ನವ್ಯ ಸಾಹಿತ್ಯ ಭಾಗ 1
ನವ್ಯ ಸಾಹಿತ್ಯ
ಇಂಗ್ಲಿಷಿನ ಮಾಡರ್ನಿಸಂ ಗೆ
ಸಂವಾದಿಯಾಗಿ ನವ್ಯ ಪರಿಕಲ್ಪನೆ ಕನ್ನಡ ಸಾಹಿತ್ಯದಲ್ಲಿ ಮೂಡಿಬಂತು. ಪಾಶ್ಚಾತ್ಯವಾದದ ತಾತ್ವಿಕ
ಚಿಂತನೆ, ಅಸ್ತಿತ್ವವಾದ ಮತ್ತು ಅಸಂಗತವಾದಗಳನ್ನು
ಬಳಸಿಕೊಂಡು ಈ ಸಾಹಿತ್ಯಿಕ ಪರಂಪರೆ ಕನ್ನಡದಲ್ಲಿ ಬೇರೂರಿತು. ಪಾಶ್ಚಾತ್ಯ
ಸಾಹಿತಿಗಳಾದ ಎಜ್ರಾ ಪೌಂಡ್, ಟಿ.ಎಸ್ ಎಲಿಯಟ್, ಅಲ್ಬರ್ಟ್ ಕಮು, ಫ್ರಾಂಜ್ ಕಾಫ್ಕಾ, ಜೀನ್ ಪಾಲ್ ಸಾತ್ರೆ ಮುಂತಾದವರು ಕನ್ನಡ ನವ್ಯ ಸಾಹಿತಿಗಳ ಮೇಲೆ ಪ್ರಭಾವ ಬೀರಿದರು
1950 ರಲ್ಲಿ
ವಿನಾಯಕರ ಒಂದು ರೇಡಿಯೋ ಭಾಷಣ ಈ ಪರಂಪರೆಗೆ ನಾಂದಿ ಹಾಡಿತು. ವಿನಾಯಕರ
ಸಮುದ್ರ ಗೀತೆಗಳು ಕವನಸಂಕಲನದಲ್ಲಿ ನವ್ಯದ ಮೊದಲ ಕುರುಹನ್ನು ಕಾಣಬಹುದು. ನಂತರ ಗೋಪಾಲಕೃಷ್ಣ
ಅಡಿಗರು ತಮ್ಮ ಕವನಗಳ ಮೂಲಕ ನವ್ಯ ಪರಂಪರೆಗೆ ನಾಂದಿ ಹಾಡಿದರು
ಆಧುನಿಕ ಬದುಕಿನ ಒತ್ತಡದ
ಸಂಕೇತಗಳಾದ ಸಿನಿಕತನ, ಅನಾಥಪ್ರಜ್ಞೆ,
ಪರಕೀಯತೆ ಮುಂತಾದವು ನವ್ಯ. ಸಾಹಿತ್ಯದಲ್ಲಿ ಬಳಕೆಯಾದವು. ಮನುಷ್ಯನ ಅಂತರಂಗದ ವಿಮರ್ಶೆ, ನಗರ ಜೀವನದ ಯಾಂತ್ರಿಕ ಬದುಕು,
ಪ್ರತಿಮೆಗಳ ಮೂಲಕ ಅಲೋಚನೆ ಮತ್ತು ಭಾವನೆಗಳ ಅಭಿವ್ಯಕ್ತಿ ಮುಂತಾದವು ನವ್ಯ ಯುಗದ
ಪ್ರಮುಖ ಲಕ್ಷಣಗಳು
ವಿನಾಯಕ ಕೃಷ್ಣ ಗೋಕಾಕ (1909 - 1992)
ಆಕ್ಸ್ಫರ್ಡ್ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು
ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ
ಕಾದಂಬರಿ : ಸಮರಸವೇ ಜೀವನ (ಇಜ್ಜೋಡು), ಏರಿಳಿತ, ಸಮುದ್ರಯಾನ, ನಿರ್ವಹಣ
ನರಹರಿ
ಕವನ ಸಂಕಲನ : ಕಲೋಪಾಸಕ, ಪಯಣ,
ಸಮುದ್ರಗೀತೆಗಳು (ಕೊಡದಿರು ಶರಧಿಗೆ ಷಟ್ಪದಿಗೆ ದೀಕ್ಷೆಯನು ಎಂಬ ಪ್ರಸಿದ್ಧ ಸಾಲು ಈ
ಕವನಸಂಕಲನದಲ್ಲಿದೆ), ನವ್ಯ ಗೀತೆಗಳು, ತ್ರಿಶಂಕುವಿನ
ಪ್ರಜ್ಞಾ ಪ್ರಭಾತ, ಊರ್ಣನಾಭ, ಉಗಮ, ಬಾಳದೇಗುಲದಲ್ಲಿ, ಸಿಮ್ಲಾ ಸಿಂಫನಿ, ಪಾರಿಜಾತದಡಿಯಲ್ಲಿ, ಅಭ್ಯುದಯ, ಭಾಗವತ
ನಿಮಿಷಗಳು, ಹಿಗ್ಗು, ಕಾಶ್ಮೀರ, ಸುನೀತಗಳು, ಪುಣ್ಯಭೂಮಿ, ಭಾವರಾಗ,
ಕೊನೆಯ ದಿನ, ಸಸ್ಯಸೃಷ್ಟಿ
ದ್ಯಾವಾಪೃಥಿವೀ (ನೀರದ ಮತ್ತು
ಇಳಾಗೀತ ಎಂಬ ಎರಡು ಭಾಗಗಳು - ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ)
ಭಾರತ ಸಿಂಧು ರಶ್ಮಿ (ಋಗ್ವೇದ
ಕಾಲದ ರಾಜಕೀಯ ಹಾಗೂ ಆರ್ಯ - ಅನಾರ್ಯರ ನಡುವಿನ ಹೋರಾಟ ಇಲ್ಲಿನ ವಸ್ತು - ಮಹಾಕಾವ್ಯ -
ಜ್ಞಾನಪೀಠ)
ತ್ರಿವಿಕ್ರಮರ ಆಕಾಶಗಂಗೆ (ಚಂಪೂ), ಇಂದಲ್ಲ ನಾಳೆ (ಚಂಪೂ - ಆಧುನಿಕ ಅಮೇರಿಕಾದ ಜೀವನ)
ಸಾಹಿತ್ಯ ವಿಮರ್ಶೆ : ಕವಿಕಾವ್ಯ ಮಹೋನ್ನತಿ, ನವ್ಯ ಮತ್ತು ಕಾವ್ಯ ಜೀವನ, ಇಂದಿನ ಕನ್ನಡ
ಕಾವ್ಯದ ಗೊತ್ತುಗುರಿಗಳು, ಸಾಹಿತ್ಯದಲ್ಲಿ ಪ್ರಗತಿ, ಸಾಹಿತ್ಯ ವಿಮರ್ಶೆಯ ಕೆಲವು ಮೂಲ ತತ್ವಗಳು, ವಿಶ್ವಮಾನವ
ದೃಷ್ಟಿ, ಸೌಂದರ್ಯ ಮೀಮಾಂಸೆ, ಆಂಗ್ಲ ಸಾಹಿತ್ಯ ನೀಡಿದ ಸ್ಪೂರ್ತಿ, ಅರ್ಪಣ ದೃಷ್ಟಿ, ವಿಮರ್ಶೆಯ
ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ
ಪತ್ರ ಪ್ರಬಂಧಗಳು : ಜೀವನ ಪಾಠಗಳು
ಪ್ರಬಂಧ ಸಂಕಲನ : ಚೆಲುವಿನ ನಿಲುವು
ಪ್ರವಾಸ ಕಥನ : ಸಮುದ್ರದಾಚೆಯಿಂದ (ಇಂಗ್ಲೆಂಡ್ ಪ್ರವಾಸ), ಪಯಣಿಗ, ಸಮುದ್ರದೀಚೆಯಿಂದ (ಜಪಾನ್ ಪ್ರವಾಸ)
ನಾಟಕಗಳು : ಜನನಾಯಕ, ವಿಮರ್ಶಕ
ವೈದ್ಯ, ಯುಗಾಂತರ, ಮುನಿದ ಮಾರಿ
ಅಭಿನಂದನಾ ಗ್ರಂಥ : ವಿನಾಯಕ ವಾಙ್ಮಯ
1958 ರಲ್ಲಿ
ಬಳ್ಳಾರಿಯಲ್ಲಿ ನಡೆದ 40 ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು
ಕೆ ಎಸ್ ನರಸಿಂಹಸ್ವಾಮಿ (1915 - 2003)
ಪ್ರೇಮಕವಿ ಮಲ್ಲಿಗೆಯ ಕವಿ
ಎಂದೇ ಜನಪ್ರಿಯ
ಕವನ ಸಂಕಲನ : ಶಿಲಾಲತೆ (ನಗರ ಜೀವನದ ಸಮಸ್ಯೆಗಳು), ತೆರೆದ ಬಾಗಿಲು (ಕೇಂದ್ರ ಸಾಹಿತ್ಯ ಅಕಾಡೆಮಿ), ದುಂಡು ಮಲ್ಲಿಗೆ
(ಪಂಪ ಪ್ರಶಸ್ತಿ), ಮೈಸೂರು ಮಲ್ಲಿಗೆ, ಐರಾವತ,
ದೀಪದ ಮಲ್ಲಿ, ಉಂಗುರ, ಇರುವಂತಿಗೆ,
ನವಿಲದನಿ, ಸಂಜೆ ಹಾಡು, ಹಾಡು
- ಹಸೆ, ಕೈಮರದ ನೆಳಲಲ್ಲಿ, ಎದೆ ತುಂಬ
ನಕ್ಷತ್ರ, ಮೌನದಲಿ ಮಾತ ಹುಡುಕುತ್ತ, ದೀಪ
ಸಾಲಿನ ನಡುವೆ, ಮಲ್ಲಿಗೆಯ ಮಾಲೆ, ಮನೆಯಿಂದ
ಮನೆಗೆ, ನವ ಪಲ್ಲವ, ಗಡಿಯಾರದಂಗಡಿಯ ಮುಂದೆ,
ಕೆಲವು ಚೀನಿ ಹಾಡುಗಳು.
ಕಥಾ ಸಂಕಲನ : ಮಾರಿಯ ಕಲ್ಲು
ವಿಮರ್ಶೆ : ದಮಯಂತಿ, ಉಪವನ
ಅನುವಾದ : ನನ್ನ ಕನಸಿನ ಭಾರತ, ಮೋಹನ
ಮಾಲೆ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ,
ಪುಷ್ಕಿನ್ ಕವಿತೆಗಳು, ಹಕಲ್ ಬರಿಫಿನ್ನನ ಸಾಹಸಗಳು,
ಸುಬ್ರಹ್ಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ರಾಣಿಯ ಗಿಳಿ ಮತ್ತು ರಾಜನ ಮಂಗ, ರಾಬರ್ಟ್ ಬರ್ನ್ಸ್
ಪ್ರೇಮಗೀತೆಗಳು
ಅಭಿನಂದನಾ ಗ್ರಂಥ : ಚಂದನ
1990 ರಲ್ಲಿ
ಮೈಸೂರಿನಲ್ಲಿ ನಡೆದ 60 ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು
ಗೋಪಾಲಕೃಷ್ಣ ಅಡಿಗ (1918 - 1992)
ಅಡಿಗರು ನವ್ಯ ಮಾರ್ಗ
ಪ್ರವರ್ತಕರು
ವೈಚಾರಿಕ ಲೇಖನ : ಮಣ್ಣಿನ ವಾಸನೆ, ಕನ್ನಡ ಅಭಿಮಾನ, ವಿಚಾರಪಥ, ನಮ್ಮ ಶಿಕ್ಷಣ ಕ್ಷೇತ್ರ ಮುಂತಾದವು.
ಕವನ ಸಂಕಲನ : ಭಾವತರಂಗ, ಕೃಷ್ಣನ
ಕೊಳಲು (ಈ ಕವನ ಸಂಕಲನದ ಮೂಲಕ ಕನ್ನಡ ಸಾಹಿತ್ಯದಲ್ಲಿ ನವ್ಯ ಮಾರ್ಗ ಆರಂಭವಾಯಿತು), ವರ್ಧಮಾನ ( ಕೇಂದ್ರ ಸಾಹಿತ್ಯ ಅಕಾಡಮಿ), ಸುವರ್ಣ
ಪುತ್ಥಳಿ (ಪಂಪ ಪ್ರಶಸ್ತಿ), ಹಿಮಗಿರಿಯ ಕಂದರ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ, ಇದನ್ನು
ಬಯಸಿರಲಿಲ್ಲ, ಮೂಲಕ ಮಹಾಶಯರು, ಬತ್ತಲಾರದ
ಗಂಗೆ, ಚಿಂತಾಮಣಿಯಲ್ಲಿ ಕಂಡ ಮುಖ, ಬಾ ಇತ್ತ
ಇತ್ತ.
ಕಾದಂಬರಿಗಳು : ಅನಾಥೆ, ಆಕಾಶದೀಪ
ಅನುವಾದ : ಹುಲ್ಲಿನ ದಳಗಳು ಸುವರ್ಣ ಕೀಟ, ಭೂಗರ್ಭ ಯಾತ್ರೆ, ರೈತರ ಹುಡುಗಿ, ಜನತೆಯ ಶತೃ, ದೆವ್ವದ ಕಥೆಗಳು, ಮುಕ್ತಾಫಲ, ಇತಿಹಾಸ ಚಕ್ರ ಮುಂತಾದವು.
ಅಭಿನಂದನಾ ಗ್ರಂಥ : ಸಂವೇದನೆ
1979 ರಲ್ಲಿ
ಧರ್ಮಸ್ಥಳದಲ್ಲಿ ನಡೆದ 51 ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು
ಪಾಟೀಲ ಪುಟ್ಟಪ್ಪ (1921 - 2020)
ಪತ್ರಿಕೆ : ಪ್ರಪಂಚ
ಪ್ರಬಂಧ ಸಂಕಲನಗಳು : ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಗವಾಕ್ಷ ತೆರೆಯಿತು, ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು
ಜೀವನ ಚರಿತ್ರೆ : ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು
ಕಥಾಸಂಕಲನ : ಶಿಲಾಬಾಲಿಕೆ ನುಡಿದಳು, ಸಾವಿನ ಮೇಜವಾನಿ
ಸು ರಂ ಎಕ್ಕುಂಡಿ (1923 - 1995)
ಕವನ ಸಂಕಲನ : ಬಕುಳದ ಹೂವುಗಳು (ಕೇಂದ್ರ ಸಾಹಿತ್ಯ ಅಕಾಡೆಮಿ), ಶ್ರೀ
ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು, ಮಾತು ಮಾತು
ಮಥಿಸಿ, ಗೋದಿಯ ತೆನೆಗಳು
ಕಥಾಸಂಕಲನ : ನೆರಳು, ಲೆನಿನ್ನರ
ನೆನಪಿಗಾಗಿ
ಕಾದಂಬರಿ : ವರುಣ ಕುಂಜ, ತಾಳ
- ತಂಬೂರಿ
ಅನುವಾದ : ಎರಡು ರಶಿಯನ್ ಕಾದಂಬರಿಗಳು, ಪ್ರತಿಬಿಂಬಗಳು
ಜೀವನ ಚರಿತ್ರೆ : ಮಧ್ವಮುನಿಗಳು, ಶ್ರೀ
ಪು ತಿ ನರಸಿಂಹಾಚಾರ್ಯರು
ವ್ಯಾಸರಾಯ ಬಲ್ಲಾಳ (1923 -
2008)
ಕಥಾಸಂಕಲನ : ಸಂಪಿಗೆ ಹೂ,
ಮಂಜರಿ, ಕಾಡು ಮಲ್ಲಿಗೆ, ತ್ರಿಕಾಲ,
ಬದುಕಿನ ಆದರ್ಶ, ಮಿಳ್ಳಿ ರಾಮಾಯಣ
ಕಾದಂಬರಿಗಳು : ಬಂಡಾಯ (ಕೇಂದ್ರ ಸಾಹಿತ್ಯ ಅಕಾಡೆಮಿ), ಅನುರಕ್ತೆ (ಚಲನಚಿತ್ರ), ವಾತ್ಸಲ್ಯಪಥ,
ಉತ್ತರಾಯಣ, ಹೇಮಂತಗಾನ, ಆಕಾಶಕ್ಕೊಂದು
ಕಂದೀಲು, ಹೆಜ್ಜೆ ಗುರುತು
ಅನುವಾದ ನಾಟಕಗಳು : ಗಿಳಿಯು ಪಂಜರದೊಳಿಲ್ಲ (ಇಬ್ಸನ್), ಮುಳ್ಳೆಲ್ಲಿದೆ ಮಂದಾರ (ಬರ್ನಾಡ್ ಶಾ)
ಮಕ್ಕಳ ಸಾಹಿತ್ಯ : ಖುರ್ಶಿದ್ ನರಮನ್
ಲೇಖನ ಸಂಗ್ರಹ : ಮುಂಬಯಿ ಡೈರಿ,
ಮುಂಬಯಿಯ ನಂಟು ಮತ್ತು ಕನ್ನಡ
ಪ್ರವಾಸ ಸಾಹಿತ್ಯ : ನಾನೊಬ್ಬ ಭಾರತೀಯ ಪ್ರವಾಸಿ
ಗಂಗಾಧರ ಚಿತ್ತಾಲ (1923 - 1987)
ಕವನ ಸಂಕಲನ : ಕಾಲದ ಕರೆ, ಮನುಕುಲದ
ಹಾಡು, ಹರಿವ ನೀರಿದು, ಸಂಪರ್ಕ
ಶಾಂತರಸ (1924 - 2008)
ಪತ್ರಿಕೆ : ಪ್ರತೀಕ
ಕವನ ಸಂಕಲನ : ಮಾನಸಗಳ್ಳಿ ಬಯಲು, ಬಯಲುಸೀಮೆಯ ಬಿಸಿಲು, ಗಜಲ್ ಮತ್ತು ದ್ವಿಪದಿ
ಕಥಾ ಸಂಕಲನ : ಬಡೇಸಾಬು ಪುರಾಣ, ನಾಯಿ ಮತ್ತು ಪಿಂಚಣಿ, ಸ್ವಾತಂತ್ರ್ಯ ವೀರ ಮತ್ತು ಇತರ
ಕಥೆಗಳು, ಉರಿದ ಬದುಕು (ಆಯ್ದ ಕಥೆಗಳು)
ಕಾದಂಬರಿ : ಸಣ್ಣ ಗೌಡಸಾನಿ
ನಾಟಕ : ಸತ್ಯಸ್ನೇಹಿ (ಗೀತನಾಟಕ), ಶರಣ ಬಸವೇಶ್ವರ (ರೇಡಿಯೊ ನಾಟಕ), ನಂಜು ನೊರೆವಾಲು, ಮರೆಯಾದ ಮಾರಮ್ಮ
ಜೀವನ ಚರಿತ್ರೆ : ಸಿದ್ಧರಾಮ, ಆಯ್ದಕ್ಕಿ
ಮಾರಯ್ಯ ದಂಪತಿಗಳು, ನಾರದಗಡ್ಡೆ ಚೆನ್ನಬಸವ ಸ್ವಾಮಿಗಳು, ಬಸರೀಗಿಡದ ವೀರಪ್ಪ, ಕಲಬುರ್ಗಿಯ ದೊಡ್ಡಪ್ಪ ಅಪ್ಪ
ಪ್ರಬಂಧ : ಬಹುರೂಪ, ಉಲಿವ
ಮರ
ಪ್ರಬಂಧ ಸಂಕಲನ ಸಂಪಾದನೆ : ಮುಸುಕು ತೆರೆ, ಕಲ್ಯಾಣದೀಪ, ಬೆನ್ನ ಹಿಂದಿನ ಬೆಳಕು, ನಮನ
ಸಂಶೋಧನೆ : ಬಸವಪೂರ್ವ ಯುಗದ ಶರಣರು, ಮೊದಲ ವಚನಕಾರ ಮಾದಾರ ಚನ್ನಯ್ಯ, ಎಡದೊರೆ ನಾಡಿನ
ಅನುಭಾವಿ ಕವಿಗಳು, ಬಳ್ಳಾರಿ ಜಿಲ್ಲೆಯ ಶಿವಶರಣರು
ಸಂಪಾದನೆ : ಹೊಸ ಜನಾಂಗದ ಕವಿತೆ (ಕವನಗಳ ಸಂಪಾದನೆ), ಸಂಗವಿಭುವಿನ ಮೂರು ಶತಕ, ವೀರಭದ್ರ ಕವಿಯ ಅರವತ್ತುಮೂರು ಪುರಾಣ, ಕೂಡಲೂರು ಬಸವಲಿಂಗ ಶರಣರ ಸ್ವರವಚನಗಳು, ಕಲ್ಲೂರು
ಲಿಂಗಣ್ಣವೊಡೆಯನ ಬಾರಮಾಸ, ಭುವನೈಕ ನಾಯಕೀ ಶತಕ, ಬಂಡಾಯ ವಚನಗಳು, ರಸಿಕ ಚಕ್ರಿ ಹರಿಹರದೇವ, ಕಾಯಕ ಪರಿಣಾಮ
ಅನುವಾದ : ಉಮ್ರಾವ್ ಜಾನ್ ಅದಾ
2006 ರಲ್ಲಿ
ಬೀದರದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
ವಹಿಸಿದ್ದರು.
ಬಿ ಸಿ ರಾಮಚಂದ್ರಶರ್ಮ (1925 - 2005)
ಕವನ ಸಂಕಲನಗಳು : ಸಪ್ತಪದಿ (ಕೇಂದ್ರ ಸಾಹಿತ್ಯ ಅಕಾಡೆಮಿ), ಹೃದಯಗೀತ, ಏಳು
ಸುತ್ತಿನ ಕೋಟೆ, ಹೇಸರಗತ್ತೆ, ಬ್ರಾಹ್ಮಣ ಹುಡುಗ,
ಮಾತು ಮಾಟ, ಭುವಿ ನೀಡಿದ ಸ್ಫೂರ್ತಿ, ದೆಹಲಿಗೆ ಬಂದ ಹೊಸ ವರ್ಷ, ಗೆಷ್ಚರ್ಸ್
ನಾಟಕಗಳು : ಬಾಳಸಂಜೆ (ಭಾರತದ ಮೊದಲ ಸ್ವಾತಂತ್ರ್ಯ
ಸಂಗ್ರಾಮ), ನೀಲಿ ಕಾಗದ, ನೆರಳು, ವೈತರಣಿ (ಗೀತ ನಾಟಕ), ಸೆರಗಿನ ಕೆಂಡ (ರೇಡಿಯೊ ನಾಟಕ)
ಕಥಾ ಸಂಕಲನ : ಮಂದಾರ ಕುಸುಮ, ಏಳನೆಯ
ಜೀವ, ಕತೆಗಾರನ ಕತೆ, ಬೆಳಗಾಯಿತು
ಅನುವಾದ : ಈ ಶತಮಾನದ ನೂರು ಇಂಗ್ಲಿಷ್ ಕವನಗಳು
ಇತರ ಪ್ರಮುಖ ಕೃತಿಗಳು : ಪ್ರತಿಭಾ ಸಂದರ್ಶನ, ಕಾರಂಜಿ, ಬಿ ಎಮ್ ಎಸ್ ದ ಮ್ಯಾನ್ ಅಂಡ್ ವರ್ಕ್ಸ್.
ಮುದೇನೂರು ಸಂಗಣ್ಣ (1927 - 2008)
ನಾಟಕ : ನವಿಲು ಕುಣಿದಾವ, ಸೂಳೆಸಂಕವ್ವ,
ಚೌತಿಚಂದ್ರ, ಬಂಗಾರದ ತಟ್ಟೆ, ಕರುಣೆಯ ಕಂದ, ಜನ ಅರಣ್ಯ, ಮೋಚಿಮಾವ,
ಅಂಗುಲಿಮಾಲ, ಅವ್ವಣ್ಣೆವ್ವ (ಜನಪದ ಗೀತನಾಟಕ),
ಶೀಲಾವತಿ ಮತ್ತು ಬಾಳಭಿಕ್ಷುಕ, ಬುದ್ಧ, ಸುನಾಮಿ ಸುನಾಮಿ
ಜನಪದ ಸಾಹಿತ್ಯ : ಚಿತ್ರಪಟ ರಾಮಾಯಣ (ಜನಪದ ನಾಟಕ), ಜನಪದ ಮುಕ್ತಕಗಳು (ಜನಪದ ಕಾವ್ಯ), ಗೊಂದಲಿಗ ದೇವೇಂದ್ರಪ್ಪನ
ಹಾಡುಗಳು (ಜನಪದ ಆಟಗಳ ಸಂಗ್ರಹ), ಹಳ್ಳಿಯ ಹಾಡುಗಳು, ಗೊಂಬಿಗೌಡರ ಸೂತ್ರದ ಗೊಂಬಿ ಆಟಗಳು, ಗೊಂದಲಿಗರ ಜೀವನಾಧಾರಿತ
ಕಥೆಗಳು.
ಕಾವ್ಯ : ಆ ಅಜ್ಜ ಈ ಮೊಮ್ಮಗ
ನಿಘಂಟು : ಚಿಗಟೇರಿ ಪದಕೋಶ
ಅನುವಾದ : ಘಾಸಿರಾಮ ಕೊತ್ವಾಲ್, ಭಾರತದ ಪ್ರೇಮ ಕತೆಗಳು, ಥಾವೊ ಕಾಹಿಸಿ, ಏಕದಾ ನಿಶಾತ್ ಕಾಲೆ
ಚನ್ನವೀರ ಕಣವಿ (1928- )
ಶಿವರುದ್ರಪ್ಪನವರಂತೆ ಇವರೂ
ಸಹ ನವೋದಯ ಹಾಗೂ ನವ್ಯ ಎಂಬ ಪಂಥಗಳಿಗೆ ಸಿಲುಕದೆ ಬರೆದರು. ಹಾಗಾಗಿಯೇ ಇವರನ್ನು ಸಮನ್ವಯ ಕವಿ
ಎನ್ನುತ್ತಾರೆ.
ಕಾವ್ಯಸಂಕಲನ : ಜೀವಧ್ವನಿ (ಕರ್ನಾಟಕ ಏಕೀಕರಣದ ಅಂಶ - ಕೇಂದ್ರ ಸಾಹಿತ್ಯ
ಅಕಾಡೆಮಿ), ಆಕಾಶಬುಟ್ಟಿ (ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಆಶಯ), ದಾರಿ ದೀಪ (ನಗರ
ಜೀವನದ ಅಶಾಂತ ಬದುಕು ಗ್ರಾಮ ಜೀವನದೆಡೆಗೆ ಒಲವು), ಕಾರ್ತೀಕದ ಮೋಡ (ಕನ್ನಡ ನಾಡು ನುಡಿಯ ಕುರಿತ
ಪ್ರೇಮ), ಜೀನಿಯಾ (ನಿಸರ್ಗದ ನಾಶದ ಕುರಿತು ಚಿಂತೆ ಮತ್ತು ಪರಿಸರ ಪ್ರಜ್ಞೆ)
ಕಾವ್ಯಾಕ್ಷಿ, ಭಾವಜೀವಿ,
ಮಧುಚಂದ್ರ, ಮಣ್ಣಿನ ಮೆರವಣಿಗೆ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಹೊಂಬೆಳಕು,
ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ (ಆಯ್ದ ಕವನಗಳು), ಹೂವು ಹೊರಳುವವು ಸೂರ್ಯನ ಕಡೆಗೆ
ಪ್ರಬಂಧ ಸಂಕಲನ : ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ,
ಸಮತೋಲನ
ಮಕ್ಕಳ ಕವಿತೆ : ಹಕ್ಕಿ ಪುಕ್ಕ, ಚಿಣ್ಣರ
ಲೋಕವ ತೆರೆಯೋಣ
ಸಂಪಾದನೆ : ಕನ್ನಡದ ಕಾಲು ಶತಮಾನ, ಸಿದ್ಧಿ ವಿನಾಯಕ ಮೋದಕ, ಕವಿತೆಗಳು, ನವಿಲೂರು ಮನೆಯಿಂದ, ನವ್ಯಧ್ವನಿ, ನೈವೇದ್ಯ,
ನಮ್ಮೆಲ್ಲರ ನೆಹರೂ, ಜೀವನ ಸಿದ್ಧಿ, ಆಧುನಿಕ ಕನ್ನಡ ಕಾವ್ಯ, ಸುವರ್ಣ ಸಂಪುಟ, ರತ್ನ ಸಂಪುಟ, ಬಾಬಾ ಫರೀದ, ಮಾಡರ್ನ್
ಕನ್ನಡ ಪೊಯೆಟ್ರಿ
ಆತ್ಮಕಥೆ : ಭಾವಜೀವ
ಅಭಿನಂದನ ಗ್ರಂಥ : ಚಂಬೆಳಕು
1996 ರಲ್ಲಿ
ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು.
ಯಶವಂತ ಚಿತ್ತಾಲ (1928 - 2014)
ಕಥಾಸಂಕಲನಗಳು : ಕಥೆಯಾದಳು ಹುಡುಗಿ (ಕೇಂದ್ರ ಸಾಹಿತ್ಯ
ಅಕಾಡೆಮಿ), ಸಂದರ್ಶನ, ಆಬೋಲಿನ, ಆಟ,
ಬೇನ್ಯಾ, ಕುಮಟೆಗೆ ಬಂದಾ ಕಿಂದರಿಜೋಗಿ, ಓಡಿ ಹೋದಾ ಮುಟ್ಟಿ ಬಂದಾ, ಸಿದ್ಧಾರ್ಥ, ಐವತ್ತೊಂದು ಕತೆಗಳು, ಪುಟ್ಟನ ಹೆಜ್ಜೆ ಕಾಣೋರಿಲ್ಲ, ಕೋಳಿ ಕೂಗುವ ಮುನ್ನ.
ಕಾದಂಬರಿಗಳು : ಶಿಕಾರಿ (ನಗರ ಜೀವನದ ಸಮಸ್ಯೆ, ಹಣ ಅಧಿಕಾರಗಳಿಗಾಗಿ ಮನುಷ್ಯನನ್ನೇ ಬೇಟೆಯಾಡುವ ಮನುಷ್ಯನ ಮೃಗೀಯ ಸ್ವಭಾವದ ಅನಾವರಣ),
ಮೂರು ದಾರಿಗಳು, ಛೇದ, ಪುರುಷೋತ್ತಮ, ಕೇಂದ್ರ ವೃತ್ತಾಂತ
ಪ್ರಬಂಧ ಸಂಗ್ರಹಗಳು : ಸಾಹಿತ್ಯ ಸೃಜನಶೀಲತೆ ಮತ್ತು ನಾನು, ಸಾಹಿತ್ಯದ ಸಪ್ತಧಾತುಗಳು, ಅಂತಃಕರಣ
ಅನುವಾದ : ಖೇಲ್ ಅನಿಹೇರ್ ಕಥಾ, ಕಾಣಿ ಜಾಲೀ ಚಲೀ, The boy
who talked tress
ಕೀರ್ತಿನಾಥ ಕುರ್ತಕೋಟಿ (1928 - 2003)
ಕವನ ಸಂಕಲನ : ಗಾನಕೇಳಿ, ನಾವು
ಬರಿಗೈಯವರು
ನಾಟಕ : ಆ ಮನಿ, ಸ್ವಪ್ನದರ್ಶಿ ಮತ್ತು ಇತರ ಗೀತ ನಾಟಕಗಳು, ಸ್ವಪ್ನ ವಾಸವದತ್ತೆ (ಭಾಸನ ಸಂಸ್ಕೃತ ನಾಟಕದ ಅನುವಾದ), ಚಂದ್ರಗುಪ್ತ
ವಿಮರ್ಶೆ : ಉರಿಯ ನಾಲಿಗೆ (ಕೇಂದ್ರ ಸಾಹಿತ್ಯ ಅಕಾಡೆಮಿ),
ಯಶೋಧರ ಚರಿತ್ರೆಯ ಕಾವ್ಯತಂತ್ರ, ಕುಮಾರ ವ್ಯಾಸ,
ವಿಮರ್ಶೆಯ ವಿನಯ - ನಾಟಕ, ವಿಮರ್ಶೆಯ ವಿನಯ - ಕಾದಂಬರಿ,
ಸಂಸ್ಕೃತಿ ಸ್ಪಂದನ, ರಾಜಸ್ಪರ್ಶ, ನೂರು ಮರ ನೂರು ಸ್ವರ, ಸಾಂಸ್ಕೃತಿಕ ಕಾವ್ಯಶಾಸ್ತ್ರ,
ಸಾಹಿತ್ಯ ಮತ್ತು ಸಾಹಿತ್ಯ ಪ್ರಜ್ಞೆ, ಕನ್ನಡ ಸಾಹಿತ್ಯ
ಸಂಗಾತಿ, ಪ್ರತ್ಯಭಿಜ್ಞಾನ, ಬಯಲು ಆಲಯ,
ಸಮ್ಮುಖ, ಹೊಸಗನ್ನಡದಲ್ಲಿ ಮಹಾಕಾವ್ಯ : ಶ್ರೀ ರಾಮಾಯಣ
ದರ್ಶನ, ಭೃಂಗದ ಬೆನ್ನೇರಿ, ಅಸಂಗತ ನಾಟಕಗಳು,
ನವ್ಯಕಾವ್ಯ ಪ್ರಯೋಗ, ಯುಗಧರ್ಮ ಹಾಗೂ ಸಾಹಿತ್ಯದರ್ಶನ,
ಬೇಂದ್ರೆ ಕಾಗೂ ಕನ್ನಡ ಕಾವ್ಯ ಸ್ವರೂಪ, ದ ರಾ
ಬೇಂದ್ರೆ, ಬಾರೋ ಸಾಧನಕೇರಿಗೆ, ಬೇಂದ್ರೆಯವರ
ಕಾವ್ಯದಲ್ಲಿ ಶೃತಿ ಮತ್ತು ಕೃತಿ
ಸಂಪಾದನೆ : ನಡೆದು ಬಂದ ದಾರಿ,
ಪುಟಬಂಗಾರ, ವಾಸುದೇವ ಪ್ರಶಸ್ತಿ, ಸಂಗ್ಯಾ ಬಾಳ್ಯಾ ಮನ್ವಂತರ, Tradition of Kannada Theatre.
ಅನುವಾದ : ಜೀವಫಲ, ಮರಾಠಿ
ಸಂಸ್ಕೃತಿ - ಕೆಲವು ಸಮಸ್ಯೆಗಳು, ಸ್ವಪ್ನ ನಾಟಕ
ಅಂಕಣ ಬರಹ ಸಂಕಲನ : ಪಂಡಿತರ ತಪ್ಪು
ಅಭಿನಂದನಾ ಗ್ರಂಥ : ಕನ್ನಡದ ಕೀರ್ತಿ
ಶಂಕರ ಮೊಕಾಶಿ ಪುಣೇಕರ (1928 - 2004)
ಪಿ ಎಚ್ ಡಿ ಪ್ರಬಂಧ : ದ ಲೇಟೆಸ್ಟ್ ಫೇಸ್ ಇನ್ ದ ಡೆವಡಲಪ್ಮೆಂಟ್ ಆಫ್
ಡಬ್ಲೂ ಬಿ ಯೀಟ್ಸ್
ಕಾದಂಬರಿ : ಅವಧೇಶ್ವರಿ (ವೇದಕಾಲದ ರಾಜಕೀಯ ಸ್ಥಿತಿಗತಿ -
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ಗಂಗವ್ವ ಗಂಗಾಮಾಯಿ, ನಟ ನಾರಾಯಣಿ
ಕಥಾಸಂಕಲನ : ಡೆರಿಕ್ ಡಿಸೋಜಾ ಮತ್ತು ಇತರ ಕಥೆಗಳು
ಕವನ ಸಂಕಲನ : ಮಾಯಿಯ ಮೂರು ಮುಖಗಳು, ಗಾನಕೇಳಿ.
ನಾಟಕಗಳು : ವಿಪರ್ಯಾಸದ ವಿನೋದ, ಶ್ರೀ ಸಂಗೀತದ ನಾಟ್ಯ ನಂದಿ (ಹಾಸ್ಯ)
ಇಂಗ್ಲಿಷ್ ಕವನ ಸಂಕಲನಗಳು : ದಿ ಕ್ಯಾಪ್ಟಿವ್, ದಿ ಪ್ರಿಟೆಂಡರ್, ಎಪಿಸಲ್ ಟು ಡೇವಿಡ್ ಮಕ್ ಕುಚಿಯಾನ್, ದಿ ಟೆಂಟ್ ಪೋಲ್, ಪ್ಯಾರಾಡೈಮ್ಸ್.
ಇಂಗ್ಲಿಷ್ ವಿಮರ್ಶೆ : ಭಾರತೀಯ ನಾಟಕಗಳ ಒಳನೋಟ, ಪಿ ಲಾಲ್ - ರಸ ವಿಮರ್ಶೆ, ಭಾರತಾಂಗ್ಲ ತತ್ವ, ಭಾರತಾಂಗ್ಲ ಸಾಹಿತ್ಯ - ಕೆಲವು ಅಧ್ಯಯನಗಳು
ಇಂಗ್ಲಿಷ್ ಅನುವಾದ : ಋತು ಸಂಹಾರ, ಅವಧೂತ ಗೀತೆ,
ರಾಮಾಯಣ ದರ್ಶನಂ
ವಿಮರ್ಶೆ : ಬೇಂದ್ರೆಯವರ ಕಾವ್ಯ ಮೀಮಾಂಸೆ, ಸಾಹಿತ್ಯ ಮತ್ತು ಅಭಿರುಚಿ. ಹಮ್ಮಿಂಗ್ ಬರ್ಡ್ (ಕುವೆಂಪು ಕುರಿತು), ಪಾಶ್ಚಾತ್ಯ ವಿಮರ್ಶೆಯ ಇತಿಹಾಸ.
ಎ ಕೆ ರಾಮಾನುಜನ್ (1929 - 1993)
ಪಿಎಚ್ ಡಿ : ಜನರೇಟಿವ್ ಗ್ರಾಮರ್
ಲಿಂಗ್ವಿಸ್ಟಿಕ್
ಕವನ ಸಂಕಲನ : ಮತ್ತು ಇತರ ಕವಿತೆಗಳು , ಹೊಕ್ಕುಳಲ್ಲಿ ಹೂವಿಲ್ಲ,
The Strider, The second step
ಕಾದಂಬರಿಗಳು : ಕುಂಟೋಬಿಲ್ಲೆ, ಮತ್ತೊಬ್ಬನ ಆತ್ಮಚರಿತ್ರೆ
ರೇಡಿಯೋ ನಾಟಕಗಳು : ನಾದಬಿಂದು, ಗಾನಪ್ರಿಯ
ಕತೆಗಳು : ಮಧುರೆಯಲ್ಲಿ ಒಂದು ದಿನ, ಅಣ್ಣಯ್ಯನ ಮಾನವಶಾಸ್ತ್ರ
ಅನುವಾದ : ಸ್ಪಿಕೀಂಗ್ ಆಫ್ ಶಿವ (ವಚನಗಳ ಇಂಗ್ಲೀಷ್
ಅನುವಾದ), ಕನ್ನಡದ ಜನಪದ ಕತೆಗಳು, ಹಳದಿ ಮೀನು (ಕಾದಂಬರಿ), Interior Landscape, Song of the Earth and
other poems, A tamil epic : Cilppatikaram, Bread, Samskara, Hymns for the
drowning, Hanchi a Kannada Cinderella, The Indian Oedipus, Poems of Love and
War, Folktales from India, Viking Chicago.
ಶಾಂತಿನಾಥ ದೇಸಾಯಿ (1929 - 1998)
ಕಥಾ ಸಂಕಲನ : ಮಂಜುಗಡ್ಡೆ, ಕ್ಷಿತಿಜ, ದಂಡೆ, ರಾಕ್ಷಸ, ಪರಿವರ್ತನೆ, ಕೂರ್ಮಾವತಾರ
ಕಾದಂಬರಿಗಳು : ಓಂ ಣಮೋ (ಕ್ರೈಸ್ತ ಮತ್ತು ಜೈನ ಧರ್ಮಗಳ ತತ್ವ
ಸಿದ್ಧಾಂತಗಳು, ಧರ್ಮ ಮತ್ತು ಮಾಕ್ರ್ಸ್ ವಾದಗಳು ಈ ಕತೆಯ ವಸ್ತು –
ಕೇಂದ್ರ ಸಾಹಿತ್ಯ ಅಕಾಡೆಮಿ), ಮುಕ್ತಿ (ಕನ್ನಡದ ಮೊದಲ
ನವ್ಯ ಕಾದಂಬರಿ), ಸೃಷ್ಟಿ (ಯಕ್ಷಗಾನ ಪರಂಪರೆ ಮತ್ತು ದಲಿತ
ಬಂಡಾಯ ಚಳವಳಿ ಇಲ್ಲಿನ ವಸ್ತು), ಬೀಜ (ಗ್ರಾಮೀಣ ಜೀವನದ ಅಧಃಪತನ), ಅಂತರಾಳ (ಮಾನವ ಮತ್ತು ನಾಗರಿಕತೆಯ ವಿಕಾಸದ ಕಥೆ), ವಿಕ್ಷೇಪ, ಸಂಬಂಧ
ಇಂಗ್ಲಿಷ್ ಅನುವಾದ : ಅವಸ್ಥೆ, ಸಂಕ್ರಾಂತಿ
ಕನ್ನಡ ಅನುವಾದ : ಹರಿನಾರಾಯಣ ಆಪ್ಟೆ,
ಪ್ರೇಮಚಂದ್ರ, ರಥಚಕ್ರ, ಕ್ರಾಂತಿ
ಬಂತು ಕ್ರಾಂತಿ.
ವಿಚಾರ ಸಾಹಿತ್ಯ : ಸಾಹಿತ್ಯ ಮತ್ತು ಭಾಷೆ, ಗಂಗಾಧರ ಚಿತ್ತಾಲರ ಕಾವ್ಯ ಸೃಷ್ಟಿ, ಕನ್ನಡ ಕಾದಂಬರಿ
ನಡೆದ ಬಂದ ರೀತಿ, ನವ್ಯ ಸಾಹಿತ್ಯದ ದರ್ಶನ, ಕನ್ನಡ ಸಾಹಿತ್ಯ
ಸಂಗಾತಿ
ಸಂಪಾದನೆ : ಸಂಬಂಧ, ಕ್ರಿಟಿಕಲ್
ಎಸ್ಸೇಸ್ ಆನ್ ಇಂಡಿಯನ್ ರೈಟಿಂಗ್ಸ್, ಎಕ್ಸ್ಪೆರಿಮೆಂಟೇಷನ್ ವಿತ್
ಲಾಂಗ್ವೇಜ್ ಇನ್ ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್, ದ ಇಮೇಜ್
ಆಫ್ ಇಂಡಿಯನ್ ಇನ್ ವೆಸ್ಟರ್ನ್ ಕ್ರಿಯೇಟಿವ್ ರೈಟಿಂಗ್, ಕ್ರಿಟಿಕಲ್
ಥಾಟ್ : ಟ್ವೆಂಟೀತ್ ಸೆಂಚ್ಯುರಿ ಕ್ರಿಟಿಕಲ್ ಎಸ್ಸೇಸ್ ಇನ್ ಇಂಗ್ಲೆಂಡ್.
ಪ್ರಭುಶಂಕರ (1929 - 2018)
ಪಿ ಎಚ್ ಡಿ ಪ್ರಬಂಧ : ಕನ್ನಡದಲ್ಲಿ ಭಾವಗೀತೆ
ವಿಮರ್ಶೆ : ಸಾಹಿತ್ಯ ಮತ್ತು ಆಧುನಿಕತೆ
ಅನುವಾದ : ಉಪನಿಷತ್ತುಗಳ ಸಂದೇಶ, ಬಾರತೀಯ ತತ್ವಶಾಸ್ತ್ರದ ರೂಪುರೇಖೆಗಳು, ಕುವೆಂಪುರವರ
ವ್ಯಕ್ತಿತ್ವ, ಬೆರಳ್ಗೆ ಕೊರಳ್, ಸ್ಮಶಾನ
ಕುರುಕ್ಷೇತ್ರ, ಶೂದ್ರತಪಸ್ವಿ
ವ್ಯಕ್ತಿಚಿತ್ರ : ಜನಮನ
ಪ್ರಬಂಧ : ಎತ್ತಿಗೆ ಜ್ವರ ಎಮ್ಮೆಗೆ ಬರೆ, ಚಿಂತೆ ಚಿಂತನ.
ಕಾದಂಬರಿ : ಜೀವ ಜೀವದ ನಂಟು
ನಾಟಕ : ಅಂಗುಲಿಮಾಲ, ಆಮ್ರಪಾಲಿ
ಪ್ರವಾಸಕಥನ : ಅಮೇರಿಕಾದಲ್ಲಿ ನಾನು ಮತ್ತು ಶಾಂತಿ
ಹಾಸ್ಯ ಬರಹ : ಬೆಸ್ಟ್ ಆಫ್ ಪ್ರಭುಶಂಕರ
ಸಂಪಾದನೆ : ಶರಣರ ನೂರೊಂದು ವಚನಗಳು
ಎಸ್ ನಾರಾಯಣ ಶೆಟ್ಟಿ (1930 - 2011)
ಕಾವ್ಯನಾಮ ಸುಜನಾ
ವಿಮರ್ಶೆ : ಹೃದಯ ಸಂವಾದ, ಕುಮಾರವ್ಯಾಸ,
ಪರಂಪರೆ ಮತ್ತು ಕುವೆಂಪು, ಪು ತಿ ನ ಸಾಹಿತ್ಯದ
ಹೊಳಹುಗಳು, ಸಂವಹನ
ಕವನ ಸಂಕಲನ : ಯುಗಸಂಧ್ಯಾ (ಕುರುಕ್ಷೇತ್ರ ಯುದ್ಧೋತ್ತರ ಪರಿಣಾಮದ
ಚಿತ್ರಣ ಮಹಾಕಾವ್ಯ ರೂಪದಲ್ಲಿ - ಕೇಂದ್ರ ಸಾಹಿತ್ಯ ಅಕಾಡೆಮಿ), ಮಂಗಳಾರತಿ, ನಾಣ್ಯಯಾತ್ರೆ, ಒಂದೇ ಸೂರಿನಡಿಯಲ್ಲಿ, ಚಿಲಿಪಿಲಿ, ವಚನ, ಇಬ್ಬನಿ ಆರತಿ,
ಕಣಗಳು
ಅನುವಾದ : ಏಜಾಕ್ಸ್ (ನಾಟಕ), ಬಾಲಕಾಂಡ ವಾಲ್ಮೀಕಿ ರಾಮಾಯಣ, ಭಾರತ ಕಥಾಮಂಜರಿ
ಕುಸುಮಾಕರ ದೇವೀರಗಣ್ಣೂರ (1930 - 2012)
ಪಿಎಚ್.ಡಿ ಪ್ರಬಂಧ : ಸಂಬಂಧ, ಗಾಳಿ ಗೆಜ್ಜೆ ಹಿಡಿದ ಸುಗಂಧ
ಸಂಶೊಧನೆ : ಪ್ರಸಾದ
ಯೋಗ (ಪುರಂದರದಾಸರನ್ನು ಕುರಿತು)
ಕಾದಂಬರಿ ಅನುವಾದ : ಪರಿಘ, ನಾಲ್ಕನೆಯ ಆಯಾಮ,
ನಿರೀಂದ್ರಿಯ, ಬಯಲು - ಬಸಿರು,
ದುರ್ದಮ್ಯ
ಕಾವ್ಯ: ಸ್ವಪ್ನನೌಕೆ
ಗೌರವ ಗ್ರಂಥ : ಅವಗಾಹ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ