ಸಂಶೋಧನಾ ಸಾಹಿತಿಗಳು 1
ಸಂಶೋಧನಾ ಸಾಹಿತಿಗಳು ಭಾಗ -1
ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯ (1800)
ಪ್ರಮುಖ ಕೃತಿಗಳು : ಧಾತುಮಂಜರಿ, ಶಬ್ದಮಂಜರಿ, ಹಳಗನ್ನಡ ನುಡಿಗನ್ನಡಿ, ಹೊಸಗನ್ನಡ ನುಡಿಗನ್ನಡಿ
ಹೊಳಕಲ್ಲು ನರಸಿಂಹಯ್ಯ (1825)
ಕೃತಿಗಳು : ಅರವತ್ತಮೂರು ಮಂದಿ ಪುರಾತನರ ತ್ರಿಪದಿ, ದಾಸರ ಪದಗಳು ಮುಂತಾದವು
ಗಂಗಾಧರ ಮಡಿವಾಳೇಶ್ವರ ತುರುಮುರಿ (1827-1877)
ಅನುವಾದ : ಬಾಣಕವಿಯ ಕಾದಂಬರಿ
ಟೀಕೆ/ವ್ಯಾಖ್ಯಾನ : ರಾಜಶೇಖರ ವಿಳಾಸದ ಮೊದಲ ಮತ್ತು ನಾಲ್ಕನೇಯ ಆಶ್ವಾಸ, ನಿಜಗುಣ ಶಿವಯೋಗಿಗಳ ಕೈವಲ್ಯ
ಪದ್ಧತಿ ಹಾಗು ಕೇಶಿರಾಜನ ಶಬ್ದಮಣಿ ದರ್ಪಣ
ಚುರುಮುರಿ
ಶೇಷಗಿರಿರಾಯರು (1827-1884)
ಪತ್ರಿಕೆ : ಲೋಕಶಿಕ್ಷಣ
ಭಾಷಾಂತರ : ಕಾಳಿದಾಸನ ಶಾಕುಂತಲ ನಾಟಕ
ಮುಖ್ಯ ಕೃತಿಗಳು : ಕನ್ನಡ ಲಘು ವ್ಯಾಕರಣ, ಕರ್ನಾಟಕದ ಗೆಜೆಟಿಯರ್, ಕರ್ನಾಟಕದ ವರ್ಣನೆಯೂ
ಇತಿಹಾಸವೂ ಮುಂತಾದವು.
ಮಲ್ಲಪ್ಪ ಬೇಗೂರು (1835-1907)
ಕೃತಿಗಳು : ಅರ್ಥಾಲಂಕಾರ ಪ್ರಕರಣ (2ನೇ ನಾಗವರ್ಮನ ಕಾವ್ಯಾವಲೋಕನದ ಒಂದು ಪ್ರಕರಣ)
ಸಂಪಾದನೆ : 1ನೇ ನಾಗವರ್ಮನ ಕಾದಂಬರಿ, ಷಡಕ್ಷರಿಯ ರಾಜಶೇಖರ ವಿಳಾಸ
ಕರಿಬಸವ ಶಾಸ್ತ್ರಿ (1848-1931)
ಪತ್ರಿಕೆ : ವೀರಶೈವ ಮತ ಪ್ರಕಾಶಿಕೆ
ಸಂಪಾದನೆ : ಜೈಮಿನಿ ಭಾರತ, ಮಾಚಿದೇವ ಮನೋವಿಲಾಸ, ರಾಜಶೇಖರ ವಿಳಾಸ, ನಿಜಗುಣ ಶಿವಯೊಗಿಯ ಅನುಭವಸಾರ, ಲಕ್ಷ್ಮೀಶನ ಜೈಮಿನಿ
ಭಾರತ
ಧೋಂಡೋ ನರಸಿಂಹರು (1848-1898)
ನಾಟಕ :
ಉತ್ತರರಾಮಚರಿತ್ರ
ವ್ಯಾಕರಣ/ಛಂದಸ್ಸು : ಕನ್ನಡ ಕೈಪಿಡಿ, ಛಂದಸ್ಸಾರ, ಹೊಸಗನ್ನಡ ನುಡಿಗಟ್ಟು.
ಭಾಷಾಂತರ : ಶೂದ್ರಕ ಕವಿಯ ಮೃಚ್ಛಕಟಿಕ ಮತ್ತು ಕಾಳಿದಾಸನ ಮಾಳವಿಕಾಗ್ನಿಮಿತ್ರ
ರಾ ಹ ದೇಶಪಾಂಡೆಯವರೊಡನೆ ಸೇರಿ ಕನ್ನಡ ವಿದ್ಯಾವರ್ಧಕ
ಸಂಘವನ್ನು ಸ್ಥಾಪಿಸಿದರು
ಕಾಶೀನಾಥ ಬಾಪೂಜಿ ಪಾಠಕ್ (1850-1933)
ಸಂಪಾದನೆ : ಕವಿರಾಜಮಾರ್ಗ, ಕಾಳಿದಾಸನ ಮೇಘದೂತ
ಸೋಸಲೆ ಅಯ್ಯಾಶಾಸ್ತ್ರಿಗಳು (1854-1934)
ಸಂಪಾದನೆ : ಕರ್ನಾಟಕ ಶಬ್ದಾನುಶಾಸನಂ, ಕರ್ನಾಟಕ ಕಾದಂಬರಿ, ಕರ್ನಾಟಕ ವಚನ ಭಾರತ, ಕರ್ನಾಟಕ ಭಗವದ್ಗೀತೆ.
ಅನುವಾದ : ಆರ್ಯಕ (ಹೆನ್ರಿಕ್ ಇಬ್ಸನ್ನನ ದಿ
ವಾರಿಯನ್ ಇನ್ ಹೆಗಲ್ಲ್ಯಾಂಡ್ - ನಾಟಕ), ಸೂತ್ರದ ಬೊಂಬೆ (ದಿ ಡಾಲ್‌ಹೌಸ್ ನಾಟಕ), ಸಾಕ್ರೆಟೀಸ್ ಮರಣ (ಮಾರಿಸ್ ಲಾರೆನ್ಸ್ ಹೌಸ್ ನ ಡೆತ್ ಆಫ್ ಸಾಕ್ರಟಿಸ್) ಮೋನ್ನ -
ವನ್ನ (ಮ್ಯಾಟರ್ಲಿಂಕ್), ಕಣ್ಣು ಬಿಚ್ಚಲೆ (ಏಕಾಂಕ ನಾಟಕ)
ಮುಂತಾದವು.
ಬ್ರಹ್ಮಸೂರಿ ಪದ್ಮರಾಜ ಪಂಡಿತ (1850)
ಕೃತಿಗಳು : ಉದಯರಾಗ (ಕನ್ನಡದ ಮೊದಲ ಗಾದೆಗಳ ಸಂಗ್ರಹ)
ಚಾವಲಿ ರಾಮಸ್ವಾಮಿ ಶಾಸ್ತ್ರಿಗಳು (1850)
ಕೃತಿಗಳು : ಕರ್ನಾಟಕ ಛಂದೋಲಂಕಾರ ಸಾಹಿತ್ಯ ಲಕ್ಷಣ
ಸಂಪಾದನೆ : ರುದ್ರಭಟ್ಟನ ಜಗನ್ನಾಥ ವಿಜಯಂ
ಆರ್ ನರಸಿಂಹಾಚಾರ್ (1861-1936)
ಸಂಪಾದನೆ : ಕಾವ್ಯಾವಲೋಕನ, ಭಾಷಾ ಭೂಷಣ ಮತ್ತು ಶಬ್ದಾನುಶಾಸನ, ಕನ್ನಡ ಶಾಸನ ಪದ್ಯ
ಸಂಗ್ರಹ, ಶಬ್ದಾನುಶಾಸನ
ಪ್ರಮುಖ ಕೃತಿಗಳು : ಕರ್ನಾಟಕ ಕವಿಚರಿತ್ರೆ (3 ಸಂಪುಟಗಳು), ಶಾಸನ ಪದ್ಯ ಮಂಜರಿ, ಕನ್ನಡ ಭಾಷಾ
ಚರಿತ್ರೆ, ಶ್ರವಣಬೆಳಗೊಳದ 500 ಶಾಸನಗಳ
ಸಂಪುಟ
ಅನುವಾದ : ನೀತಿ ಮಂಜರಿ, ನೀತಿ ವಾಕ್ಯಮಂಜರಿ (ತಮಿಳಿನ ಕುರುಳ್ ಗ್ರಂಥ ಆಧಾರಿತ),
ನಗೆಗಡಲು
ಇಂಗ್ಲಿಷ್ ಬರಹಗಳು : ದ ಹಿಸ್ಟರಿ ಆಫ್ ಕನ್ನಡ ಲಾಂಗ್ವೆಜ್, ದ ಹಿಸ್ಟರಿ ಆಫ್ ಕನ್ನಡ ಲಿಟರೇಚರ್
ಗೌರವ ಬಿರುದುಗಳು : ಪ್ರಾಕ್ತನ ಪರಾಮರ್ಶ ವಿಚಕ್ಷಣ, ರಾವ್ ಬಹದ್ದೂರ್, ಕರ್ನಾಟಕ
ಪ್ರಾಚ್ಯ ವಿದ್ಯಾವೈಭವ ಮತ್ತು ಮಹಾಮಹೋಪಾಧ್ಯಾಯ
ಧಾರವಾಡದಲ್ಲಿ 1918 ರಲ್ಲಿ ನಡೆದ 4ನೇ ಕನ್ನಡ ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರಾಗಿದ್ದರು
ರಾಮಸ್ವಾಮಿ ಅಯ್ಯಂಗಾರ್ (1860-1925)
ಪ್ರಮುಖ ಕೃತಿಗಳು : ಕುಮಾರವ್ಯಾಸನ ಸಮಗ್ರ ಮಹಾಭಾರತ ಮತ್ತು ಸಂಕ್ಷೇಪ ಮುದ್ರಾರಾಕ್ಷಸ
ಸಂಪಾದನೆ : ಆನಂದ ರಾಮಾಯಣ (ರಾಮಾಭ್ಯುದಯ ಕಥಾಕುಸುಮ ಮಂಜರಿ).
ರಾಮಚಂದ್ರ ಹಣಮಂತ ದೇಶಪಾಂಡೆ (1861-1930)
ಮುಖ್ಯ ಕೃತಿಗಳು : ಕರ್ನಾಟಕ ಸಾಮ್ರಾಜ್ಯ, ಚರಿತ್ರ ಸಂಗ್ರಹ.
ಎಸ್ ಜಿ ನರಸಿಂಹಾಚಾರ್ (1862-1907)
ಪತ್ರಿಕೆ : ಕರ್ನಾಟಕ ಕಾವ್ಯ ಮಂಜರಿ
ಅನುವಾದ : ಅಜನೃಪ ಚರಿತೆ (ಕಾಳಿದಾಸನ ರಘುವಂಶ ಕಾವ್ಯ), ದಿಲೀಪ ಚರಿತೆ
ನಕ್ಷತ್ರ (ಮಿರುಮಿರುಗುವ ಹಾ ಕಿರು ತಾರಗೆಯ -
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್), ಗೋವಿನ ಬಾಳು (ಇಟ್ಟರೆ ಸಗಣಿಯಾದೆ), ಕಾವೇರಿಯ ಮಹಿಮೆ
(ನೋಡು ಕಾವೇರಿಯ)
ಸಂಪಾದನೆ : ಪಂಪನ ಆದಿಪುರಾಣ, ಸಭಾಪರ್ವ, ರತ್ನಾಕರಾಧೀಶ್ವರ ಶತಕಂ, ಉದಯಾದಿತ್ಯಾಲಂಕಾರ, ಅಪರಾಜಿತೇಶ್ವರ ಶತಕಂ, ಚತುರಾಸ್ಯ ನಿಘಂಟು, ಕರ್ನಾಟಕ ನಿಘಂಟು, ಕಬ್ಬಿಗರ ಕಾವಂ, ಶೃಂಗಾರ ರತ್ನಾಕರ, ಗದಾಯುದ್ಧ, ಮಲ್ಲಿನಾಥ ಪುರಾಣಂ, ಚಿಕ್ಕದೇವರಾಯ ವಂಶಾವಳಿ, ಚಿಕ್ಕದೇವರಾಜ ವಿಜಯಂ,
ಚಿಕ್ಕದೇವರಾಜ ಭಿನ್ನಪಂ, ಮಿತ್ರವಿಂದಾ ಗೋವಿಂದ,
ಅದ್ಭುತ ರಾಮಾಯಣಂ, ಶ್ರೀರಾಮಾಶ್ವಮೇಧಂ,
ಶ್ರೀರಾಮ ಪಟ್ಟಾಭಿಷೇಕಂ, ಕರ್ನಾಟಕ ಸಂಜೀವನಂ,
ಹದಿಬದೆಯ ಧರ್ಮ, ಅಪ್ರತಿಮ ವೀರಚರಿತಂ,
ಜಯನೃಪಕಾವ್ಯಂ, ಕರ್ನಾಟಕ ಶಬ್ದಸಾರಂ, ಸುಭಾಷಿತ ಮುಕ್ತಕ ಶತಕಂ, ಲೀಲಾವತಿ, ಕಾವ್ಯಸಾರಂ, ಕರ್ನಾಟಕ ಪಂಚತಂತ್ರ, ಭಾವಚಿಂತಾರತ್ನ, ಕನ್ನಡ ವಚನ ಕಾದಂಬರಿ, ಚಂದ್ರಪ್ರಭ ಪುರಾಣಂ, ಅಭಿನವದಶಕುಮಾರ ಚರಿತೆ,
ಕವಿಕಂಠಹಾರ, ಉತ್ತರರಾಮ ಚರಿತೆ, ಜಗನ್ನಾಥ ಚರಿತೆ, ವತ್ಸರಾಜನ ಕತೆ, ಗಿರಿಜಾ ಕಲ್ಯಾಣಂ, ಭಗವದ್ಗೀತಾರ್ಥ ಪ್ರತಿಪಾದಕ
ಕೀರ್ತನಂ, ಶ್ರೀ ಗೀತ ಗೋಪಾಲಂ, ನಳಚರಿತ್ರೆ,
ಭಾರತವೀರ ಚರಿತ, ನಂದಿ ಮಹಾತ್ಮ್ಯ, ಕೃಷ್ಣಗೋಪಿ ವಿಲಾಸಂ
ಇತರ ಪ್ರಮುಖ ಕೃತಿಗಳು : ಹಿಂದೂ ದೇಶದ ಚರಿತ್ರೆ, ಅಲ್ಲಾವುದ್ದೀನ ದೀಪ, ಈಸೋಪನ ನೀತಿ ಕತೆಗಳು, ಗಲಿವರನ ದೇಶ ಸಂಚಾರ, ಭಾರತವೀರ ಚರಿತೆ
1907 ರಲ್ಲಿ ಧಾರವಾಡದಲ್ಲಿ ನಡೆದ ಪ್ರಥಮ ಗ್ರಂಥಕರ್ತರ
ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು.
ಎಂ ಎ ರಾಮಾನುಜಯ್ಯಂಗಾರ್ (1862-1937)
ಪತ್ರಿಕೆ : ಕರ್ನಾಟಕ ಕಾವ್ಯ ಕಲಾನಿಧಿ / ಕರ್ನಾಟಕ ಕಾವ್ಯ ಮಂಜರಿ (ಪ್ರಾಚೀನ ಕನ್ನಡ
ಕಾವ್ಯಗಳನ್ನು ಪ್ರಕಟಿಸಲು). ಆರ್ಯಮತ ಸಂಜೀವಿನಿ - ಮಿತ್ರಾವಿಂದ ಗೋವಿಂದ ನಾಟಕವನ್ನು ಈ
ಮುದ್ರಣಾಲಯ ಪ್ರಕಟಿಸಿತು.
ಪ್ರಮುಖ ಕೃತಿಗಳು : ಕವಿಸಮಯ, ಕವಿಕಾರ್ಯ ಪ್ರಶಂಸೆ, ಪ್ರಬಂಧ ಮಂಜರಿ, ಸುವೃತ / ಕರ್ಮವಿಲಾಸ
ಸಂಪಾದನೆ : ಹರಿಹರನ ಪಂಪಾಶತಕಂ, ಗುಬ್ಬಿಯ ಮಲ್ಲಣಾರ್ಯನ ಭಾವಚಿಂತಾರತ್ನ, ಅಗ್ಗಳದೇವನ
ಚಂದ್ರಪ್ರಭಪುರಾಣ, ಮುದ್ದಣನ ರಾಮಾಶ್ವಮೇಧ, ಚಿಕ್ಕದೇವರಾಯ ಬಿನ್ನಪಂ, ತಿರುಮಲಾರ್ಯನ ಚಿಕ್ಕದೇವರಾಜ
ವಂಶಾವಳಿ, ಚಿಕ್ಕದೇವರಾಜ ವಿಜಯ, ಚೌಂಡರಸನ
ಅಭಿನವ ದಶಕುಮಾರ ಚರಿತೆ, ನೇಮಿಚಂದ್ರನ ಲೀಲಾವತಿ ಪ್ರಬಂಧ, ಕಮಲಭವನ
ಶಾಂತೀಶ್ವರ ಪುರಾಣ, ಕನಕದಾಸರ ಮೋಹನ ತರಂಗಿಣಿ, ದುರ್ಗಸಿಂಹನ ಪಂಚತಂತ್ರ
ಮಂಗರಸನ ಜಯನೃಪಕಾವ್ಯ, ಪಂಪನ ಆದಿಪುರಾಣ, ಹೊನ್ನಮ್ಮನ ಹದಿಬದೆಯ ಧರ್ಮ, ಅರ್ಧನೇಮಿ ಪುರಾಣ,
ಕರ್ಣವೃತ್ತಾಂತ ಕತೆ
ಕುಂಡಲಗಿರಿ ಆಚಾರ್ಯ (1865-1904)
ಅನುವಾದ : ವಾದೀಬಸಿಂಹನ ಜೀವಂಧರ ಚರಿತ, ಜೈಮಿನಿ ಭಾರತ, ಹರ್ಷಚರಿತೆ
ಸಂಪಾದನೆ : ಶಬ್ದಾನುಶಾಸನ ಪ್ರಕಾಶಿಕೆ
ಮಾಗಡಿ ವೀರಪ್ಪಶಾಸ್ತ್ರಿ (1868-1926)
ಸಂಪಾದನೆ : ಚಿಕ್ಕನಂಜಾರ್ಯನ ರಾಘವಾಂಕ ಕಾವ್ಯ, ಗುಬ್ಬಿ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ
ಆರ್ ಶಾಮಶಾಸ್ತ್ರಿ (1870-1944)
ಸಂಶೋಧನೆ / ಸಂಪಾದನೆ : ಕುಮಾರವ್ಯಾಸನ ಮಹಾಭಾರತ (ವಿರಾಟಪರ್ವ), ಲಿಂಗಣ್ಣನ ಕೆಳದಿ ನೃಪವಿಜಯ, ಸೋಮರಾಜನ
ಉದ್ಭಟ ಕಾವ್ಯ, ರುದ್ರಭಟ್ಟನ ಜಗನ್ನಾಥ ವಿಜಯ, ಕುಮಾರವ್ಯಾಸಭಾರತದ ಉದ್ಯೋಗಪರ್ವ, ಸೋಮನಾಥನ ಅಕ್ರೂರ
ಚರಿತೆ, ನಯಸೇನನ ಧರ್ಮಾಮೃತ, ಕಂಠೀರವ
ನರಸರಾಜ ವಿಜಯ
ಬೆಳ್ಳಾವೆ ವೆಂಕಟನಾರಾಣಪ್ಪ (1871-1943)
ಪತ್ರಿಕೆ : ವಿಜ್ಞಾನ (ಕನ್ನಡದ ಮೊದಲ ವಿಜ್ಞಾನ ಪತ್ರಿಕೆ)
ಸಂಪಾದನೆ : ಪಂಪರಾಮಾಯಣ, ಪಂಪಭಾರತ, ಚಾವುಂಡರಾಯ ಪುರಾಣ, ಸೋಮೇಶ್ವರ ಶತಕ, ಕುಸುಮಾವಳಿ ಕಾವ್ಯ, ಶಬ್ದಮಣಿ ದರ್ಪಣ
ವೆಂಕಟರಾವ್ ಆಲೆಮನೆ (1870)
ಸಂಪಾದನೆ : ಕವಿರಾಜಮಾರ್ಗ, ಎರಡನೆಯ ಗುಣವರ್ಮನ ಪುಷ್ಪದಂತ ಪುರಾಣ, ಶಾಂತಿಪುರಾಣ
ನಂಜನಗೂಡು ಕರಿಬಸವಶಾಸ್ತ್ರಿ (1872-1923)
ಟೀಕಾ ಗ್ರಂಥಗಳು : ವಿರಕ್ತ ತೋಂಟದಾರ್ಯನ ಕರ್ನಾಟಕ ಶಬ್ದಮಂಜರಿ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ,
ಭೀಮಕವಿಯ ಬಸವಪುರಾಣ, ಷಡಕ್ಷರದೇವನ ವೃಷಭೇಂದ್ರ ವಿಜಯ ಕೃತಿಗಳ ಗದ್ಯಾನುವಾದ
ಸಂಪಾದನೆ : ರಕ್ಷಾ ಶತಕ, ಸೌಂದರ ಪುರಾಣ, ತತ್ವ ಪ್ರಕಾಶಿಕಾ.
ಲಕ್ಷ್ಮಿ ನರಸಿಂಹ ಶಾಸ್ತ್ರಿ (1875)
ಅನುವಾದ : ಕನ್ನಡದಲ್ಲಿ ಕರ್ನಾಟಕ ಚಂದ್ರಾಲೋಕ (ಜಯದೇವ ಕವಿಯ
ಗೀತಗೋವಿಂದ ಕಾವ್ಯನಾಟಕ)
ಬೆನಗಲ್ ರಾಮರಾಯರು (1876-1943)
ಪ್ರಮುಖ ಕೃತಿಗಳು : ಇರಾವತಿ, ಕರ್ನಾಟಕ ಕುಂದಮಾಲೆ, ಕರ್ನಾಟಕ ಘೋಷಯಾತ್ರೆ
ಸಂಪಾದನೆ : ಹಳೇಬೀಡು ಕೈಫಿಯತ್ತು, ಹೊಳೆಹೊನ್ನೂರು ಕೈಫಿಯತ್ತು
1925 ರಲ್ಲಿ ಬೆಳಗಾವಿಯಲ್ಲಿ ನಡೆದ
11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಶಿವರಾಮಯ್ಯ ಐರೋಡಿ (1878-1941)
ಪ್ರಮುಖ ಗ್ರಂಥಗಳು : ಕನ್ನಡ ಲಘು ವ್ಯಾಕರಣ, ಕನ್ನಡ ಪ್ರೌಢ ವ್ಯಾಕರಣ, ಮುದ್ರಾರಾಕ್ಷಸ ನಾಟಕ,
ರಘುವಂಶ ಸಾರಸಂಗ್ರಹ, ಸಂಸ್ಕೃತ ನಾಟಕಗಳ ಕನ್ನಡ
ಕಥಾವಳಿ.
ಮಲ್ಲಿಕಾರ್ಜುನಪ್ಪ ರೈನಾಪುರ (1880-1953)
ಅನುವಾದ : ಕಾಳಿದಾಸನ ಶಾಕುಂತಲ ಹಾಗೂ ಮೇಘದೂತ
ಸಂಪಾದನೆ : ಬಾಣನ ಕಾದಂಬರಿ, ಷಡಕ್ಷರನ ಸಂಸ್ಕೃತ ಕೃತಿ ಕವಿಕರ್ಣ ರಸಾಯನ
ಫ ಗು ಹಳಕಟ್ಟಿ (1880-1943)
ವಚನಶಾಸ್ತ್ರ ಪಿತಾಮಹಾ (ವಚನಗಳ ಸಂಗ್ರಹ)
ಪತ್ರಿಕೆ : ಶಿವಾನುಭವ, ನವ ಕರ್ನಾಟಕ
ಶಿವಾನುಭವ ಪತ್ರಿಕೆಯಲ್ಲಿ ಅರ್ಜುನವಾಡ, ಅಬ್ಬಲೂರು, ಅರಕೇರಿ ಶಾಸನಗಳ ಪ್ರಕಟಣೆ
ಸಂಪಾದನೆ : ವಚನಶಾಸ್ತ್ರಸಾರ ಭಾಗ, ಶೂನ್ಯ ಸಂಪಾದನೆ
ಪ್ರಮುಖ ಕೃತಿಗಳು : ಶಿವಾನುಭವ ಶಬ್ಧಕೋಶ, ಪ್ರಭುದೇವರ ವಚನಗಳು, ಹರಿಹರನ ರಗಳೆಗಳು, ಪ್ರದೀಪಿಕೆ, ಶೈವಾಗಮಗಳು, ಶೂನ್ಯಸಂಪಾದನೆಯ ರಹಸ್ಯ, ಮಹಿಮ್ನ ಸ್ತೋತ್ರ, ಏಕೋತ್ತರ ಶತಸ್ಥಲ, ವಚನ ಶಾಸ್ತ್ರಸಾರ, ಸಾರಂಗ ಮಠಾಧೀಶ್ವರರು, ಶಿವಶರಣರ ಚರಿತ್ರೆಗಳು,
ಶಿವಶರಣೆಯರ ಚರಿತ್ರೆಗಳು, ನಿರಂಜನ
ವಂಶರತ್ನಾಕರ, ಆದಿಶೆಟ್ಟಿ ಪುರಾಣ, ದೇವರ
ದಾಸಿಮ್ಮಯ್ಯರ ಕತೆ (ಯಕ್ಷಗಾನ), ಗುರುಬಸವನ ಅವಧೂತ ಗೀತೆ
ಕೆಳದಿ ಸಂಸ್ಥಾನದ ರಾಯರ ವಂಶಾವಳಿ, ಕೊಡಗು ಸಂಸ್ಥಾನದ ರಾಜೇಂದ್ರನಾಮ,
ಬಿಳಗಿ ಅರಸರ ವಂಶಾವಳಿ, ವೀರಶೈವ ರಾಜಮನೆತನಗಳ
ಚರಿತ್ರೆ.
ಅಭಿನಂದನಾ ಗ್ರಂಥ : ಪಿತಾಮಹ
1926 ರಲ್ಲಿ ಬಳ್ಳಾರಿಯಲ್ಲಿ ನಡೆದ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಉತ್ತಂಗಿ ಚನ್ನಪ್ಪ (1881-1962)
ತಿರುಳ್ಗನ್ನಡ ತಿರುಕ, ಅಭಿನವ ಸರ್ವಜ್ಞ ಎಂದೇ
ಖ್ಯಾತರಾದವರು
ಸಂಪಾದನೆ : ಸರ್ವಜ್ಞನ ವಚನಗಳು
ಸಂಶೋಧನೆ : ಸಿದ್ದರಾಮ ಚಾರಿತ್ರ್ಯ, ಆದಯ್ಯನ ವಚನಗಳು, ಸಿದ್ದರಾಮ ಸಾಹಿತ್ಯ ಸಂಗ್ರಹ,
ಮೋಳಿಗೆಯ ಮಾರಯ್ಯನ ವಚನಗಳು
ಲೇಖನಗಳು : ವಚನಾಂಕಿತದಲ್ಲಿರುವ ಐತಿಹಾಸಿಕಾಂಶಗಳು, ಜನಪದ ಸಾಹಿತ್ಯ
ಇತರ ಪ್ರಮುಖ ಕೃತಿಗಳು : ಅನುಭವ ಮಂಟಪ, ಅನುಭವ ಮಂಟಪದ ಐತಿಹಾಸಿಕತೆ, ದೃಷ್ಟಾಂತ ದರ್ಪಣ,
ಬನಾರಸಕೆ ಬೆತ್ಲೆಹೇಮಿನ ಸಂದೇಶ, ಬಸವೇಶ್ವರನೂ
ಅಸ್ಪೃಶ್ಯರ ಉದ್ಧಾರವೂ, ಹಿಂದೂ ಸಮಾಜದ ಹಿತಚಿಂತನೆ
ಜಾತೀಯತೆಯ ನಿರ್ಮೂಲನವೂ ರಾಷ್ಟೀಯ ಭಾವೈಕ್ಯವೂ, ಸಾಧು ಸುಂದರಸಿಂಗರ ದೃಷ್ಟಾಂತ, ದರ್ಪಣ, ಮೃತ್ಯುಂಜಯ (ಕ್ರಿಸ್ತನ
ಜೀವನ ಚರಿತ್ರೆ), ಲಿಂಗಾಯತ ಧರ್ಮ ಮತ್ತು ಕ್ರೈಸ್ತ ಧರ್ಮ ಮೊದಲಾದವು
ಗೌರವ ಗ್ರಂಥ : ಉತ್ತಂಗಿ ಚನ್ನಪ್ಪನವರು (ಕ.ಸಾ.ಪ)
1949 ರಲ್ಲಿ ಕಲುಬುರ್ಗಿಯಲ್ಲಿ
ನಡೆದ 32 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮಹದೇವ ಪ್ರಭಾಕರ ಪೂಜಾರ (1884-1962)
ಮುಖ್ಯ ಗ್ರಂಥಗಳು : ರಾಮಾಶ್ವಮೇಧ ಸಾರಸಂಗ್ರಹ, ಜೈನಧರ್ಮ ಪರಿಭಾಷೆ, ಜೈನಪುರಾಣಸಾರ ನುಡಿಗನ್ನಡಿ,
ಪಂಚತಂತ್ರಸಾರ, ಛಂದೋಮಂಜರಿ, ವಾಚನ ಪಾಠಮಾಲೆ – ಕವಿತಾ ಪಾಠಮಾಲೆ, ಶಬ್ದಾನುಶಾಸನ
(ವೃತ್ತಿ ಸಹಿತ), ಭಾರತೀಯ ವಿದುಷಿಯರು, ಸತ್ಕಥಾಲಾಪ, ಸತಿಯೂ ಸುನೀತಿಯೂ, ಸದ್ಗುಣಾದರ್ಶ
ಟಿ ಎಸ್ ವೆಂಕಣಯ್ಯ (1885-1939)
ಕನ್ನಡದ ಮೊದಲ ಪ್ರಾಧ್ಯಾಪಕರು
ಟಿ ಎಸ್ ವೆಂಕಣ್ಣಯ್ಯ ಮತ್ತು ಎ ಆರ್ ಕೃಷ್ಣಶಾಸ್ತ್ರಿ
(ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳು)
ಜೀವನ ಚರಿತ್ರೆ : ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ (ಎ ಆರ್ ಕೃಷ್ಣಶಾಸ್ತ್ರಿಗಳ ಜೊತೆಗೆ)
ಲೇಖನ ಸಾಹಿತ್ಯ : ಕನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು
ಅನುವಾದ :
ಶ್ರೀ ರಾಮಕೃಷ್ಣ ಪರಮಹಂಸರ ಲೀಲಾ ಪ್ರಸಂಗ (ಬಂಗಾಲಿಯಿಂದ), ಪ್ರಾಚೀನ ಸಾಹಿತ್ಯ (ಟಾಗೂರರ ಕೃತಿಗಳು)
ಸಂಪಾದನೆ :
ಬಸವದೇವರಾಜ ರಗಳೆ, ಕರ್ನಾಟಕ
ಕಾದಂಬರಿ ಸಂಗ್ರಹ, ಹರಿಶ್ಚಂದ್ರ ಕಾವ್ಯ ಸಂಗ್ರಹ, ಡಿ ಎಲ್ ನರಸಿಂಹಾಚಾರ್ಯರ ಜೊತೆಗೆ ಕುಮಾರವ್ಯಾಸನ ಭೀಷ್ಮಪರ್ವ ಸಂಗ್ರಹ ಮತ್ತು
ಸಿದ್ಧರಾಮ ಚಾರಿತ್ರ್ಯ ಕೃತಿಗಳು.
ಇತರ ಪ್ರಮುಖ ಕೃತಿಗಳು : ಕನ್ನಡ ಭಾಷೆಯ ಚರಿತ್ರೆ, ಕನ್ನಡ ಸಾಹಿತ್ಯ ಚರಿತ್ರೆ, ಸಿದ್ದರಾಮ ಪುರಾಣ, ಕನ್ನಡ
ಕೈಪಿಡಿ (ಹಳಗನ್ನಡ ವ್ಯಾಕರಣ ಮತ್ತು ಭಾಷಾಚರಿತ್ರೆ)
ಅಭಿನಂದನಾ ಗ್ರಂಥ : ಸವಿನೆನಪು (ಕುವೆಂಪು)
ವೆಂಕಟರಮಣ ಶಾಸ್ತ್ರಿ (1888-1945)
ಕಾದಂಬರಿ ಸಂಗ್ರಹ ಎಂಬ ಮಾಸ ಪತ್ರಿಕೆಯನ್ನು ಹೊರಡಿಸಿ
ಕಾದಂಬರಿ ಶಾಸ್ತ್ರಿಗಳೆಂದು ಹೆಸರಾದರು.
ಕರ್ನಾಟಕ ರತ್ನದರ್ಪಣ ಇವರ ಪ್ರಮುಖ ಕೃತಿ
ಎ ಆರ್ ಕೃಷ್ಣಶಾಸ್ತ್ರಿ (1889-1968)
ಪತ್ರಿಕೆ : ಪ್ರಬುದ್ಧ ಕನಾಟಕ
ಕನ್ನಡ ಸಾಹಿತ್ಯದ ಗದ್ಯಶಿಲ್ಪಿ, ಹೊಸಪರಂಪರೆಯ ನಿರ್ಮಾಪಕ.
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನಿಘಂಟಿನ ಮೊದಲ
ಸಂಪಾದಕರು.
ಅನುವಾದ :
ಶ್ರೀಪತಿಯ ಕಥೆಗಳು, ಕಥಾಮೃತ, ನಾಗ ಮಹಾಶಯ (ಶರತ್ಚಂದ್ರರ
ಬಂಗಾಳಿ ಕೃತಿ), ಸ್ವಾಮಿ-ಶಿಷ್ಯ ಸಂವಾದ, ದಡ್ಡರ ಕತೆ, ಗದಾಯುದ್ಧ ನಾಟಕ ಮತ್ತು ಅದರ ನಾಯಕ.
ವಿಮರ್ಶೆ :
ಕನ್ನಡ-ಸಂಸ್ಕೃತ ನಾಟಕಗಳು, ಭಾಸಕವಿ, ಬಂಕೀಮಚಂದ್ರ (ಕೇಂದ್ರಸಾಹಿತ್ಯ ಅಕಾಡೆಮಿ),
ನಿರ್ಮಲ ಭಾರತಿ, ನಿಬಂಧಮಾಲಾ
ಪ್ರಬಂಧ ಲೇಖನ : ಕನ್ನಡ ಕೈಪಿಡಿ, ಭಾಷಣಗಳು ಮತ್ತು ಲೇಖನಗಳು
ಸಂಪಾದನೆ :
ಕವಿ ಜಿಹ್ವಾಬಂಧನ, ಕೆಳದಿನೃಪ
ವಿಜಯ, ನಯಸೇನನ ಧರ್ಮಾಮೃತ, ವಚನ ಬಾರತ,
ಹರಿಶ್ಚಂದ್ರ ಕಾವ್ಯ ಸಂಗ್ರಹ, ಕಥಾಸರಿತ್ಸಾಗರ
ಅಭಿನಂದನಾ ಗ್ರಂಥ : ಅಭಿವಂದನೆ
“ಕನ್ನಡನಾಡಿನಲ್ಲಿ ಕನ್ನಡವೇ ಗತಿ,
ದೇಶದಲ್ಲಿ ಅದು ಮೊದಲ ಸ್ಥಾನ ಪಡೆದು ರಾಣಿಯಂತೆ ಮೆರೆಯಬೇಕು” ಎಂದಿದ್ದಾರೆ.
1941 ರಲ್ಲಿ ಹೈದರಾಬಾದಿನಲ್ಲಿ
ನಡೆದ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಕಪಟರಾಳ ಕೃಷ್ಣರಾವ್ (1889-1996)
ಪ್ರಮುಖ ಕೃತಿಗಳು : ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಕರ್ನಾಟಕ ಲಾಕುಳ ಶೈವರ ಇತಿಹಾಸ, ತಂದೆ
ಮಗಳಿಗೆ ಬರೆದ ಪತ್ರಗಳು, ಸುರಪುರ ಸಂಸ್ಥಾನದ ಇತಿಹಾಸ
ಶಿ ಶಿ ಬಸವನಾಳ (1893-1951)
ಕರ್ನಾಟಕ ಲಿಂಗಾಯತ ಎಜುಕೇಷನಲ್ ಸೊಸೈಟಿಯನ್ನು
ಸ್ಥಾಪಿಸಿದರು
ಪತ್ರಿಕೆ : ಪ್ರಬೋಧ, ಜಯಕರ್ನಾಟಕ
ಸಂಪಾದನೆ : ಎರಡನೇ ನಾಗವರ್ಮನ ಕರ್ನಾಟಕ
ಕಾವ್ಯಾವಲೋಕನ, ಭಟ್ಟಾಕಳಂಕನ ಶಬ್ದಾನುಶಾಸನ, ನಿಜಗುಣ ಶಿವಯೋಗಿಯ ಕೈವಲ್ಯ ಕಲ್ಪವಲ್ಲರಿ, ವಿರೂಪಾಕ್ಷ
ಪಂಡಿತನ ಚನ್ನಬಸವ ಪುರಾಣ, ಚಾಮರಸನ ಪ್ರಭುಲಿಂಗಲೀಲೆ, ಷಡಕ್ಷರನ ಶಬರಶಂಕರ ವಿಳಾಸ, ವೀರಶೈವ ತತ್ವಪ್ರಕಾಶ,
ಬಸವಣ್ಣನವರ ಷಟ್ಸ್ಥಳದ ವಚನಗಳು, ಕುಂಡಲಗಿರಿ
ಆಚಾರ್ಯನ ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ, ಬಾಲಲೀಲಾ ಮಹಾಂತ
ಶಿವಯೋಗಿಗಳ ಕೈವಲ್ಯದರ್ಪಣ, ಮೈಲಾರದ ಬಸವಲಿಂಗಶರಣರ ಕೃತಿಗಳು,
ಹರಿಹರನ ಪಂಪಾಶತಕ, ರಕ್ಷಾಶತಕ ಮತ್ತು ಮೂರು
ರಗಳೆಗಳು, ರೇವಣ ಸಿದ್ಧೇಶ್ವರ ರಗಳೆ
ಪ್ರಮುಖ ಕೃತಿಗಳು : ಹಿಂದೂಸ್ತಾನದ ಇತಿಹಾಸ, ಇಂಗ್ಲೆಂಡಿನ
ಅರ್ವಾಚೀನ ಇತಿಹಾಸ, ಎ ಕೇಸ್ ಆಫ್ ಕರ್ನಾಟಕ ಯೂನಿವರ್ಸಿಟಿ.
1944 ರಲ್ಲಿ ಬಾಗಲಕೋಟೆಯ ರಬಕವಿಯಲ್ಲಿ ನಡೆದ 28 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು
ಕೆ ಜಿ ಕುಂದಣಗಾರ (1895-1965)
ಸಂಪಾದನೆ : ಗದ್ಯಮಾಲೆ, ಕುಮುದೇಂದು ರಾಮಾಯಣ, ಚಿನ್ಮಯ ಚಿಂತಾಮಣಿ, ಜ್ಞಾನಭಾಸ್ಕರ ಚರಿತೆ, ರಟ್ಟರ ಕಾವ್ಯ ಗುಚ್ಛ,
ತೋರಣ, ಪೂರ್ವ ಪುರಾಣ, ಲೀಲಾವತಿ ಪ್ರಬಂಧ, ಹರಿಹರದೇವ, ಆದಿ ಪುರಾಣ, ಗದ್ಯಮಂಜರಿ, ಕನ್ನಡ ಸಾಹಿತ್ಯ ಪ್ರವೇಶ
ಕಾದಂಬರಿ : ಸರಸ್ವತಿ
ಅನುವಾದ : ಭರತೇಶ ವೈಭವ, ರತ್ನಾವಳಿ, ನಾಗಾನಂದ, ಸೂರಿನಿಂದ, ಜಿನವಿಜಯ
ಜೀವನ ಚರಿತ್ರೆ : ಮಹಾದೇವಿಯಕ್ಕ
ಅಭಿನಂದನಾ ಗ್ರಂಥ : ಕುಂದಣ
ಇವರ ಸಮಗ್ರ ಲೇಖನಗಳನ್ನು ಎಂ ಜಿ ಬಿರಾದಾರರು ಸಂಪಾದಿಸಿದ್ದಾರೆ
1961 ರಲ್ಲಿ ಗದಗಿನಲ್ಲಿ ನಡೆದ 43 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಶಂಬಾ ಜೋಶಿ (1896-1991)
ಕರ್ನಾಟಕ ಇತಿಹಾಸ 3 ಭಾಗಗಳು- (ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ
ಮೂಲ, ಕನ್ನಡದ ನೆಲೆ).
ಭಾಷಾಶಾಸ್ತ್ರ : ಭಾಷೆ ಮತ್ತು ಸಂಸ್ಕೃತಿ,
ಕಂನಾಡ ನುಡಿಯ ಹುಟ್ಟು, ಎಡೆಗಳು ಹೇಳುವ ಕಂನಾಡ ಕಥೆ, ಕನ್ನಡ ನುಡಿಯ ಜೀವಾಳ.
ಜಾನಪದ : ಮಕ್ಕಳ ಒಡಪುಗಳು
ತತ್ವಜ್ಞಾನ : ಅರವಿಂದಘೋಷರ
ಚರಿತ್ರವು, ದಾರಿಯ ಬುತ್ತಿ, ಸೌಂದರ್ಯ ಬುತ್ತಿ, ಅಗ್ನಿವಿದ್ಯೆ, ಸಾತತ್ಯ ಮತ್ತು ಸತ್ಯ,
ಋಗ್ವೇದಸಾರ - ನಾಗಪ್ರತಿಮಾ ವಿಚಾರ, ಮಾನವಧರ್ಮದ ಆಕೃತಿ, ಬುಧನ ಜಾತಕ, ಬಿತ್ತಿದ್ದನ್ನು ಬೆಳೆದುಕೊ,
ವೈವಸ್ವತ ಮನುಪ್ರಣೀತ ಮಾನವಧರ್ಮದ ಆಕೃತಿ, ಟಿಳಕ ಕಥಾಮೃತಸಾರ, ಸಾಂಸ್ಕೃತಿಕ ಮೂಲದಲ್ಲಿನ ತಾತ್ವಿಕ
ಚಿಂತನೆಗಳು, ಜೀವನದ ಅರ್ಥಗ್ರಹಣ ಪದ್ಧತಿ, ಸೌಂದರ್ಯ ವಿಚಾರ, ಶ್ರೀಮತ್ ಭಗವದ್ಗೀತೆಯಲ್ಲಿ
ಹುದುಗಿರುವ ರಾಜಯೋಗದ ಸ್ವರೂಪ.
ಸಾಂಸ್ಕೃತಿಕ ಚಿಂತನೆ :
ರೂಢಿ ಹಾಗು ಭಾವಿಕಲ್ಪನೆಗಳು, ಯಕ್ಷಪ್ರಶ್ನೆ (ಬರಲಿರುವ
ಸಮಾಜ), ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ (ಕೇಂದ್ರ ಸಾಹಿತ್ಯ ಅಕಾಡೆಮಿ),
ಹಾಲುಮತ ದರ್ಶನ, ಸಮಾಜದರ್ಶನ,
ಕಂನಾಡವರ ಸಂಸ್ಕೃತಿಯ ಸ್ಥಿತಿಗತಿ
ಕನ್ನಡ ಸಾಹಿತ್ಯ : ಕರ್ಣನ ಮೂರು ಚಿತ್ರಗಳು, ಕರ್ಣ
ಒಂದು ಅಧ್ಯಯನ, ಕನ್ನಡ ಸಾಹಿತ್ಯ ಅಭಿವೃದ್ಧಿ.
ಅನುವಾದ : ಉಪನಿಷತ್ ರಹಸ್ಯ, ಶ್ರೀಮತ್ ಭಗವದ್ಗೀತಾ
ಅಭಿನಂದನಾ ಗ್ರಂಥ : ಅಧ್ಯಯನ
ಶಂಬಾ ಜೋಷಿಯವರ ಲೇಖನಗಳನ್ನು ಶಂಬಾ ಜೋಷಿಯವರ ಕೃತಿ
ಸಮೀಕ್ಷೆ ಎಂಬ ಗ್ರಂಥದಲ್ಲಿ ಜಿ. ವೆಂಕಟೇಶ ಅವರು ಸಂಗ್ರಹಿಸಿದ್ದಾರೆ.
1981 ರಲ್ಲಿ ಮಡಿಕೇರಿಯಲ್ಲಿ ನಡೆದ 54 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ತಿರುಮಲೆ ತಾತಾಚಾರ್ಯ ಶರ್ಮ (1897-1973)
ಪತ್ರಿಕಾ ಭೀಷ್ಮ ಎಂಬುದು ಇವರಿಗಿದ್ದ ಜನಪ್ರಿಯ ಹೆಸರು
ಪತ್ರಿಕೆಗಳು : ವಿಶ್ವ ಕರ್ನಾಟಕ, ಬಡಬೋರೆಗೌಡ, ಸಿಡಿಲಮರಿ
ಸಂಶೋಧನೆ : ಜಗನ್ಮೋಹನ ಬಂಗಲೆಯಿಂದ
ವಿದುರಾಶ್ವತ್ಥದವರೆಗೆ, ಚಾರಿತ್ರಿಕ ದಾಖಲೆಗಳು, ಇತಿಹಾಸದ ಸಂದರ್ಭಗಳು, ಮೈಸೂರು ಇತಿಹಾಸದ ಹಳೆಯ
ಘಟಕಗಳು
ಸಂಪಾದನೆ : ಚಿತ್ರಕೂಟ (ಸರ್ ಎಂ ವಿ)
ಶಾಸನ ವ್ಯಾಸಂಗ : ಶಿಲಾಶಾಸನಗಳಲ್ಲಿ ಕಂಡು
ಬರುವ ಕನ್ನಡ ಕವಿಗಳು
ನಾಟಕಗಳು : ಶ್ರೀರಂಗಪಟ್ಟಣ ಪತನ, ಟಿಪ್ಪುಸುಲ್ತಾನ್
ಪ್ರಬಂಧ ಬರಹ : ಕನ್ನಡ ಗದ್ಯದ ಕಥೆ, ಪ್ರಗತಿಶೀಲ ಸಾಹಿತ್ಯ
ಕತೆಗಳು : ಪ್ರೇಮಫಲ, ಹೂಬುಟ್ಟಿ
ಅನುವಾದ : ಪ್ರಪಂಚ ಪರ್ಯಟನೆ, ಪಾದಯಾತ್ರೆ, ಜಗತ್ಕಥಾವಲ್ಲರಿ
ವಿಮರ್ಶೆ : ಮಾಸ್ತಿಯವರ ಮನೋಧರ್ಮ
ಹಸ್ತಪ್ರತಿ ಸಂಪಾದನೆ : ರಾಮರಾಯನ ಬಖೈರು, ಹೈದರ್
ನಾಮೆ, ಕಂಠೀರವ ನರಸಿಂಹರಾಜ ವಿಜಯ, ಸಿರಿಭೂವಲಯ
ಇತರ ಪ್ರಮುಖ ಕೃತಿಗಳು :
ವಿಚಾರ ಕರ್ನಾಟಕ, ವಿಕ್ರಾಂತ ಭಾರತ, ಕರ್ಮಫಲ,
ಬುದ್ಧನಿಂದ ಬಾಪುವರೆಗೆ, ನಮ್ಮ ಜನ ನಡೆಸಿದ
ಜೀವನ, ಪ್ರಗತಿಶೀಲ ಸಾಹಿತ್ಯ, ಗದ್ಯದ
ಕತೆ, ಗಲಿವರನ ದೇಶಸಂಚಾರ, ಪೀಟರ್
ಜಂಗಮ
ಅಭಿನಂದನಾ ಗ್ರಂಥ : ಭಾರತಿ
1947 ರಲ್ಲಿ ಕಾಸರಗೋಡಿನಲ್ಲಿ ನಡೆದ ಕನ್ನಡ ಸಾಹಿತ್ಯ
ಸಮ್ಮೇಳನಾಧ್ಯಕ್ಷರಾಗಿದ್ದರು.
ಪಂಡಿತ ಕೆ ಭುಜಬಲಿಶಾಸ್ತ್ರಿ (1897-1980)
ಪ್ರಮುಖ ಕೃತಿಗಳು : ಆದರ್ಶ ಜೈನ ಮಹಿಳೆಯರು, ಕನ್ನಡ
ಸ್ತೋತ್ರ ಸಂಗ್ರಹ
ಆದರ್ಶ ಜೈನ ವೀರರು (ಸಾಮ್ರಾಟ ಖಾರವೇಲನಿಂದ ಎರಡನೇ
ಭೈರವರಾಯನವರೆಗೆ)
ಪಂಪಯುಗ ಜೈನ ಕವಿ (ಹಿಂದಿಯಲ್ಲಿ ರಚನೆ. ಇದನ್ನು ಎಸ್ ಪಿ
ಪಾಟೀಲ್ ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕಾಣಿಕೆ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ