಗುರು ಸಿದ್ದೇಶ್ವರ
◆ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ - ಮಸಣಯ್ಯಪ್ರಿಯ
ಗಜೇಶ್ವರಾ
◆ ಕದಿರ ರೆಮ್ಮವ್ವೆ - ರೆಮ್ಮಿಯೊಡೆಯ ಗುಮ್ಮೇಶ್ವರಾ
◆ ಸತ್ಯಕ್ಕ - ಶಂಭುಜಕ್ಕೇಶ್ವರಾ
◆ ಮೋಳಿಗೆ ಮಹಾದೇವಿ - ನಿಃಕಳಂಕ ಮಲ್ಲಿಕಾರ್ಜುನಲಿಂಗ
◆ ಲಿಂಗಮ್ಮ - ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
ಪ್ರಸಿದ್ಧ ವಚನಕಾರರ ಕೆಲವು ಪ್ರಮುಖ ವಚನಗಳು
ದೇವರ ದಾಸಿಮ್ಮಯ್ಯ - ರಾಮನಾಥ (ಕಾಲ ಸು. 11ನೇ ಶ)
ಈತನನ್ನು ಜೇಡರ ದಾಸಿಮ್ಮಯ್ಯ
ಎಂತಲೂ ಕರೆಯುವ ರೂಢಿಯಿದೆ. ಕೊಪ್ಪಳ ಜಿಲ್ಲೆಯ ಮುದೇನೂರು ಈತನ ಜನ್ಮಸ್ಥಳ. ಪತ್ನಿ ದುಗ್ಗಳೆ.
ನೇಕಾರಿಕೆ ಈತನ ಕಸುಬಾಗಿತ್ತು.
◆
ನಿಮ್ಮ ಶರಣರ ಸೂಳ್ನುಡಿಯ
ಒಂದರಗಳಿಗೆ ಇತ್ತಡೆ ನಿಮ್ಮನ್ನಿತ್ತೆ ಕಾಣಾ
◆
ಜ್ವರವಿಡಿದ ಬಾಯಿಗೆ ನೊರೆವಾಲು
ಒಲಿವುದೇ
◆
ಎಳ್ಳು ಇಲ್ಲದ ಗಾಣದಲ್ಲಿ
ಎಣ್ಣೆಯುಂಟೆ
◆
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡಶರಣರ ನುಡಿ
◆
ಬರುಶಠಗನ ಭಕ್ತಿ ದಿಟವೆಂದು
ನಚ್ಚಲು ಬೇಡ
◆
ಮಾರಿಯ ಪೂಜಿಸಿ ಮಸಣಕ್ಕೆ ಹೋಗಿ
ಗೋರಿಗೊಳಿಸಿ ಕುರಿಯ ಕೊರಲನೆ ಕೊಯ್ದುಂಬ
◆
ಹೂವಿನೊಳಗಣ ಕಂಪ ಹೊರಸೂಸಿ
ಸುಳಿವ ಅನಿಲನಂತೆ
◆
ಒಡಲುಗೊಂಡವ ಹಸಿವ ಒಡಲುಗೊಂಡವ
ಹುಸಿವ
◆
ಇಳೆ ನಿಮ್ಮ ದಾನ ಬೆಳೆ ನಿಮ್ಮ
ದಾನ ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
◆
ಸತಿಪತಿಗಳೊಂದಾದ ಭಕ್ತಿ
ಹಿತವಾಗಿಪ್ಪುದು ಶಿವಂಗೆ
◆
''ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
◆
ಅನುಭಾವವಿಲ್ಲದ ಭಕ್ತಿ
ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ
ಸಕಲೇಶ ಮಾದರಸ - ಸಕಲೇಶ್ವರದೇವ (ಕಾಲ ಸು. 12ನೇ ಶ)
◆
ಜನೆಮೆಚ್ಚು ಶುದ್ಧನಲ್ಲದೆ
ಮನಮೆಚ್ಚು ಶುದ್ಧನಲ್ಲವಯ್ಯ
◆ ತನುವಿನ ಮೇಲೆ
ಬ್ರಹ್ಮಚರ್ಯತ್ವವಳವಟ್ಟರೇನು ಮನದ ಮೇಲೆ ಬ್ರಹ್ಮಚರ್ಯತ್ವವಳವದನ್ನಕ್ಕ
◆ ಮಳೆಯ ಮೇಲೆ ಕಲ್ಲನಿಕ್ಕಿ ಮೆಳೆ ಭಕ್ತನಾಗಬಲ್ಲುದೆ
◆ ಅನ್ನವನಿಕ್ಕಿ ಹಿರಣ್ಯವ ಕೊಟ್ಟರೆ ಜಗವೆಲ್ಲ ಹೊಗಳುವುದು
◆ ಜಂಗಮಲಿಂಗಕ್ಕೆ ಅರ್ಥಪ್ರಾಣಾಭಿಮಾನ ಬಿಟ್ಟು ಅಹಂಕಾರವಿಲ್ಲದಂಥ
◆ ನೀನೆನ್ನನೊಲ್ಲದಿದ್ದರೆ ನಾನಾರ ಸಾರಿ ಬದುಕುವೆನೆಯ್ಯ
◆ ಜ್ಯೋತಿಯ ಮುಟ್ಟಿದ ಬತ್ತಿ ಎಲ್ಲ ಜ್ಯೋತಿಯಪ್ಪವಯ್ಯಾ
◆ ಅಡವಿಗೆ ಹೋಗಿ ಏವೆನು ಮನದ ರಜ ತಮ ಬಿಡದು
◆ ಶೀಲ ಶೀಲವೆಂದು ಗರ್ವಿಕೃತದಲ್ಲಿ ನುಡಿವ ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ
◆ ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ
◆ ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ
ಅಲ್ಲಮ ಪ್ರಭು (ಕಾಲ ಸು. 12ನೇ ಶ)
ಶಿವಮೊಗ್ಗ ಜಿಲ್ಲೆಯ
ಬಳ್ಳಿಗಾವೆ ಈತನ ಜನ್ಮಸ್ಥಳ. ಅನುಭವ ಮಂಟಪದ ಅಧ್ಯಕ್ಷನಾಗಿದ್ದನು.
◆
ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
◆
ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು
◆
ಕಲ್ಲ ಮನೆಯ ಮಾಡಿ ಕಲ್ಲ ದೇವರ
ಮಾಡಿ
◆
ಹೊನ್ನು ಮಾಯೆಯೆಂಬರು ಹೊನ್ನು
ಮಾಯೆಯಲ್ಲ
◆
ಜ್ಞಾನವೆಂಬ ಶಿಶುವ ಮಲಗಿಸಿ ಸಕಲ
ವೇದಶಾಸ್ತ್ರವೆಂಬ ನೇಣ ಕಟ್ಟಿ
◆
ನಿಮ್ಮ ನಿಲವ ಅನುಭವಸುಖಿ ಬಲ್ಲ
◆
ಅರಿಯಬಾರದ ಘನವರಿದವರು
ಅರಿತದಂತಿರ್ಪರು
◆
ಘನವ ಮನ ಕಂಡು ಅದನೊಂದು
ಮಾತಿಂಗೆ
◆
ನಿರಾಳವೆಂಬ ಕೂಸಿಗೆ
ಬೆಣ್ಣೆಯನಿಕ್ಕಿ ಹೆಸರಿಟ್ಟು
◆
ತಲೆಯಿಲ್ಲದ ತಲೆಯಾತಂಗೆ
ಕರುಳಿಲ್ಲದ ಒಡಲು ನೋಡಾ
◆
ಕಾಯದ ಮೊದಲಿಂಗೆ
ಬೀಜವಾವುದೆಂದರಿಯದೀ ಲೋಕ
◆
ಕಂಡುದ ಹಿಡಿಯಲೊಲ್ಲದೆ
ಕಾಣದುದನರಸಿ ಹಿಡಿದಿಹನೆಂದರೆ
◆
ಬೆಟ್ಟಕ್ಕೆ ಚಳಿಯಾದೊಡೆ ಏನ
ಹೊದ್ದಿಸುವಿರಯ್ಯ
◆
ಅದ್ವೈತವ ನುಡಿದು ಅಹಂಕಾರಿಯಾದೇನಯ್ಯ
◆
ಲಿಂಗಾನುಭವಿಗಳ ಸಂಗದಿಂದಾನು
ಕಣ್ದೆರೆದೆನು
◆
ನಿನಗೆ ನೀ ಗುರುವಲ್ಲದೆ
ನಿನ್ನಿಂದ ಕವಪ್ಪ ಗುರುವುಂಟೆ
◆
ತನ್ನ ತಾನರಿತರೆ ಎಲ್ಲಾ ಪರತತ್ವ
ನೋಡಾ
◆
ಸತ್ತಬಳಿಕ ಮುಕ್ತಿಯ
ಹಡೆದಿಹೆನೆಂದು ಪೂಜಿಸಹೋದರೆ
◆
ಕಾಮವ ಸುಟ್ಟು ಹೋಮವನುರುಹಿ ತ್ರಿಪುರಸಂಹಾರದ ಕೀಲನರಿಯಬಲ್ಲರೆ
◆
ನಾನು ಘನ, ತಾನು ಘನವೆಂಬ ಹಿರಿಯರುಂಟೆ
◆
ಬಿರುಗಾಳಿ ಬೀಸಿ ಮರ
ಮುರಿಯುವಂತೆ ಸುಳುಹು ತಿಳಿಯದೆ
◆
ಲೋಕದ ನಚ್ಚುಮಚ್ಚು ಬಿಟ್ಟು
ನಿಶ್ಚಿಂತವಾಯಿತ್ತು
◆
ಹಿಂದಣ ಅನಂತನವನು ಮುಂದಣ
ಅನಂತನವನು
◆
ನಾ ದೇವನಲ್ಲದೆ ನೀ ದೇವನೇ ನೀ
ದೇವನಾದರೆ ಎನ್ನನೇಕೆ ಸಲಹೆ
◆
ನಿಜವನರಿದ ನಿಶ್ಚಿಂತನೆ, ಮರಣವ ಗೆಲಿದ ಮಹಂತನೆ
◆
ಆಚಾರವನರಿಯದೆ, ವಿಭವವಳಿಯದೆ, ಕೋಪವಡಗದೆ
◆
ಒಳಗೆ ತೊಳೆಯಲರಿಯದೆ ಹೊರಗೆ
ತೊಳೆದು ಕುಡಿವುತ್ತಿರ್ದರಯ್ಯ
◆
ಮರ್ತ್ಯಲೋಕದ ಮಾನವರು
ದೇಗುಲದೊಳಗೊಂದು ದೇವರ ಮಾಡಿದರೆ
◆
ಎನಗೊಂದು ಲಿಂಗ, ನಿನಗೊಂದು ಲಿಂಗ, ಮನೆಗೊಂದು ಲಿಂಗ
◆
ಕಲ್ಲು ದೇವರೆಂದು ಪೂಜಿಸುವರು, ಆಗದು ಕಾಣಿರೋ
◆
ದೇಹದೊಳಗೆ ದೇವಾಲಯವಿರ್ದು
ಮತ್ತೆ ಬೇರೆ ದೇವಾಲಯವೇಕೆ
◆
ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ
◆
ಭಸ್ಮವ ಹೂಸಿ ಬತ್ತಲೆ ಇದ್ದರೇನು
ಬ್ರಹ್ಮಚಾರಿಯೇ
ಬಸವಣ್ಣ - ಕೂಡಲ ಸಂಗಮದೇವ (ಕಾಲ ಸು. 12ನೇ ಶ)
ವಿಜಯಪುರ ಜಿಲ್ಲೆಯ ಬಾಗೇವಾಡಿ
ಈತನ ಜನ್ಮಸ್ಥಳ. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಜಾನಪದ ಮುನಿ ಎಂಬಾತ ಇವರ ಗುರುವಾಗಿದ್ದನು
ಎಂದು ತಿಳಿದುಬರುತ್ತದೆ.
ಕಲ್ಯಾಣ ಕಳಚೂರಿಗಳ ಅರಸ
ಬಿಜ್ಜಳನಲ್ಲಿ ಭಂಡಾರಿಯಾಗಿದ್ದನು. ಅಕ್ಕನಾಗಮ್ಮ ಈತನ ಅಕ್ಕ. ಪತ್ನಿ ಗಂಗಾಂಬಿಕೆ.
ಸರ್ ಅರ್ಥರ್ ಮಿಲ್ಲರ್
ಬಸವಣ್ಣರನ್ನು ಕರ್ನಾಟಕದ ಮಾರ್ಟಿನ್ ಲೂಥರ್ ಎಂದಿದ್ದಾರೆ.
◆
ಉಳ್ಳವರು ಶಿವಾಲಯ ಕಟ್ಟುವರು
ನಾನೇನು ಮಾಡಲಿ ಬಡವನಯ್ಯ!
◆
ದಯವಿಲ್ಲದ ಧರ್ಮವಾವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
◆
ಆನು ಒಬ್ಬನು; ಸುಡುವರೈವರು. ಮೇಲೆ ಕಿಚ್ಚು ಘನ, ನಿಲಲು ಬಾರದು.
◆
ಮನವೇ ಸರ್ಪ, ತನುವೇ ಹೇಳಿಗೆ! ಹಾವಿನೊಡತಣ ಹುದುವಾಳಿಗೆ!
◆
ಜನಿತಕ್ಕೆ ತಾಯಾಗಿ ಹೆತ್ತಳು
ಮಾಯೆ! ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
◆
ಇವನಾರವ ಇವನಾರವ ಇವನಾರವ
ನೆಂದಿನಸದಿರಯ್ಯಾ
◆
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು
ಸುಖಿಯಾಗಿಯಾನು ಬದುಕಿದೆನಯ್ಯಾ
◆
ಸಕ್ಕರೆಯ ಕೊಡನ ತುಂಬಿ ಹೊರಗ
ಸವಿದರೆ ರುಚಿಯುಂಟೆ?
◆
ಸ್ವಾಮಿ ನೀನು, ಶಾಶ್ವತ ನೀನು ಎತ್ತಿದೆ ಬಿರುದ ಜಗವೆಲ್ಲರಿಯಲು
◆
ಬೆದಕದಿರು, ಬೆದಕಿದರೆ ಹುರುಳಿಲ್ಲ, ಎನ್ನ ಚಿತ್ತವು ಅತ್ತಿಯ ಹಣ್ಣು
ನೋಡಯ್ಯ
◆
ಬೆಳೆವ ಭೂಮಿಯಲೊಂದು ಪ್ರಳಯದ ಕಸ
ಹುಟ್ಟಿ, ತಿಳಿಯಲೀಯದು
◆
ಕೆಸರಿನಲ್ಲಿ ಬಿದ್ದ ಪಶುವಿನಂತೆ
ದೆಸೆದೆಸೆಗೆ ಆನು ಬಾಯಿಬಿಡುತ್ತಿದ್ದೆನೆಯ್ಯ
◆
ಹರನೀವ ಕಾಲಕ್ಕೆ ಸಿರಿಯು
ಬಣ್ಣಲಿ ಬಕ್ಕು ಬರಿದು ಹೆದ್ದೊರೆಯು ಕೆರೆ ತುಂಬಿತಯ್ಯ
◆
ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ
◆
ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ
◆
ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ
◆
ಜೋಳವಾಳಿಯವ ನಾನಲ್ಲವಯ್ಯ
◆
ಆಲಿಕಲ್ಲ ಹರಳಿನಂತೆ, ಅರಗಿನ ಪುತ್ತಳಿಯಂತೆ ತನು ಕರಗಿ ನೆರೆವ ಸುಖವ ನಾನೇನೆಂಬೆ
◆
ಘನಗಂಭೀರ ಮಹಾಘನದೊಳಗೆ ಘನಕ್ಕೆ
ಘನವಾಗಿದ್ದೇನಯ್ಯ
◆
ಭಕ್ತರ ಕಂಡರೆ ಬೋಳರಪ್ಪಿರಯ್ಯ, ಸವಣರ ಕಂಡರೆ ಬತ್ತಲೆಯಪ್ಪಿರಯ್ಯ
◆
ಹಾವಿನ ಬಾಯ ಕಪ್ಪೆ ಹಸಿದು, ಹಾರುವ ನೊಣಕ್ಕೆ ಆಸೆ ಮಾಡುವಂತೆ
◆
ಕಲ್ಲು ನಾಗರ ಕಂಡರೆ ಹಾಲನೆರೆ
ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ
◆
ಕೊಲ್ಲುವನೆ ಮಾದಿಗ, ಹೊಲಸು ತಿಂಬುವವನೆ ಹೊಲೆಯ
◆
ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ
ನಿಮ್ಮ ತನುವ ಸಂತೈಸಿಕೊಳ್ಳಿ
◆
ಮರ್ತ್ಯ ಲೋಕವೆಂಬುದು ಕರ್ತಾರನ
ಕಮ್ಮಟವಯ್ಯ
◆
ದೇವಲೋಕ ಮರ್ತ್ಯಲೋಕವೆಂಬುದು
ಬೇರಲ್ಲ ಕಾಣಿ
◆
ಅರಿಸಿನವನೆ ಮಿಂದು
ಹೊಂದೊಡಿಗೆಯನೇ ತೊಟ್ಟು
◆
ಕುಂಬಳದ ಕಾಯಿಗೆ ಕಬ್ಬುನದ
ಕಟ್ಟು ಕೊಟ್ಟರೆ ಬಲುಹಾಗಬಲ್ಲುದೆ
◆
ಸಗಣಿಯ ಬೆನಕಂಗೆ
ಸಂಪಿಗೆಯರಳಿನಲ್ಲಿ ಪೂಜಿಸಿದರೆ
◆
ಕರಿ ಘನ, ಅಂಕುಶ ಕಿರಿದೆನ್ನಬಹುದೇ, ತಮಂದ ಜ್ಯೋತಿ
ಕಿರಿದೆನ್ನಬಹುದೇ
◆
ಮಣ್ಣ ಪುತ್ಥಳಿಯ ಮಾಣದೆ
ಜಲದಲ್ಲಿ ತೊಳೆದರೆ ನಿಚ್ಚಕ್ಕೆ ಕೆಸರಹುದಲ್ಲದೆ ಅವರಿಚ್ಚಿಗೆ ಬಿಡದಣ್ಣ
◆
ಮರವನೇರಿದ ಮರ್ಕಟನಂತೆ ಹಲವು
ಕೊಂಬಿಂಗೆ ಹಾಯುತಲಿದ್ದೇನೆ.
◆
ಆರು ಮುನಿದು ಎಮ್ಮನೇನು
ಮಾಡುವರು? ಊರು ಮುನಿದು ಎಮ್ಮನೆಂತು ಮಾಡುವುದು?
◆
ಅರಗು ತಿಂದು ಕರಗುವ ದೈವವ, ಉರಿಯ ಕಂಡರೆ ಮುರುಟುವ ದೈವವನೆಂತು ಸರಿ ಎಂಬುದಯ್ಯ?
◆
ಒಲೆಯ ಬೂದಿಯ ಬಿಲಿಯಲು ಬೇಡ.
ಒಲಿದಂತೆ ಹೂಸಿಕೊಂಡಿಪ್ಪುದು
◆
ಒಲವಿಲ್ಲದ ಪೂಜೆ ನೇಹವಿಲ್ಲದ
ಮಾಟ, ಆ ಪೂಜೆಯು ಆ ಮಾಟವು ಚಿತ್ರದ ರೂಪು ಕಾಣಿರಣ್ಣ
◆
ಮನೆಯೊಳಗೆ ಮನೆಯೊಡಯನಿದ್ದಾನೋ
ಇಲ್ಲವೋ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ
◆
ಮೃದು ವಚನಂಗಳೇ ಸಕಲ ಜಪಂಗಳಯ್ಯ, ಮೃದುವಚನಂಗಳೇ ಸಕಲತಪಂಗಳಯ್ಯ
◆
ಅರಿಸಿನವನೇ ಮಿಂದು ಹೊಂದೊಡಿಗೆಯನೆ
ತೊಟ್ಟು, ಪುರುಷನ ಒಲವಿಲ್ಲದ ಲಲನೆಯಂತೆ
ಅಕ್ಕ ಮಹಾದೇವಿ (ಕಾಲ ಸು 12ನೇ ಶ)
ಕನ್ನಡದ ಮೊದಲ ಕವಯಿತ್ರಿ.
ಶಿವಮೊಗ್ಗ ಜಿಲ್ಲೆಯ ಉಡುತಡಿ ಈಕೆಯ ಜನ್ಮಸ್ಥಳ. ತಂದೆ ನಿರ್ಮಲಶೆಟ್ಟಿ ತಾಯಿ ಸುಮತಿ.
◆
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯ
◆
ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿ ನೀರೆರೆದವರಾರಯ್ಯ
◆
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು ಮನ ಕರಗದವರಲ್ಲಿ
ಪುಷ್ಪವನೊಲ್ಲೆಯಯ್ಯ
◆ನರ-ಜನ್ಮವ ತೊಡೆದು ಹರ-ಜನ್ಮವ ಮಾಡಿದ ಗುರುವೆ
◆ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದಡೆ ಅದೆಂದಿಂಗೆ ಬೆಳೆದು ಫಲವಪ್ಪುದಯ್ಯಾ
◆ಅಯ್ಯಾ ತನ್ನ ತಾನರಿಯಬೇಕಲ್ಲದೆ ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ
ಕೇಳಲುಂಟೆ
◆ಆವ ವಿದ್ಯೆಯ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು. ಅಶನವ ತೊರೆದಡೇನು
◆ಊರ ಸೀರೆಗೆ ಅಸಗ ತಡಬಡಗೊಂಬಂತೆ ಹೊನ್ನೆನ್ನದು ಮಣ್ಣೆನ್ನದು ಎಂದು ನೆನೆನೆನೆದು
ಬಡವಾದೆ
◆ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುದು ಎಲೆ ಕಾಲಂಗೆ ಗುರಿಯಾದ ಕರ್ಮಿ
◆ಎಲ್ಲ ಎಲ್ಲವನರಿದು ಫಲವೇನಯ್ಯಾ ತನ್ನ ತಾನರಿಯಬೇಕಲ್ಲದೆ
◆ಕದಳಿ ಎಂಬುದು ತನುಕದಳಿ ಎಂಬುದು ಮನ ಕದಳಿ ಎಂಬುದು ವಿಷಯಂಗಳು
◆ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ ಆನು ಬಲ್ಲೆನೆಂಬ ನುಡಿ ಸಲ್ಲದು
◆ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ ಛಲಮದವೆಂಬುದಿಲ್ಲ ಪ್ರತಿದೋರನಾಗಿ
◆ಕೆಡದಿರೆ ಕೆಡದಿರೆ ಮೃಡನಡಿಯ ಹಿಡಿಯಿರೇ. ದೃಢವಲ್ಲ ನೋಡಿರೆ ನಿಮ್ಮೊಡಲು
◆ಕೈಯ ಧನವ ಕೊಂಡಡೆ ಮೈಯ ಭಾಷೆಯ ಕೊಳಬಹುದೆ
◆ಕೊಳಲ ದನಿಗೆ ಸರ್ಪ ತಲೆದೂಗಿದಡೇನು ಒಳಗಣ ವಿಷದ ಬಯಕೆ ಬಿಡದನ್ನಕ್ಕ
◆ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ ದೀಪಕ್ಕೆ ದೀಪ್ತಿಗೆ ಭೇದವುಂಟೆ
ಅಯ್ಯ
◆ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ ಹಲವು ಪ್ರಾಣಿಯ ಕೊಂದು ನಲಿನಲಿದಾಡುವ
◆ತನುವಿಕಾರದಿಂದ ಸವದು ಸವದು ಮನವಿಕಾರದಿಂದ ನೊಂದು ಬೆಂದವರೆಲ್ಲಾ ಬೋಳಾಗಿ
◆ತುಂಬಿದುದು ತುಳುಕದು ನೋಡಾ. ನಂಬಿದುದು ಸಂದೇಹಿಸದು ನೋಡಾ
◆ಫಲ ಒಳಗೆ ಪಕ್ವವಾಗಿಯಲ್ಲದೆ ಹೊರಗಳ ಸಿಪ್ಪೆ ಒಪ್ಪಗೆಡದು
◆ಬಿಟ್ಟೆನೆಂದಡೆ ಬಿಡದೀ ಮಾಯೆ ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ
◆ಭಾನುವಿನಂತಿಪ್ಪುದು ಜ್ಞಾನ ಭಾನುಕಿರಣದಂತಿಪ್ಪುದು ಭಕ್ತಿ
◆ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ಧನವಿದ್ದು ಫಲವೇನು ದಯವಿಲ್ಲದನ್ನಕ್ಕ
◆ಮುತ್ತು ಒಡೆದಡೆ ಬೆಸೆಯಬಹುದೆ ಮನ ಮುರಿದಡೆ ಸಂತಕ್ಕೆ ತರಬಹುದೆ
◆ಮೂಲಾಧಾರದ ಬೇರ ಮೆಟ್ಟಿ ಭ್ರೂಮಂಡಲವನೇರಿದೆ
◆ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ
◆ವಟವೃಕ್ಷದೊಳಡಗಿದ ಸಮರಸ ಬೀಜ ಭಿನ್ನಭಾವಕ್ಕೆ ಬಪ್ಪುದೆ
◆ವಿಷಯದ ಸುಖ ವಿಷವೆಂದರಿಯದ ಮರುಳೆ ವಿಷಯಕ್ಕೆ ಅಂಗವಿಸದಿರಾ
◆ಸಂಸಾರವ ನಿರ್ವಾಣವ ಮಾಡಿ ಮನವ ವಜ್ರತುರಗವ ಮಾಡಿ
◆ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ
ಕಲಿತಂತೆ
◆ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ
◆ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ಹೆಣ್ಣ ಬಿಟ್ಟ ಬಳಿಕ ಆಕೆಯನಾರು
ಕೂಡಿದಡೇನು
◆ಹೂವು ಕಂದಿದಲ್ಲಿ ಪರಿಮಳವನರಸುವರೆ ಕಂದನಲ್ಲಿ ಕುಂದನರಸುವರೆ
◆ಹೆಣ್ಣು ಹೆಣ್ಣಾದಡೆ ಗಂಡಿನಸೂತಕ. ಗಂಡು ಗಂಡಾದಡೆ ಹೆಣ್ಣಿನಸೂತಕ
◆ಹೊನ್ನು ಮುರಿದಡೆ ಬೆಸಸಬಹುದಲ್ಲದೆ ಮುತ್ತು ಒಡೆದಡೆ ಬೆಸಸಬಹುದೆ
◆ಚಂದನವ ಕಡಿದು ಕೊರೆದು ನೊಂದನೆಂದು ಕಂಪ ಬಿಟ್ಟಿತ್ತೆ
◆ತೆರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯಮಾಡಿ ತನ್ನ ನೂಲು ತನ್ನ ಸುತ್ತಿ
◆ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ
ಚನ್ನಬಸವಣ್ಣ - ಕೂಡಲ ಚನ್ನಸಂಗಮದೇವ (ಕಾಲ ಸು 12ನೇ
ಶ)
ಕರಣ ಹಸಗೆ, ಷಟ್ಸ್ಥಲ ವಚನಗಳು,
ಮಂತ್ರಗೋಪ್ಯ, ಮಿಶ್ರಗೊಪ್ಯ ಈತನ ಪ್ರಮುಖ ಕೃತಿಗಳು.
◆ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ
◆ಅತಿಮಥನವೆಂಬ ಶೂನ್ಯಸಿಂಹಾಸನವನೇರಿಕೊಂಡು ನಾವೆ ಹಿರಿಯರು
◆ಅಜ್ಞಾನ ವಶೀಕೃತರಾದವರು ಷಡುದರುಶನಂಗಳಲ್ಲಿ ಹೊಕ್ಕು ಪರದೈವಂಗಳ
◆ಅರಿದೆನೆಂಬನ ಅರಿವೆ ನುಂಗಿತ್ತು. ಮರೆದೆನೆಂಬನ ಮರಹೆ ನುಂಗಿತ್ತು.
◆ಅಜ್ಞಾನವೆಂಬ ಕಾಳಿಕೆವಿಡಿದ ಮನದ ಮೋಹವ ಪರಿಹರಿಸಿದ ಪರಿಯ ನೋಡಿರೆ
◆ಅರಿವು ನಾಸ್ತಿಯಾದುದೆ ಗುರು ಕುರುಹು ನಾಸ್ತಿಯಾದುದೆ ಲಿಂಗ
◆ಆನು ನೀನೆಂಬ ಮೋಹವೆಲ್ಲಿಯದು ಭಾವ ನಿರ್ಭಾವವೆಂಬ ಪ್ರಸಂಗವೆಲ್ಲಿಯದು
◆ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ ಬಾಯ ಬಿಡಲೇತಕೊ
◆ಇನಿಗಬ್ಬಿನೊಳಗಿನ ತನಿರಸವನರಿಯದೆ ಸೋಗೆಯ ಹೊರಗಿನ ರವದಿಯ ಸವಿದು ಸಂತಸಬಡುವ
ಮೇಷದಂತೆ
◆ಉಲಿಗರ ಮಾತು ಊರುಗರ ತೋಟಿಯೊಳಗುಂಟೆ ಲಿಂಗಾನುಭಾವ
◆ ಉಟ್ಟುದನಳಿದು ಬತ್ತಲೆಯಿದ್ದಡೇನು ಆಶನವರತು ವ್ಯಸನ ನಿಂದು ವ್ಯಾಪ್ತಿಗಳು ತಲ್ಲೀಯವಾಗಿದ್ದಡೇನು
◆ಒಡಲಗುಣಧರ್ಮವನು ಬಿಡದೆ ನಡೆವನ್ನಕ್ಕ ಎಡೆವರಿಯದ ಪೂಜೆಯನವರೆತ್ತ ಬಲ್ಲರು
◆ಕುಲ ಚಲ ಮೊದಲಾದ ಅಷ್ಟಮದಂಗಳನರಿತು ದಾಸೋಹಕ್ಕೆಡೆಯಾಗಿರಬೇಕು
◆ಕುಲಹೀನ ಶಿಷ್ಯಂಗೆ ಅನುಗ್ರಹವ ಕೊಟ್ಟು ತನ್ನ ಪ್ರಾಣಲಿಂಗವ ನಿಕ್ಷೇಪಿಸಿ
◆ಕಾಣಬಾರದ ಘನವ ಕರದಲ್ಲಿ ಧರಿಸಿದ ಹೇ ಬಾರದ ಘನವ ಮನದಲ್ಲಿ ತೋರಿದ
◆ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ
◆ಕಲ್ಲದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರಯ್ಯಾ
◆ಕಾಲ ಕಲ್ಪಿತನಲ್ಲ ಕರ್ಮವಿರಹಿತ ಶರಣ. ವಿಧಿ ನಿಷೇಧ ಪುಣ್ಯ-ಪಾಪ-ಕರ್ಮ-ಕಾಯನು
ಅಲ್ಲ ಆ ಶರಣನು
◆ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ
◆ಚಾಂಡಾಲಭಾಂಡದಲ್ಲಿ ಭಾಗೀರಥಿಯುದಕವ ತುಂಬಿದಡೇನೊ ಶುದ್ಧವಾಗಬಲ್ಲುದೆ
◆ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ
◆ನಡೆಯುಳ್ಳವರ ನುಡಿಯೆಲ್ಲ ಬರಡು ಹಯನಾದಂತೆ ನಡೆಯಿಲ್ಲದವರ ನುಡಿಯೆಲ್ಲ ಹಯನು
ಬರಡಾದಂತೆ
◆ನಾನು ನೀನೆಂಬ ಮೋಹವೆಲ್ಲಿಯದೊ ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ
◆ನೀಡಿ ನೀಡಿ ನಿಜವಿಲ್ಲದೆ ಕೆಟ್ಟೆ ಮಾಡಿ ಮಾಡಿ ಮನವಿಲ್ಲದೆ ಕೆಟ್ಟೆನಯ್ಯಾ
◆ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ
◆ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ ತಾವಾದ ಸ್ವತಂತ್ರಶೀಲರೆ
◆ಬೆಲ್ಲದ ನೀರೆರೆದಡೇನು ಬೇವು ಸಿಹಿಯಪ್ಪುದೆ ಕತ್ತುರಿಯ ಲೇಪನವಿತ್ತಡೇನು
◆ಮಾತು ಮಾಣಿಕ್ಯವ ನುಂಗಿ ಜ್ಯೋತಿ ಕತ್ತಲೆಯ ನುಂಗಿ ಆಳು ಆಯ್ದನ ನುಂಗಿ
◆ಮಲವಿಶಿಷ್ಟರಾದ ಮಾನವರು ಬಹಿರಂಗದ ತೀರ್ಥವ ಹೊಕ್ಕು ಅಲ್ಲಿ ಕಾಲು ಕೈ ಮುಂತಾದ
ಸರ್ವಾಂಗವ ತೊಳೆದು
◆ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು ನರಕಕ್ಕಿಳಿದು ಹೋದರು
◆ಮನೆಯೊಳಗಣ ಕಿಚ್ಚು ಕಾನನವ ಸುಟ್ಟಿತ್ತು ಕಾನನ ಬೆಂದಲ್ಲಿ ಮನೆ ಉರಿಯಹತ್ತಿತ್ತು
◆ಮತಿಗೆಟ್ಟ ಕುಂಬಾರ ಮಣ್ಣ ಸೂಚಿಯ ಮಾಡಿ ಕುಂಬಾರಗೇರಿಗೆ ಮಾರಹೋದಡೆ
◆ಲೋಕದ ಡೊಂಕ ನೀವು ತಿದ್ದುವಿರಯ್ಯ ನಿಮ್ಮ ಡೊಂಕ ತಿದ್ದಿ ತೀಡಿಕೊಳಲರಿಯದೆ
◆ವೇದವನೋದಿ ಹೊನಲಲ್ಲಿ ಹೋದ ದ್ವಿಜರು ಕೆಟ್ಟ ಕೇಡಿಂಗೆ ಕಡೆಯಿಲ್ಲ
◆ವೀರಶೈವನಾದಡೆ ಪರಧನವ ಪರಸತಿಯರ ಮುಟ್ಟದಿರಬೇಕು
ಕಪಿಲ ಸಿದ್ದರಾಮ - ಕಪಿಲ ಸಿದ್ದ ಮಲ್ಲಿಕಾರ್ಜುನ (ಕಾಲ ಸು. 1160)
ತಂದೆ ಮುದ್ದುಗೌಡ ತಾಯಿ
ದುಗ್ಗಳೆ.
◆ಹೆಂದದಣು ಮೊದಲಿರುಹೆ ಪಶುಪಕ್ಷಿಮೃಗವಾನೆಗಳ ಹಿತವನ್ನು ಬಯಸುವನು
◆ಅನುಭವವೆಂಬುದು ಅನುಭಾವಿಕಗಲ್ಲದೆ ಹೊತ್ತಗೆಯಲ್ಲಿ ನೋಡಾ
◆ವಚಿಸಿ ವಚಿಸಿ ಅನುಭಾವಿಯಾಗದವ ಪಿಶಾಚಿಯಯ್ಯಾವಚಿಸಿ ಅನುಭವಿಯಾದವ ಪಂಡಿತನಯ್ಯಾ
◆ಶಾಸ್ತ್ರವೆಂಬುದು ಮನ್ಮಥಶಾಸ್ತ್ರವಯ್ಯಾ. ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ
◆ಎಮ್ಮ ವಚನದೊಂದು ಪಾರಾಯಣಕ್ಕೆ ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ
◆ದೇವರ ಬಯಲ ಭಾವ ತನ್ನಲ್ಲಿ ಇಂಬುಗೊಂಡಡೆ ಮುಕ್ತಿ ದೇವ ರೀತಿಯೊಂದು
◆ಆಕಾರವಿಲ್ಲದ ಮೂರ್ತಿಯ ಆಕಾರಕ್ಕೆ ತಂದು ಪೂಜಿಸಿದೆ ನೋಡಾಮನವೆ
◆ನಟ್ಟಡವಿಯೊಳಗೆ ಇರುಳು-ಹಗಲೆನಲ್ಲಿದೆಅಪ್ಪಾ! ಅಯ್ಯಾ!ಎಂದು ನಾನರಸುತ್ತ ಹೋದಡೆ
◆ಕಲ್ಲಿನಲ್ಲಿ ವಲ್ಲಭನಿದ್ದಾನೆಂದು ಅಲ್ಲಾಡುತ್ತಾರೆ ನೋಡಾ ಅಲ್ಲಯ್ಯ
◆ಕಾಯ ಧರಿಸಿದವ ನವನೀತ ರೋಮದಂತಿರಬೇಕು
◆ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯಾ
◆ನುಡಿಯಬಹುದು ಅದ್ವೈತವನೊಂದು ಕೋಟಿ ವೇಳೆ ಒಮ್ಮೆ ನಡೆಯಬಹುದೆ
◆ವೇಷವ ಧರಿಸಿ ಫಲವೇನಯ್ಯ ವೇಷದಂತಾಚರಣೆ ಇಲ್ಲದನ್ನಕ್ಕ
◆ನದಿಯ ನೀರು ಹೋದವಯ್ಯ ಸಮುದ್ರಕ್ಕೆ ಸಮುದ್ರದ ನೀರು ಬರವಯ್ಯ ನದಿಗೆ
ನೀಲಾಂಬಿಕೆ (ಕಾಲ ಸು ೧೧೭೦)
ವಿಚಾರಪತ್ನಿ
ಎಂದು ತನ್ನನ್ನು ಕರೆದುಕೊಂಡಳು.
◆ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ, ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
◆ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು, ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು.
◆ಸರ್ವಾಂಗಶುದ್ಭವಾಗಿ ಲಿಂಗದೇಹಿಯಾನಾದೆನು, ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡದೆನು.
ಮುಕ್ತಾಯಕ್ಕ (ಕಾಲ ಸು ೧೧೭೦)
ಗದಗ ಜಿಲ್ಲೆಯ ಲಕ್ಕುಂಡಿ
ಈಕೆಯ ಜನ್ಮಸ್ಥಳ
◆ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು. ಕಬ್ಬುನ ಉಂಡ ನೀರಿನಂತೆ ಕಬ್ಬಿಸಿಲುಂಡ
ಅರಿಸಿನದಂತೆ.
◆
ಸುಮ್ಮನೇಕೆ ದಿನಕಳೆವಿರಿ ಸುಮ್ಮನೇಕೆ ಹೊತ್ತುಗಳೆವಿರಿ ಸುಮ್ಮನೇಕೆ
ಹೊತ್ತಗಳೆವಿರಿ ಸ್ವಾಮಿಗಳಿರಾ
◆
ನುಡಿಯಲುಬಾರದು ಕೆಟ್ಟನುಡಿಗಳ ನಡೆಯಲುಬಾರದು ಕೆಟ್ಟನಡೆಗಳ.
◆
ನೀರಬೊಂಬೆಗೆ ನಿರಾಳದ ಗೆಜ್ಜೆಯಕಟ್ಟಿ ಬಯಲಬೊಂಬೆಯ ಕೈಯಲ್ಲಿ ಕೊಟ್ಟು
◆
ಸಿಡಿಲು ಹೊಯ್ದ ಸೋಪಾನವೇಕೊ ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ
◆
ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಆಳಿಗೊಂಡಡೆ ಆನು ಅಂಜುವವಳಲ್ಲ
◆
ಅಲರೊಳಡಗಿದ ಪರಿಮಳದಂತೆ ಪತಂಗದೊಳಡಗಿದ ಅನಲದಂತೆ
◆ಗುರುವಚನದಿಂದಲ್ಲದೆ ಲಿಂಗವನರಿಯಬಾರದು ಗುರುವಚನದಿಂದಲ್ಲದೆ ಜಂಗಮವನರಿಯಬಾರದು.
ಅಂಬಿಗರ ಚೌಡಯ್ಯ (ಕಾಲ ಸು 12ನೇ ಶ)
ತಂದೆ ವಿರೂಪಾಕ್ಷ, ತಾಯಿ
ಪಂಪಾದೇವಿ.
◆ಉಂಡರೆ ಭೂತನೆಂಬರು ಉಣದಿದ್ದರೆ
ಚಾತಕನೆಂಬರು ಭೋಗಿಸಿದರೆ ಕಾಮಿಯೆಂಬರು
◆ಜಾತಿ ಭ್ರಮೆ ನೀತಿ ಭ್ರಮೆ ಎಂಬ
ಕರ್ಮಂಗಳನು ಘಾತಿಸಿ ಕಳೆಯಬಲ್ಲಡಾತ ಯೋಗಿ
◆ಕೇಳಿರಯ್ಯ ಮಾನವರೇ ಶಿಲದಲಿ
ಸಂಪನ್ನರಾದವರು ನೀವು ಕೇಳಿರೋ
◆ದೇಹಾರವ ಮಾಡುವಣ್ಣಗಳಿರಾ ಒಂದು
ತುತ್ತು ಆಹಾರವನ್ನಿಕ್ಕಿರೇ
◆ಕುರಿಕೋಳಿ ಕಿರುಮೀನ ಊರೊಳಗೆ ಇರು
ಎಂಬರು ಅಮೃತಾನ್ನವ ತಿಂಬ ಗೋವಾ ತಿಂಬವರ ಊರ ಹೊರಗಿರು ಎಂಬರು.
ಶೂನ್ಯ ಸಂಪಾದನಕಾರರು
ಶಿವಗಣಪ್ರಸಾದಿ
ಮಹಾದೇವಯ್ಯ ೧೪೦೦-೧೪೩೦
ಹಲಗೆಯ
ದೇವ ೧೫೦೦-೧೫೩೦
ಗುಮ್ಮಳಾಪುರ
ಸಿದ್ಧಲಿಂಗಯತಿ ೧೫೬೦-೧೫೭೦
ಗೋಳೂರು
ಸಿದ್ಧವೀರಣ್ಣೊಡೆಯ ೧೫೭೦-೧೫೮೦
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ