ಜಾನಪದ ಸಂಶೋಧನಾ ಸಾಹಿತಿಗಳು

ಜಾನಪದ ಸಂಶೋಧನಾ ಸಾಹಿತಿಗಳು

 

ಅರ್ಚಕ ರಂಗಸ್ವಾಮಿ (1895-1991)

ಜಾನಪದ : ಹುಟ್ಟಿದ ಹಳ್ಳ್ಳಿ - ಹಳ್ಳಿಯ ಹಾಡು

 

ದೇ ಜವರೇಗೌಡ (1915-2016)

ಕರ್ನಾಟಕದಲ್ಲೇ ಮೊದಲ ಬಾರಿಗೆ ಜಾನಪದ ವಸ್ತುಸಂಗ್ರಹಾಲಯ ಸ್ಥಾಪನೆ ಮತ್ತು ಜಾನಪದ ಅಧ್ಯಯನಕ್ಕೆ ತಳಹದಿ

ಜಾನಪದ : ಜಾನಪದ ಅಧ್ಯಯನ, ಜಾನಪದ ಸೌಂದರ್ಯ, ಜಾನಪದ ವಾಹಿನಿ, ಜನಪದ ಗೀತಾಂಜಲಿ

ಕಾದಂಬರಿ : ಕಡುಗಲಿ ಕುಮಾರರಾಮ, ಬೆಂಗಳೂರು ಕೆಂಪೇಗೌಡ

ಅನುವಾದ : ಹಮ್ಮು-ಬಿಮ್ಮು (ಜೇನ್ ಆಸ್ಟಿನ್ ಅವರ ಪ್ರೈಡ್ ಅಂಡ್ ಪ್ರಿಜ್ಯುಡೀಸ್), ನೆನಪು ಕಹಿಯಲ್ಲ (ಕೃಷ್ಣಾ ಹಥೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್), ಆ್ಯನಾ ಕರೆನಿನಾ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ), ಯುದ್ಧ ಮತ್ತು ಶಾಂತಿ (ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್), ಪುನರುತ್ಥಾನ (ಟಾಲ್ ಸ್ಟಾಯ್ ಅವರ ರಿಸರೆಕ್ಷನ್), ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ (ಗದ್ಯ), ಶ್ರೀರಾಮಾಯಣ ದರ್ಶನಂ, ಅಜಿತ ತೀರ್ಥಂಕರ ಪುರಾಣ ತಿಲಕಂ, ವಿಷವೃಕ್ಷ (ನಾಟಕ), ಟಾಲ್ಸ್ಟಾಯ್ ರ ಎರಡು ನಾಟಕಗಳು

ಭಾಷಣಗಳ ಸಂಗ್ರಹ : ಕುಲಪತಿಯ ಭಾಷಣಗಳು, ದೇಜಗೌ ಭಾಷಣಗಳು

ಪತ್ರ ಸಾಹಿತ್ಯ : ಕುಲಪತಿಯ ಪತ್ರಗಳು

ಪ್ರಬಂಧ ಹರಟೆ : ಕೆನೆ, ತೆನೆ, ಬೆರಕೆ ಸೊಪ್ಪು, ನಿರಂತರ, ತುಡಿತ

ನಿಘಂಟು : ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ - ಕರ್ನಾಟಕ, ಇಂಗ್ಲಿಷ್ - ಕನ್ನಡ ನಿಘಂಟು

ಶಿಕ್ಷಣ ಸಾಹಿತ್ಯ : ವಿದ್ಯಾಪೀಠಗಳು, ಕೆಲವು ಶೈಕ್ಷಣಿಕ ವಿಚಾರಗಳು

ಪ್ರವಾಸ ಕಥನ : ವಿಸ್ಮಯಗಳ ನಾಡಿನಲ್ಲಿ, ಪ್ರವಾಸಿಯ ದಿನಚರಿ, ವಿದೇಶದಲ್ಲಿ ಮೂರು ವಾರ,  ಯೇಸು ವಿಭೀಷಣರ ನಾಡಿನಲ್ಲಿ, ವಿದೇಶದಲ್ಲಿ ನಾಲ್ಕು ವಾರ, ಆಫ್ರಿಕಾ ಯಾತ್ರೆ, ನಿಚ್ಚ ಹಸಿರಿನ ನಾಡಿನಲ್ಲಿ

ಗ್ರಂಥ ಸಂಪಾದನೆ : ಹರಿಹರನ ಗಿರಿಜಾಕಲ್ಯಾಣ ಮಹಾಪ್ರಬಂಧಂ, ನಯಸೇನನ ಧರ್ಮಾಮೃತ ಸಂಗ್ರಹ, ಲಕ್ಷ್ಮೀಶನ ಜೈಮಿನೀ ಭಾರತ, ಕನಕದಾಸರ ನಳಚರಿತ್ರೆ, ಆಂಡಯ್ಯನ ಕಬ್ಬಿಗರ ಕಾವ, ಚಿಕ್ಕುಪಾಧ್ಯಾಯನ ರುಕ್ಮಾಂಗದ ಚರಿತ್ರೆ, ರಾಮನಾಥ ಚರಿತೆ, ನೇಮಿಚಂದ್ರನ ಲೀಲಾವತೀ ಪ್ರಬಂಧಂ, ಪುಣ್ಯಾಸ್ರವ, ಶ್ರೀರಾಮಾಯಣ ದರ್ಶನಂ, ಅಜಿತ ತೀರ್ಥಂಕರ ಪುರಾಣ ತಿಲಕಂ

ಪ್ರಬಂಧ/ವಿಮರ್ಶಾ ಸಾಹಿತ್ಯ : ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ, ಷಡಕ್ಷರದೇವ, ನಂಜನಗೂಡ ಕವಿ, ಸರ್ವಜ್ಞ, ಗದುಗಿನ ಭಾರತ, ಸಾಹಿತಿಗಳ ಸಂಗದಲ್ಲಿ, ಸಾಹಿತ್ಯ ಚರಿತ್ರೆ, ಕನ್ನಡ ಛಂದಸ್ಸಿನ ಇತಿಹಾಸ, ಸಾಹಿತ್ಯಾರಾಧನೆ, ಸಮಗ್ರ ಕನ್ನಡ ಗದ್ಯಶೈಲಿ, ಸಾಹಿತಿಯ ಸಾಮಾಜಿಕ ಬದ್ಧತೆ, ಸಿದ್ಧಗಂಗೆಯ ಶಿವನಿಧಿ, ಸ್ಥಳನಾಮ ವ್ಯಾಸಂಗ, ಮುನ್ನುಡಿಗಳು, ನೂರೆಂಟು ಪುಸ್ತಕಗಳು, ಶರಣಪದ, ಇಣುಕುನೋಟ, ವಚನಗಳಲ್ಲಿ ಸಮಾಜವಾದ, ವಚನಗಳಲ್ಲಿ ವೈಚಾರಿಕತೆ, ವಿಶ್ವ ಸಂಸ್ಕೃತಿಗೆ ವೀರಶೈವ ಸಂಸ್ಕೃತಿಯ ಕಾಣಿಕೆ, ಬಸವೇಶ್ವರ - ಕಾರ್ಲ್ ಮಾರ್ಕ್ಸ್, ಬಸವೇಶ್ವರ ಅಂಬೇಡ್ಕರ್, ಕುವೆಂಪು ವಿಶ್ವ ಮಾನವ ಸಂದೇಶ, ಕುವೆಂಪು ಸಾಹಿತ್ಯ - ಕೆಲವು ಅಧ್ಯಯನಗಳು, ಕುವೆಂಪು ದರ್ಶನ ಮತ್ತು ಸಂದೇಶ, ಕುವೆಂಪು ಶೈಲಿ, ಕುವೆಂಪು ಶಿಕ್ಷಣ ತತ್ವ ವಿಚಾರಗಳು, ಕುವೆಂಪು ಅವರ ದಾಂಪತ್ಯ ದರ್ಶನದ ನಾಲ್ಕು ಕವನಗಳು, ಕುವೆಂಪು ಸಾಹಿತ್ಯದಲ್ಲಿ ರೈತ, ಕುವೆಂಪು ಸಾಹಿತ್ಯದಲ್ಲಿ ಮಕ್ಕಳು, ಕುವೆಂಪು ಕವನಗಳು, ಕುವೆಂಪು ದೃಷ್ಟಿಯಲ್ಲಿ ಬಸವೇಶ್ವರರು ಇತ್ಯಾದಿ.

ವಿಚಾರ ಸಾಹಿತ್ಯ : ಕನ್ನಡಿಗರೇ ಎಚ್ಚರಗೊಳ್ಳಿ, ಕನ್ನಡಕ್ಕಾಗಿ ಕೈ ಎತ್ತು, ಕನ್ನಡಕ್ಕೆ ನಮನ

ಆತ್ಮ ಚರಿತ್ರೆ : ಹೋರಾಟದ ಬದುಕು, ಕುಲಪತಿಯ ದಿನಚರಿ, ನೆನಪಿನ ಬುತ್ತಿ, ನನ್ನ ಉಪವಾಸದ ಕತೆ

ಅಭಿನಂದನಾ ಗ್ರಂಥಗಳು : ಅಂತಃಕರಣ, ದೇಜಗೌ - ವ್ಯಕ್ತಿ ಮತ್ತು ಸಾಹಿತ್ಯ, ರಸಷಷ್ಟಿ, ಎಪ್ಪತ್ತರ ಹೊಸ್ತಿಲಲ್ಲಿ, ಅಮೃತವರ್ಷ, ಅಪೂರ್ವ

ಕನ್ನಡ ಕಣ್ಮಣಿ, ಕನ್ನಡ ಸೇನಾನಿ, ಕರ್ಮಯೋಗಿ, ಕುಲಪತಿಯ ಸಾಧನೆಗಳು, ಗುಡಿಸಿಲಿನಿಂದ ಗಂಗೋತ್ರಿಗೆ ಇವು ದೆ.ಜ.ಗೌ ಅವರನ್ನು ಕುರಿತು ರಚನೆಯಾದ ಕೆಲವು ಪ್ರಮುಖ ಕೃತಿಗಳು

1970 ರಲ್ಲಿ ಬೆಂಗಳೂರಿನಲ್ಲಿ ನಡೆದ 47 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 

ಬಿ ಎಸ್ ಗದ್ದಗಿಮಠ (1917-1960)

ಪಿಎಚ್ ಡಿ ಪ್ರಬಂಧ : ಕನ್ನಡ ಜನಪದ ಗೀತೆಗಳು

ಜಾನಪದ : ನಾಲ್ಕು ನಾಡಪದಗಳು, ಕಂಬಿಯ ಹಾಡುಗಳು, ಜನತಾ ಗೀತಗಳು, ಲೋಕ ಗೀತಗಳು, ಕುಮಾರರಾಮನ ದುಂದುಮೆಗಳು, ಮಲ್ಲಮಲ್ಲಾಣಿ, ಅರ್ಜುನ ಜೋಗಿಯ ಹಾಡುಗಬ್ಬ

 

ಎಂ ಎಸ್ ಸುಂಕಾಪುರ (1921-1992)

ಪಿಎಚ್ ಡಿ ಪ್ರಬಂಧ : ಕನ್ನಡ ಸಾಹಿತ್ಯದಲ್ಲಿ ಹಾಸ್ಯ

ಹಾಸ್ಯ ಬರಹ : ನಗೆ-ಹೊಗೆ, ಗಪ್-ಚಿಪ್, ತಲೆಹರಟೆಗಳು, ನಗೆಗಾರ ನಯಸೇನ, ಜೀವನದಲ್ಲಿ ಹಾಸ್ಯ

ದೃಶ್ಯಕಾವ್ಯಗಳು : ರೇಡಿಯೋ ನಾಟಕಗಳು, ನಮ್ಮ ನಾಟಕಗಳು

ಸಂಪಾದನೆ : ಜೀವನ ಜೋಕಾಲಿ, ವಿಶೇಷಾನುಭವ ಷಟ್ಸ್ಥಲ, ಲಿಂಗಚಿದಾಮೃತ ಬೋಧೆ, ಹರಳಯ್ಯನ ಚರಿತೆ, ಸೋಮನಾಥ ಚರಿತೆ, ರಾಜಶೇಖರ ವಿಳಾಸ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಗಿರಿಜಾ ಕಲ್ಯಾಣ, ಶಬರಶಂಕರವಿಳಾಸ, ಶ್ರೀಕೃಷ್ಣ ಪಾರಿಜಾತ, ಪ್ರಭುಲಿಂಗ ಲೀಲೆ, ಗುರುಬಸವ ಸಪ್ತ ಕಾವ್ಯಗಳು, ರೇವಣಸಿದ್ದೇಶ್ವರ ಕಾವ್ಯ, ಹಮ್ಮೀರ ಕಾವ್ಯ, ಅಲ್ಲಮ ಪ್ರಭು ವಚನಗಳು, ಬಾಲಸಂಗಯ್ಯನ ವಚನಗಳು, ಪ್ರಸಾದಿ ಸ್ಥಲದ ವಚನಗಳು, ಸಕಲ ಪುರಾತನರ ಬೆಡಗಿನ ವಚನಗಳು, ಪ್ರಸನ್ನ ಶಂಕರಲಿಂಗ ರಗಳೆ, ಹರಿಹರನ ನೂತನ ಪುರಾತನರ ರಗಳೆಗಳು, ಗುಮ್ಮಟ ಶತಕ, ರಕ್ಷಾಶತಕ, ಗುರು ಶಂಕರೇಶ್ವರ ಶತಕ, ಚೆನ್ನ ವೀರೇಶ್ವರ ಶತಕ, ಸೋಮೇಶ್ವರ ಶತಕ, ನಿಜಲಿಂಗ ಶತಕ

ಗೌರವ ಗ್ರಂಥ ಸಂಪಾದನೆ : ವೈರಾಗ್ಯದಲರು, ಬಿಚ್ಚೋಲೆ, ಧರ್ಮದೀಪ್ತಿ, ಸ್ಮರಣಕ

ಸಂಶೋಧನೆ : ಕನ್ನಡ ಸಾಹಿತ್ಯದಲ್ಲಿ ಹಾಸ್ಯ, ಛಂದಸ್ಸಿನ ಗ್ರಂಥ

ಜಾನಪದ : ಚೌಪದನಗಳು, ಸರಸ ವಿರಸ, ಗರತಿಯ ಗರಿಮೆ, ಹೋಳಿ ಹಾಡು, ದುಂದುವೆ ಪದ, ಡೊಳ್ಳಿನ ಹಾಡು, ಗಂಗಿ ಗೌರಿ ಸಂವಾದ, ಕೋಲು ಪದ, ಜೋಗತಿ ಹಾಡು, ಜಾನಪದ ಸಾಹಿತ್ಯ ದರ್ಶನ, ಜೀವನ ಜೋಕಾಲಿ, ಶ್ರೀ ಕಷ್ಣ ಪಾರಿಜಾತ (ಯಕ್ಷಗಾನ), ಶ್ರೀ ಕೃಷ್ಣ ಸಂಧಾನ (ಯಕ್ಷಗಾನ), ಬಭ್ರುವಾಹನ ವಿಜಯ (ಯಕ್ಷಗಾನ), ತಿರುನೀಲಕಂಠ ರಗಳೆ (ಸಣ್ಣಾಟ), ಅಲ್ಲಮಪ್ರಭು (ಸಣ್ಣಾಟ), ತಿರುನೀಲಕಂಠ (ಸಣ್ಣಾಟ), ಪ್ರಮೀಳೆ (ದೊಡ್ಡಾಟ)

ಅಭಿನಂದನಾ ಗ್ರಂಥ : ಜಾನಪದ ಸಂಪದ

 

ಗೊ ರು ಚನ್ನಬಸಪ್ಪ (1930-1995)

ಸಂಪಾದನೆ : ನೆನಹು, ವಿಭೂತಿ, ಸಂಪ್ರೋಕ್ಷಣ, ಕಲ್ಯಾಣ, ದಾಸೋಹ, ರಾಷ್ಟ್ರರತ್ನ, ಕರ್ನಾಟಕ ಪ್ರಗತಿಪಥ, ಮೂಗುತಿ, ಕವಿಕಂಡ ಬಸವಣ್ಣ, ಕನ್ನಡ ಕನ್ನಡಿಗ ಕರ್ನಾಟಕ, ಗ್ರಾಮಜ್ಯೋತಿ, ಶರಣ ಕಿರಣ, ಸೇವಾಸಂಪದ, ದೇಶಮುದ್ರೆ, ಜನದನಿ, ನೂರೊಂದು ಚಿಂತನಾ ಗ್ರಂಥಗಳು, ಚೆಲುವಾಂಬಿಕೆ, ಕುನಾಲ

ಜಾನಪದ : ಬಾಗೂರು ನಾಗಮ್ಮ, ಜೋಗದ ಜೋಕ್, ಮೈದುನ ರಾಮಣ್ಣ, ಗ್ರಾಮಗೀತೆಗಳು, ಹೊನ್ನ ಬಿತ್ತೇವು ಹೊಲಕೆಲ್ಲ, ಕರ್ನಾಟಕದ ಜನಪದ ಕಲೆಗಳು

ಇತರ ಪ್ರಮುಖ ಕೃತಿಗಳು : ಸಂದರ್ಭ, ಗೊಂಡೇದಹಳ್ಳಿಯಿಂದ ಬೆಂಗಳೂರಿಗೆ, ಸಾಕ್ಷಿಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವು, ಅಯ್ಯನ ಕೆರೆ, ಶರಣಾರ್ಥಿ, ಆಲೋಚನೆ, ಅನುಭಾವ, ಚಿತ್ರಜಂಗಮ, ಕಂತೇಭಿಕ್ಷೆ

 

ಜಿ ಶಂ ಪರಮಶಿವಯ್ಯ (1933 - 1995)

ಪಿಎಚ್.ಡಿ ಪ್ರಬಂಧ : ಜಾನಪದ

ಕವನ ಸಂಕಲನ : ಜೀವನ ಗೀತದಿಬ್ಬದಾಚೆ (ಖಂಡ ಕಾವ್ಯ)

ಕಥಾ ಸಂಕಲನ : ಕಾವಲುಗಾರ ಮತ್ತು ಇತರ ಕಥೆಗಳುಮಬ್ಬು ಜಾರಿದ ಕಣಿವೆಯಲ್ಲಿಸೋಲು ತಂದ ಸ್ವಯಂವರ

ಕಿರು ಕಾದಂಬರಿ : ಸಿಡಿಲ ಮರಿಗಳು

ನಾಟಕಗಳು : ಭೀಮಪ್ಪನ ಬೇಟೆ

ಪ್ರಬಂಧ : ಮೇದರಕಲ್ಲು ಮತ್ತು ಇತರ ಪ್ರಬಂಧಗಳು

ಜೀವನ ಚರಿತ್ರೆ : ಗುರುದೇವ ಶ್ರೀಚಂದ್ರಶೇಖರನಾಥರುಕಲಾಸಾಧಕ, ಉಕ್ಕಿನ ಮನುಷ್ಯ

ಜಾನಪದ ಸಂಪಾದನೆ : ಕನ್ನಡ ಒಗಟುಗಳು, ಕರುಣಿ ಕಣ್ಣತೆರೆಯೆ, ಭಾಗವಂತಿಕೆ ಮೇಳ, ಪಿರಿಯಾಪಟ್ಟಣದ ಕಾಳಗ, ಮುಡುಕುತೊರೆ ಮಲ್ಲಿಕಾರ್ಜುನ, ಜಾನಪದ ಖಂಡಕಾವ್ಯಗಳು, ಜನಪದ ವೀರ ಕಾವ್ಯಗಳು, ಕನ್ನಡ ವೃತ್ತಿಗಾಯಕ ಕಾವ್ಯಗಳು, ಹೆಳವರ ಕಾವ್ಯಗಳು, ಲೌಕಿಕ ಸಂಪ್ರದಾಯ ಚೌಡಿಕೆ ಕಾವ್ಯಗಳು, ದೊಂಬಿದಾಸರ ಲಾವಣಿಗಳು, ಕರ್ನಾಟಕ ಜಾನಪದ ಸಮೀಕ್ಷೆ, ಜಾನಪದ ಪ್ರಬಂಧ, ಜಾನಪದ ಗಂಗೋತ್ರಿ, ಜಾನಪದ ಕಲಾವಿದರು, ಜಾನಪದ ಲೇಖನಗಳು, ಆಯ್ದ ಜನಪದ ಕತೆಗಳು, ಜಾನಪದ ಕಾವ್ಯ ಕತೆಗಳು, ಕನ್ನಡ ಜಾನಪದ ಕತೆಗಳು, ಅಡವಿಗುಮಾರ ಮತ್ತು ಇತರ ಜಾನಪದ ಕತೆಗಳು, ಚೌಡಕಿ ಸಂಪ್ರದಾಯದ ಕತೆಗಳು

ಜಾನಪದ ಸಂಶೋಧನೆ : ಕಂಸಾಳೆಯವರು, ಮಂಟೇಸ್ವಾಮಿ ನೀಲಗಾರರು, ಮೈಲಾರನ ಗೊರವರು, ಕಿನ್ನರಿ ಜೋಗಿಗಳು, ದೊಂಬಿದಾಸರು, ಸೂತ್ರದ ಗೊಂಬೆಯಾಟ, ಮೂಡಲಪಾಯ, ಜನಪದ ಕಲಾವಿಹಾರ, ಜಾನಪದ ಒಂದು ಅಧ್ಯಯನ, ಜಾನಪದ ಸಿರಿ, ತಮಿಳುನಾಡಿನ ಜಾನಪದ, ಜಾನಪದ ಕೆಲವು ಮುಖಗಳು, ಜಾನಪದ ಕೆಲವು ವಿಚಾರಗಳು, ನಮ್ಮ ಜನಪದ ಸಾಹಿತ್ಯ, ಜಾನಪದ ಸಂಗಮ, ಜಾನಪದ ಸಾಹಿತ್ಯ ಸಮೀಕ್ಷೆ, ನಮ್ಮ ಜನಪದ ಕಲೆಗಳು, ದಕ್ಷಿಣ ಕರ್ನಾಟಕದ ಗಂಡಸರ ಜನಪದ ಗೀತಮೇಳಗಳು, ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಹೆಂಗಸರ ಜನಪದ ಗೀತೆಗಳು, ಕರ್ನಾಟಕದ ಜನಪದ ವಾದ್ಯಗಳು, ಜಾನಪದ ಅಡುಗೆಗಳು

ಜಾನಪದದಲ್ಲಿನ ಅಧ್ಯಯನ ಮತ್ತು ಸಂಶೋಧನೆಗಾಗಿ ಇವರಿಗೆ ಫಿನ್ಲೆಂಡಿನ ಫೋಕ್ ಲೋರ್ ಫೆಲೊ ಪ್ರಶಸ್ತಿ ದೊರೆತಿದೆ.

ಸಂಪಾದನೆ : ಸಾಹಸಯಾತ್ರಿ, ಹೊನ್ನಬಿತ್ತೇವು ಹೊಲಕೆಲ್ಲ, ದಾರಿದೀಪ, ರತ್ನಕೋಶ, ಕುವೆಂಪು ಗದ್ಯ ಸಂಚಯ, ಕುಲಪತಿಯ ಸಾಧನೆಗಳು, ಇಕ್ಷುಗಂಗಾ, ಇಕ್ಷು ಸಂಚಯ, ಸಾಧನೆ, ಲೋಕಪಾವನಿ, ಅವರ ನೆನೆದೇವು, ಕವಿಶೈಲ

ಪ್ರವಾಸ ಕಥನ : ಇಂಗ್ಲೆಂಡಿನಿಂದ ಫಿನ್ಲೆಂಡಿನವರೆಗೆ

ಗೌರವ ಗ್ರಂಥಗಳ ಸಂಪಾದನೆ : ಜ್ಞಾನೋಪಾಸಕ (ಡಿ ಎಲ್ ನರಸಿಂಹಾಚಾರ್ಯ), ಸಾಹಿತ್ಯ ಸಮೀಕ್ಷೆ (ತೀ ನಂ ಶ್ರೀ), ಸಹ್ಯಾದ್ರಿ (ಕುವೆಂಪು), ಅಂತಃಕರಣ (ದೇಜಗೌ), ನಾಗವಲ್ಲಿ (ಎಚ್ ಎಲ್ ನಾಗೇಗೌಡ), ಕಬ್ಬಿನ ಹಾಲು (ಕೆ.ವಿ ಶಂಕರಗೌಡ)

ಇತರ ಪ್ರಮುಖ ಕೃತಿಗಳು : ನಾಡಿನಕರೆ, ಮುದ್ದುಪದ್ದು, ಬೆಳಗೊಳದ ಗೊಮ್ಮಟೇಶ

 

ಮಲ್ಲಿಕಾರ್ಜುನ ಎಸ್ ಲಠ್ಠೆ (1936 - 2007)

ಜಾನಪದ : ಉತ್ತರ ಕರ್ನಾಟಕದ ಒಡಪುಗಳು, ಉತ್ತರ ಕರ್ನಾಟಕದ ಒಗಟುಗಳು, ಉತ್ತರ ಕರ್ನಾಟಕದ ಗಾದೆಗಳು, ಉತ್ತರ ಕರ್ನಾಟಕದ ಹಂತಿಯ ಹಾಡುಗಳು, ಉತ್ತರ ಕರ್ನಾಟಕದ ಜಾನಪದ ನಂಬಿಕೆಗಳು, ಉತ್ತರ ಕರ್ನಾಟಕದ ಜಾನಪದ ಕವಿ ಚರಿತ್ರೆ

ಜಾನಪದದಲ್ಲಿ ಶ್ರೀ ಶರಣ ಬಸವೇಶ್ವರ, ಬಂಡಪ್ಪ ಕವಿಯ ಭಜನೆಯ ಹಾಡುಗಳು, ಚೆನ್ನಮಲ್ಲಯ್ಯನ ಜಾನಪದ ಹಾಡುಗಳು, ಜಾನಪದ ದೀಪ್ತಿ, ಬಯಲಾಟದ ಸಾರಥಿ

 

ಕ ರಾ ಕೃಷ್ಣಸ್ವಾಮಿ (1936-2021)

ಜಾನಪದ ಕಥನಗೀತೆಗಳು / ಕಥನಕವನಗಳು : ಕಾಳಿಂಗರಾಯ, ಮಲ್ಲಿಗೆ ಅರಳ್ಯಾವೆ, ಆದಿಚುಂಚನಗಿರಿ, ಮರೆಯಾದ ಮಲಕವ್ವ, ಒಡ್ಡರ ಬೋಯಿ, ನಾಗರ ಕನ್ಯೆ

ಚಾರಿತ್ರಿಕ ಜಾನಪದ ಹಾಡುಗಳ ಸಂಕಲನ : ಪಾಳೆಯಗಾರರ ಹಾಡುಗಳು

ಪ್ರಮುಖ ಜನಪದ ಕೃತಿಗಳು : ಜಾನಪದ ಪ್ರೇಮ ಗೀತೆಗಳು, ಜೇನ ಹನಿಗಳು, ಆಯ್ದ ನಾಡ ಹಾಡುಗಳು, ಜನಪ್ರಿಯ ಜಾನಪದ ಗೀತೆಗಳು

 

ಎಚ್ ಜೆ ಲಕ್ಕಪ್ಪಗೌಡ (1939-            )

ಪಿಎಚ್.ಡಿ ಪ್ರಬಂಧ: ಶ್ರೀ ರಾಮಾಯಣ ದರ್ಶನಂ ವಿಮರ್ಶಾತ್ಮಕ ಅಧ್ಯಯನ

ಕವನ ಸಂಕಲನ : ವಸಂತಗೀತ, ಊರಮುಂದಿನ ಬಾವಿ, ಪದ್ದು - ಹದ್ದು, ಅಕ್ಷತೆ, ಕಿರುಗೆಜ್ಜೆ, ಸೂಜಿಸಂಪಿಗೆ, ವಚನ ತೋರಣ

ಕಥಾ ಸಂಕಲನ : ಹೊನ್ನಾರುಹುಲಿಯ ಹೆಜ್ಜೆ.

ನಾಟಕ: ಸಿದ್ಧರಾಮತಮಸ್ಸಿನಿಂದ ಜ್ಯೋತಿಗೆಕಾಯಕಯೋಗಿ

ಜೀವನ ಚರಿತ್ರೆ: ದಲಿತ ಸೂರ್ಯಸಮತೆಯ ಶಿಲ್ಪಿವಿಶ್ಚಕವಿ ಕುವೆಂಪುಡಾ. ಅಂಬೇಡ್ಕರ್.

ಸಾಹಿತ್ಯ ವಿಮರ್ಶೆ: ಅಂತರಂಗ, ಸಂಗಮ, ಕಥಾಲೋಕನ, ಗೋಪುರದ ದೀಪಗಳು, ವಿಲೋಕನ, ಬಾಳದೇಗುಲದ ನೋಟಗಳು, ಸಾಹಿತ್ಯ : ಬಹುಮುಖಿ ಚಿಂತನೆ, ಪುಸ್ತಕ ರೇಖೆಗಳು ಮತ್ತು ಕನಕ ಮುಖಗಳು, ಅಂತರಾಳ

ಮಕ್ಕಳ ಸಾಹಿತ್ಯ: ಇಲಿಯಡ್‌ಒಡಿಸ್ಸಿಕಾಯಕವೇ ಕೈಲಾಸದೀನಬಂಧು.

ಗಾದೆಗಳ ಸಂಗ್ರಹ : ಇಬ್ಬನಿ

ಕೋಶ: ಅನ್ಯಾರ್ಥಕೋಶ.

ಸಂಪಾದನೆ : ರಸಋಷಿ ಕುವೆಂಪು, ಮಂಗಳ ಗಂಗೆ, ಸಾಧನೆಯ ಹಾದಿಯಲ್ಲಿ, ನಾಗ ಸಂಪಿಗೆ, ರಾಷ್ಟ್ರಕವಿ, ಸಿಂಗಾರ, ಗ್ರಂಥ ಸರಸ್ವತಿ, ಮುತ್ತು ಬಂದಿದೆ ಕೇರಿಗೆ, ಕನಕ ಭಾರತಿ, ಜನಪ್ರಿಯ ಕನಕ ಸಂಪುಟ, ಜೀಶಂಪ ಸಂಸ್ಮರಣೆ, ಸ್ವಯಂಸೇವಕ, ಕುರುಬರು ಮತ್ತು ಉಣ್ಣೆ ನೇಕಾರರು, ಕನಕ ಕಿರಣ, ಸಂಸ್ಕೃತಿ, ಸಹ್ಯಾದ್ರಿ ಸಿರಿ, ಹತ್ತರ ಹಸಿರು ಮತ್ತು ಅಭಿಜ್ಞ

ಇಂಗ್ಲಿಷ್‌ ಕೃತಿಗಳು: ಲಿಂಗರಿಂಗ್‌ ಫ್ರಾಗ್ರೆನ್ಸ್‌ಶ್ರೀಗಂಧಎ ಬೊಕೆ ಆಫ್ ಫ್ಲವರ್ಸ್ಪ್ರೈಸ್‌ಲೆಸ್‌ ಗೋಲ್ಡ್‌.

ಜಾನಪದ: ಕನ್ನಡ ಜಾನಪದ ಕಥಾವಳಿ, ಮಲೆನಾಡ ಜಾನಪದ, ವಿಶಿಷ್ಟ ಜಾನಪದ, ಮಲ್ಲಿಗೆ ಮೊಗ್ಗು ಸುರಿದಾವೆ, ಡೋಳು ಮೇಳ, ಹೊಂಬಾಳೆ, ಒಗಟುಗಳು, ದ್ರಾವಿಡ ಜಾನಪದ

 

ಸೋಮಶೇಖರ ಇಮ್ರಾಪೂರ (1940- )

ಕವನ ಸಂಕಲನ : ಬಿಸಿಲ ಹೂ, ಬೆಳದಿಂಗಳು, ಬೆಂಕಿ, ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ, ಬಿರುಗಾಳಿ, ಹುತ್ತಗಳು, ಬೇವು - ಬೆಲ್ಲ, ಚಿತ್ತ - ಚಿತ್ತಾರ

ವಿಮರ್ಶೆ : ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರಕುವೆಂಪು - ಬೇಂದ್ರೆ (ತೌಲನಿಕ ವಿಮರ್ಶೆ)ಜನಪದ

ಜಾನಪದ : ಜಾನಪದ ವಿಜ್ಞಾನನಮ್ಮ ಜಾನಪದ ಸಮೀಕ್ಷೆಜಾನಪದ ಕಿತ್ತೂರಿನ ಕಿಡಿಗಳುಜಾನಪದದಲ್ಲಿ ನರಗುಂದ ಬಾಬಾಸಾಹೇಬ, ಜಾನಪದ ವ್ಯಾಸಂಗಜನಪದ ಒಗಟುಗಳು (ಮಹಾಪ್ರಬಂಧ)ಜಾನಪದ ಆಲೋಕ, ಜನಪದ ಕಥನ ಕವನಗಳು, ಹಂತಿ ಗೀಗೀ ಮತ್ತು ಲಾವಣಿ ಸಂಪ್ರದಾಯಗಳು

ಸಂಪಾದನೆ : ಮೂವತ್ತಾರು ಮುಖ ಅರವತ್ಮೂರು ಕವನಗಳು, ಸಾವಿರದ ಒಗಟಗಳು, ಜನಪದ ಮಹಾಭಾರತ, ಹನುಮಂತನ ಲಿಂಗಧಾರಣ, ಚಿತ್ರಕೇತು, ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ, ಮಹಿಳಾ ಜಾನಪದ

 

ಪಿ ಕೆ ರಾಜಶೇಖರ (1946- )

ಪಿಎಚ್ ಡಿ ಪ್ರಬಂಧ : ದಕ್ಷಿಣ ಕರ್ನಾಟಕ ಜನಪದ ಪುರಾಣಗಳು

ಬೆಟ್ಟದ ಚಾಮುಂಡಿ (ಜನಪದ ಪ್ರಣಯ ಕಾವ್ಯ), ಮಲೆ ಮಾದೇಶ್ವರ ಕಾವ್ಯ (ಜಗತ್ತಿನ ಅತಿ ದೊಡ್ಡ ಜಾನಪದ ಮಹಾಕಾವ್ಯ)

ಜನಪದ ಕಥಾಸಂಕಲನ : ಪುರುಷನ ಪುಣ್ಯ ನಾರಿ ಭಾಗ್ಯ

ಜನಪದ ಹಾಸ್ಯ ಸಂಕಲನ : ಜಾನಪದ ಜೋಕುಗಳು

ಕವನ ಸಂಕಲನ : ನಾನಲ್ಲ ನಾನು

ಇತರೆ ಕೃತಿಗಳು : ಪದ ವಿವರಣ ಕೋಶ, ಪದ ಸಂಪದ, ಜನಪದ ವೀರ ಕಾವ್ಯ, ಪಿರಿಯಾ ಪಟ್ಟಣ ಕಾಳಗ, ಜನಪದ ರಾಮಾಯಣ, ಮಾಗಡಿ ಕೆಂಪೇಗೌಡ, ಜನಪದ ಬಸವ ಪುರಾಣ, ಕರಪಲ ಪುರಾಣ, ಜನಪದ ಮಹಾಭಾರತ

 

ಎ ವಿ ನಾವಡ (1946- )

ಮಕ್ಕಳ ಸಾಹಿತ್ಯ : ರಾಜಹಂಸ, ಮಧುಚಂದ್ರ, ಪೇಟೆಗೆ ಬಂದ ಪುಟ್ಟಿ, ಅಕ್ಕೆರಸು ಸಿರಿ

ಜಾನಪದ ಸಂಶೋಧನೆ : ಜಾನಪದ- ವೈದ್ಯರ ಹಾಡುಗಳು, ಜಾನಪದ ಸಮಾಲೋಚನೆ, ಜಾನಪದ ಕೈಪಿಡಿ ಇತರೊಂದಿಗೆ, ಕನ್ನಡ ದೈವಾರಾಧನೆ: ಪಾನಾರಾಟ, ಜಾನಪದ ಸ್ವರೂಪ ಮತ್ತು ವ್ಯಾಖ್ಯೆ, ಕರ್ನಾಟಕ ಸಂಶೋಧನ ಜಾನಪದ, ಕರಾವಳಿ ಜಾನಪದ, ತುಳು ಪಾಡ್ದನ - ಬಂಧ ಮತ್ತು ರಚನೆ, ತುಳು ಜಾನಪದ ಗೀತೆಗಳು, ತುಳುಪೊಲಿ, ತುಳು ಸಾಹಿತ್ಯ ಚರಿತ್ರೆ, ತುಳು ಜನಪದಗೀತೆ ಸಂಕಲನ, ತುಳುವ ದರ್ಶನ, ನೇತ್ರಾವತಿ, ತುರಾಯಿ, ಬೆಳ್ಳಿ ಮಿನುಗು, ಸಿರಿಪಾಡ್ದನ, ಕೊರಗ, ಒಂದು ಸೊಲ್ಲು ನೂರು ಸೊರ, ಕುಡುಬಿಯರು, ಕೊಂಕಣ ಕುಡುಬಿಯರು, ಸಿರಿ ಜಾತ್ರೆ, ಕಾಡ್ಯನಾಟ ಪಠ್ಯ ಮತ್ತು ಪ್ರದರ್ಶನ, ಕಾಡ್ಯನಾಟದ ಕಥೆಗಳು, ಮೌಖಿಕ ಕಾವ್ಯಸಂಯೋಜನೆ ಪ್ರಕ್ರಿಯೆ, ಅರಿನವ ಕುರುಹು, ಕುಂದ ದರ್ಶನ, ನಾಗರಾಧನೆಯ ಹಾಡುಗಳು, ಪಾಣಾರಾಟ

ದಾಸ ಸಾಹಿತ್ಯ : ಹರಿದಾಸರು ನಡೆದ ಹಾದಿಯಲ್ಲಿ, ಹರಿದಾಸರ ಕೀರ್ತನೆಗಳಲ್ಲಿ- ಸಾವಿರ ಕೀರ್ತನೆಗಳು, ಸಾವಿರಾರು ಕೀರ್ತನೆಗಳು, ಶ್ರೀ ವಾದಿರಾಜರ ಶ್ರೀಕೃಷ್ಣ ಬಾಲಲೀಲೆ, ದಾಸರು ಕಂಡ ಪಾಂಡುರಂಗ ವಿಠಲ, ಈಸಬೇಕು ಇದ್ದು ಜೈಸಬೇಕು, ದಾಸಮಾರ್ಗ, ವಾದಿರಾಜರ ಸಮಗ್ರ ಕನ್ನಡ ರಚನೆ, ದಾಸವಾಙ್ಮಯ, ಕನಕನ ಕಿಂಡಿ, ಕನಕ ಪದಕೋಶ, ವಾದಿರಾಜರ ಶ್ರೀ ಕೃಷ್ಣ ಬಾಲಲೀಲೆ, ಕನಕಕಾವ್ಯ ಸಂಪುಟ

ವ್ಯಕ್ತಿಚಿತ್ರ : ಕಡೆಂಗೋಡ್ಲು ಶಂಕರ ಭಟ್ಟ ಬದುಕು ಬರಹ, ಪೇಜಾವರ ಸದಾಶಿವರಾವ್ ಸಮಗ್ರ ಬರಹಗಳು, ವಾಙ್ಮಯ ತಪಸ್ವಿ, ರಾಮಕ್ಕ ಮುಗೇರ್ತಿ ಕಟ್ಟಿದ ಸಿರಿಪಾಡ್ದನ, ಕಡೆಂಗೋಡ್ಲು ವಾಚಿಕೆ

ನಿಘಂಟು : ಗೋವಿಂದ ಪೈ ಪದಪ್ರಯೋಗ ಕೋಶ, ಗೋವಿಂದ ಪೈ ನಿಘಂಟು, ತುಳು ನಿಘಂಟು

ಇತರ ಕೃತಿಗಳು : ಶಬ್ದ ಪುರುಷ, ಕನ್ನಡ ಸಿರಿ, ಹಸ್ರಪ್ರತಿ ವ್ಯಾಸಂಗ, ಸಿರಿಗನ್ನಡ, ಮುಂಬೆಳಗು, ನೂರರ ನೆನಪು, ವಿವಕ್ಷೆ, ಕನ್ನಡ ವಿಮರ್ಶೆಯ ಮೊದಲ ಹೆಜ್ಜೆಗಳು

 

ಬಿ ಎ ವಿವೇಕ ರೈ (1946- )

ಪಿ ಎಚ್ ಡಿ ಪ್ರಬಂಧ : ತುಳು ಜಾನಪದ ಸಾಹಿತ್ಯ

ಸಂಪಾದನೆ : ಕನ್ನಡ ಕಾದಂಬರಿಯ ಹೊಸ ಹೆಜ್ಜೆಗಳು, ಕರ್ನಾಟಕ ಜಾನಪದ ಕಲೆಗಳು

ಜಾನಪದ : ತುಳು ಗಾದೆಗಳು, ತುಳು ಒಗಟುಗಳು, ತೌಲವ ಸಂಸ್ಕೃತಿಅನ್ವಯಿಕ ಜಾನಪದಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು

ಇತರ ಪ್ರಮುಖ ಕೃತಿಗಳು : ಗಿಳಿಸೂವೆ, ಇರುಳ ಕಣ್ಣು, ಹಿಂದಣ ಹೆಜ್ಜೆ, ರಂಗದೊಳಗಣ ಬಹಿರಂಗ, ಬಾಗಿಲನು ತೆರೆದು, ಜರ್ಮನಿಯ ಒಳಗಿನಿಂದ, ತುಳು ಸಾಹಿತ್ಯ ಚರಿತ್ರೆ, ಸಮಗ್ರ ಕನ್ನಡ ಜೈನ ಸಂಪುಟ, ಸಿರಿ ಎಪಿಕ್

 

ಎಲ್ ಆರ್ ಹೆಗಡೆ (1946 - 2005)

ಪಿಎಚ್ ಡಿ ಪ್ರಬಂಧ : ಕುಮಾರವ್ಯಾಸನ ಪಾತ್ರಸೃಷ್ಟಿ

ಕವನ ಸಂಕಲನ : ಬಾಳ ದೀಪಾವಳಿ

ಜಾನಪದ ಕತೆಗಳು : ನಮ್ಮ ಜಾನಪದ ಕತೆಗಳು, ಮಲೆನಾಡಿನ ಕತೆಗಳು, ಉತ್ತರ ಕನ್ನಡ ಜಿಲ್ಲೆಯ ಜನಪದ ಕತೆಗಳು, ಜಾನಪದ ಕತೆಗಳು, ಕುವರಿ ಮರಾಟಿಗರ ಕತೆಗಳು, ಕರ್ನಾಟಕದ ಕರಾವಳಿಯ ಜನಪದ ಕತೆಗಳು, ಗಾಮೊಕ್ಕಲ ಕತೆಗಳು, ಮಲೆನಾಡಿನ ಸೆರಗಿನ ಕತೆಗಳು, ಕತೆ ಗಾದೆಗಳು, ಗೇಣುಗುಡ್ಡದ ಕುಳ್ಳ ಮತ್ತು ಇತರ ಕತೆಗಳು, ಕತೆ ಗಾದೆಗಳು, ಹಕ್ಕಿ ನರಸಣ್ಣ, ಸಿದ್ಧಿಯರ ಕತೆಗಳು, ಕರಾವಳಿಯ ಕತೆಗಳು, ಜನಪದ ಭಾರತದ ಕತೆಗಳು, ಒಗಟುಗಳು ಮತ್ತು ಕತೆಗಳು, ಅಪೂರ್ವ ಮೃದಂಗ, ಜಾನಪದ ಗಿರಿಜನರ ಕತೆಗಳು, ಹೊನ್ನಮ್ಮನ ಮನೆಯ ಕತೆಗಳು, ಮಾತಿನರಗಿಣಿಯೇ ನುಡಿದಾವೊ, ಸಣ್ಣಕೂಸು ಹೇಳಿದ ಕತೆಗಳು, ನಾಮಧಾರಿಗಳ ಆಡುಭಾಷೆಗಳ ಕತೆಗಳು, ನಾಮಧಾರಿ ಕತೆಗಳು, ಅವರಿವರು ಹೇಳಿದ ಕತೆಗಳು, ಹಾಲಕ್ಕಿ ಕತೆಗಳು

ಜಾನಪದ ಗೀತೆಗಳು : ಹಾಲಿನ ತೆನೆ (ಜಾನಪದ ತ್ರಿಪದಿ), ಹಾಡುಂಟೇ ನನ್ನ ಮಡಿಲಲ್ಲಿ (ಜಾನಪದ ತ್ರಿಪದಿ), ಸುವ್ವೀ ಸುವ್ವೀ ಸುವ್ವಾಲೆ (ಜಾನಪದ ತ್ರಿಪದಿ), ಕರ್ನಾಟಕದ ಕರಾವಳಿಯ ಜನಪದ ಗೀತೆಗಳು, ಗುಮಟೆಯ ಪದಗಳು, ಮುಕ್ರಿ ಮತ್ತು ಹೊಲೆಯರ ಪದಗಳು, ಗೊಂಡರ ಪದಗಳು, ಹೆಂಗಸರ ಗೀತೆಗಳು, ಮಂಗಲ ಗೀತೆಗಳು, ಪೂಜಾ ಗೀತೆಗಳು, ಹಾಲಕ್ಕಿ ಹೆಂಗಸರ ಮದುವೆ ಹಾಡುಗಳು, ಮಧುರ ಗೀತಗಳು, ಲೋಕಗೀತ ಮಂಜರಿ, ಕೋಲಾಟದ ಪದಗಳು

ಜಾನಪದ ಕಥನ ಕವನಗಳು : ಬೆಳಿಯಮ್ಮನ ಹಾಡುಗಳು, ಪರಮೇಶ್ವರಿಯ ಪದಗಳು, ಕೆಲವು ಲಾವಣಿಗಳು, ಗುಮ್ಮನ ಪದಗಳು, ತಿಮ್ಮಕ್ಕನ ಪದಗಳು, ಮಾಚಿಯ ಕಥನ ಗೀತೆಗಳು

ಜಾನಪದ ವಿಚಾರ ಸಾಹಿತ್ಯ : ಮೂಢನಂಬಿಕೆಗಳು, ಉತ್ತರ ಕನ್ನಡದ ಗೊಂಡರು, ಉತ್ತರ ಕನ್ನಡದ ಸಿದ್ಧಿಯರು, ಜನಪದ ಸಾಹಿತ್ಯದಲ್ಲಿ ಮದುವೆ, ಜನಪದ ಸಾಹಿತ್ಯ, ಜನಪದ ಜೀವನ ಮತ್ತು ಕಲೆ, ಜನಪದ ವೈದ್ಯ, ಊರೌಷಧಿಗಳ ಚಿಕಿತ್ಸೆ, ಗಾದೆಗಳ ಸಂಗ್ರಹ, ನಾಡಮದ್ದು, ಜಾನಪದ ಕ್ರೀಡೆ

ಇತರ ಪ್ರಮುಖ ಕೃತಿಗಳು : ಪುರಾಣ ಜಿಜ್ಞಾಸೆ, ಬತ್ತಲೇಶ್ವರ ರಾಮಾಯಣ (ಲಂಕಾದಹನ), ಜೈನಭಾರತ, ಕಾವ್ಯ ವ್ಯಾಸಂಗ, ಕುಮಾರವ್ಯಾಸ, ಹಳಗನ್ನಡ ಕವಿಗಳು, ಬಿಂಬ ಪ್ರತಿಬಿಂಬ, ಪಡುವಣದ ಬೆಡಗು

 

ಕಾಳೇಗೌಡ ನಾಗವಾರ (1947- )

ಪಿಎಚ್ ಡಿ ಪ್ರಬಂಧ : ಒಂದು ಬುಡಕಟ್ಟಿನ ಅಧ್ಯಯನ

ಕವನ ಸಂಕಲನ : ಕರಾವಳಿಯಲ್ಲಿ ಗಂಗಾಲಗ್ನಕನ್ನೆಯ ಸ್ನೇಹ, ಗಾಳಿ ಬೆಳಕಿನ ಪಯಣ

ಕಥಾ ಸಂಕಲನ : ಅಲೆಗಳುಬೆಟ್ಟ ಸಾಲು ಮಳೆ

ವಿಚಾರ / ವಿಮರ್ಶೆ : ತ್ರಿಪದಿ ರಗಳೆ ಮತ್ತು ಜನಪದ ಸಾಹಿತ್ಯಪ್ರೀತಿ ಮತ್ತು ನಿರ್ಭೀತಿ, ಸರ್ವಜ್ಞ ಮತ್ತು ಹರಿಹರ, ಈ ಮಂಜಿನೊಳಗೆ, ಸ್ವಾತಂತ್ರ್ಯದ ಅಂತರ್ಜಲ, ಉತ್ತರ ದಕ್ಷಿಣ, ಹಲವು ತೋಟದ ಹೂಗಳು, ಗರಿಗೆದರಿದ ನವಿಲು, ಮನದಾಳದ ಕನಸುಗಳು, ಸೃಜನಶೀಲ ವೈಚಾರಿಕತೆ, ಭಿನ್ನಮತದ ಸೊಗಸು,

ಪ್ರಬಂಧ : ಭಾಷೆ ಮತ್ತು ಇತಿಹಾಸ

ಸಂಪಾದನೆ : ಶಾಂತವೇರಿ ಗೋಪಾಲಗೌಡರ ನೆನಪಿನ ಸಂಪುಟ, ಜೀವನ ಪ್ರೀತಿ, ಮಡುಗಟ್ಟಿದ ಅಕ್ಕರೆ, ಜೀವಪ್ರೇಮದ ಅಚ್ಚರಿ, ಸಂತನ ಧ್ಯಾನ, ಇಂಥ ಪ್ರೀತಿಯ ನಾವೆ

ಜಾನಪದ : ಬಯಲು ಸೀಮೆಯ ಲಾವಣಿಗಳುಬೇಕಾದ ಸಂಗತಿಬೀದಿ ಮಕ್ಕಳು ಬೆಳದೊ, ಜಾನಪದದ ತುಂಬುಹೊಳೆ, ಸಾಲು ಸಂಪಿಗೆ ನೆರಳು, ನಡ ನೀರ ತಂಪು, ಗಿರಿಜನ ಕಾವ್ಯ, ಗಿರಿಜನ ಸಂಸ್ಕೃತಿ, ಜೀ ಶಂ ಪ ಅವರ ಜಾನಪದ ಕೃತಿಗಳು

 

ಹಿ ಶಿ ರಾಮಚಂದ್ರೇಗೌಡ (1947- )

ಪಿಎಚ್ ಡಿ : ಜನಪದ ಕತೆಗಳು ಆಶಯ ಮತ್ತು ವರ್ಗ

ಜಾನಪದ : ಕಥಕಳಿ, ಕೇರಳ ಜಾನಪದ, ಹಾಸನ ಜಿಲ್ಲೆಯ ಜಾನಪದ ಕತೆಗಳು, ತೊಗಲು ಗೊಂಬೆಯಾಟಗಳು, ಜಾನಪದ - ವ್ಯಕ್ತಿ ಮತ್ತು ವಿಚಾರ, ಜಾನಪದ ಅಂತರಂಗ, ಜಾನಪದ ತಡಕಾಟ, ಜಾನಪದ ಸಾಂಸ್ಕೃತಿಕ ಆಯಾಮಗಳು, ಕನ್ನಡ ಜನಪದ ಕಥಾವರ್ಗಗಳು, ಜಾನಪದ ಪ್ರಕೃತಿ, ಕನ್ನಡ ಜನಪದ ಕತೆಗಳ ನೆಲೆ, ಶತಮಾನದ ಜಾನಪದ, ಪುರದ ಪುಣ್ಯ, ಜನಪದ ಜೀವನ ನ್ಯಾಯ, ಜಾನಪದರು ನಾವು, ಬಡಗರು

ಜಾನಪದ ಸಂಪಾದನೆ : ಸುವರ್ಣ ಜಾನಪದ ಸಂಪುಟ, ಬುಡಕಟ್ಟು ಅಧ್ಯಯನ, ಜಾನಪದ ತಲೆಮಾರು, ಜಾನಪದ ಗ್ರಹಿಕೆ - ಪರಿಕಲ್ಪನೆ, ಕಲಾವಿದರ ಜಾನಪದ ಗ್ರಹಿಕೆ

ವಿಚಾರ ಸಾಹಿತ್ಯ : ರೈತ ಹೋರಾಟದ ಹಾಡುಗಳು, ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಮೀಸಲು, ಕ್ಲಿಂಟನ್ ನಗು, ತನ್ನ ಸಾವು

 

ಪುರುಷೋತ್ತಮ ಬಿಳಿಮಲೆ (1955- )

ಸಂಪಾದನೆ : ಮೆಕೆಂಜಿಯ ಕೈಫಿಯತ್ತುಗಳು, ಲಿಂಗರಾಜ ಹುಕುಂನಾಮೆ, ಲೋಹಿಯಾವಾದ ಕೆಲವು ಟಿಪ್ಪಣಿಗಳು, ದೇವರು ದೆವ್ವ ವಿಜ್ಞಾನ, ಯಕ್ಷಗಾನ ಪ್ರಸಂಗಗಳು, ಅಕ್ಷರ ವಿಮೋಚನೆ, ವಿಚಾರ ಸಾಹಿತ್ಯ, ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ, ಸಿರಿ

ಜಾನಪದ : ಕಂಬಳ, ಕರಾವಳಿ ಜಾನಪದ, ಕೊರಗರು, ಜಾನಪದ ಕ್ಷೇತ್ರಕಾರ್ಯ, ಹಂಪಿ ಜಾನಪದ, ಕೂಡುಕಟ್ಟು, ಹುಲಿಗೆಮ್ಮ, ಕುಮಾರರಾಮ

ಇತರ ಪ್ರಮುಖ ಕೃತಿಗಳು : ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕೋಮುವಾದ ಮತ್ತು ಜನ ಸಂಸ್ಕೃತಿ, ಶಿಷ್ಟ - ಪರಿಶಿಷ್ಟ, ಬಹುರೂಪ, ಮೆಲುದನಿ

 

ಅಂಬಳಿಕೆ ಹಿರಿಯಣ್ಣ

ಪಿಎಚ್ ಡಿ ಪ್ರಬಂಧ : ಮಲೆನಾಡಿನ ಒಕ್ಕಲಿಗರು ಮತ್ತು ಅವರ ಜಾನಪದ

ಜಾನಪದ ಗೀತೆಗಳು : ಶಿವಮೊಗ್ಗ ಜಿಲ್ಲೆಯ ನಪದ ಗೀತೆಗಳು, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಕಾಡುಗೊಲ್ಲರ ಜನಪದ ಗೀತೆಗಳು, ಮಲೆನಾಡು ಜನಪದ ಸಂಪ್ರದಾಯಗಳು, ಕಿನ್ನರಿ ಸಂಪ್ರದಾಯದ ಹಾಡುಗಳು, ತಂಬೂರಿ ಸಂಪ್ರದಾಯದ ಕಾವ್ಯಗಳು

ಜಾನಪದ ವಿಚಾರ ವಿಮರ್ಶೆ : ಜಾನಪದ ಪರಿಶೋಧನೆ, ಜಾನಪದ ಲೋಚನ, ಜಾನಪದ ಕೆಲವು ವಿಚಾರಗಳು, ಜಾನಪದ ಕೆಲವು ಅಧ್ಯಯನಗಳು, ಜಾನಪದ ವಿಮರ್ಶೆ, ಜಾನಪದ ವೀಕ್ಷಣೆ

 

ತೀ ನಂ ಶಂಕರನಾರಾಯಣ

ಪಿಎಚ್ ಡಿ ಪ್ರಬಂಧ : ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು

ಜಾನಪದ : ಜಾನಪದ ಮೈಲಿಗಲ್ಲುಗಳು (ಫಿನ್ಲೆಂಡಿನ ಜಾನಪದ ಮಹಾಕಾವ್ಯ ಕಲೇವಾಲ ಮತ್ತು ಜನಪದ ವಿಶ್ವಕೋಶವೆನಿಸಿದ ಗೋಲ್ಡನ್ ಬೋ ಕೃತಿಗಳ ಪರಿಚಯ), ಸಂಕೀರ್ಣ ಜನಪದ ಕತೆಗಳು, ಐದು ಜಾನಪದ ಸಂಪ್ರಬಂಧಗಳ ಜಾನಪದ ವಿಚಾರ

ಕಾಮೆಂಟ್‌ಗಳು