ನವ್ಯ ಸಾಹಿತ್ಯ ಭಾಗ 2

  ನವ್ಯ ಸಾಹಿತ್ಯ ಭಾಗ 2

ಚಂದ್ರಕಾಂತ ಕುಸನೂರ (1931- )

ನಾಟಕ : ಆನಿ ಬಂತಾನಿರಿಹರ್ಸಲ್ರತ್ತೋ ರತ್ತೋ ರಾಯನ ಮಗಳೇದಿಂಡಿವಿದೂಷಕಹಳ್ಳಾ ಕೊಳ್ಳಾ ನೀರು

ಕಾವ್ಯ : ನಂದಿಕೋಲು

ಕಾದಂಬರಿ : ಮಾಲತಿ ಮತ್ತು ನಾನುಯಾತನಾ ಶಿಬಿರಗೋಹರಜಾನ್ಕೆರೂರು ನಾಮಚರ್ಚ್ ಗೇಟ್.

ಅನುವಾದ : ರೇಶಮ್ ಕಿ ಗುಡಿಯಾ (ಕಥಾಸಂಕಲನ)ಮಹಾಪುರುಷ್ (ನಾಟಕ)

 

ಹಾ ಮಾ ನಾಯಕ (1931 - 2000)

ಇಂಗ್ಲಿಷ್ಫೋಕ್ಲೋರ್ ಪದಕ್ಕೆ ಸಂವಾದಿಯಾಗಿ ಜಾನಪದ ಎಂಬ ಪದವನ್ನು ಪರಿಚಯಿಸಿದರು.

ಪಿಎಚ್ ಡಿ ಪ್ರಬಂಧ : ಕನ್ನಡ - ಸಾಹಿತ್ಯಿಕ ಮತ್ತು ಆಡುಭಾಷೆ

ಅಂಕಣ ಬರಹಗಳ ಸಂಕಲನ : ಸಂಪ್ರತಿ (ಕೇಂದ್ರ ಸಾಹಿತ್ಯ ಅಕಾಡೆಮಿ), ಸಂಚಯ, ಸೂಲಂಗಿ, ಸಂಪುಟ, ಸಾಹಿತ್ಯ ಸಲ್ಲಾಪ, ಸಂಕೀರ್ಣ, ಸಂವಾದ, ಸಂಪದ, ಸಂಗ್ರಹ, ಸಂದರ್ಭ (ಭಾಷಣಗಳ ಸಂಕಲನ), ಸಮೂಹ, ಸಂಪರ್ಕ, ಸಾಂಪ್ರತ, ಸ್ಪಂದನ, ಸಪ್ತಕ, ಸೃಜನ, ಸ್ಮರಣ, ಸಂವಹನ, ಸಿಂಚನ, ಸಿವುಡು, ಸ್ತವನ, ಸೊಡರು, ಸಂಭ್ರಮ, ಸ್ವಂತ, ಸನ್ನುಡಿ, ಸನಾದಿ, ಸಂಕುಲ, ಸುರಗಿ, ಸೋಗಿಲು ಇತ್ಯಾದಿ

ಅನುವಾದ : ಸುನೇರಿ

ವ್ಯಕ್ತಿ ಚಿತ್ರಗಳು : ಸ್ಮರಣೆ

ಜೀವನ ಚರಿತ್ರೆಗಳು : ವಿನಾಯಕ ವಾಙ್ಮಯದೇ ಜ ಗೌ ಮತ್ತು ವ್ಯಕ್ತಿ ಸಾಹಿತ್ಯ

ಪ್ರಬಂಧ ಕೃತಿಗಳು : ನಮ್ಮ ಮನೆಯ ದೀಪ, ಬಾಳ್ನೋಟಗಳು, ಕನ್ನಡ ಸಾಹಿತ್ಯ ಚರಿತ್ರೆ, ಗೊರೂರು ಗೌರವ ಗ್ರಂಥ, ಚಿನ್ನದ ಗರಿ, ಬಿಡುಗಡೆಯ ಬಳ್ಳಿ, ಕಾವ್ಯ ಸಂಚಯ, ಗದ್ಯ ವಿಹಾರ

ಜಾನಪದ : ಕನ್ನಡ ಜಾನಪದ ಗ್ರಂಥಸೂಚಿ, ಜಾನಪದ ಸ್ವರೂಪ, ಜಾನಪದದಲ್ಲಿ ವೈಜ್ಞಾನಿಕ ದೃಷ್ಟಿಕೊನ (ಲೇಖನ)

ಕತೆಗಳು : ಹಾವು ಮತ್ತು ಹೆಣ್ಣು

ಸಂಪಾದನೆ : ಅಪ್ಪಯ್ಯ

ಇಂಗ್ಲಿಷ್ ಸಾಹಿತ್ಯ : ಕನ್ನಡ ಲಿಟರರಿ ಅಂಡ್ ಕಲೋಕ್ವಿಯಲ್ಕನ್ನಡ ಲಿಟರೇಚರ್ ಎ ಡಿಕೇಡ್

ಇತರೆ ಕೃತಿಗಳು : ಗೋಕಾಕ್ ಗ್ರಂಥಾವಳಿಮಾಸ್ತಿಯವರ ಪುಸ್ತಕಗಳುವಿದ್ಯಾಪತಿಯ ಹಾಡುಗಳು

1985 ರಲ್ಲಿ ಬೀದರ್ ನಲ್ಲಿ ನಡೆದ 57 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಜಿ ಎಸ್ ಸಿದ್ದಲಿಂಗಯ್ಯ (1931- )

ಕವನ ಸಂಕಲನಗಳು : ಬಿಂದು, ಮುಖಾಮುಖಿ, ಮಣ್ಣಿಗಿಳಿದ ಆಕಾಶ, ರಸಗಂಗೆ, ಉತ್ತರ, ಚಿತ್ರ - ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಹೇಮಕೂಟ

ವಿಮರ್ಶೆ : ಹರಿಹರರತ್ನಾಕರವರ್ಣಿಚಾಮರಸಗೂಳೂರು ಸಿದ್ದವೀರಣ್ಣಶ್ರೀನಿವಾಸ, ಅಲ್ಲಮ ಪ್ರಭುಮೇದಾರ ಕೇತಯ್ಯಶ್ರೀ ಕವಿ ಲಕ್ಷ್ಮೀಶ, ಶೂನ್ಯ ಸಂಪಾದನೆಗಳು - ಒಂದು ಅವಲೋಕನಶೂನ್ಯ ಸಂಪಾದನೆ - ಒಂದು ಮರುಚಿಂತನೆಶೂನ್ಯ ಸಂಪಾದನೆಹೊಸ ತಿರುವುಶೂನ್ಯ ಸಂಪಾದನೆ - ಕೆಲವು ಪ್ರಶ್ನೆಗಳುಶೂನ್ಯ ಸಂಪಾದನೆಗಳು – ಪರಿಷ್ಕರಣಗಳು, ವಚನ ಸಾಹಿತ್ಯ - ಒಂದು ಇಣುಕು ನೋಟ, ವಚನ ವಾಙ್ಮಯ ಮತ್ತು ಭಾಷೆ, ಬಸವ - ಅಲ್ಲಮರ - ನೂರು ವಚನಗಳು, ವಚನ ಸಾಹಿತ್ಯ - ಹಕ್ಕಿನೋಟ, ಹೊಸಗನ್ನಡ ಕಾವ್ಯ, ಹರಿದಾಸ ಸಾಹಿತ್ಯ ಪರಂಪರೆ, ನವ್ಯಕಾವ್ಯ - ಒಂದು ಚಿಂತನೆ, ನವರಾತ್ರಿ, ಭಾಷೆ ಗೀಷೆ - ಬೇಂದ್ರೆ ಕುವೆಂಪುರವರು, ನೆನಪಿನೋಣಿಯಲ್ಲಿ, ಶಬ್ದ ಸೋಪಾನ, ಲಯವೂ ಅದರ ಪರಿವಾರವೂ, ಯಶೋಧರ ಚರಿತೆ, ನೂರೊಂದರ ಸುತ್ತ, ಪಂಚಮುಖ, ಬಿಂದುವಿನಿಂದ

ಜೀವನ ಚರಿತ್ರೆ : ಮಹಾನುಭಾವ ಬುದ್ಧ, ಬಸವಣ್ಣ, ವಚನ ಗುಮ್ಮಟ (ವಾಸ್ವಾನಿಯವರ ಕೃತಿಗಳು) ಡಾ. ಸಿದ್ಧಯ್ಯ ಪುರಾಣಿಕ, ಭಾಲ್ಕಿಯ ಪಟ್ಟದ್ದೇವರು, ವಿರತಿಯ ಸಿರಿ ಸಪ್ಪಣ್ಣನವರು

ಅನುವಾದಗಳು : ಸಜ್ಜನರಿಗೇಕೆ ಕಷ್ಟಗಳು ಬರುತ್ತವೆ?, ಸ್ವಾಮಿ ನಿಗಮಾನಂದ, ನೂರೊಂದು ಕತೆಗಳು, ದಾದಾ ಉತ್ತರಿಸುತ್ತಾರೆ, ಕೋಪ ನಮ್ಮನ್ನು ಉರಿಸುವ ಮೊದಲು ಅದನ್ನು ಉರಿಸಿ ಬಿಡಬೇಕು, ಯೋಗಿ ಗುರು, ಸಾವಿನ ಮುಂದಿನ ಕತೆಗಳು, ಪ್ರಕಟಿಸುವ ಸ್ಥೈರ್ಯ

ಸಂಪಾದನೆ : ಶತಾಬ್ದಿ ದೀಪ, ಸಾಲು ದೀಪಗಳು, ಅಣ್ಣನ ನೂರೊಂದು ವಚನಗಳು, ಸಿದ್ಧಲಿಂಗೇಶ್ವರರ 50 ವಚನಗಳು, ಶರಣೆ ರಾಯಮ್ಮ, ಗಣೇಶ ಮಸಣಯ್ಯ, ಮುದನೂರು, ಜಂಗಮ ಜ್ಯೋತಿ, ಬಸವ ಸಂದೇಶ, ಬಂದ ಸಂತಂಮಣ್ಣ, ಜನ್ನ, ಶರಣ ಆದಯ್ಯ, ಅಂಬಿಗರ ಚೌಡಯ್ಯ, ಮುರುಗೋಡು, ಶರಣ ಬಸವೇಶ್ವರರು, ನುಲಿಯ ಚಂದಯ್ಯ, ಭಕ್ತಿ ಪರಂಪರೆ - ಸಮಾಜೋ ಧಾರ್ಮಿಕ ಕಾಳಜಿಗಳು

ಇತರ ಪ್ರಮುಖ ಕೃತಿಗಳು : ಪ್ರಾಗ್ಜೀವಶಾಸ್ತ್ರ

ಅಭಿನಂದನಾ ಗ್ರಂಥ : ನಿಸ್ಸೀಮ

 

ಯು ಆರ್ ಅನಂತಮೂರ್ತಿ (1932 - 2014)

ಪಿ ಎಚ್ ಡಿ ಪ್ರಬಂಧ : ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ

ಕಥಾ ಸಂಕಲನ : ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಕ್ಲಿಪ್ ಜಾಯಿಂಟ್, ಘಟಶ್ರಾದ್ಧ, ಸೂರ್ಯನ ಕುದುರೆ, ಪಚ್ಚೆ ರೆಸಾರ್ಟ್, ಬೇಟೆ, ಬಳೆ ಮತ್ತು ಓತಿಕೇತ

ಕಾದಂಬರಿಗಳು : ಸಂಸ್ಕಾರ (ಬ್ರಾಹ್ಮಣತ್ವ ವಿರೋಧಿಸಿದ ಬ್ರಾಹ್ಮಣನ ಶವಸಂಸ್ಕಾರದ ಸಮಸ್ಯೆ)ಭಾರತೀಪುರ (ಭಾರತೀಯ ಸೋಷಲಿಸ್ಟ್ ಸುಧಾರಕನ ಕತೆ)ಅವಸ್ಥೆ (ಹಿಂದುಳಿದ ವರ್ಗದ ನಾಯಕನ ವಿಫಲ ಹೋರಾಟ ಮತ್ತು ಭ್ರಷ್ಟಾಚಾರರೈತ ಚಳುವಳಿಯ ಸೋಲು)ಭವ (ಆಧುನಿಕ ಬದುಕಿನ ಸಮಸ್ಯೆಗಳು), ದಿವ್ಯಪ್ರೀತಿ ಮೃತ್ಯು ಮತ್ತು ಭಯ

ವಿಮರ್ಶೆ ಮತ್ತು ಪ್ರಬಂಧ ಸಂಕಲನ : ಮಾತು ಸೋತ ಭಾರತ, ಸದ್ಯ ಮತ್ತು ಶಾಶ್ವತ, ಬೆತ್ತಲೆ ಪೂಜೆ ಏಕೆ ಕೂಡದು, ಋಜುವಾತು, ಶತಮಾನದ ಕವಿ ಯೀಟ್ಸ್, ಕಾಲಮಾನ, ಮತ್ತೆ ಮತ್ತೆ ಬ್ರೆಕ್ಟ್, ಶತಮಾನದ ಕವಿ ವರ್ಡ್ಸ್ ವರ್ತ್, ಶತಮಾನದ ಕವಿ ರಿಲ್ಕೆ, ರುಚಿಕರ ಕಹಿಸತ್ಯಗಳ ಕಾಲ, ಆಚೀಚೆ, ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ, ಸನ್ನಿವೇಶ, ಯುಗಪಲ್ಲಟ, ವಾಲ್ಮೀಕಿಯ ನೆವದಲ್ಲಿ

ನಾಟಕ : ಆವಾಹನೆ

ಕವನ ಸಂಕಲನ : ಬಾವಲಿ (ಹದಿನೈದು ಪದ್ಯಗಳು)ಮಿಥುನಅಜ್ಜನ ಹೆಗಲ ಸುಕ್ಕುಗಳುಅಭಾವ

ಅನುವಾದ : ದಾವೂದ್ ಜಿಂಗ್

ಸಂಪಾದನೆ : ಕನ್ನಡ ಕಾವ್ಯ

ಆತ್ಮಕತೆ : ಸುರಗಿಮೊಳಕೆ

ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ

2002 ರಲ್ಲಿ ತುಮಕೂರಿನಲ್ಲಿ ನಡೆದ 69 ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಕೆ ವಿ ಸುಬ್ಬಣ್ಣ (1932 - 2005)

ನೀಲಕಂಠೇಶ್ವರ ನಾಟ್ಯ ಸಂಘವನ್ನು (ನೀನಾಸಂ) ಅನ್ನು ಸ್ಥಾಪಿಸಿದರು.

ಕವಿತೆಗಳು : ಹೂವು ಚೆಲ್ಲಿದ ಹಾದಿಯಲ್ಲಿ

ಜಾನಪದ : ಅವರು ನೀಡಿದ ದೀಪಹಬ್ಬ ಹಾಡುವುದು

ವಿಮರ್ಶೆ : ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (ಕೇಂದ್ರ ಸಾಹಿತ್ಯ ಅಕಾಡೆಮಿ)ಕುವೆಂಪುಗೊಂದು ಪುಟ್ಟ ಕನ್ನಡಿಅರೆ ಶತಮಾನದ ಅರೆಬರಹಗಳುಪಂಪನ ಕವಿತೆ - ಅನುಸಂಧಾನಕ್ಕೆ ಮಾರ್ಗ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೀಗೆ ಬನ್ನಿ

ಲೇಖನ ಸಾಹಿತ್ಯ : ಶ್ರೇಷ್ಟತೆಯ ವ್ಯಸನ, ನಮ್ಮ ತವಕ ತಲ್ಲಣಗಳು, ಅರೆ ಶತಮಾನದ ಬರಹಗಳು

ಅನುವಾದ : ರಂಗದಲ್ಲಿ ಅಂತರಂಗ (ಸ್ಟಾನ್ಲಿ ಸ್ಟಾವಸ್ಕಿಯ ಕೃತಿ), ಅಭಿಸಾರ (ರೇಡಿಯೋ ನಾಟಕಗಳ ಸಂಕಲನ), ಗೊಗೊಲ್ನ ಸಾಹೇಬರು ಬರುತ್ತಾರೆಪೊಯ್ಬೆಕ್, ಗಾರ್ಗಿಯ ಕಥೆಗಳು, ಸೆಜುವಾನ್ ನಗರದ ಸಾಧ್ವಿ, ಮಾರ್ಕ್ಸ್ ಮತ್ತು ಗಾಂಧಿ

ಅನುವಾದಿತ ನಾಟಕಗಳು : ನಾವು ತಿನ್ನುವ ಅಡಿಕೆಜೇನು ಸಾಕುವ ಬಗೆದಶರೂಪಕ, ರಾಜಕೀಯದ ಮಧ್ಯೆ ಬಿಡುವು, ಸೂಳೆ ಸನ್ಯಾಸಿ ಮೂರು ಕಾಸಿನ ಸಂಗೀತ ನಾಟಕತಾಯಿ ಲೋಕ ಶಾಕುಂತಲ, ಕಾಡಿನಲ್ಲಿ ಕಥೆಅಂಚೆಮನೆಬೆಟ್ಟಕ್ಕೆ ಚಳಿಯಾದರೆ, ಜಯಂಟ್ ಮಾಮ.

ಸಂಪಾದನೆ : ಕೈಲಾಸಂ ದರ್ಶನ

ಅಭಿನಂದನ ಗ್ರಂಥ : ನಮ್ಮ ಸುಬ್ಬಣ್ಣರಂಗಧಾಮ

ಇತರ ಪ್ರಮುಖ ಕೃತಿಗಳು : ನಾಟಕ ಮತ್ತು ಸಿನೆಮಾ, ರಂಗಮಾಧ್ಯಮ ಮತ್ತು ಚಿತ್ರಮಾಧ್ಯಮ, ನನ್ನ ಪ್ರೀತಿಯ ಹಿರೋಶಿಮಾ, ಪಥೇರ್ ಪಾಂಚಾಲಿ, ಚಲನಚಿತ್ರ ಮಹಾನೌಕೆ, ಸಿನೆಮಾದ ದೂರಚಿತ್ರ.

 

ಎಸ್ ಎಲ್ ಭೈರಪ್ಪ (1934- )

ಪಿ ಎಚ್ ಡಿ ಪ್ರಬಂಧ : ಸತ್ಯ ಮತ್ತು ಸೌಂದರ್ಯ

ನೀಳ್ಗತೆ : ಗತಜನ್ಮ

ಕಾದಂಬರಿಗಳು : ದಾಟು (ವರ್ಣವ್ಯವಸ್ಥೆಅಂತರ್ಜಾತೀಯ ವಿವಾಹದಲಿತರ ಸಮಸ್ಯೆಗಳು ಕತೆಯ ವಸ್ತು - ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ), ವಂಶವೃಕ್ಷ (ಧರ್ಮ ಮತ್ತು ಪಾರಂಪರಿಕ ಕಟ್ಟುಪಾಡುಗಳಿಂದ ಮುಕ್ತನಾಗುವ ಶ್ರೀನಿವಾಸ ಶ್ರೋತ್ರಿ), ಜಲಪಾತ (ಕಲೆ, ಮುಂಬೈನ ವೇಶ್ಯಾವಾಟಿಕೆ, ಕಸಾಯಿಖಾನೆಯ ಸುತ್ತ ಹೆಣೆದ ಕತೆ), ನಾಯಿ ನೆರಳು (ಪುನರ್ಜನ್ಮದ ಕತೆ)ತಬ್ಬಲಿಯು ನೀನಾದೆ ಮಗನೆ (ಎರಡು ಸಂಸ್ಕೃತಿಗಳ ನಡುವಿನ ಘರ್ಷಣೆ)ಗೃಹಭಂಗ (ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಸ್ತ್ರೀಯೊಬ್ಬಳ ಕತೆ), ಧರ್ಮಶ್ರೀ (ಮತಾಂತರ), ಪರ್ವ (ಮಹಾಭಾರತ ಕಾಲದ ಮೌಲ್ಯ ಮತ್ತು ಸಾಮಾಜಿಕ ಸ್ಥಿತಿ)ಮಂದ್ರ (ಕಲಾಜೀವನದಲ್ಲಾಗಲೀ ಬದುಕಿನಲ್ಲಾಗಲೀ ಮಾನವ ಸಂಬಂಧಗಳು ಹೊಂದಬಹುದಾದ ವ್ಯಾವಹಾರಿಕ ಹಾಗೂ ಆಧ್ಯಾತ್ಮಿಕ ನೆಲೆಯ ಸ್ವರೂಪ -  ಸರಸ್ವತಿ ಸಮ್ಮಾನ್ ಮತ್ತು ನಾಡೋಜ ಪ್ರಶಸ್ತಿ)

ನಿರಾಕರಣ ಮತ್ತು ಗ್ರಹಣ ಕಾದಂಬರಿಗಳು ಮೌಢ್ಯ ಸಂಪ್ರದಾಯಗಳನ್ನು ಪ್ರತಿಭಟಿಸಿ ಸಂನ್ಯಾಸಿಯಾಗುವ ಕತೆಗಳನ್ನೊಳಗೊಂಡಿವೆ. ಸಾಕ್ಷಿ ಮತ್ತು ನೆಲೆ ಕಾದಂಬರಿಗಳು ಹುಟ್ಟು ಸಾವುಗಳ ಅನ್ವೇಷಣೆ ಕುರಿತಾದವು

ದೂರ ಸರಿದರು, ಮತದಾನ, ಅಂಚು, ತಂತು, ಸಾರ್ಥ, ಆವರಣ, ಕವಲು, ಯಾನ, ಉತ್ತರಕಾಂಡ, ಭೀಮಕಾಯ, ಬೆಳಕು ಮೂಡಿತು, ಅನ್ವೇಷಣ, ಗತಜನ್ಮ

ಸಂಪಾದನೆ : ಗಂಗೂಬಾಯಿ ಹಾನಗಲ್

ಆತ್ಮಕಥೆ : ಭಿತ್ತಿ

ವಿಚಾರ ಸಾಹಿತ್ಯ : ಸಾಹಿತ್ಯ ಮತ್ತು ಪ್ರತೀಕಕಥೆ ಮತ್ತು ಕಥಾವಸ್ತುಸಂದರ್ಭ-ಸಂವಾದನಾನೇಕೆ ಬರೆಯುತ್ತೇನೆ?

 

ಎಚ್ ಎಂ ಚನ್ನಯ್ಯ (1935 - 2000)

ಸಮತೆಂತೋ ಎನ್ನುವ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು.

ನಾಟಕ : ಎಲ್ಲರಂತಲ್ಲ ನನ್ನ ಗಂಡಹುಯ್ಯಲವೋ ಡಂಗುರವ

ಅನುವಾದ : ಅಯಾಸ್

ಕವನ ಸಂಕಲನ : ಆಮೆ, ಕಾಮಿ

ವಿಮರ್ಶಾ ಕೃತಿ : ಜಿಜ್ಞಾಸೆಪ್ರಾಸಂಗಿಕ

 

ಪಿ ಲಂಕೇಶ್ (1935 - 2000)

ಪತ್ರಿಕೆ : ಲಂಕೇಶ್ ಪತ್ರಿಕೆ

ನಾಟಕಗಳು : ಗುಣಮುಖ, ತೆರೆಗಳು, ಟೀ ಪ್ರಸನ್ನನ ಗೃಹಸ್ಥಾಶ್ರಮ, ಕ್ರಾಂತಿ ಬಂತು ಕ್ರಾಂತಿ, ಸಂಕ್ರಾಂತಿ (ಬಸವಯುಗದ ಕ್ರಾಂತಿ), ನನ್ನ ತಂಗಿಗೊಂದು ಗಂಡು ಕೊಡಿ, ಪೋಲಿಸರು ಬರುತ್ತಿದ್ದಾರೆ ಎಚ್ಚರಿಕೆ, ಗಿಳಿಯು ಪಂಜರದೊಳಿಲ್ಲ, ಸಿದ್ಧತೆ

ಕಥಾ ಸಂಕಲನಗಳು ಕಲ್ಲು ಕರಗುವ ಸಮಯ (ಕೇಂದ್ರ ಸಾಹಿತ್ಯ ಅಕಾಡೆಮಿ)ಕೆರೆಯ ನೀರನು ಕೆರೆಗೆ ಚೆಲ್ಲಿನಾನಲ್ಲಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ ಉಲ್ಲಂಘನೆಮಂಜು ಕವಿದ ಸಂಜೆ

ಕಾದಂಬರಿಗಳು : ಮುಸ್ಸಂಜೆಯ ಕಥಾಪ್ರಸಂಗಅಕ್ಕ (ಕೊಳಗೇರಿಯ ಬದುಕುಭ್ರಷ್ಟ ರಾಜಕೀಯ), ಬಿರುಕು (ಭ್ರಷ್ಟ ಸಮಾಜದ ವಿರುದ್ಧ ಸಿಡಿಯುವ ದುರಂತ  ನಾಯಕ)

ಅನುವಾದ : ಪಾಪದ ಹೂಗಳು (ಕವನ ಸಂಗ್ರಹ)ಈಡಿಪಸ್, ಅಂತಿಗೊನೆ (ನಾಟಕ)

ವಿಮರ್ಶೆ : ಪ್ರಸ್ತುತಸಾಹಿತಿ ಸಾಹಿತ್ಯ ವಿಮರ್ಶೆ

ಪ್ರಬಂಧ ಸಾಹಿತ್ಯ : ಕಂಡದ್ದು ಕಂಡಹಾಗೆಟೀಕೆ ಟಿಪ್ಪಣಿರೂಪಕ ಲೇಖಕರುಮರೆಯುವ ಮುನ್ನಈ ನರಕ ಈ ಪುಲಕಆಟ - ಜೂಜು-ಮೋಜು!ಪಾಂಚಾಲಿ

ಕವನ ಸಂಕಲನಗಳುಬಿಚ್ಚುನೀಲು ಕಾವ್ಯಚಿತ್ರ ಸಮೂಹತಲೆಮಾರುಅಕ್ಷರ ಹೊಸ ಕಾವ್ಯ (ಕವನ ಸಂಗ್ರಹ)

ಆತ್ಮಕಥೆ : ಹುಳಿ ಮಾವಿನಮರ

 

ಜಿ ಎಚ್ ನಾಯಕ (1935-         )

ಸಂಪಾದನೆ : ಕನ್ನಡ ಸಣ್ಣಕಥೆಗಳುಹೊಸಗನ್ನಡ ಕವಿತೆಗಳುಸಂವೇದನೆ (ಅಡಿಗರ ಅಭಿನಂದನಾ ಗ್ರಂಥ).

ವಿಮರ್ಶೆ : ಉತ್ತರಾರ್ಧ (ಕೇಂದ್ರ ಸಾಹಿತ್ಯ ಅಕಾಡೆಮಿ), ಸಮಕಾಲೀನ, ಅನಿವಾರ್ಯ, ನಿರಪೇಕ್ಷೆ, ನಿಜದನಿ, ವಿನಯ ವಿಮರ್ಶೆ, ಸಕಾಲಿಕ

ಆತ್ಮಕಥನ : ಬಾಳು

ಜಿ ಎಚ್ ನಾಯಕರ ಸಮಗ್ರ ಸಾಹಿತ್ಯವನ್ನು ಸಿರಿ ಪ್ರಕಾಶನವು ಮೌಲ್ಯಮಾರ್ಗ ಎಂಬ ಹೆಸರಿನಲ್ಲಿ  5 ಸಂಪುಟಗಳಲ್ಲಿ ಪ್ರಕಟಿಸಿದೆ.

 

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ (1936 - 2021)

ಕವನ ಸಂಕಲನಗಳು : ವೃತ್ತ, ಕಾವ್ಯಪ್ರತಿಮೆ, ನಂದನ ಕಿಶೋರಿ, ನಿನ್ನೆಗೆ ನನ್ನ ಮಾತು, ಸುಳಿ, ದೀಪಿಕಾ, ಬಾರೋ ವಸಂತ, ಚಿತ್ರಕೂಟ, ಹೊಳೆ ಸಾಲಿನ ಮರ, ಅರುಣ ಗೀತೆ, ಪಾಂಚಾಲಿ, ಊರ್ವಶಿ (ಗೀತ ನಾಟಕ)

ವಿಮರ್ಶೆ : ಹೊರಳು ದಾರಿಯಲ್ಲಿ ಕಾವ್ಯವಿವೇಚನಕಾವ್ಯಶೋಧನ

ಸಂಪಾದನೆ : ಶಿಶುನಾಳ ಶರೀಫರ ಗೀತೆಗಳು

ಪ್ರಬಂಧ ಲೇಖನಗಳ ಸಂಗ್ರಹ : ಸಾಹಿತ್ಯ ರತ್ನ ಸಂಪುಟ

ಅನುವಾದ : ಸುನೀತ (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು)ಚಿನ್ನದ ಹಕ್ಕಿ (ಯೀಟ್ಸ್ ಕವಿಯ ಐವತ್ತು ಕವನಗಳು)ಭಾರತೀಯ ಗ್ರಂಥ ಸಂಪಾದನಾ ಪರಿಚಯಠಾಕೂರರ ಎರಡು ನಾಟಕಗಳು.

 

ಶ್ರೀನಿವಾಸ ವೈದ್ಯ (1936- )

ಲಲಿತ ಪ್ರಬಂಧ/ಹರಟೆ : ತಲೆಗೊಂದು ತರತರರುಚಿಗೆ ಹುಳಿಯೊಗರು

ಕಾದಂಬರಿ : ಹಳ್ಳ ಬಂತು ಹಳ್ಳ (ವ್ಯಕ್ತಿಯೊಬ್ಬನ ಹೆಸರು ಚರ್ಚೆಗೀಡಾಗಿ ಆ ಮೂಲಕ ಅವನ ಧರ್ಮ ಯಾವುದಿರಬಹುದೆಂದು ಮೂಡುವ ವಿವಾದಗಳೇ ಕಥೆಯ ವಸ್ತು - ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ)

ಕತೆಗಳು : ಅಗ್ನಿಕಾರ್ಯಮೊದಲ ಓದುಕಪ್ಪೆ ನುಂಗಿದ ಹುಡುಗ

ಅನುವಾದ : ಕರ್ನಲ್ ಗೆ ಯಾರೂ ಬರೆಯುವುದೇ ಇಲ್ಲ

ನಾಟಕಗಳಾಗಿ ಅನುವಾದಗೊಂಡ ಕತೆಗಳು : ಶ್ರದ್ಧಾ, ಬದುಕಲು ಕಲಿಯಿರಿ, ತ್ರಯಸ್ಥ, ಬಿದ್ದೂರಿನ ಬಿಗ್ಬೆರನ್, ದತ್ತೋಪಂತನ ಪತ್ತೇದಾರಿ, ಮನಸುಖರಾಯನ ಮನಸು

 

ನಾ ಡಿಸೋಜ (1937- 2025)

ಕಾದಂಬರಿ : ಬಂಜೆ ಬೆಂಕಿಮಂಜಿನ ಕಾನುಈ ನೆಲ ಈ ಜಲಕೆಂಪು ತ್ರಿಕೋನನೆಲೆಮಾನವತಿರುಗೋಡಿನ ರೈತ ಮಕ್ಕಳು (ಗ್ರಾಮ ವೈಷಮ್ಯ)ಒಡ್ಡು (ಅಭಿವೃದ್ಧಿ ಸಿದ್ಧಾಂತದ ರಾಜಕಾರಣ - ಪರಿಸರ ನಾಶ), ಮುಳುಗಡೆ (ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವುದೇ ಕತೆಯ ವಸ್ತು)ಬಳುವಳಿಬೆಟ್ಟದಪುರದ ದಿಟ್ಟ ಮಕ್ಕಳುಆಂತರ್ಯ

 

ಗಿರೀಶ್ ಕಾರ್ನಾಡ್ (1938 - 2019)

ನಾಟಕಗಳು : ತುಘಲಕ್ (ಅಧಿಕಾರ ಲಾಲಸೆಯ ಪರಿಣಾಮ), ಹಯವದನ (ಪೂರ್ಣತ್ವದ ಹಂಬಲದಿಂದ ಮನುಷ್ಯನ ಸಂಬಂಧಗಳಲ್ಲಾಗುವ ದುರಂತ), ನಾಗಮಂಡಲ (ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣುಗಂಡಿನ ಸಂಬಂಧ - ಜಾನಪದ ಕತೆ), ತಲೆದಂಡ (ಬಸವಯುಗದ ಕ್ರಾಂತಿ), ಅಂಜುಮಲ್ಲಿಗೆಹಿಟ್ಟಿನ ಹುಂಜ (ಬಲಿ),  ಅಗ್ನಿ ಮತ್ತು ಮಳೆಟಿಪ್ಪುವಿನ ಕನಸುಗಳುಒಡಕಲು ಬಿಂಬಮದುವೆ ಅಲ್ಬಮ್ಫ್ಲವರ್ಸ್ಬೆಂದ ಕಾಳು ಆನ್ ಟೋಸ್ಟ್ರಕ್ಕಸ ತಂಗಡಗಿ, ಮಾ ನಿಷಾಧಯಯಾತಿ

ಆತ್ಮಕತೆ : ಆಡಾಡತ ಆಯುಷ್ಯ

ಕಾಳಿದಾಸ್ ಸಮ್ಮಾನ್ ಪ್ರಶಸ್ತಿ. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ.

 

ಪೂರ್ಣಚಂದ್ರ ತೇಜಸ್ವಿ (1938 - 2007)

ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದಲ್ಲಿ ಬಂಡಾಯ ಸಾಹಿತ್ಯದ ಉಗಮ.

ಕವನ ಸಂಕಲನ : ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು

ಕಾದಂಬರಿಗಳು : ಚಿದಂಬರ ರಹಸ್ಯ (ಏಲಕ್ಕಿ ಗಿಡವೊಂದರ ಸುತ್ತ ವಿಜ್ಞಾನರಾಜಕೀಯಸಾಮಾಜಿಕಆರ್ಥಿಕತೆ ಹೇಗೆ ಒಂದಕ್ಕೊಂದು ಬೆಸೆದುಕೊಂಡಿವೆ ಎಂದು ಚಿತ್ರಿತವಾದ ಪತ್ತೇದಾರಿ ಕತೆ - ಕೇಂದ್ರ ಸಾಹಿತ್ಯ ಅಕಾಡೆಮಿ), ಜುಗಾರಿ ಕ್ರಾಸ್ಮಾಯಾಲೋಕಕಾಡು ಮತ್ತು ಕ್ರೌರ್ಯ, ಕರ್ವಾಲೋ (ಹಾರುವ ಓತಿಯೊಂದರ ಅನ್ವೇಷಣೆಯ ವೈಜ್ಞಾನಿಕ ಕತೆ)

ನೀಳ್ಗತೆಗಳು : ಸ್ವರೂಪನಿಗೂಢ ಮನುಷ್ಯರು

ಕಥಾ ಸಂಕಲನ : ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಪಾಕಕ್ರಾಂತಿ ಮತ್ತು ಇತರ ಕತೆಗಳು.

ನಾಟಕ : ಯಮಳ ಪ್ರಶ್ನೆ (ಏಕಾಂಕ ನಾಟಕ)

ಆತ್ಮಕಥನ : ಅಣ್ಣನ ನೆನಪು

ಪ್ರವಾಸ ಕಥನ : ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್

ವಿಮರ್ಶಾ ಕೃತಿಗಳು : ವ್ಯಕ್ತಿ ವಿಶಿಷ್ಟ ಸಿಧ್ಧಾಂತವಿಮರ್ಶೆಯ ವಿಮರ್ಶೆಹೊಸ ವಿಚಾರಗಳು

ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳು : ಪರಿಸರದ ಕತೆಮಿಸ್ಸಿಂಗ್ ಲಿಂಕ್ಸಹಜ ಕೃಷಿಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳುಹಕ್ಕಿ ಪುಕ್ಕಮಿಂಚುಳ್ಳಿ - ಕನ್ನಡ ನಾಡಿನ ಹಕ್ಕಿಗಳುಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳುವಿಸ್ಮಯಫ್ಲೈಯಿಂಗ್ ಸಾಸರ್ನಡೆಯುವ ಕಡ್ಡಿ ಹಾರುವ ಎಲೆಒಂದು ಹುಲ್ಲಿನ ಕ್ರಾಂತಿ, ಹಾರುವ ತಟ್ಟೆಗಳು

ಮಿಲೇನಿಯಮ್ ಸರಣಿ : ಹುಡುಕಾಟ, ಜೀವನ ಸಂಗ್ರಾಮ, ಪೆಸಿಫಿಕ್ ದ್ವೀಪಗಳು, ಚಂದ್ರನ ಚೂರು, ಮಿಸ್ಸಿಂಗ್ ಲಿಂಕ್, ಮಹಾಯುದ್ಧ 1- 2- 3, ದೇಶವಿದೇಶ 1- 2- 3- 4, ವಿಸ್ಮಯ ವಿಶ್ವ 1- 2, ಮಹಾಪಲಾಯನ, ಅಡ್ವೆಂಚರ್

ಅನುವಾದ : ಬೆಳ್ಳಂದೂರಿನ ನರಭಕ್ಷಕ (ಕಾಡಿನ ಕಥೆಗಳು ಭಾಗ 1), ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ 2), ಜಾಲಹಳ್ಳಿಯ ಕುರ್ಕ (ಕಾಡಿನ ಕಥೆಗಳು ಭಾಗ 3) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ, ಮುನಿಶಾಮಿ ಮತ್ತು ಮಾಗಡಿ ಚಿರತೆ (ಕಾಡಿನ ಕಥೆಗಳು ಭಾಗ 4), ರುದ್ರಪ್ರಯಾಗದ ಭಯಾನಕ ನರಭಕ್ಷಕ  (ಜಿಮ್ ಕಾರ್ಬೆಟ್ ರ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್ ಕೃತಿಯ ಅನುವಾದ), ಪ್ಯಾಪಿಲಾನ್ (ಹೆನ್ರಿ ಷಾರಿಯೇ ರವರ ಪ್ಯಾಪಿಲಾನ್ ಕೃತಿಯ ಅನುವಾದ)

ಚಿತ್ರ ಸಂಕಲನ : ಮಾಯೆಯ ಮುಖಗಳು

 

ಚಂದ್ರಶೇಖರ ಕಂಬಾರ (1938- )

ಕವನ ಸಂಕಲನಗಳು : ಮುಗುಳು, ಹೇಳತೇನ ಕೇಳ, ಈವರೆಗಿನ ಹೇಳತೇನ ಕೇಳ, ತಕರಾರಿನವರು, ಸಾವಿರಾರು ನೆರಳು (ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ), ಬೆಳ್ಳಿ ಮೀನು, ಅಕ್ಕಕ್ಕು ಹಾಡುಗಳೆ, ಹಂಪಿಯ ಕಲ್ಲುಗಳು, ಎಲ್ಲಿದೆ ಶಿವಾಪುರ, ಚಕೋರಿ (ಕನ್ನಡದ ಮೊದಲ ಜನಪದ ಮಹಾಕಾವ್ಯ)

ನಾಟಕಗಳು : ಜೈಸಿದ ನಾಯ್ಕ, ನಾಯಿ ಕಥೆ, ಜೋಕುಮಾರಸ್ವಾಮಿ ನಾಟಕಗಳು ಜಮೀನ್ದಾರಿ ವ್ಯವಸ್ಥೆಯ ದಬ್ಬಾಳಿಕೆಯನ್ನು ಚಿತ್ರಿಸುತ್ತವೆ. ಸಿರಿಸಂಪಿಗೆ (ಮನುಷ್ಯನ ಆಂತರ್ಯದಲ್ಲಡಗಿರುವ ಒಳಿತು ಕೆಡುಕುಗಳ ವಿಮರ್ಶೆ ಕತೆಯ ವಸ್ತು- ಕೇಂದ್ರಸಾಹಿತ್ಯ ಅಕಾಡೆಮಿ)ಹುಲಿಯ ನೆರಳು (ವಸಾಹತುಶಾಹಿಯ ದಬ್ಬಾಳಿಕೆ)

ಜಕ್ಕಣ, ಶಿವರಾತ್ರಿ, ಅಂಗಿ ಮ್ಯಾಲಂಗಿ, ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ, ಕಿಟ್ಟಿಯ ಕಥೆ, ಹರಕೆಯ ಕುರಿ, ಸಾಂಬಶಿವ ಪ್ರಹಸನ, ಬೆಪ್ಪು ತಕ್ಕಡಿ ಬೋಳೆ ಶಂಕರ, ಪುಷ್ಪರಾಣಿ, ತಿರುಕನ ಕನಸು, ಮತಾಂತರ, ಮಹಾಮಾಯಿ, ಬೆಂಬತ್ತಿದ ಕಣ್ಣು, ಚಾಳೇಶ ಮತ್ತು ನಾರ್ಸಿಸ್ಸ್, ಋಷ್ಯಶೃಂಗ, ಆಲಿಬಾಬ, ಕಾಡುಕುದುರೆ, ಖಾರೋಖಾರ, ನೆಲಸಂಪಿಗೆ, ಭಾರತಾಂಬೆ

ಕಾದಂಬರಿಗಳು : ಕರಿಮಾಯಿ (ಗ್ರಾಮ ಸಂಸ್ಕೃತಿಯ ಮೇಲೆ ನಗರ ಸಂಸ್ಕೃತಿಯ ಪ್ರಭಾವ)ಸಿಂಗಾರವ್ವ ಮತ್ತು ಅರಮನೆ (ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಬ್ರಿಟಿಷ್ ಅಧಿಕಾರಿ ಮನ್ರೋನ ಜನಪ್ರಿಯತೆಸಮಾಜದ ಶ್ರೇಣೀಕೃತ ವ್ಯವಸ್ಥೆ)ಅಣ್ಣತಂಗಿಜಿ ಕೆ ಮಾಸ್ತರ್ ಪ್ರಣಯ ಪ್ರಸಂಗಶಿಖರ ಸೂರ್ಯಶಿವನ ಡಂಗುರ, ಚಾಂದ್ ಬಿ ಸರ್ಕಾರ.

ಸಂಶೋಧನಾ ಸಾಹಿತ್ಯ: ಉತ್ತರ ಕರ್ನಾಟಕ ಜಾನಪದ ರಂಗಭೂಮಿ, ಕನ್ನಡ  ಜಾನಪದ ವಿಶ್ವಕೋಶ, ಬೇಡರ ಹುಡುಗ ಮತ್ತು ಗಿಳಿ, ನೆಲದ ಮರೆಯ ನಿಧಾನ, ಬೃಹದ್ಧೇಸಿಯ ಚಿಂತನ, ದೇಶಿಯ ಚಿಂತನ, ಮರವೆ ಮರ್ಮರವೆ, ಇದು ದೇಸಿ, ನಮ್ಮ ಜಾನಪದ, ಕನ್ನಡ ನಾಟಕ ಸಂಪುಟ, ಸಂಗ್ಯಾ ಬಾಳ್ಯಾಬಣ್ಣಿಸಿ ಹಾಡುವ ನನ ಬಳಗಬಯಲಾಟಗಳುಮಾತಾಡೊ ಲಿಂಗವೆಬಂದಿರೆ ನನ್ನ ಜೈಯೊಳಗೆ, ಲಕ್ಷಪತಿ ರಾಜನ ಕಥೆಕಾಸಿಗೊಂದು ಸೇರು

ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ.

2019 ರಲ್ಲಿ ಧಾರವಾಡದಲ್ಲಿ ನಡೆದ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

 

ಗಿರಡ್ಡಿ ಗೋವಿಂದರಾಜ (1939-            )

ರಂಗಮಾಧ್ಯಮ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು

ಕವನ ಸಂಕಲನ : ಶಾರದಾಲಹರಿರಸವಂತಿಮರ್ಲಿನ್ ಮನ್ರೋ ಮತ್ತು ಇತರ ಪದ್ಯಗಳು

ಕಥಾಸಂಕಲನ : ಆ ಮುಖಾ - ಈ ಮುಖಾಮಣ್ಣು (ನೀಳ್ಗತೆ)ಹಂಗು ಮತ್ತು ಇತರ ಕತೆಗಳುಒಂದು ಬೇವಿನಮರದ ಕಥೆ

ಸಾಹಿತ್ಯ ವಿಮರ್ಶೆ : ಸಣ್ಣ ಕತೆಯ ಹೊಸ ಒಲವುಗಳುಜನಪದ ಕಾವ್ಯನವ್ಯ ವಿಮರ್ಶೆನಾಟಕ - ವಸ್ತು ಮತ್ತು ತಂತ್ರಕಾದಂಬರಿ - ವಸ್ತು ಮತ್ತು ತಂತ್ರಸಾಹಿತ್ಯ ಮತ್ತು ಪರಂಪರೆಇಂಗ್ಲೆಂಡಿನ ರಂಗಭೂಮಿಸಾತತ್ಯವಚನ ವಿನ್ಯಾಸಕನ್ನಡ ಕಾವ್ಯಪರಂಪರೆ ಮತ್ತು ಬೇಂದ್ರೆಯವರ ಕಾವ್ಯ, ನಾಟಕ ಸಾಹಿತ್ಯ ಮತ್ತು ರಂಗಭೂಮಿ.

ಭಾಷಾಶಾಸ್ತ್ರ : ಕನ್ನಡ ಡೈಗ್ಲಾಸಿಯಇಂಟ್ರಡಕ್ಷನ್ ಟು ಜನರಲ್ ಲಿಂಗ್ವಿಸ್ಟಿಕ್ಸ್

ಸಂಪಾದನೆ : ಮರೆಯಬಾರದ ಹಳೆಯ ಕತೆಗಳು, ಸಣ್ಣ ಕತೆ, ಕನ್ನಡ ಕಥಾಸಂಕಲನ, ಆಧುನಿಕ ಕನ್ನಡ ಕಾವ್ಯ : ಉತ್ತರ ಕರ್ನಾಟಕದ ಕೊಡುಗೆ, ಯುವಕಾವ್ಯ - 1998, ಯುವಕಥೆ - 1999, ಕೆ ವಿ ತಿರುಮಲೇಶರ ಸಾಹಿತ್ಯ, ಕನ್ನಡ ನವೋದಯ ಕಾವ್ಯ, ಕುಂ ವೀ ಅವರ ಕಥಾಸಾಹಿತ್ಯ, ಮಿರ್ಜಿ ಅಣ್ಣಾರಾಯರ ಸಾಹಿತ್ಯ, ಓದುವ ದಾರಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪಾರಿಭಾಷಿಕ ಮಾಲೆ, ಸಂಕ್ರಮಣ ಕಾವ್ಯ, ಹವ್ಯಾಸಿ ರಂಗಭೂಮಿಯ ಸಮಸ್ಯೆಗಳು, ದಶವಾರ್ಷಿಕ ವಿಮರ್ಶೆಗಳು, ಶತಮಾನದ ಸಂಕಲನಗಳು

ಇತರೇ ಕೃತಿಗಳು : ಸಮಗ್ರ ಸೃಜನಸಮಗ್ರ ವಿಮರ್ಶೆ

 

ಸಿದ್ದಲಿಂಗ ಪಟ್ಟಣಶೆಟ್ಟಿ (1939-            )

ಕವನ ಸಂಕಲನ : ನೀನಾ, ಔರಂಗಜೇಬ, ಪರದೇಸಿ ಹಾಡುಗಳು, ನೂರಾರು ಪದ್ಯಗಳು, ಪ್ರತೀಕ್ಷೆ, ಮತ್ತೆ ಬಂದಿದ್ದಾಳೆ, ಆಯಸ್ಕಾಂತ, ಇಂದು ರಾತ್ರಿಯ ಹಾಗೆ, ಅಂತರಂಗದ ಕವನಗಳು, ಇಷ್ಟು ಹೇಳಿದ ಮೇಲೆ

ಕಥಾ ಸಂಕಲನ : ಮಾವ ಮತ್ತು ಇತರ ಕತೆಗಳು

ವಿಮರ್ಶೆ : ಆಧುನಿಕ ಕನ್ನಡ ಹಿಂದಿ ಕಾವ್ಯ, ಅನುಶೀಲನ, ರಂಗಾಯಣ, ಪರಿಭಾವನ, ವ್ಯಕ್ತಿಚಿತ್ರ ಸಂದರ್ಶನ, ಋಣಾನುಬಂಧ

ಅಂಕಣ ಬರಹ : ಚಹಾದ ಜೋಡಿ

ಸಂಪಾದಿತ : ನಾನಿ ಕಾಕಾ ಎನ್ಕೆ ಬದುಕು ; ಸ್ಮರಣ-ಅಭಿನಂದನೆ, ನಾನಿ ಕಾಕಾ ಎನ್ಕೆ ಬರಹ - ವಿಮರ್ಶಾ ಲೇಖನಗಳು, ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ, ಸಾಲಿ ರಾಮಚಂದ್ರರಾಯ : ಸಂಸ್ಮರಣೆಗಳು, ರಂಗಸಂಪನ್ನರು, ಕಲ್ಯಾಣದ ಹಾದಿ, ಸಂಕ್ರಮಣ ಕಾವ್ಯ

ಅನುವಾದ ನಾಟಕ : ಆಷಾಡದ ಒಂದು ದಿನ (ಹಿಂದಿ ಮೂಲ : ಮೊಹನ ರಾಕೇಶ), ಅಲೆಗಳಲ್ಲಿ ರಾಜಹಂಸಗಳು (ಹಿಂದಿ ಮೂಲ : ಮೊಹನ ರಾಕೇಶ), ಅಧೇ ಅಧೂರೆ (ಹಿಂದಿ ಮೂಲ : ಮೊಹನ ರಾಕೇಶ), ಅಂಧಯುಗ : (ಹಿಂದಿ ಮೂಲ : ಧರ್ಮವೀರ ಭಾರತೀ), ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ (ಹಿಂದಿ ಮೂಲ : ಸುರೇಂದ್ರ ವರ್ಮಾ), ಮೂರು ನಾಟಕಗಳು (ಹಿಂದಿ ಮೂಲ : ಮೋಹನ ರಾಕೇಶ), ಕೋರ್ಟ ಮಾರ್ಶಲ್ (ಹಿಂದಿ ಮೂಲ: ಸ್ವದೇಶ ದೀಪಕ), ಹಾಸಿಗೆ (ಮರಾಠಿ ಮೂಲ : ರತ್ನಾಕರ ಮತಕರೀ), ಬೇರಿಲ್ಲದವರು (ಉರ್ದು ಮೂಲ : ಅನಿಲ ಠಕ್ಕರ), ಅಂಜಿ (ಮರಾಠಿ ಮೂಲ : ವಿಜಯ ತೆಂಡೂಲ್ಕರ್), ಮುದ್ರಾರಾಕ್ಷಸ (ಸಂಸ್ಕೃತ ಮೂಲ : ವಿಶಾಖದತ್ತ)

ಅನುವಾದ ಕಾವ್ಯ : ಕನುಪ್ರಿಯಾ (ಹಿಂದಿ ಮೂಲ : ಧರ್ಮವೀರ ಭಾರತೀ)ಮೀರಾವಾಣಿ (ಹಿಂದಿ)

ಅನುವಾದ ಕಾದಂಬರಿ : ಶೇಷಪ್ರಶ್ನೆ, ಭಾರತಿ (ಮೂಲ : ಶರಚ್ಚಂದ್ರ), ಶಿಕ್ಷೆ (ಒಡಿಯಾ ಮೂಲ : ಕಾನ್ಹುಚರಣ ಮೊಹಾಂತಿ)

ಜೀವನ ಚರಿತ್ರೆ : ವಿಧಿಶಾ ಪ್ರಹಸನ ( ಮಾಲವಿಕಾಗ್ನಿಮಿತ್ರ – ಕೇಂದ್ರ ಸಾಹಿತ್ಯ ಅಕಾಡೆಮಿ), ಮೀರಾಬಾಯಿ (ಇಂಗ್ಲಿಶ್ ಮೂಲ : ಉಷಾ ಎಸ್ ನಿಲ್ಸನ್), ಜಯಶಂಕರ ಪ್ರಸಾದ (ಇಂಗ್ಲಿಷ್ ಮೂಲ : ರಮೇಶಚಂದ್ರ ಶಾಹ), ಸವಾಈ ಜಯಸಿಂಹ (ಹಿಂದಿ ಮೂಲ : ರಾಜೇಂದ್ರ ಶಂಕರ ಭಟ್ಟ)

ಅನುವಾದ ಪ್ರಬಂಧ : ಹೆಣ್ಣಿನ ಸ್ಥಾನಮಾನ (ಮೂಲ : ಶರಚ್ಚಂದ್ರ)

 

ಕಿ ರಂ ನಾಗರಾಜ (1943 – 2010)

ನಾಟಕಗಳು : ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ

ವಿಮರ್ಶೆ : ಪ್ರತಿಷ್ಟಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ, ಮತ್ತೇ ಮತ್ತೇ ಬೇಂದ್ರೆ

ಸಂಪಾದನೆ : ವಚನ ಕಮ್ಮಟ, ಆಪತ್ಕಾಲೀನ ಕವಿತೆಗಳು, ಕುವೆಂಪು ನುಡಿಚಿತ್ರ, ಬಹುರೂಪಿ.

ಅಭಿನಂದನಾ ಗ್ರಂಥ : ನಿಜದ ನಾಡೋಜ

 

ಶ್ರೀಕೃಷ್ಣ ಆಲನಹಳ್ಳಿ (1947 - 1989)

ಕವನ ಸಂಕಲನ : ಮಣ್ಣಿನ ಹಾಡುಕಾಡುಗಿಡದ ಹಾಡು ಪಾಡು

ಕಥಾಸಂಕಲನ : ತಪ್ತ,  ಫೀನಿಕ್ಸ್ಗೀಜಗನ ಗೂಡು

ಕಾದಂಬರಿ : ಭುಜಂಗಯ್ಯನ ದಶಾವತಾರ (ಗ್ರಾಮೀಣ ಜೀವನದ ಒತ್ತಡಗಳು ಮತ್ತು ಮೌಲ್ಯಗಳ ಮಧ್ಯೆ ಕಾಣಬರುವ ವಿಚಿತ್ರ ವ್ಯಕ್ತಿ ಭುಜಂಗಯ್ಯ)ಕಾಡು (ಪುರುಷ ಪ್ರಧಾನ ಸಮಾಜದಲ್ಲಿ ಲೈಂಗಿಕ ಶೋಷಣೆಗೆ ಬಲಿಯಾದ ಹೆಣ್ಣು)ಪರಸಂಗದ ಗೆಂಡೆತಿಮ್ಮ (ಗ್ರಾಮದ ಕಟ್ಟುಪಾಡುಗಳ ಒತ್ತಡ ಹಾಗೂ ಪತ್ನಿಯ ವಂಚನೆಯಿಂದ ಅತ್ಮಹತ್ಯೆ ಮಾಡಿಕೊಳ್ಳುವ ತಿಮ್ಮ ಇಲ್ಲಿಯ ಕೇಂದ್ರಬಿಂದು)

ಅನುವಾದ : ಡೋಗ್ರಾ ಪಹಾರಿ ಪ್ರೇಮಗೀತೆಗಳು

ಸಂಪಾದನೆ : ಗ್ರಾಮಾಯಣ ಸಮೀಕ್ಷೆಅವಲೋಕನಅಂತಃಕರಣ

ಇತರ ಪ್ರಮುಖ ಕೃತಿಗಳು : ತಿಕ ಸುಟ್ಟ ದೇವರುಅರಮನೆ

ಅಭಿನಂದನಾ ಗ್ರಂಥ : ಕಾಡಿನ ಹುಡುಗ ಕೃಷ್ಣ


ಕಾಮೆಂಟ್‌ಗಳು